AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದು ಆಗಬಾರದಿತ್ತೋ ಅದೇ ಆಗಿ ಹೋಯ್ತು; ಸಂಜುಗೆ ಶಾಕ್ ಮೇಲೆ ಶಾಕ್

ವಿಶ್ವನ ಪತ್ನಿಯ ಹೆಸರು ಆರಾಧನಾ. ಆಕೆಯನ್ನು ಮೆನೆಗೆ ಕರೆದುಕೊಂಡು ಬಂದರೆ ಎಲ್ಲವೂ ಸರಿ ಆಗಲಿದೆ ಎಂಬುದು ಅವಳ ಆಲೋಚನೆ ಆಗಿತ್ತು. ಈಗ ಆಕೆ ಹಾಗೆಯೇ ಮಾಡಿದ್ದಾಳೆ.

ಯಾವುದು ಆಗಬಾರದಿತ್ತೋ ಅದೇ ಆಗಿ ಹೋಯ್ತು; ಸಂಜುಗೆ ಶಾಕ್ ಮೇಲೆ ಶಾಕ್
TV9 Web
| Edited By: |

Updated on:Nov 09, 2022 | 4:53 PM

Share

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಇದನ್ನೂ ಓದಿ
Image
ಭುವಿ ಮನೆಯ ಶೋಧಕ್ಕೆ ಇಳಿದ ವರುಧಿನಿ; ಸಿಗಬಹುದೇ ರತ್ನಮಾಲಾ ವಿಲ್ ಪತ್ರ?
Image
ಸಂಜು ಬಳಿ ಕ್ಷಮೆ ಕೇಳಿದ ಅನು; ಹೆಚ್ಚುತ್ತಿದೆ ನೋವು ಹಾಗೂ ಒಲವು
Image
‘ನಿಮ್ಮ ಕಥೆ ಕೇಳ್ತಾ ನನ್ನ ಕಥೆ ಮರೆಯಬಹುದು’; ಸಂಜುಗೆ ಅನುವಿನ ಮಾತು

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಸಂಜು ಹಾಗೂ ಅನು ಸಿರಿಮನೆ ದೇವಸ್ಥಾನದಲ್ಲಿ ಭೇಟಿ ಆದರು. 24 ಗಂಟೆಯಲ್ಲಿ ತಮ್ಮ ಭೇಟಿ ಆಗುವ ಬಗ್ಗೆ ಸಂಜು ಈ ಮೊದಲೇ ಹೇಳಿದ್ದ. ಅಂತೆಯೇ ಇಬ್ಬರ ಭೇಟಿ ಆಗಿದೆ. ಈ ಭೇಟಿಯಿಂದ ಅನುಗೆ ಸಿಟ್ಟು ಬಂದಿದೆ. ‘ನಾನು ಗಂಡನಿಗೋಸ್ಕರ ಮಾತ್ರ ಇಲ್ಲಿಗೆ ಬಂದಿದ್ದು’ ಎಂಬ ಮಾತನ್ನು ಅನು ಸ್ಪಷ್ಟಪಡಿಸಿದ್ದಾಳೆ. ಆಕೆ ಬರ್ತ್​ಡೇ ಸಲುವಾಗಿ ಸಂಜು ವಿಶ್ ಮಾಡಿದ್ದಾನೆ. ಸಂಜುಗೆ ಬರ್ತ್​ಡೇ ವಿಚಾರ ಹೇಗೆ ಗೊತ್ತಾಯಿತು ಎನ್ನುವ ವಿಚಾರದಲ್ಲಿ ಆಕೆಗೆ ಅನುಮಾನ ಮೂಡಿದೆ.

ಆಗಬಾರದ್ದೇ ಆಯಿತು

ಆರ್ಯವರ್ಧನ್ ಬದಲಾಗಿದ್ದಾನೆ. ಆತನನ್ನು ಸಂಜು ಆಗಿ ಕರೆತರಲಾಗಿದೆ. ಆರಾಧನಾ ಪತಿ ವಿಶ್ವ ನಿಧನ ಹೊಂದಿದ್ದಾನೆ. ಆತನ ಮುಖದ ಚರ್ಮವನ್ನು ಆರ್ಯವರ್ಧನ್​ಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಹೀಗಾಗಿ ಆರ್ಯವರ್ಧನ್ ನೋಡೋಕೆ ವಿಶ್ವನ ರೀತಿ ಕಾಣುತ್ತಿದ್ದಾನೆ. ಇನ್ನು, ಅಪಘಾತದಲ್ಲಿ ಆರ್ಯವರ್ಧನ್​ಗೆ ನೆನಪೆಲ್ಲ ಮಾಸಿ ಹೋಗಿದೆ. ಪೊಲೀಸ್ ತನಿಖೆ ನಡೆಯುತ್ತಿರುವುದರಿಂದ ವಿಶ್ವನೇ (ಸಂಜು) ಆರ್ಯವರ್ಧನ್ ಎನ್ನುವ ವಿಚಾರವನ್ನು ಮುಚ್ಚಿಡಲಾಗಿದೆ.

ರಾಜ ನಂದಿನಿ ವಿಲಾಸದವರ ಪಾಲಿಗೆ ಆರ್ಯವರ್ಧನ್ ಸತ್ತು ಹೋಗಿದ್ದಾನೆ. ಅನು ನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ. ಈ ಮಧ್ಯೆ ಸಂಜು ಆಕೆಗೆ ಹತ್ತಿರ ಆಗೋಕೆ ಪ್ರಯತ್ನಿಸುತ್ತಿದ್ದ. ಈ ವಿಚಾರದಲ್ಲಿ ಆಕೆಗೆ ಸಿಟ್ಟಿದೆ. ಮತ್ತೊಂದು ಕಡೆಯಲ್ಲಿ ಸಂಜು ನಡೆದುಕೊಳ್ಳುತ್ತಿರುವ ರೀತಿ ಆಕೆಗೆ ಅಚ್ಚರಿ ಮೂಡಿಸಿತ್ತು. ಏಕೆಂದರೆ ಪ್ರತಿ ವಿಚಾರದಲ್ಲಿ ಸಂಜುನಲ್ಲಿ ಆಕೆಗೆ ಆರ್ಯವರ್ಧನ್ ಕಾಣುತ್ತಿದ್ದಾನೆ. ಈ ಕಾರಣಕ್ಕೆ ಆಕೆ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಳು. ಹೀಗಿರುವಾಗಲೇ ಆಕೆ ಒಂದು ಪ್ಲ್ಯಾನ್ ರೂಪಿಸಿದ್ದಳು.

ವಿಶ್ವನ ಪತ್ನಿಯ ಹೆಸರು ಆರಾಧನಾ. ಆಕೆಯನ್ನು ಮೆನೆಗೆ ಕರೆದುಕೊಂಡು ಬಂದರೆ ಎಲ್ಲವೂ ಸರಿ ಆಗಲಿದೆ ಎಂಬುದು ಅವಳ ಆಲೋಚನೆ ಆಗಿತ್ತು. ಈಗ ಆಕೆ ಹಾಗೆಯೇ ಮಾಡಿದ್ದಾಳೆ. ಇದರಿಂದ ಸಂಜುಗೆ ಶಾಕ್ ಆಗಿದೆ. ಏನು ಆಗಬಾರದಿತ್ತು ಎಂದು ಆತ ಭಾವಿಸಿದ್ದನೋ ಹಾಗೆಯೇ ಆಗಿದೆ.

ಸಂಜುಗೆ ತಾನು ಯಾರು ಎಂಬ ಪ್ರಶ್ನೆ ಮೂಡಿದೆ. ಈ ಮಧ್ಯೆ ಹಳೆಯ ವಿಚಾರಗಳು ಆತನಿಗೆ ಮರೆತು ಹೋಗಿದೆ. ಆರಾಧನಾ ಬಗ್ಗೆಯಂತೂ ಆತನಿಗೆ ಯಾವುದೇ ನೆನಪು ಇರಲಿಲ್ಲ. ಆಕೆ ನನ್ನಿಂದ ದೂರ ಇದ್ದಷ್ಟು ಉತ್ತಮ ಎಂದು ಆತ ಭಾವಿಸಿದ್ದ. ಆದರೆ, ಅನು ಆಕೆಯನ್ನು ಕರೆದು ತಂದಿದ್ದಾಳೆ.

ಬರ್ತ್​ಡೇ ಸಂಭ್ರಮ

ಅನುನ ಬರ್ತ್​ಡೇ ಸಂಭ್ರಮದಿಂದ ಆಚರಿಸಲು ರಾಜ ನಂದಿನಿ ವಿಲಾಸದಲ್ಲಿ ಸಂಜು ಪ್ಲ್ಯಾನ್ ರೂಪಿಸಿದ್ದ. ಸಾಕಷ್ಟು ಸಿದ್ಧತೆಯೊಂದಿಗೆ ಈ ಪ್ಲ್ಯಾನ್ ರೂಪುಗೊಂಡಿತ್ತು. ಆದರೆ, ಆರಾಧನಾಳನ್ನು ಕರೆದು ತಂದು ಅನು ಶಾಕ್ ನೀಡಿದ್ದಳು. ಈ ಶಾಕ್​ನಿಂದ ಚೇತರಿಸಿಕೊಳ್ಳೋಕೆ ಸಂಜುಗೆ ಆಗುತ್ತಿಲ್ಲ.

ಇನ್ನು, ಈ ಸೆಲೆಬ್ರೇಷನ್​ ವಿಚಾರಕ್ಕೆ ಆರಾಧನಾ ಹೊಸ ತಿರುವು ನೀಡಿದ್ದಾಳೆ. ‘ನಾನು ಬರ್ತೀನಿ ಎಂದು ಇಷ್ಟೊಂದು ಡೆಕೋರೇಟ್ ಮಾಡಿದ್ದೀಯಾ? ಥ್ಯಾಂಕ್​ ಯೂ ಸೋ ಮಚ್’ ಎಂದು ಹೇಳಿದ್ದಾಳೆ. ಇದರ ಜತೆಗೆ ಆತನನ್ನು ಮನೆಗೆ ಕರೆದುಕೊಂಡು ಹೋಗುವ ಆಲೋಚನೆಯಲ್ಲಿ ಅವಳಿದ್ದಾಳೆ. ಇದರಿಂದ ಸಂಜುಗೆ ಶಾಕ್ ಆಗಿದೆ.

ರಾಜ ನಂದಿನಿ ವಿಲಾಸಕ್ಕೆ ಪ್ರಿಯಾ

ಸಂಜುನೇ ಆರ್ಯವರ್ಧನ್ ಎಂಬ ಸತ್ಯ ಪ್ರಿಯಾಗೆ ಗೊತ್ತಿದೆ. ಆಕೆಯೇ ರಾಜ ನಂದಿನಿ ವಿಲಾಸಕ್ಕೆ ಈತನ್ನು ಬಿಟ್ಟು ಹೋಗಿದ್ದಳು. ಈ ಸತ್ಯವನ್ನು ಎದೆಯಲ್ಲಿ ಇಟ್ಟುಕೊಂಡು ಆಕೆ ಒದ್ದಾಡುತ್ತಿದ್ದಾಳೆ. ಈ ಸತ್ಯವನ್ನು ಹೇಳಲೇಬೇಕು ಎಂಬ ನಿರ್ಧಾರದೊಂದಿಗೆ ಆಕೆ ರಾಜ ನಂದಿನಿ ವಿಲಾಸಕ್ಕೆ ಬರಲು ರೆಡಿ ಆಗಿದ್ದಾಳೆ.

Published On - 7:30 am, Wed, 9 November 22