ಆರ್ಯವರ್ಧನ್ ಗುರೂಜಿ (Aryavardan Guruji) ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಕಳೆದ ವಾರ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದರು. ಆದರೆ, ನೋ ಎಲಿಮಿನೇಷನ್ ವೀಕ್ ಆದ ಕಾರಣ ಆರ್ಯವರ್ಧನ್ ಅವರು ಬಚಾವ್ ಆಗಿದ್ದಾರೆ. ಮನೆಯ ಬಾಗಿಲವರೆಗೆ ಹೋಗಿದ್ದ ಅವರು ಬಚಾವ್ ಆಗಿ ಮರಳಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಆರ್ಯವರ್ಧನ್ ಅವರು ಯಾವ ರೀತಿ ಎಂಬುದನ್ನು ತಿಳಿದುಕೊಳ್ಳೋಕೆ ಅನೇಕರಿಂದ ಸಾಧ್ಯವೇ ಆಗಿಲ್ಲ. ಇದಕ್ಕೆ ಕಾರಣವೂ ಇದೆ. ಅವರು ಒಂದೊಂದು ಕ್ಷಣಕ್ಕೂ ಒಂದೊಂದು ರೀತಿ ಇರುತ್ತಾರೆ. ಕೆಲವೊಮ್ಮೆ ಮುಗ್ಧರಂತೆ ಕಾಣುವ ಅವರು ಮತ್ತೊಂದು ಕ್ಷಣ ಪ್ರಬುದ್ಧರಾಗಿ ಕಾಣುತ್ತಾರೆ. ಒಮ್ಮೆ ಬುದ್ಧಿವಂತರಂತೆ ಕಾಣಿಸುವ ಅವರು ಕೆಲವೊಮ್ಮೆ ದಡ್ಡರ ರೀತಿ ಕಾಣಿಸುತ್ತಾರೆ.
ಈಗ ಬಿಗ್ ಬಾಸ್ ಮನೆಯಲ್ಲಿ ಅವರು ರೂಪೇಶ್ ಶೆಟ್ಟಿ ಜತೆ ಮಾತನಾಡಿದ್ದಾರೆ. ಮನೆ ಮಂದಿಗೆ ತಾನು ಕೇರ್ ಮಾಡಲ್ಲ ಎಂಬ ವಿಚಾರವನ್ನು ಅವರು ಹೇಳಿದ್ದಾರೆ. ‘12 ವರ್ಷ ಕರ್ನಾಟಕವನ್ನು ಚಕ್ರವರ್ತಿಯಾಗಿ ಆಳಿದ್ದೇನೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ನಾನು ಯಾರು ಅಂತ ಗೊತ್ತು. ಇವರತ್ರಲ್ಲ ಸುಮ್ನೆ ಯಾಕೆ ದ್ವೇಷ ಕಟ್ಟಿಕೊಳ್ಳಬೇಕು? ಎಂದು ಗುರೂಜಿ ಹೇಳಿದ್ದಾರೆ. ಅವರ ಮಾತನ್ನು ಕೇಳಿ ರೂಪೇಶ್ ಶೆಟ್ಟಿ ತಲೆ ಆಡಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಗುರೂಜಿ
ಬಿಗ್ ಬಾಸ್ ಮನೆಯಲ್ಲಿ ಗೊಂಬೆ ಮಾಡುವ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್ ಆಡುವ ವೇಳೆ ಇಡೀ ಮನೆ ರಣರಂಗವಾಗಿದೆ. ಆರ್ಯವರ್ಧನ್ ಗುರೂಜಿ ಕೂಡ ಸಿಟ್ಟಾಗಿದ್ದಾರೆ. ರೂಪೇಶ್ ರಾಜಣ್ಣ ಹಾಗೂ ಆರ್ಯವರ್ಧನ್ ಮಧ್ಯೆ ದೊಡ್ಡ ವಾಗ್ವಾದ ಏರ್ಪಟ್ಟಿದೆ.
ಇದನ್ನೂ ಓದಿ: ‘ಬ್ರಹ್ಮದೇವ ಯಾಕಿಂಗೆ ಮಾಡಿದೆ, ಇನ್ನು ಈ ತಪ್ಪು ಮಾಡಲ್ಲ’; ನೆಲದಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್
ಆರ್ಯವರ್ಧನ್ ಕೈ ಹಿಡಿದು ಎಳೆದರು ಎಂದು ಅರುಣ್ ಸಾಗರ್ ಅವರು ಆರೋಪ ಮಾಡಿದರು. ಈ ವಿಚಾರದಲ್ಲೂ ಗುರೂಜಿ ಹಾಗೂ ಅರುಣ್ ಸಾಗರ್ ಮಧ್ಯೆ ವಾಗ್ವಾದ ನಡೆಯಿತು. ಅರುಣ್ ಸಾಗರ್ ಅವರು ಟೆಂಪರ್ ಕಳೆದುಕೊಂಡು ಅತೀ ಸಿಟ್ಟಲ್ಲಿ ವರ್ತಿಸಿದರು. ಅವರನ್ನು ನೋಡಿ ಮನೆ ಮಂದಿ ಒಮ್ಮೆ ಭಯಗೊಂಡರು.