ಅತೀ ಹೀನ ಮಟ್ಟಕ್ಕೆ ಇಳಿದ ಶಾಸ್ತ್ರಿ; ಫಿನಾಲೆ ಅವಕಾಶ ಇಲ್ಲಿಯೇ ಮುಚ್ಚೋಯ್ತು
ಬಿಗ್ ಬಾಸ್ ಮನೆಯಲ್ಲಿ ಪತ್ರದ ಟಾಸ್ಕ್ ವೇಳೆ ಸ್ಪರ್ಧಿ ಕಿರಣ್ ಶಾಸ್ತ್ರಿ ಉದ್ದೇಶಪೂರ್ವಕವಾಗಿ ಬಾಲ್ ಕೆಳಗೆ ಬೀಳಿಸಿ ಆಟ ಹಾಳು ಮಾಡಿದ್ದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ನಾಮಿನೇಷನ್ ಸೇಡಿಗೆ ಕೀಳುಮಟ್ಟದ ಆಟವಾಡಿದ ಕಿರಣ್ ಶಾಸ್ತ್ರಿ ಫಿನಾಲೆ ಹಾದಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಕಟುವಾಗಿ ಟೀಕಿಸುತ್ತಿದ್ದಾರೆ.

ಮುಖ್ಯಾಂಶಗಳು
- ಬ್ಲ್ಯಾಂಕ್ ಪತ್ರದ ಸವಾಲು
- ಮನೆಯವರ ನೆನಪಿಗೆ ಬಂದ ಕಂಟಕ
- ಕಿರಣ್ ಶಾಸ್ತ್ರಿ ವಿಲನ್ ಆಟ
ಬಿಗ್ ಬಾಸ್ ಮನೆಯಲ್ಲಿ ಈ ವಾರ ಪತ್ರದ ಟಾಸ್ಕ್ ಗಮನ ಸೆಳೆದಿದೆ. ಕಳೆದ ಎರಡು ತಿಂಗಳಿಂದ ಬಿಗ್ ಬಾಸ್ ಮನೆಯಲ್ಲಿ ಸೆರೆಯಾಗಿರುವ ಎಲ್ಲಾ ಸ್ಪರ್ಧಿಗಳಿಗೆ ಮನೆಯಿಂದ ಪತ್ರ ಬಂದಿದೆ. ಆದರೆ ಸ್ಪರ್ಧಿಗಳ ಕೈಗೆ ಸಿಕ್ಕಿರೋದು ಬ್ಲ್ಯಾಂಕ್ ಪತ್ರ. ಇದನ್ನು ಪಡೆಯಬೇಕು ಎಂದು ಕೆಲವು ಸ್ಪರ್ಧೆಗಳನ್ನು ಗೆಲ್ಲಬೇಕು. ಈ ವೇಳೆ ಕಿರಣ್ ಶಾಸ್ತ್ರಿ ವರ್ತನೆಗೆ ಸಹ ಸ್ಪರ್ಧಿಗಳು ಮಾತ್ರವಲ್ಲ ವೀಕ್ಷಕರು ಕೂಡ ಛೀಮಾರಿ ಹಾಕುತ್ತಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಮಾಡುವಾಗ ಅನೇಕರು ಕಿರಣ್ ಶಾಸ್ತ್ರಿ ಹೆಸರನ್ನು ತೆಗೆದುಕೊಂಡರು. ಸುಲಭ ಟಾರ್ಗೆಟ್ ಎನ್ನುವ ಕಾರಣಕ್ಕೆ ಅವರನ್ನು ನಾಮಿನೇಷನ್ ಮಾಡಿರಬಹುದು ಎಂದು ಹೇಳಲಾಗುತ್ತಾ ಇದೆ. ಅವರು ಇದಕ್ಕೆ ಹಗೆ ತೀರಿಸಿಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಕೆಳಮಟ್ಟಕ್ಕೆ ಇಳಿದರು.
ಕಿರಣ್ ಮಾಡಿದ್ದೇನು?
ಈ ವಾರ ಕ್ಯಾಪ್ಟನ್ ಜಗದೀಶ್ ಅವರು ಎಲ್ಲಾ ಸ್ಪರ್ಧಿಗಳಿಗೆ ರ್ಯಾಂಕಿಂಗ್ ಕೊಟ್ಟಿದ್ದರು. ಇದರ ಅನುಸಾರ ಸ್ಪರ್ಧಿಗಳು ನಿಲ್ಲಬೇಕು. ಒಂದು ಬಾಲ್ ಅನ್ನು ಅಡೆತಡೆಗಳ ನಡುವೆ ಸ್ಪರ್ಧಿಗಳು ಸಾಗಿಸುತ್ತಾ ಬರಬೇಕು. ಬಾಲ್ ಅಂತಿಮ ಸ್ಥಾನಕ್ಕೆ ತಲುಪಿದರೆ ಜಗದೀಶ್ ಅವರಿಗೆ ಮನೆಯ ಪತ್ರ ದೊರೆಯುತ್ತಾ ಇತ್ತು. ಮೊದಲ ಎರಡು ಸ್ಥಾನದಲ್ಲಿ ಇದ್ದ ಗಾನವಿ ಹಾಗೂ ಸೌಂದರ್ಯಾ ಶೆಟ್ಟಿ ಈ ಬಾಲ್ನ 5 ನಿಮಿಷದಲ್ಲಿ ಹಸ್ತಾಂತರ ಮಾಡಿದರು. ನಂತರ ಕಿರಣ್ ಶಾಸ್ತ್ರಿ ಅವರು ಈ ಬಾಲ್ನ ಪಾಸ್ ಮಾಡಲು ರೆಡಿ ಇರಲೇ ಇಲ್ಲ. ಅವರು ಉದ್ದೇಶಪೂರ್ವಕವಾಗಿ ಬಾಲ್ನ ಕೆಳಕ್ಕೆ ಬೀಳಿಸುತ್ತಾ ಇದ್ದಿದ್ದು ಕಂಡುಬಂತು.
ಇದನ್ನೂ ಓದಿ: ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್ ರಾಮ್, ಗಾನವಿ
ಈ ವಿಷಯದಲ್ಲಿ ಕಿರಣ್ ಶಾಸ್ತ್ರಿ ವಿರುದ್ಧ ಟೀಕೆಗಳು ಕೇಳಿ ಬಂದವು. ಅವರು ಆರಂಭದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಂಡರು. ಈ ಆರೋಪ ಸುಳ್ಳು ಎಂದರು. ಕೊನೆಗೆ ಗಾನವಿ ಅವರು ಪದೇ ಪದೇ ಬಂದು ಈ ವಿಷಯ ಹೇಳಿದಾಗ ಅದು ನಿಜ ಎಂದು ಒಪ್ಪಿಕೊಂಡರು. ಇದಕ್ಕೆ ಕಿರಣ್ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ಅವರು ಈ ಕೀಳು ಮನಸ್ಥಿತಿಯಿಂದ ಫಿನಾಲೆ ಹೋಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
ನಿರ್ಧಾರಕ್ಕೆ ಕಾರಣ ಏನು?
ಬಿಗ್ ಬಾಸ್ ಆರಂಭದಲ್ಲಿ ಕಿರಣ್ ಶಾಸ್ತ್ರಿ ಇದೇ ರೀತಿ ಇದ್ದರು. ಅವರು ಹೊಂಚು ಹಾಕಿ ಎಲ್ಲರನ್ನೂ ಹೊಡೆಯುತ್ತಿದ್ದರು. ಆದರೆ, ಸುದೀಪ್ ಬುದ್ಧಿವಾದ ಹೇಳಿದ ಬಳಿಕ ಅವರು ಬದಲಾದರು. ಆದರೆ, ಈ ವಾರ ಕೆಲವರು ಹಳೆಯ ಕಿರಣ್ ಶಾಸ್ತ್ರಿ ಕಾಣಿಸುತ್ತಿಲ್ಲ ಎಂಬ ಕಾರಣ ನೀಡಿ ನಾಮಿನೇಟ್ ಮಾಡಿದ್ದರು. ಇದರಿಂದ ಸಿಟ್ಟಾದ ಕಿರಣ್ ಬದಲಾಗಲು ನಿರ್ಧರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




