Rajat: ರಜತ್ ದೊಡ್ಮನೆಯಿಂದ ಔಟ್; ಪ್ರಮುಖ ಘಟ್ಟದಲ್ಲಿ ಹೊರ ಹೋದ್ರು

Bigg Boss Elimination: ಬಿಗ್ ಬಾಸ್ ಕನ್ನಡ ಸೀಸನ್ 11ರ ಫೈನಲ್‌ನಲ್ಲಿ ರಜತ್ ಅವರು ಮೊದಲು ಎಲಿಮಿನೇಟ್ ಆಗಿದ್ದಾರೆ. ಆರು ಸ್ಪರ್ಧಿಗಳಲ್ಲಿ ಐದು ಮಂದಿ ಉಳಿದಿದ್ದಾರೆ. ರಜತ್ ಅವರು ವೈಲ್ಡ್ ಕಾರ್ಡ್ ಎಂಟ್ರಿಯಾಗಿ 50 ದಿನಗಳ ನಂತರ ದೊಡ್ಮನೆ ಸೇರಿದ್ದರು. ಕಡಿಮೆ ಮತಗಳನ್ನು ಪಡೆದ ಕಾರಣ ಅವರು ನಿರ್ಗಮಿಸಿದ್ದಾರೆ. ಅವರ ಆತ್ಮವಿಶ್ವಾಸ ಮತ್ತು ಟಾಸ್ಕ್‌ಗಳಲ್ಲಿನ ಸಕ್ರಿಯ ಭಾಗವಹಿಸುವಿಕೆ ಗಮನಾರ್ಹವಾಗಿತ್ತು.

Rajat: ರಜತ್ ದೊಡ್ಮನೆಯಿಂದ ಔಟ್; ಪ್ರಮುಖ ಘಟ್ಟದಲ್ಲಿ ಹೊರ ಹೋದ್ರು
ರಜತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 26, 2025 | 11:26 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆಯಲ್ಲಿ ರಜತ್ ಔಟ್ ಆಗಿದ್ದಾರೆ. ಫಿನಾಲೆಯಲ್ಲಿ ಇದ್ದ ಆರು ಸ್ಪರ್ಧಿಗಳ ಸಂಖ್ಯೆ ಎರಡಕ್ಕೆ ಇಳಿಕೆ ಆಗಿದೆ. ರಜತ್ ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿತ್ತು. ವೈಲ್ಡ್ ಕಾರ್ಡ್ ಮೂಲಕ 50 ದಿನ ಆದ ಬಳಿಕ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರು ಭಾನುವಾರ (ಜನವರಿ 26) ಹೊರ ಹೋಗಿದ್ದಾರೆ. ಈ ಮೂಲಕ ತ್ರಿವಿಕ್ರಂ ಹಾಗೂ ಹನುಮಂತ ಉಳಿದುಕೊಂಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ಸಾಕಷ್ಟು ಗಮನ ಸೆಳೆದಿದೆ. ಈವರೆಗೆ 20 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಆ ಪೈಕಿ ಫಿನಾಲೆಗೆ ಆರು ಮಂದಿ ಮಾತ್ರ ಬಂದಿದ್ದರು. ಮೋಕ್ಷಿತಾ, ಭವ್ಯಾ ಗೌಡ, ಹನುಮಂತ, ತ್ರಿವಿಕ್ರಂ, ಮಂಜು ಮಧ್ಯೆಯ ಸ್ಪರ್ಧೆಯಲ್ಲಿ ಭವ್ಯಾ ಮೊದಲು ಹೋದರೆ, ನಂತರ ಮಂಜು, ಮೋಕ್ಷಿತಾ ಔಟ್ ಆದರು. ನಂತರ ರಜತ್ ಅವರು ವೇದಿಕೆಯ ಮೇಲೆ ಬಂದು ಹೊರ ಹೋದರು. ಅವರು ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ನಡೆದಿದ್ದಾರೆ.

ಬಿಗ್ ಬಾಸ್ ವೇದಿಕೆ ಏರಿದಾಗಿನಿಂದಲೂ ಒಂದು ಹೊಸ ಅಲೆ ಸೃಷ್ಟಿ ಮಾಡಿದ್ದರು ರಜತ್. ಅವರು ಟಾಸ್ಕ್​ನಿಂದ ಹಿಡಿದು ಎಲ್ಲದರಲ್ಲೂ ಆ್ಯಕ್ಟೀವ್ ಆಗಿದ್ದರು. ಈ ಮೂಲಕ ದೊಡ್ಮನೆಗೆ ಚೈತನ್ಯ ಕೊಟ್ಟರು. ರಜತ್ ಅವರು ಟಾಸ್ಕ್​ನಲ್ಲಿ ಭೇಷ್ ಎನಿಸಿಕೊಂಡಿದ್ದರು. ಇದುವೇ ಅವರಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಮನರಂಜನೆಯಲ್ಲೂ ಅವರು ಹಿಂದೆ ಬಿದ್ದಿರಲಿಲ್ಲ.

ಇದನ್ನೂ ಓದಿ: ರಜತ್​ಗೆ ಮಾತ್ರ ಜಾಕೆಟ್ ಕಳುಹಿಸಿದ ಸುದೀಪ್? ಕಾರಣ ಏನು?

ರಜತ್ ಅವರಿಗೆ ದುರಹಂಕಾರ ಇತ್ತೀಚೆಗೆ ಹೆಚ್ಚಾಯಿತೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿತ್ತು. ಅವರು ಫೇವರಿಸಂ ಆರೋಪ ಕೂಡ ಹೊತ್ತರು. ಎಲ್ಲಕ್ಕಿಂತ ಮುಖ್ಯವಾಗಿ ರಜತ್ ಅವರು ಹಲವು ಸಮಯದಲ್ಲಿ ಭಾಷೆ ಮೇಲೆ ಹಿಡಿತ ಇಟ್ಟುಕೊಳ್ಳದೆ ಎಡವಿದ್ದರು. ಈ ವಿಚಾರದಲ್ಲಿ ಸುದೀಪ್ ಅನೇಕ ಬಾರಿಗೆ ಅವರಿಗೆ ಕಿವಿಮಾತು ಕೂಡ ಹೇಳಿದ್ದರು. ಆದರೆ, ರಜತ್ ಇದನ್ನು ತಿದ್ದುಕೊಂಡಿಲ್ಲ. ಎಲ್ಲರನ್ನೂ ಹೊರಕ್ಕೆ ಕಳಿಸಿ, ಕಪ್ ಗೆದ್ದೇ ಹೋಗೋದು ಎಂದು ರಜತ್ ಹೇಳಿದ್ದರು. ಅವರ ಆಸೆ ಈಡೇರಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:26 pm, Sun, 26 January 25

ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?