ಬಿಗ್ ಬಾಸ್ಗೆ ಬರ್ತಾರೆ ಎಂದು ಚರ್ಚೆಯಾದ ಈ ಸೆಲೆಬ್ರಿಟಿಗಳು ಲಿಸ್ಟ್ನಿಂದ ಮಿಸ್
ಬಿಗ್ ಬಾಸ್ ಕನ್ನಡ ಸೀಸನ್ 12 ಅದ್ದೂರಿಯಾಗಿ ಶುರುವಾಗಿದೆ. ಸೆಪ್ಟೆಂಬರ್ 29ರಂದು 19 ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪಟ್ಟಿಗೂ, ನಿಜಕ್ಕೂ ಬಂದ ಸ್ಪರ್ಧಿಗಳಿಗೂ ವ್ಯತ್ಯಾಸವಿದೆ. ಶ್ವೇತಾ ಪ್ರಸಾದ್, ಶ್ರೇಯಸ್ ಮಂಜು ಸೇರಿದಂತೆ ಹಲವು ನಿರೀಕ್ಷಿತ ಹೆಸರುಗಳು ಮಿಸ್ ಆಗಿವೆ .

‘ಬಿಗ್ ಬಾಸ್ ಕನ್ನಡ ಸೀಸನ್ 12’ಕ್ಕೆ (BBK 12) ಯಾವೆಲ್ಲ ಸೆಲೆಬ್ರಿಟಿಗಳು ಬರುತ್ತಾರೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೊರಾಗಿ ನಡೆದಿದ್ದು ಗೊತ್ತೇ ಇದೆ. ಈಗ ಅದಕ್ಕೆ ಉತ್ತರ ಸಿಕ್ಕಿದೆ ಎನ್ನಬಹುದು. ಸೆಪ್ಟೆಂಬರ್ 29ರಂದು ಒಟ್ಟೂ 19 ಸ್ಪರ್ಧಿಗಳು ದೊಡ್ಮನೆಗೆ ಬಂದಿದ್ದಾರೆ. ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಒಂದು ಪಟ್ಟಿ ಹರಿದಾಡಿತ್ತು. ಈಗ ದೊಡ್ಮನೆಗೆ ಬಂದ ಸ್ಪರ್ಧಿಗಳ ಪಟ್ಟಿಗೂ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಪಟ್ಟಿಗೂ ಸ್ವಲ್ಪ ವ್ಯತ್ಯಾಸ ಇದೆ. ಹಾಗಾದರೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ, ಮಿಸ್ ಆದ ಸ್ಪರ್ಧಿಗಳು ಯಾರ್ಯರು ಎಂಬುದನ್ನು ಈಗ ನೋಡೋಣ.
ಶ್ವೇತಾ ಪ್ರಸಾದ್ ಅವರು ಬಿಗ್ ಬಾಸ್ಗೆ ಬರ್ತಾರೆ ಎಂದು ಸಾಕಷ್ಟು ಚರ್ಚೆ ಆಗಿತ್ತು. ಆದರೆ, ಹಾಗಾಗಲೇ ಇಲ್ಲ. ಅವರು, ಬಿಗ್ ಬಾಸ್ ಮನೆಗೆ ಬರಲಿಲ್ಲ. 19 ಮಂದಿಯಲ್ಲಿ ಅವರ ಹೆಸರು ಇಲ್ಲ. ‘ನಾನು ಬಿಗ್ ಬಾಸ್ಗೆ ಹೋಗ್ತೀನಿ’ ಎಂದು ಅವರೇ ಓಪನ್ ಆಗಿ ಹೇಳಿದ್ದರು. ಕೆ. ಮಂಜು ಅವರ ಮಗ ಶ್ರೇಯಸ್ ಮಂಜು, ಉತ್ತರ ಕರ್ನಾಟಕ ಪ್ರತಿಭೆ ಪ್ರಿಯಾ ಸವದಿ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸೂರಜ್ ಗೌಡ, ಅನನ್ಯಾ ಅಮರ್ ಅಥವಾ ಅಂಕಿತಾ ಅಮರ್, ಸನರ್ಜಿತ್ ಲಂಕೇಶ್, ದಿವ್ಯಾ ವಸಂತ್ ಹೆಸರು ಚರ್ಚೆಯಲ್ಲಿ ಇತ್ತು. ಆದರೆ, ಇವರು ಯಾರೂ ಬಿಗ್ ಬಾಸ್ ಮನೆಗೆ ಬರಲೇ ಇಲ್ಲ.
ಇದನ್ನೂ ಓದಿ: ‘ಬಿಗ್ ಬಾಸ್’ ಮನೆ ಪ್ರವೇಶಿಸಿದ 19 ಸ್ಪರ್ಧಿಗಳ ಫೋಟೋ, ಹೆಸರು, ವಿವರ ಇಲ್ಲಿದೆ
ಬಿಗ್ ಬಾಸ್ಗೆ ಬಂದ ಸ್ಪರ್ಧಿಗಳು.
‘ಬಿಗ್ ಬಾಸ್ ಕನ್ನಡ ಸೀಸನ್ 12’ ಅದ್ದೂರಿಯಾಗಿ ಓಪನಿಂಗ್ ಕಂಡಿದೆ.. 19 ಸ್ಪರ್ಧಿಗಳು ಬಿಗ್ ಬಾಸ್ ಮನೆ ಒಳಗೆ ಹೋಗಿದ್ದಾರೆ ಮತ್ತು ಅಲ್ಲಿಯ ಸೆಟಪ್ ನೋಡಿ ಎಲ್ಲರೂ ಅಚ್ಚರಿಗೊಂಡರು. ದೊಡ್ಮನೆ ಒಳಗೆ ಹೋದ ಸ್ಪರ್ಧಿಗಳು ಯಾರು ಎಂಬುದು ನೋಡೋದಾದರೆ, ಕಾಕ್ರೋಚ್ ಸುಧಿ, ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಮಂಜು ಭಾಷಿಣಿ, ಮಾಳು, ಮಲ್ಲಮ್ಮ, ಕಾವ್ಯಾ ಶೈವ, ಕರಿ ಬಸಪ್ಪ, ಆ್ಯಂಕರ್ ಜಾನ್ವಿ, ಗಿಲ್ಲಿ ನಟ, ಧ್ರುವಂತ್, ಧನುಷ್, ಚಂದ್ರಪ್ರಭ, ಅಶ್ವಿನಿ, ಅಶ್ವಿನಿ ಗೌಡ, ಅಭಿಷೇಕ್, ಡಾಗ್ ಸತೀಶ್, ಮಿರ್ಚಿ ಆರ್ಜೆ ಅಮಿತ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







