AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವೀಕೆಂಡ್​ನಲ್ಲಿ ನಾನು ಧ್ವಂಸ’; ಕಿಚ್ಚನ ಕ್ಲಾಸ್ ನೆನೆದು ಮಂಜುಗೆ ನಡುಕ

ಬಿಗ್ ಬಾಸ್ ಕನ್ನಡ 13ರಲ್ಲಿ ಮಾಡರ್ನ್ ಮಹಾಕವಿ ಮಂಜು ನಡೆದುಕೊಳ್ಳುತ್ತಿರುವ ರೀತಿ ಹಾಗೂ ಸಹ-ಸ್ಪರ್ಧಿಗಳ ಕ್ಯಾರೆಕ್ಟರ್ ಬಗ್ಗೆ ಆಡಿದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಹಾಲು-ಮೊಟ್ಟೆ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಮಂಜು, ಈ ಬಾರಿಯ ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರಿಂದ ತಮಗೆ ಭಾರಿ ಕ್ಲಾಸ್ ಕಾದಿದೆ ಎಂದು ಭಯ ವ್ಯಕ್ತಪಡಿಸಿದ್ದಾರೆ.

‘ವೀಕೆಂಡ್​ನಲ್ಲಿ ನಾನು ಧ್ವಂಸ’; ಕಿಚ್ಚನ ಕ್ಲಾಸ್ ನೆನೆದು ಮಂಜುಗೆ ನಡುಕ
ಶಾಸ್ತ್ರಿ-ಮಂಜು Image Credit source: Colors Kannada
ರಾಜೇಶ್ ದುಗ್ಗುಮನೆ
|

Updated on: Sep 18, 2026 | 7:22 AM

Share

ಮುಖ್ಯಾಂಶಗಳು

  • ಸೌಂದರ್ಯ ಕ್ಯಾರೆಕ್ಟರ್‌ ಬಗ್ಗೆ ಕೆಟ್ಟದಾಗಿ ಮಾತನಾಡಿ ಕ್ಷಮೆಯನ್ನೂ ಕೇಳದ ಮಂಜು
  • ಮನೆಯಲ್ಲಿ ಹಾಲು-ಮೊಟ್ಟೆ ಕದ್ದು ಸಿಕ್ಕಿಬಿದ್ದು ಸಮರ್ಥಿಸಿಕೊಂಡ ಕವಿ
  • 'ವಾರಾಂತ್ಯದಲ್ಲಿ ನಾನು ಧ್ವಂಸ': ಸುದೀಪ್ ಪಂಚಾಯಿತಿಗೆ ಹೆದರಿದ ಮಾಡರ್ನ್ ಮಹಾಕವಿ

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆರಂಭಕ್ಕ ಮೊದಲು ಅಗ್ನಿಪರೀಕ್ಷೆ ಹೆಸರಲ್ಲಿ ಶೋ ನಡೆಯಿತು. 60 ಜನ ಸಾಮಾನ್ಯ ಸ್ಪರ್ಧಿಗಳ ಪೈಕಿ ನಾಲ್ವರನ್ನು ಆಯ್ಕೆ ಮಾಡಿ ಬಿಗ್ ಬಾಸ್ ಮನೆಗೆ ಕಳುಹಿಸಲಾಯಿತು. ಈಗ ಜನ ಸಾಮಾನ್ಯರು ನಡೆದುಕೊಳ್ಳುತ್ತಿರುವ ರೀತಿ ಇಡೀ ಮನೆಯನ್ನು ಅಶಾಂತಿಗೆ ತಳ್ಳಿದೆ. ಅಷ್ಟೇ ಅಲ್ಲ ವೀಕ್ಷಕರು ಕೂಡ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಬಗ್ಗೆ ವೀಕೆಂಡ್​ನಲ್ಲಿ ಕ್ಲಾಸ್ ಫಿಕ್ಸ್ ಅನ್ನೋದು ಮಾಡರ್ನ್ ಮಹಾಕವಿ ಮಂಜುಗೆ ಮನದಟ್ಟಾಗಿದೆ.

ಮಂಜು ಅವರು ಬಿಗ್ ಬಾಸ್ ಮನೆಯಲ್ಲಿ ಅತಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ. ನಾಲಿಗೆಯ ಮೇಲೆ ಅವರಿಗೆ ಲಿಮಿಟ್ ಇಲ್ಲ. ಎಲ್ಲರನ್ನೂ ಟ್ರಿಗರ್ ಮಾಡೋದೆ ಅವರ ಉದ್ದೇಶ. ಯಾರಾದರೂ ಸ್ವಲ್ಪವೇ ಕೆರಳಿದರೂ ಅವರನ್ನು ಟಾರ್ಗೆಟ್ ಮಾಡಿ ಮತ್ತಷ್ಟು ಕೆರಳಿಸುತ್ತಾರೆ. ಈ ವಾರವಿಡೀ ಅವರು ಸಾಕಷ್ಟು ತಪ್ಪುಗಳನ್ನು ಮಾಡಿದ್ದಾರೆ.

ಸೌಂದರ್ಯಾ ಅವರ ಕ್ಯಾರೆಕ್ಟರ್ ಬಗ್ಗೆ ಮಂಜು ಕೆಟ್ಟದಾಗಿ ಮಾತನಾಡಿದ್ದರು. ಇದಕ್ಕೆ ಕ್ಷಮೆ ಕೇಳಲು ಅವರು ರೆಡಿ ಇಲ್ಲ. ‘ನಾನು ನೋಡಿದ್ದನ್ನು ಹೇಳುತ್ತಿದ್ದೇನೆ ಅಷ್ಟೇ’ ಎಂದು ಸಾಧಿಸಿದರೇ ಹೊರತು ಸೌಂದರ್ಯಾ ಬಳಿ ಕ್ಷಮೆ ಕೇಳಿಲ್ಲ. ಇದರಿಂದ ಸೌಂದರ್ಯಾ ಅವರು ಸಾಕಷ್ಟು ಕಣ್ಣೀರು ಹಾಕಿದರು.

ಇದನ್ನೂ ಓದಿ: ಕಾಮನ್ ಮ್ಯಾನ್ ಆಟಕ್ಕೆ ಬೇಸತ್ತ ಜನಸಾಮಾನ್ಯರು; ಕಿಚ್ಚನ ಎಂಟ್ರಿಗೆ ಕಾದ ವೀಕ್ಷಕರು

ಇನ್ನು, ಬಿಗ್ ಬಾಸ್ ಮನೆಯಲ್ಲಿ ನಡೆದ ಹಾಲು ಹಾಗೂ ಮೊಟ್ಟೆ ಕಳ್ಳತನದ ವಿಷಯದಲ್ಲಿ ಮಂಜು ಅವರದ್ದು ಸಿಂಹಪಾಲು. ಈ ರೀತಿ ಕದ್ದಿದ್ದೂ ಅಲ್ಲದೆ, ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡಿದ್ದಾರೆ. ಅವಿನಾಶ್ ಅವರನ್ನು ಕೆರಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಅವರಿಗೆ ವೀಕೆಂಡ್​​ನಲ್ಲಿ ಕ್ಲಾಸ್ ಫಿಕ್ಸ್ ಅನ್ನೋದು ಸ್ಪಷ್ಟವಾಗಿದೆ. ಈ ಬಗ್ಗೆ ಸ್ವತಃ ಮಂಜು ಅವರಿಗೂ ಅನಿಸಿದೆ. ‘ವೀಕೆಂಡ್​ನಲ್ಲಿ ನಾನು ಧ್ವಂಸ ಆಗೋದು ಫಿಕ್ಸ್’ ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಸಿಜೆಪಿ ಪ್ರತಿಭಟನೆಗೂ ಮುನ್ನ ಪೊಲೀಸರ ಕಾರ್ಯಾಚರಣೆ: 30 ರಿಂದ 40 ಜನ ವಶಕ್ಕೆ
ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದ ಮಹತ್ವ
ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದ ಮಹತ್ವ
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಮೈಸೂರಿನ ಪ್ರತಿಭೆ ರಿಷಿತಾ ಸಾಧನೆ
ಮೈಸೂರಿನ ಪ್ರತಿಭೆ ರಿಷಿತಾ ಸಾಧನೆ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ