ಮಗಳ ಧ್ವನಿ ಕೇಳಿ ಕಣ್ಣೀರಿಟ್ಟ ಜಗ್ಗ, ಹರಿದ ಪತ್ರದ ಮುಂದೆ ಕುಸಿದ ಸೋನಿಕಾ
ಬಿಗ್ಬಾಸ್ ಮನೆಯಲ್ಲಿ ಕಳೆದ ಎರಡು ವಾರ ಸಖತ್ ಮನೊರಂಜನೆ ಇತ್ತು, ತಮಾಷೆಯಿಂದ ಕೂಡಿದ ಫನ್ನಿ ಟಾಸ್ಕುಗಳನ್ನು ಬಿಗ್ಬಾಸ್ ನೀಡಿದ್ದರು. ಸ್ಪರ್ಧಿಗಳು ಸಹ ತಮಾಷೆ ಮಾಡುತ್ತಾ, ನಗುತ್ತಾ, ಪ್ರೇಕ್ಷಕರನ್ನು ನಗಿಸುತ್ತಾ ಆಟ ಆಡಿದರು. ಆದರೆ ಈ ವಾರ ಟಾಸ್ಕುಗಳಿಗೆ ಎಮೋಷನಲ್ ಟಚ್ ಕೊಟ್ಟಿದ್ದಾರೆ ಬಿಗ್ಬಾಸ್. ಈ ಬಾರಿ ಸ್ಪರ್ಧಿಗಳಿಗೆ ಮನೆಯಿಂದ ಪತ್ರಗಳು ಬಂದಿವೆ. ಟಾಸ್ಕ್ನಲ್ಲಿ ಗೆದ್ದವರಿಗಷ್ಟೆ ಈ ಪತ್ರಗಳು ದೊರಕಲಿವೆ. ಪತ್ರ ಪಡೆದವರು ಖುಷಿ ಪಟ್ಟರೆ, ಪತ್ರ ಸಿಗದವರ ಹೃದಯ ಒಡೆದಿದೆ.

ಮುಖ್ಯಾಂಶಗಳು
- ಬಿಗ್ಬಾಸ್ ಕನ್ನಡ ಸೀಸನ್ 13
- ಕುಟುಂಬದ ಪತ್ರಗಳಿಗಾಗಿ ಸ್ಪರ್ಧಿಗಳ ಪರದಾಟ
- ಕಣ್ಣೀರು ಹಾಕಿದ ಜಗ್ಗ ಮಮ್ಮಿ ಮತ್ತು ಸೋನಿಕಾ
ಬಿಗ್ಬಾಸ್ ಮನೆಯಲ್ಲಿ ಕಳೆದ ಎರಡು ವಾರ ಸಖತ್ ಮನೊರಂಜನೆ ಇತ್ತು, ತಮಾಷೆಯಿಂದ ಕೂಡಿದ ಫನ್ನಿ ಟಾಸ್ಕುಗಳನ್ನು ಬಿಗ್ಬಾಸ್ ನೀಡಿದ್ದರು. ಸ್ಪರ್ಧಿಗಳು ಸಹ ತಮಾಷೆ ಮಾಡುತ್ತಾ, ನಗುತ್ತಾ, ಪ್ರೇಕ್ಷಕರನ್ನು ನಗಿಸುತ್ತಾ ಆಟ ಆಡಿದರು. ಆದರೆ ಈ ವಾರ ಟಾಸ್ಕುಗಳಿಗೆ ಎಮೋಷನಲ್ ಟಚ್ ಕೊಟ್ಟಿದ್ದಾರೆ ಬಿಗ್ಬಾಸ್. ಈ ಬಾರಿ ಸ್ಪರ್ಧಿಗಳಿಗೆ ಮನೆಯಿಂದ ಪತ್ರಗಳು ಬಂದಿವೆ. ಟಾಸ್ಕ್ನಲ್ಲಿ ಗೆದ್ದವರಿಗಷ್ಟೆ ಈ ಪತ್ರಗಳು ದೊರಕಲಿವೆ. ಪತ್ರ ಪಡೆದವರು ಖುಷಿ ಪಟ್ಟರೆ, ಪತ್ರ ಸಿಗದವರ ಹೃದಯ ಒಡೆದಿದೆ.
ಬುಧವಾರದ ಎಪಿಸೋಡಿನಲ್ಲಿ ಮೊದಲಿಗೆ ತಾಂಡವ್ ಮತ್ತು ಯಶಸ್ ಅವರಿಗೆ ಪತ್ರ ಬಂದಿತ್ತು. ಅದಕ್ಕೆ ಮಧ್ಯ ರಾತ್ರಿ 3 ಗಂಟೆ ವೇಳೆಗೆ ಸ್ಪರ್ಧಿಗಳನ್ನು ಎಬ್ಬಿಸಿ ಅವರಿಗೆ ಟಾಸ್ಕ್ ನೀಡಲಾಯ್ತು. ಯಶಸ್ ಪರವಾಗಿ ಧನುಶ್ ಟಾಸ್ಕ್ ಆಡಿದರೆ, ಗಗನ್ ಪರವಾಗಿ ತಾಂಡವ್ ಟಾಸ್ಕ್ ಆಡಿದರು. ಇಬ್ಬರೂ ಸಹ ಬೆಳಿಗಿನ ವರೆಗೆ ಕಬ್ಬಿಣದ ಪೋಲ್ ಮೇಲೆ ನಿಲ್ಲಬೇಕಿತ್ತು, ಧನುಶ್ ಮತ್ತು ತಾಂಡವ್ ಇಬ್ಬರೂ ಸಹ ಟಾಸ್ಕ್ ಪೂರ್ಣ ಮಾಡಿಸಿ ಗಗನ್ ಹಾಗೂ ಯಶಸ್ಗೆ ಪತ್ರ ಸಿಗುವಂತೆ ಮಾಡಿದರು.
ಅದಾದ ಬಳಿಕ ಸೋನಿಕಾ ಮತ್ತು ಜಗದೀಶ್ ಅವರ ಸರಧಿ. ಜಗದೀಶ್ ಪರವಾಗಿ ಸೌಂದರ್ಯಾ ಮತ್ತು ಯಶಸ್ ಆಡಿದರೆ, ಸೋನಿಕಾ ಪರವಾಗಿ ಗಾನವಿ ಮತ್ತು ಗಗನ್ ಆಡಿದರು. ಕಷ್ಟವಾಗಿದ್ದ ಟಾಸ್ಕ್ನಲ್ಲಿ ಯಶಸ್ ಮತ್ತು ಸೌಂದರ್ಯಾ ಅದ್ಭುತವಾಗಿ ಆಡಿ ಗೆದ್ದರು. ಗಗನ್ ಮತ್ತು ಗಾನವಿ ಸೋಲುತ್ತಿದ್ದಂತೆ ಸೋನಿಕಾ ಭಾವುಕರಾಗಿ ಕಣ್ಣೀರು ಹಾಕಲು ಆರಂಭಿಸಿದರು. ಆದರೆ ಸೋನಿಕಾ, ಗಗನ್ ಮತ್ತು ಗಾನವಿಯನ್ನು ದೂಷಿಸದೇ ಇಬ್ಬರೂ ಮಾಡಿದ ಪ್ರಯತ್ನಕ್ಕೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಿಂದ ಹೊರಬಂದ ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ
ಬಳಿಕ ಸೋನಿಕಾ ಅವರಿಗೆ ಅವರ ಕುಟುಂಬದವರು ಬರೆದಿದ್ದ ಪತ್ರವನ್ನು ಅವರ ಕಣ್ಣೆದುರು ಹರಿದ ಹಾಕಲಾಯ್ತು. ಆಗಂತೂ ಸೋನಿಕಾ ಅವರಿಗೆ ದುಃಖ ತಡೆಯಲಾಗಲಿಲ್ಲ. ಗಾನವಿ, ಸೋನಿಕಾಗೆ ಸಮಾಧಾನ ಮಾಡಿದರು. ಮನೆಯ ಇತರೆ ಸದಸ್ಯರು ಸಹ ಅವರಿಗೆ ಸಮಾಧಾನ ಮಾಡಿದರು. ಬಳಿಕ ಜಗ್ಗ ಮಮ್ಮಿಗೆ ಅವರ ಪುತ್ರಿ ಬರೆದ ಪತ್ರ ನೀಡಲಾಯ್ತು. ಜಗ್ಗ ಮಮ್ಮಿಯ ಪುಟ್ಟ ಮಗಳು ಚಿತ್ರವೊಂದನ್ನು ಬರೆದು ತಂದೆಗೆ ಕಳಿಸಿದ್ದಳು. ಅದನ್ನು ನೋಡುತ್ತಿದ್ದಂತೆ ಜಗ್ಗ ಮಮ್ಮಿಗೆ ದುಃಖ ತಡೆಯಲಾಗಲಿಲ್ಲ. ಚಿತ್ರದ ಬಳಿಕ ಮತ್ತೊಂದು ಸರ್ಪ್ರೈಸ್ ಅನ್ನು ಬಿಗ್ಬಾಸ್ ನೀಡಿದರು. ಜಗ್ಗ ಮಮ್ಮಿಗೆ ಅವರ ಮಗಳ ಧ್ವನಿ ಸಹ ಕೇಳಿಸಿದರು. ಜಗ್ಗ ಅವರ ಮಗಳು ಮುದ್ದಾಗಿ ತಂದೆಗೆ ವಿಶ್ ಮಾಡಿದರು. ಜಗ್ಗ ಮಮ್ಮಿ ಸಹ ಮಗಳಿಗೆ ಅಜ್ಜಿಯೊಂದಿಗೆ ಚೆನ್ನಾಗಿ ಇರುವಂತೆ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




