AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಗ್ನಿಪರೀಕ್ಷೆ’ಯಲ್ಲಿ ಸ್ಪರ್ಧಿಗಳಿಗೆ ಅವಮಾನ ಎಂದವರಿಗೆ ಉತ್ತರ ಕೊಟ್ಟ ಸುದೀಪ್

Bigg Boss Kannada season 13: ಬಿಗ್​​ಬಾಸ್ ಮನೆಯ ಒಳಗೆ ಹೋಗಲು ಬಯಸುವವರನ್ನು ಒಂದೆಡೆ ಸೇರಿಸಿ ಅವರಲ್ಲಿ ಅರ್ಹರನ್ನು ಟಾಸ್ಕುಗಳ ಮೂಲಕ, ವಿವಿಧ ಸಂದರ್ಶನಗಳ ಮೂಲಕ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ವಿನಯ್ ಗೌಡ, ಚಂದನ್ ಗೌಡ, ಸಂಗೀತ ಶೃಂಗೇರಿ ಮತ್ತು ಶ್ರುತಿ ಅವರುಗಳು ಈ ಶೋನ ಜಡ್ಜ್​​ಗಳಾಗಿದ್ದಾರೆ. ಇಲ್ಲಿ ಆಕಾಂಕ್ಷಿಗಳಿಗೆ ಕಠಿಣವಾದ ಟಾಸ್ಕ್ ಕೊಡಲಾಗುತ್ತಿದೆ. ಸ್ಪರ್ಧಿಗಳ ಬಗ್ಗೆ ಕೇವಲವಾಗಿ ನಡೆದುಕೊಳ್ಳಲಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಅದಕ್ಕೆ ಸುದೀಪ್ ಉತ್ತರ ಕೊಟ್ಟಿದ್ದಾರೆ.

‘ಅಗ್ನಿಪರೀಕ್ಷೆ’ಯಲ್ಲಿ ಸ್ಪರ್ಧಿಗಳಿಗೆ ಅವಮಾನ ಎಂದವರಿಗೆ ಉತ್ತರ ಕೊಟ್ಟ ಸುದೀಪ್
Sudeep Agni
ಮಂಜುನಾಥ ಸಿ.
|

Updated on:Aug 30, 2026 | 7:52 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಅಗ್ನಿಪರೀಕ್ಷೆ ಚಾಲ್ತಿಯಲ್ಲಿದೆ.
  • ಅಗ್ನಿಪರೀಕ್ಷೆಯಲ್ಲಿ ಜಡ್ಜ್​​ಗಳು ಬಲು ಕಠಿಣವಾಗಿ ವರ್ತಿಸುತ್ತಾರೆಂಬ ಟೀಕೆ ಇದೆ.
  • ಆರೋಪದ ಬಗ್ಗೆ ನಟ ಸುದೀಪ್ ಉತ್ತರ ನೀಡಿದ್ದಾರೆ.

ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada) ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಇಂದು (ಆಗಸ್ಟ್ 30) ಬಿಗ್​​ಬಾಸ್ ಕನ್ನಡ ಪ್ರೀ ಲಾಂಚ್ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಸುದೀಪ್ ಅವರು ಬಿಗ್​​ಬಾಸ್ ಶೋ, ‘ಅಗ್ನಿಪರೀಕ್ಷೆ’ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪದೇ ಪದೇ ‘ಅಗ್ನಿಪರೀಕ್ಷೆ’ ಕುರಿತು ಪ್ರಶ್ನೆಗಳು ಎದುರಾದವು. ಈ ಬಾರಿ ಬಿಗ್​​ಬಾಸ್​​ಗೆ ಸಾಮಾನ್ಯರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲು ಅಗ್ನಿಪರೀಕ್ಷೆ ಎಂಬ ವಿಶೇಷ ಟಾಸ್ಕ್​ ಅನ್ನು ಮಾಡಲಾಗುತ್ತಿದೆ. ಈ ವೀಶೇಷ ಶೋನಲ್ಲಿ ವಿನಯ್, ಚಂದನ್, ಸಂಗೀತ, ಶ್ರುತಿ ಅವರುಗಳು ಜಡ್ಜ್​​ಗಳಾಗಿದ್ದಾರೆ. ಆದರೆ ಈ ಶೋನಲ್ಲಿ ಬಿಗ್​​ಬಾಸ್​​ ಆಕಾಂಕ್ಷಿಗಳನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಅವರಿಗೆ ಅವಮಾನ ಮಾಡಲಾಗಿದೆ ಎಂಬ ಟೀಕೆ ಕೇಳಿ ಬಂದಿದೆ.

ಈ ಬಗ್ಗೆ ಸುದೀಪ್ ಅವರಿಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಯ್ತು. ಪ್ರಶ್ನೆಗೆ ಜಾಣತನದಿಂದ ಉತ್ತರ ನೀಡಿದ ಸುದೀಪ್, ‘ಅಗ್ನಿಪರೀಕ್ಷೆಗಳನ್ನು ದಾಟಿ ಬಂದರಷ್ಟೆ ಸ್ವರ್ಗ ಸಿಗುತ್ತದೆ’ ಹಾಗೆಯೇ ಆ ಕಠಿಣವಾದ ಅಗ್ನಿಪರೀಕ್ಷೆಯನ್ನು ದಾಟಿದರೆ ಮಾತ್ರವೇ ಬಿಗ್​​ಬಾಸ್​​ನಲ್ಲಿ ಸ್ವರ್ಗ ಸಿಗಬಹುದು’ ಎಂದರು. ‘ಅಗ್ನಿಪರೀಕ್ಷೆ’ ಹೆಸರೇ ಹೇಳುವಂತೆ ಅದೊಂದು ಕಠಿಣವಾದ ಹಂತ, ಅಲ್ಲಿ ಜಡ್ಜ್​​ಗಳು ತುಸು ಕಠಿಣವಾಗಿಯೇ ಇರಬೇಕಾಗುತ್ತದೆ. ಹಾಗೆಂದು ಅಲ್ಲಿ ನಡೆದಿದ್ದೆಲ್ಲ ಸರಿಯಿದೆ ಎಂದು ನಾನು ಹೇಳಲಾಗದು, ಇನ್ನಷ್ಟು ಸೌಮ್ಯದಿಂದ ಹ್ಯಾಂಡಲ್ ಮಾಡಬಹುದಿತ್ತು’ ಎಂದರು ಸುದೀಪ್.

‘ಯಾರು ಆ ಕಠಿಣತೆಗಳನ್ನು ಎದುರಿಸಿದರೋ ಅವರು ಮುಂದೆ ಬರುತ್ತಿದ್ದಾರೆ. ಬಹುಷಃ ಬಿಗ್​​ಬಾಸ್​​ಗೆ ಬಂದು ವಿಜೇತರೂ ಆಗಬಹುದು. ಯಾರು ದೂರು ಹೇಳಿ ಕಷ್ಟ ಎಂದರೊ ಅವರು ಹೊರಗೆ ಹೋಗಿದ್ದಾರೆ. ಜೀವನದಲ್ಲೂ ಹಾಗೆಯೇ ಕಠಿಣವಾದ ಕ್ಷಣಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ, ಅದಕ್ಕೆ ದೂರುತ್ತಾ ಕೂತರೆ ಅದರ ಮುಂದಿರುವ ಒಳಿತು ಸಿಗದೇ ಹೋಗುತ್ತದೆ’ ಎಂದರು ಸುದೀಪ್.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ: ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ಮತಗಳು

‘ಎಲ್ಲ ವಿಚಾರಕ್ಕೂ ಎರಡು ಸೈಡ್ ಇರುತ್ತವೆ. ನಾನೂ ಸಹ ಸಾಕಷ್ಟು ಕಠಿಣ ಸಮಯ, ಕಠಿಣವಾದ ಜವಾಬ್ದಾರಿಗಳನ್ನು ಎದುರಿಸಿಕೊಂಡೇ ಬಂದವನು. ಆಗೆಲ್ಲ ದೊಡ್ಡವರು ಹೇಳುವುದು ಬೈಗುಳ ಎನಿಸುತ್ತಿತ್ತು, ಆದರೆ ಈಗ ಅವರೆಲ್ಲ ಎಷ್ಟು ಸರಿಯಿದ್ದರು ಅನಿಸುತ್ತದೆ. ಇದೂ ಹಾಗೆಯೇ ಈಗ ಜಡ್ಜ್​​ಗಳು ಹೇಳಿರುವುದು ಕಠಿಣವಾಗಿದೆ ಎನಿಸಬಹುದು ಆದರೆ ಆಳೆ ಅದರಿಂದಲೇ ಒಳ್ಳೆಯದೂ ಆಗಬಹುದು’ ಎಂದಿದ್ದಾರೆ ಸುದೀಪ್.

ಬಿಗ್​​ಬಾಸ್ ಅಗ್ನಿಪರೀಕ್ಷೆ ಎಂಬ ಹೊಸ ಎಲಿಮೆಂಟ್ ಅನ್ನು ಈ ಬಾರಿ ಸೇರಿಸಲಾಗಿತ್ತು. ಬಿಗ್​​ಬಾಸ್ ಮನೆಯ ಒಳಗೆ ಹೋಗಲು ಬಯಸುವವರನ್ನು ಒಂದೆಡೆ ಸೇರಿಸಿ ಅವರಲ್ಲಿ ಅರ್ಹರನ್ನು ಟಾಸ್ಕುಗಳ ಮೂಲಕ, ವಿವಿಧ ಸಂದರ್ಶನಗಳ ಮೂಲಕ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ವಿನಯ್ ಗೌಡ, ಚಂದನ್ ಗೌಡ, ಸಂಗೀತ ಶೃಂಗೇರಿ ಮತ್ತು ಶ್ರುತಿ ಅವರುಗಳು ಈ ಶೋನ ಜಡ್ಜ್​​ಗಳಾಗಿದ್ದಾರೆ. ಇವರು ಮೆಚ್ಚಿ ಆರಿಸುವ ವ್ಯಕ್ತಿಗಳು ಸಾಮಾನ್ಯರ ಕೋಟಾನಲ್ಲಿ ಬಿಗ್​​ಬಾಸ್ ಮನೆಗೆ ಹೋಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:45 pm, Sun, 30 August 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ