AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಪಾತ್ರ ಮುಗಿದ ಬಳಿಕ ಸನ್ಯಾಸತ್ವ ಪಡೆದ ಚಿತ್ಕಲಾ ಬೀರಾದಾರ್

ಚಿತ್ಕಲಾ ಅವರು ರತ್ನಮಾಲಾ ಹಾಗೂ ಅಮ್ಮಮ್ಮ ಎಂದೇ ಫೇಮಸ್ ಆಗಿದ್ದರು. ಅವರ ಪಾತ್ರ ಅಷ್ಟರಮಟ್ಟಿಗೆ ಪ್ರಭಾವ ಬೀರಿದೆ. ಅವರ ಪಾತ್ರವನ್ನು ನೋಡಿ ಮೆಚ್ಚಿಕೊಂಡವರು ಸಾಕಷ್ಟು ಮಂದಿ.

‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಪಾತ್ರ ಮುಗಿದ ಬಳಿಕ ಸನ್ಯಾಸತ್ವ ಪಡೆದ ಚಿತ್ಕಲಾ ಬೀರಾದಾರ್
ಚಿತ್ಕಲಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jan 07, 2023 | 12:17 PM

Share

‘ಕನ್ನಡತಿ’ ಧಾರಾವಾಹಿ (Kannadathi Serial) ಮುಗಿಯುವ ಹಂತದಲ್ಲಿದೆ. ಈ ಧಾರಾವಾಹಿಯಲ್ಲಿ ಕಥಾನಾಯಕ ಹರ್ಷನ ತಾಯಿ ರತ್ನಮಾಲಾ ಪಾತ್ರದಲ್ಲಿ ಚಿತ್ಕಲಾ ಬೀರಾದಾರ್ (Chitkala Biradar) ನಟಿಸಿದ್ದರು. ಈ ಧಾರಾವಾಹಿ ಯಶಸ್ಸು ಕಾಣಲು ಇವರ ಪಾತ್ರ ತುಂಬಾ ದೊಡ್ಡದಿದೆ. ಈ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಈ ಧಾರಾವಾಹಿಯಲ್ಲಿ ತಮ್ಮ ಪಾತ್ರ ಮುಗಿದ ಬಳಿಕ ಅವರು ಸನ್ಯಾಸತ್ವ ಪಡೆದಿದ್ದಾರೆ! ಹಾಗಂತ ಇದು ರಿಯಲ್ ಅಲ್ಲ, ರೀಲ್​.

ಚಿತ್ಕಲಾ ಅವರು ರತ್ನಮಾಲಾ ಹಾಗೂ ಅಮ್ಮಮ್ಮ ಎಂದೇ ಫೇಮಸ್ ಆಗಿದ್ದರು. ಅವರ ಪಾತ್ರ ಅಷ್ಟರಮಟ್ಟಿಗೆ ಪ್ರಭಾವ ಬೀರಿದೆ. ಅವರ ಪಾತ್ರವನ್ನು ನೋಡಿ ಮೆಚ್ಚಿಕೊಂಡವರು ಸಾಕಷ್ಟು ಮಂದಿ. ಆದರೆ, ಅವರ ಪಾತ್ರವನ್ನು ಕೊನೆ ಮಾಡಲಾಗಿದೆ. ಭುವಿಯ ಹೆಸರಿಗೆ ಎಲ್ಲಾ ಆಸ್ತಿ ಬರೆದು ರತ್ನಮಾಲಾ ಮೃತಪಟ್ಟಿದ್ದಾಳೆ. ಅಮ್ಮಮ್ಮನ ಪಾತ್ರ ಕೊನೆ ಆದ ಬಗ್ಗೆ ಅನೇಕರಿಗೆ ಬೇಸರ ಇದೆ. ತಂಡವನ್ನು ಚಿತ್ಕಲಾ ಬಿಟ್ಟು ಹೋಗುವಾಗ ಎಲ್ಲರೂ ಕಣ್ಣೀರು ಹಾಕಿದ್ದರು. ಈಗ ಅವರು ಹೊಸ ಧಾರಾವಾಹಿ ತಂಡ ಸೇರಿಕೊಂಡಿದ್ದಾರೆ.

ರತ್ನಮಾಲಾ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಅವರು ಸನ್ಯಾಸಿನಿ ರೀತಿಯಲ್ಲಿ ಬಟ್ಟೆ ಹಾಕಿದ್ದಾರೆ. ಇದು ಯಾವ ಧಾರಾವಾಹಿ ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಈ ಧಾರಾವಾಹಿಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಪೋಸ್ಟ್​ಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಕನ್ನಡತಿ ಮುಗಿದಮೇಲೆ ನಮಗೂ ಬೇರೆ ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ. ಗುರು ಎಲ್ಲೋ ಶಿಷ್ಯರು ಅಲ್ಲೇ. ನಾವೂ ನಿಮ್ಮ ಹಿಂದೆ ಬರ್ತೀವಿ ಅಮ್ಮಮ್ಮ’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾನೆ.

ಚಿತ್ಕಲಾ ಅವರು ಕಿರುತೆರೆ ಜತೆಗೆ ಹಿರಿತೆರೆಯಲ್ಲೂ ಬ್ಯುಸಿ ಇದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ಪೋಷಕ ಪಾತ್ರ ಮಾಡಿದ್ದಾರೆ. ‘ಕನ್ನಡತಿ’ ಧಾರಾವಾಹಿಯಿಂದ ಅವರ ಜನಪ್ರಿಯತೆ ಹೆಚ್ಚಿದೆ. ಈಗ ಅವರು ನಟಿಸಿರುವ ಹೊಸ ಧಾರಾವಾಹಿ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಇದನ್ನೂ ಓದಿ: ನಿಜವಾಯ್ತು ಪ್ರೇಕ್ಷಕರ ಊಹೆ; ಕೊನೆಯಾಗೇ ಹೋಯ್ತು ರತ್ನಮಾಲಾ ಪಾತ್ರ

‘ಕನ್ನಡತಿ’ ಧಾರಾವಾಹಿ ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಭುವಿ ಉತ್ತಮವಾಗಿ ಅಧಿಕಾರ ನಡೆಸಿಕೊಂಡು ಹೊಗುತ್ತಿದ್ದಾಳೆ. ಒಂದು ಕಡೆಯಿಂದ ತಮ್ಮ ವೈರಿಗಳನ್ನು ಮಟ್ಟಹಾಕುವ ಕೆಲಸವನ್ನು ಅವಳು ಮಾಡುತ್ತಿದ್ದಾಳೆ. ಈ ಸಂದರ್ಭದಲ್ಲಿ ರತ್ನಮಾಲಾ ಇರಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:09 pm, Sat, 7 January 23