Comedy Khiladigalu 4: ‘ಕಾಮಿಡಿ ಕಿಲಾಡಿ ಸೀಸನ್ 4’ರ ಫಿನಾಲೆಗೆ ದಿನಾಂಕ ಫಿಕ್ಸ್; ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು
Comedy Khiladigalu Season 4 Finale: ‘ಕಾಮಿಡಿ ಕಿಲಾಡಿಗಳು ಸೀಸನ್ 4’ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಇದಕ್ಕಾಗಿ ವೀಕ್ಷಕರು ಕಾಯುತ್ತಿದ್ದಾರೆ. ಈ ಬಗ್ಗೆ ವಾಹಿನಿ ಕಡೆಯಿಂದ ಮಾಹಿತಿ ಸಿಕ್ಕಿದೆ.
ಇತ್ತೀಚೆಗೆ ರಿಯಾಲಿಟಿ ಶೋಗಳು ಪ್ರೇಕ್ಷಕರನ್ನು ಹೆಚ್ಚು ಗಮನ ಸೆಳೆಯುತ್ತಿವೆ. ‘ಜೀ ಕನ್ನಡ’ ವಾಹಿನಿ (Zee Kannada) ಹಲವು ರಿಯಾಲಿಟಿ ಶೋಗಳನ್ನು ಪ್ರೇಕ್ಷಕರ ಮುಂದೆ ಇಟ್ಟಿದೆ. ಆ ಪೈಕಿ ‘ಕಾಮಿಡಿ ಕಿಲಾಡಿ’ (Comedy Khiladigalu) ಕೂಡ ಒಂದು. ಈಗಾಗಲೇ ಮೂರು ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಸರಣಿಯ ನಾಲ್ಕನೇ ಸೀಸನ್ ಪ್ರಸಾರ ಕಾಣುತ್ತಿದೆ. ನಾಲ್ಕನೇ ಸೀಸನ್ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಫಿನಾಲೆ ಬಗ್ಗೆ ಜೀ ಕನ್ನಡ ಕಡೆಯಿಂದ ಮಾಹಿತಿ ಸಿಕ್ಕಿದೆ. ಈ ಕಾರ್ಯಕ್ರಮದ ಫಿನಾಲೆ (Comedy Khiladigalu Season 4 Finale) ಎಲ್ಲಿ ನಡೆಯಲಿದೆ, ಯಾವಾಗ ಟಿವಿಯಲ್ಲಿ ಪ್ರಸಾರ ಕಾಣಲಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
‘ಕಾಮಿಡಿ ಕಿಲಾಡಿ ಸೀಸನ್ 4’ ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದೆ. 22 ವಾರಗಳ ಕಾಲ ವೀಕ್ಷಕರಿಗೆ ಈ ಶೋ ಮನರಂಜನೆ ನೀಡಿದೆ. ಇಲ್ಲಿಯವರೆಗೆ 150ಕ್ಕೂ ಹೆಚ್ಚು ಸ್ಕಿಟ್‌ಗಳ ಮೂಲಕ ತಮ್ಮ ಪ್ರತಿಭೆಗಳನ್ನು ಸ್ಪರ್ಧಿಗಳು ಅನಾವರಣ ಮಾಡಿದ್ದಾರೆ. ಈಗ ‘ಕಾಮಿಡಿ ಕಿಲಾಡಿಗಳು ಸೀಸನ್ 4’ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಇದಕ್ಕಾಗಿ ವೀಕ್ಷಕರು ಕಾಯುತ್ತಿದ್ದಾರೆ. ಈ ಬಗ್ಗೆ ವಾಹಿನಿ ಕಡೆಯಿಂದ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ‘ವಾಹಿನಿ ಹಾಗೂ ನಿರ್ದೇಶಕರ ಖ್ಯಾತಿ ಹೆಚ್ಚಿದ್ದು ಜೊತೆ ಜೊತೆಯಲಿ ಧಾರಾವಾಹಿಯಿಂದ’; ಅನಿರುದ್ಧ ಜತ್ಕರ್ ನೇರ ಮಾತು
ಗಮನ ಸೆಳೆದ ಜಡ್ಜ್ಗಳು
‘ಕಾಮಿಡಿ ಕಿಲಾಡಿಗಳು ಸೀಸನ್ 4’ರಲ್ಲಿ ಸ್ಪರ್ಧಿಗಳ ಜತೆ ಜಡ್ಜ್ಗಳು ಕೂಡ ಗಮನ ಸೆಳೆದಿದ್ದಾರೆ. ನವರಸ ನಾಯಕ ಜಗ್ಗೇಶ್, ರಕ್ಷಿತಾ ಪ್ರೇಮ್ ಹಾಗು ‘ಲವ್ಲೀ ಸ್ಟಾರ್’ ಪ್ರೇಮ್ ಅವರು ಈ ಬಾರಿಯ ‘ಕಾಮಿಡಿ ಕಿಲಾಡಿ’ಯ ಜಡ್ಜ್ ಆಗಿದ್ದರು. ಅವರು ಫಿನಾಲೆಯ ಮೆರುಗನ್ನು ಹೆಚ್ಚಿಸಲಿದ್ದಾರೆ. ನಿರೂಪಕ ಮಾಸ್ಟರ್ ಆನಂದ್ ಅವರು ಗ್ರ್ಯಾಂಡ್ ಫಿನಾಲೆಯನ್ನು ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ: Radhika Madan: ಧಾರಾವಾಹಿಗಳಿಂದ ಫೇಮಸ್ ಆದ ಬಳಿಕ ಕಿರುತೆರೆ ಬಗ್ಗೆಯೇ ಕಟು ಟೀಕೆ ಮಾಡಿದ ರಾಧಿಕಾ ಮದನ್
ಫಿನಾಲೆ ಎಲ್ಲಿ?
ರಿಯಾಲಿಟಿ ಶೋಗಳ ಫಿನಾಲೆ ಎಂದರೆ ತುಂಬಾನೇ ಗ್ರ್ಯಾಂಡ್ ಆಗಿ ಆಯೋಜಿಸಲಾಗುತ್ತದೆ. ಅದೇ ರೀತಿ ‘ಕಾಮಿಡಿ ಕಿಲಾಡಿಗಳು ಸೀಸನ್ 4’ ಅದ್ದೂರಿಯಾಗಿ ನಡೆಯುತ್ತಿದ್ದು, ಇದಕ್ಕೆ ಮಹಾವೇದಿಕೆ ಸಿದ್ಧವಾಗುತ್ತಿದೆ. 12 ಸ್ಪರ್ಧಿಗಳು ಫಿನಾಲೆಯಲ್ಲಿದ್ದಾರೆ. ಫೈನಲಿಸ್ಟ್ಗಳು ಹಾಸ್ಯ ನಾಟಕಗಳ ಮೂಲಕ ಮನರಂಜನೆ ನೀಡಲಿದ್ದಾರೆ. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಕೆ.ಆರ್.ಪೇಟೆ ಪುರಸಭೆ ಮೈದಾನದಲ್ಲಿ ಫಿನಾಲೆ ನಡೆಯಲಿದೆ. ಫೆಬ್ರವರಿ 11ರ ಸಂಜೆ ಕಾರ್ಯಕ್ರಮ ಆರಂಭವಾಗಲಿದೆ.
ಹಾಗಂತ ಅದೇ ವಾರ ‘ಕಾಮಿಡಿ ಕಿಲಾಡಿಗಳು ಸೀಸನ್ 4’ ಟಿವಿಯಲ್ಲಿ ಪ್ರಸಾರ ಆಗುವುದಿಲ್ಲ. ಸೀಸನ್ 4 ಗ್ರ್ಯಾಂಡ್ ಫಿನಾಲೆ ಸಂಚಿಕೆ ಫೆಬ್ರವರಿ 19ರಂದು ರಾತ್ರಿ 9ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣಲಿದೆ.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.