ಮತ್ತೆ ಕಿರುತೆರೆ ಅತಿಥಿಯಾಗಿ ಬಂದ ಡಿಕೆ ಶಿವಕುಮಾರ್, ಈ ಬಾರಿ ಹಳೆ ಗೆಳೆಯನ ಶೋ

DK Shivakumar: ಕೆಲ ತಿಂಗಳ ಹಿಂದಷ್ಟೆ 'ವೀಕೆಂಡ್ ವಿತ್ ರಮೇಶ್'ಗೆ ಅತಿಥಿಯಾಗಿ ಆಗಮಿಸಿದ್ದ ಡಿಕೆ ಶಿವಕುಮಾರ್ ಈಗ ಮತ್ತೊಂದು ಕಿರುತೆರೆ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ತಮ್ಮ ಗೆಳೆಯನಿಗಾಗಿ.

ಮತ್ತೆ ಕಿರುತೆರೆ ಅತಿಥಿಯಾಗಿ ಬಂದ ಡಿಕೆ ಶಿವಕುಮಾರ್, ಈ ಬಾರಿ ಹಳೆ ಗೆಳೆಯನ ಶೋ
ಡಿಕೆ ಶಿವಕುಮಾರ್
Follow us
ಮಂಜುನಾಥ ಸಿ.
|

Updated on: Aug 15, 2023 | 6:35 PM

ಬಹುತೇಕ ಪ್ರತಿದಿನವೂ ಕಿರುತೆರೆ ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಳ್ಳುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, (DK Shivakumar) ತೀರ ಅಪರೂಪಕ್ಕೆ ಸುದ್ದಿ ಚಾನೆಲ್​ಗಳ ಹೊರತಾಗಿ ಬೇರೆ ಕಿರುತೆರೆ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೆ ಡಿ.ಕೆ.ಶಿವಕುಮಾರ್, ರಮೇಶ್ ಅರವಿಂದ್ ನಡೆಸಿಕೊಡುವ ‘ವೀಕೆಂಡ್ ವಿತ್ ರಮೇಶ್​’ (Weekend With Ramesh) ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಡಿಕೆಶಿಯವರ ಆ ಎಪಿಸೋಡ್​ಗೆ ಒಳ್ಳೆಯ ಟಿಆರ್​ಪಿ ಸಹ ದೊರಕಿತ್ತು.

ಇದೀಗ ಡಿ.ಕೆ.ಶಿವಕುಮಾರ್ ಅವರು ಮತ್ತೊಂದು ಕಿರುತೆರೆ ಶೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಅದೂ ಅವರ ಹಳೆಯ ಗೆಳೆಯನ ಶೋ. ಡಿ.ಕೆ.ಶಿವಕುಮಾರ್ ಈಗಾಗಲೇ ಶೂಟಿಂಗ್ ಸಹ ಮುಗಿದಿದೆ. ಎಪಿಸೋಡ್​ನ ಪ್ರೋಮೋ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.

ಬೊಂಬಾಟ್ ಭೋಜನ ಶೋನಲ್ಲಿ ಡಿಕೆ ಶಿವಕುಮಾರ್

ಡಿ.ಕೆ.ಶಿವಕುಮಾರ್ ಸ್ಟಾರ್ ಸುವರ್ಣ ಚಾನೆಲ್​ನ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ‘ಬೊಂಬಾಟ್ ಭೋಜನ’ ಶೋಗೆ ಅತಿಥಿಯಾಗಿ ಬರಲಿದ್ದಾರೆ. ನಟ, ನಿರೂಪಕ, ಸಿಹಿ ಕಹಿ ಚಂದ್ರು ಈ ಶೋ ಅನ್ನು ನಡೆಸಿಕೊಡುತ್ತಿದ್ದು, ಅಡುಗೆ ಕುರಿತಾದ ಶೋ ಇದಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿಹಿ ಕಹಿ ಚಂದ್ರು ಇಬ್ಬರೂ ಹಳೆಯ ಮಿತ್ರರು. ಕಾಲೇಜಿನಲ್ಲಿ ಒಟ್ಟಿಗೆ ಓದಿದವರು. ಅದೇ ಸಲುಗೆಯ ಕಾರಣದಿಂದ ಡಿಕೆ ಶಿವಕುಮಾರ್ ಅರು ಸಿಹಿ ಕಹಿ ಚಂದ್ರು ಅವರು ಶೋಗೆ ಅತಿಥಿಯಾಗಿ ಬಂದಿದ್ದಾರೆ.

ಇದನ್ನೂ ಓದಿ:ಹೊರಗೆ ಟಫ್ ಆಗಿರೋ ಡಿಕೆ ಶಿವಕುಮಾರ್​ ಮನೆಯಲ್ಲಿ ಹೇಗಿರ್ತಾರೆ?; ವೀಕೆಂಡ್​ ವಿತ್ ರಮೇಶ್​ನಲ್ಲಿ ವಿವರಿಸಿದ ಮಗಳು ಐಶ್ವರ್ಯಾ

ಮಂಗಳವಾರ ಮಧ್ಯಾಹ್ನವೇ ಶೋ ಪ್ರಸಾರವಾಗಿದ್ದು, ಶೋನಲ್ಲಿ ಸಿಹಿ-ಕಹಿ ಚಂದ್ರು ಹಾಗೂ ಡಿ.ಕೆ.ಶಿವಕುಮಾರ್ ಸಹಜ ಆತ್ಮೀಯತೆಯಿಂದಲೇ ಮಾತನಾಡಿದ್ದಾರೆ. ಇಬ್ಬರೂ ಹಳೆಯ ಮಿತ್ರರಾಗಿರುವ ಕಾರಣ ಪರಸ್ಪರ ಏಕವಚನದಲ್ಲಿಯೇ ಸಂಭೋದನೆ ಮಾಡಿಕೊಂಡು ಆಹಾರದ ಬಗ್ಗೆ, ಹಳೆಯ ದಿನಗಳ ಬಗ್ಗೆ, ರಾಜಕೀಯದ ಬಗ್ಗೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ಅವರು ಆದಷ್ಟು ಬೇಗ ದೇಶದ ಪ್ರಧಾನ ಮಂತ್ರಿ ಆಗಲಿ ಎಂದು ಸಿಹಿ ಕಹಿ ಚಂದ್ರು ಹಾರೈಸಿದ್ದಕ್ಕೆ, ‘ಅಯ್ಯೋ ಬೇಡಪ್ಪ, ಸ್ವಲ್ಪ ಲಿಮಿಟ್ಟಿನಲ್ಲಿರೋಣ’ ಎಂದರು, ಸಿಎಂ ಆಗಲಿ ಎಂಬ ಹಾರೈಕೆಯನ್ನು ಮಾತ್ರ ನಗುತ್ತಲೇ ಸ್ವೀಕರಿಸಿದ್ದಾರೆ ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್ ಅವರಿಗಾಗಿ ವಿಶೇಷವಾಗಿ ಅವರೇಕಾಳು ಚಿತ್ರಾನ್ನವನ್ನು ಕಾರ್ಯಕ್ರಮದಲ್ಲಿ ಸಿಹಿ-ಕಹಿ ಚಂದ್ರು ತಯಾರಿಸಿದ್ದರು. ಅದರ ಜೊತೆಗೆ ಡಿಕೆಶಿಗೆ ಇಷ್ಟವಾದ ಹಸಿ ಕಡಲೆ ಬೀಜದ ತಿನಿಸು, ಮಶ್ರೂಮ್ ಫ್ರೈ, ಗೋಬಿ ಫ್ರೈ ಹಾಗೂ ಗುಲಾಬ್ ಜಾಮೂನುಗಳನ್ನು ಸಹ ತಯಾರು ಮಾಡಿದ್ದರು. ಆದರೆ ಇತ್ತೀಚೆಗೆ ಡಯಟ್ ಕಾನ್ಶಿಯಸ್ ಆಗಿರುವ ಡಿಕೆಶಿ, ಮಶ್ರೂಮ್, ಗೋಬಿ ಫ್ರೈಗಳನ್ನು ಪಕ್ಕಕ್ಕೆ ಇರಿಸಿ, ಚಿತ್ರಾನ್ನ, ಕಡಲೆ ಹಾಗೂ ಜಾಮೂನನ್ನು ಮಾತ್ರವೇ ಸೇವಿಸಿದರು.

ಡಿಕೆ ಶಿವಕುಮಾರ್ ಹಾಗೂ ಸಿಹಿ ಕಹಿ ಚಂದ್ರು ಒಟ್ಟಿಗೆ ಶಾಲೆ, ಕಾಲೇಜು ಕಲಿತವರು, ‘ವೀಕೆಂಡ್ ವಿತ್ ರಮೇಶ್’ ಶೋಗೆ ಡಿ.ಕೆ.ಶಿವಕುಮಾರ್ ಅತಿಥಿಯಾಗಿ ಆಗಮಿಸಿದ್ದಾಗಲೂ ಸಹ ಸಿಹಿ-ಕಹಿ ಚಂದ್ರು ಆ ಶೋಗೆ ಬಂದು, ಡಿ.ಕೆ.ಶಿವಕುಮಾರ್ ಹಾಗೂ ತಮ್ಮ ಸ್ನೇಹದ ಬಗ್ಗೆ ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?