Honganasu: ವಸು ಕ್ಷಮೆ ಕೇಳಿದ್ರೂ ತಣಿದಿಲ್ಲ ರಿಷಿ ಕೋಪ; ಮತ್ತೆ ಒಂದು ಮಾಡ್ತಾರಾ ಮಹೇಂದ್ರ-ಜಗತಿ?

Honganasu Serial Update: ವಸುಧರಾಳನ್ನು ಆದಷ್ಟು ದೂರ ಇಡಬೇಕು, ತನ್ನ ಮನಸ್ಸಿನಿಂದ ಕಿತ್ತು ಹಾಕಬೇಕೆಂದು ಪ್ರಯತ್ನಿಸುತ್ತಿದ್ದಾನೆ ರಿಷಿ. ಆದರೂ ರಿಷಿಗೆ ವಸುಧರಾಳದ್ದೇ ನೆನಪು ಕಾಡುತ್ತಿದೆ.

Honganasu: ವಸು ಕ್ಷಮೆ ಕೇಳಿದ್ರೂ ತಣಿದಿಲ್ಲ ರಿಷಿ ಕೋಪ; ಮತ್ತೆ ಒಂದು ಮಾಡ್ತಾರಾ ಮಹೇಂದ್ರ-ಜಗತಿ?
ಹೊಂಗನಸು ಸೀರಿಯಲ್
Updated By: ಮದನ್​ ಕುಮಾರ್​

Updated on: Dec 13, 2022 | 11:59 AM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ರಿಷಿ ಲವ್ ಪ್ರಪೋಸ್ ಮಾಡಿದ ವಿಚಾರವನ್ನು ಜಗತಿಗೆ ಹೇಳಿದಳು ವಸುಧರಾ. ರಿಷಿಯನ್ನು ಯಾಕೆ ರಿಜೆಕ್ಟ್ ಮಾಡಿದೆ ಎಂದು ವಸುಗೆ ಪ್ರಶ್ನೆ ಮಾಡಿದಳು ಜಗತಿ. ಆದರೆ ಪ್ರೀತಿ ತಿರಸ್ಕರಿಸಿದ ಹಿಂದಿನ ಕಾರಣವನ್ನು ವಸುಧರಾ ಬಿಟ್ಟುಕೊಟ್ಟಿಲ್ಲ. ಗೌತಮ್ ಕೂಡ ವಸುಧರಾಳನ್ನು ಪ್ರಶ್ನೆ ಮಾಡಿದ. ರಿಷಿಯನ್ನು ರಿಜೆಕ್ಟ್ ಮಾಡಿದ್ದು ಯಾಕೆ ಎಂದು ವಸುನಾ ಕೇಳಿದ ಗೌತಮ್. ಆದರೆ ಯಾರು ಏನೇ ಕೇಳಿದ್ರೂ ಕಾರಣವೇನೆಂದು ಮಾತ್ರ ವಸುಧರಾ ಬಾಯ್ಬಿಡುತ್ತಿಲ್ಲ.

ವಸುಧರಾ ಪ್ರೀತಿ ರಿಜೆಕ್ಟ್ ಮಾಡಿದ ನೋವಿನಲ್ಲೇ ಕೊರಗುತ್ತಿದ್ದಾನೆ ರಿಷಿ. ಮಗನನ್ನು ಸಮಾಧಾನ ಮಾಡಲು ಬಂದಳು ಜಗತಿ. ರೂಮಿನಲ್ಲಿ ಒಬ್ಬನೆ ಇದ್ದ ರಿಷಿಯನ್ನು ಮಾತನಾಡಿಸಿದಳು ಜಗತಿ. ಆದರೆ ಜಗತಿ ಮಾತಿನಿಂದ ರಿಷಿ ಮತ್ತಷ್ಟು ಕೋಪಗೊಂಡ. ನನ್ನ ಬಳಿ ಯಾಕೆ ಬಂದಿದ್ದೀರಿ ಎಂದು ಜಗತಿ ಮೇಲೆ ರೇಗಿದ. ‘ಚಿಕ್ಕವನಿದ್ದಾಗ ನೀವು ಬಿಟ್ಟು ಹೋದರಿ, ಬಳಿಕ ಸಾಕ್ಷಿ ಕೂಡ ರಿಜೆಕ್ಟ್ ಮಾಡಿದಳು, ಈಗ ವಸುಧರಾ ಕೂಡ ಹೊರಟು ಹೋದಳು’ ಎಂದು ಜಗತಿಗೆ ಮಾತಿನಲ್ಲೇ ಚುಚ್ಚಿದ ರಿಷಿ. ವಸುಧರಾ ಬಗ್ಗೆ ಹೇಳುತ್ತಿದ್ದಂತೆ ನಿಮ್ಮ ಶಿಷ್ಯೆಯ ಪರ ವಹಿಸಿಕೊಂಡು ಬರಬೇಡಿ ಎಂದು ಜಗತಿಗೆ ಖಡಕ್ ಆಗಿ ಹೇಳಿದ ರಿಷಿ. ಯಾವುದೇ ಸಮರ್ಥನೆ ಬೇಕಿಲ್ಲ ಎಂದು ಜಗತಿಗೆ ಕೈ ಮುಗಿದು ಕೇಳಿಕೊಂಡ. ಮಗನ ಮಾತಿನಿಂದ ಬೇಸರಗೊಂಡ ಜಗತಿ ಅಳುತ್ತಲೇ ರೂಮಿನಿಂದ ಹೊರ ನಡೆದಳು.

ಇದನ್ನೂ ಓದಿ: Honganasu: ವಸುಧರಾ ಜತೆ ರಿಷಿಯ ಪ್ರೀತಿ ರಹಸ್ಯ ಬಯಲಿಗೆಳೆದ ಸಾಕ್ಷಿ: ದೇವಯಾನಿಗೆ ಖುಷಿ

ವಸುಧರಾಳನ್ನು ಆದಷ್ಟು ದೂರ ಇಡಬೇಕು, ತನ್ನ ಮನಸ್ಸಿನಿಂದ ಕಿತ್ತು ಹಾಕಬೇಕೆಂದು ಪ್ರಯತ್ನಿಸುತ್ತಿದ್ದಾನೆ ರಿಷಿ. ಆದರೂ ರಿಷಿಗೆ ವಸುಧರಾಳದ್ದೇ ನೆನಪು. ವಸುಧರಾಗೆ ಫೋನ್ ಮಾಡಲು ನಿರ್ಧರಿಸಿದ, ಆದರೆ ಬೇಡ ಎಂದು ಮತ್ತೆ ಸೈಲೆಂಟ್ ಆದ ರಿಷಿ. ಬೆಳಗ್ಗೆ ಕಾಲೇಜಿಗೆ ಬಂದವನೇ ವಸುಧರಾ ಜೊತೆ ಮಾತನಾಡಬಾರದು ಎಂದು ನಿರ್ಧರಿಸಿದ. ವಸುಧರಾ ಸ್ನೇಹಿತೆ ಪುಷ್ಪಾಳನ್ನು ಕರೆದು ನೋಟ್ಸ್ ಕೊಡುವಂತೆ ಕೇಳಿದ. ಕ್ಲಾಸ್‌ಗೆ ಹೋದ ರಿಷಿ ವಸುಧರಾಳನ್ನು ಮಾತನಾಡಿಸದೆ ಪಾಠ ಪ್ರಾರಂಭಿಸಿದ. ವಸುಧರಾ ನೋಟ್ಸ್ ನೋಡಿ ಶಾಕ್ ಆದ ರಿಷಿ. ನೋಟ್ಸ್ ತುಂಬಾ ‘ಸಾರಿ.. ಸಾರಿ..’ ಎಂದು ಬರೆದಿದ್ದಳು ವಸುಧರಾ. ಮನಸ್ಸಲ್ಲಿ ಪ್ರೀತಿ ಇದ್ದರೂ ಹೇಳುತ್ತಿಲ್ಲ, ವಸುಧರಾ ಅರ್ಥನೇ ಆಗಲ್ಲ ಎಂದು ಮನಸ್ಸಲ್ಲೇ ಅಂದುಕೊಂಡು ನೋಟ್ಸ್ ನಲ್ಲಿ ಹೀಗೆಲ್ಲ ಬರೆಯಬಾರದೆಂದು ಪರೋಕ್ಷವಾಗಿ ವಸುಧರಾಗೆ ಕ್ಲಾಸ್ ತೆಗೆದುಕೊಂಡ ರಿಷಿ.

ಇದನ್ನೂ ಓದಿ: Honganasu: ಜಗತಿಗೆ ಅನುಮಾನ ಮೂಡಿಸಿದ ವಸುಧರಾ ಮಾತು; ರಿಷಿ ಮುಂದಿನ ನಿಲುವೇನು?

ರಿಷಿಯ ಮಾತುಗಳಿಂದ ಬೇಸರ ಮಾಡಿಕೊಂಡ ವಸು ಕ್ಲಾಸ್‌ನಿಂದ ಹೊರಟು ಹೋದಳು. ರಿಷಿ ಕೂಡ ಏನು ಮಾತನಾಡದೆ ಹೊರಟು ಹೋದ. ವಸುಧರಾ ಸಾರಿ ಅಂತ ಬರೆದ ಲೆಟರ್‌ ಅನ್ನು ಎಸೆದು ಹೋದ ರಿಷಿ. ಆತ ಎಸೆದು ಹೋದ ಲೆಟರ್ ನೋಡಿದಳು ಜಗತಿ. ಏನದು ಅಂತ ಮಹೇಂದ್ರ ಕೂಡ ಎಂಟ್ರಿ ಕೊಟ್ಟ. ವಸುಧರಾ ಬರೆದ ಲೆಟರ್ ಎಂದು ಮಹೇಂದ್ರನಿಗೆ ತೋರಿಸಿದಳು ಜಗತಿ. ವಸುಧರಾ ಮನಸ್ಸಲ್ಲಿ ಪ್ರೀತಿ ಇದ್ದರೂ ಯಾಕೆ ಹೀಗೆ ಮಾಡಿದಳು? ಇಬ್ಬರನ್ನೂ ಹೇಗಾದರೂ ಮಾಡಿ ಒಂದು ಮಾಡಬೇಕು ಅಂತ ಅಂದುಕೊಂಡರು ಮಹೇಂದ್ರ ಮತ್ತು ಜಗತಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.