AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿನಾಲೆ ತಲುಪಲು ಅರ್ಹತೆ ಪಡೆದ ಮಲ್ಲಮ್ಮ: ಸಿಂಪಥಿ ಕಾರಣಕ್ಕೆ ದಾರಿ ಬಿಟ್ಟುಕೊಟ್ಟು ಸ್ಪರ್ಧಿಗಳು

ಬಿಗ್ ಬಾಸ್ ಮನೆಯಲ್ಲಿ ಬೇರೆ ಎಲ್ಲ ಸ್ಪರ್ಧಿಗಳಿಗಿಂತ ಮಲ್ಲಮ್ಮ ಡಿಫರೆಂಟ್ ಆಗಿದ್ದಾರೆ. ಬಹಳ ಮುಗ್ಧರಾದ ಅವರಿಗೆ ಬಿಗ್ ಬಾಸ್ ಆಟದಲ್ಲಿ ಇರುವ ತಂತ್ರಗಾರಿಕೆ ಸರಿಯಾಗಿ ತಿಳಿದಿಲ್ಲ. ಮೊದಲ ವಾರದಲ್ಲಿ ಹಲವು ಸ್ಪರ್ಧಿಗಳು ಮಲ್ಲಮ್ಮ ಬಗ್ಗೆ ಸಿಂಪಥಿ ತೋರಿಸಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ..

ಫಿನಾಲೆ ತಲುಪಲು ಅರ್ಹತೆ ಪಡೆದ ಮಲ್ಲಮ್ಮ: ಸಿಂಪಥಿ ಕಾರಣಕ್ಕೆ ದಾರಿ ಬಿಟ್ಟುಕೊಟ್ಟು ಸ್ಪರ್ಧಿಗಳು
Mallamma
ಮದನ್​ ಕುಮಾರ್​
|

Updated on: Oct 01, 2025 | 11:26 PM

Share

ಹಳ್ಳಿಗಾಡಿನಿಂದ ಬಂದ ಮಲ್ಲಮ್ಮ (Mallamma) ಅವರು ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಮಲ್ಲಮ್ಮ ಅವರು ತುಂಬ ಮುಗ್ಧರು. ಬಿಗ್ ಬಾಸ್ ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ಅವರು ಕಷ್ಟಪಡುತ್ತಾರೆ. ಆದರೂ ಕೂಡ ಅವರು ಎಲ್ಲರ ಪ್ರೀತಿಪಾತ್ರರಾಗಿದ್ದಾರೆ. ವಿಶೇಷ ಏನೆಂದರೆ ಅವರು ಮೊದಲ ಫಿನಾಲೆ ಕಂಟೆಂಡರ್ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಇನ್ನುಳಿದ ಸ್ಪರ್ಧಿಗಳ ಸಿಂಪಥಿ!

ಮಲ್ಲಮ್ಮ ಅವರ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದು ಮೊದಲ ಎರಡು ದಿನದಲ್ಲೇ ಗೊತ್ತಾಗಿದೆ. ಅವರು ತುಂಬ ಮುಗ್ಧರು. ಇನ್ನುಳಿದವರ ತಂತ್ರಗಾರಿಕೆಯನ್ನು ಅರ್ಥ ಮಾಡಿಕೊಳ್ಳಲು ಅವರು ಸೋಲುತ್ತಾರೆ. ಎಲ್ಲರೂ ಸರಿಯಾಗಿ ಕಠಿಣ ಪೈಪೋಟಿ ನೀಡಿದರೆ ಅಂಥವರ ಜೊತೆ ಮಲ್ಲಮ್ಮ ಸ್ಪರ್ಧಿಸುವುದು ಕಷ್ಟ ಆಗುತ್ತದೆ. ಹಾಗಾಗಿ ಎಲ್ಲರೂ ಒಟ್ಟಾಗಿ ಚರ್ಚಿಸಿ ಮಲ್ಲಮ್ಮ ಅವರನ್ನು ಫಿನಾಲೆ ಕಂಟೆಂಡರ್ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ತುಂಬಾ ಡಿಫರೆಂಟ್ ಆಗಿದೆ. ಹೊಸ ಹೊಸ ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಮೂರನೇ ವಾರದಲ್ಲಿಯೇ ಒಂದು ಫಿನಾಲೆ ಬರಲಿದೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ಅದಕ್ಕಾಗಿ ಪ್ರತಿ ವಾರ ಕೆಲವು ಟಾಸ್ಕ್​​ಗಳನ್ನು ನೀಡಲಾಗುತ್ತಿದೆ. ಅದರಲ್ಲಿ ಗೆದ್ದವರು ಫಿನಾಲೆ ಕಂಟೆಂಡರ್ ಆಗುತ್ತಾರೆ. ಈಗ ಆ ಚಾನ್ಸ್ ಮಲ್ಲಮ್ಮ ಅವರಿಗೆ ಸಿಕ್ಕಿದೆ.

ಒಂಟಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಅಶ್ವಿನಿ ಗೌಡ ಅವರು ನಿರ್ಧಾರ ಪ್ರಕಟಿಸಿದರು. ‘ನಮ್ಮೆಲ್ಲರಿಗೂ ಫಿನಾಲೆಗೆ ಹೋಗುವ ಭರವಸೆ ಇದೆ. ಎಲ್ಲರೂ ಸೇರಿ ನಾವು ಒಮ್ಮತದಿಂದ ಮಲ್ಲಮ್ಮ ಅವರನ್ನು ಸೇವ್ ಮಾಡುತ್ತಿದ್ದೇವೆ’ ಎಂದು ಹೇಳಿದರು. ಅಂದರೆ ಸಿಂಪಥಿ ಕಾರಣದಿಂದಲೇ ಮಲ್ಲಮ್ಮ ಅವರಿಗೆ ಈ ಸ್ಥಾನವನ್ನು ನೀಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಹೆಚ್ಚು ದಿನಗಳ ತನಕ ಈ ರೀತಿ ನಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಆಟ ಬದಲಾಗಲಿದೆ.

ಇದನ್ನೂ ಓದಿ: ಬಕ್ರಾ ಮಾಡಲು ಬಂದ ಗಿಲ್ಲಿ ನಟನಿಗೆ ಚಳ್ಳೆಹಣ್ಣು ತಿನ್ನಿಸಿದ ಮಲ್ಲಮ್ಮ

ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಕಳೆದಿರುವುದು 3 ದಿನಗಳು ಮಾತ್ರ. ದಿನ ಕಳೆದಂತೆಲ್ಲ ಆಟದ ಬಿಸಿ ಹೆಚ್ಚುತ್ತದೆ. ರಕ್ಷಿತಾ ಶೆಟ್ಟಿ ಬಳಿಕ ಮೊದಲು ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಪೈಪೋಟಿ ಹೆಚ್ಚಿದ ಬಳಿಕ ತಮ್ಮ ತಮ್ಮ ಸ್ಥಾನ ಉಳಿಸಿಕೊಳ್ಳಲು ಎಲ್ಲರೂ ಸಿಂಪಥಿ ಬದಿಗಿಟ್ಟು ಹೋರಾಡಲೇಬೇಕಾಗುತ್ತದೆ. ಆಗ ಮಲ್ಲಮ್ಮ ಹೇಗೆ ಆಟ ಆಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ