AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕುಲ್​ ಬಾಲಾಜಿ ಮುಂದೆ ಪ್ರಪೋಸ್​ ಆಸೆ ಹೇಳಿಕೊಂಡ ‘ನನ್ನರಸಿ ರಾಧೆ’ ಇಂಚರಾ; ಹೇಗಿತ್ತು ಪ್ರತಿಕ್ರಿಯೆ?

‘ಬಿಗ್​ ಬಾಸ್​ ಸೀಸನ್​ 8’ಕ್ಕೆ ತೆರೆಬೀಳುತ್ತಿದ್ದಂತೆಯೇ ‘ಮಿನಿ ಬಿಗ್​ ಬಾಸ್​’ ಶುರು ಆಗಿದೆ. ಇದರಲ್ಲಿ ನಟಿ ಕೌಸ್ತುಭ ಗಮನ ಸೆಳೆಯುತ್ತಿದ್ದಾರೆ. ಮೊದಲ ಎಪಿಸೋಡ್​ನಲ್ಲಿಯೇ ಅವರು ಮಿಂಚಿದ್ದಾರೆ.

ಅಕುಲ್​ ಬಾಲಾಜಿ ಮುಂದೆ ಪ್ರಪೋಸ್​ ಆಸೆ ಹೇಳಿಕೊಂಡ ‘ನನ್ನರಸಿ ರಾಧೆ’ ಇಂಚರಾ; ಹೇಗಿತ್ತು ಪ್ರತಿಕ್ರಿಯೆ?
ಅಕುಲ್​ ಬಾಲಾಜಿ ಮುಂದೆ ಪ್ರಪೋಸ್​ ಆಸೆ ಹೇಳಿಕೊಂಡ ‘ನನ್ನರಸಿ ರಾಧೆ’ ಇಂಚರಾ; ಹೇಗಿತ್ತು ಪ್ರತಿಕ್ರಿಯೆ?
TV9 Web
| Edited By: |

Updated on: Aug 14, 2021 | 8:25 PM

Share

ಸೀರಿಯಲ್​ ಕಲಾವಿದರೆಲ್ಲ ಈಗ ಬಿಗ್​ ಬಾಸ್​ ಮನೆ ಸೇರಿಕೊಂಡಿದ್ದಾರೆ. ಕಲರ್ಸ್​ ಕನ್ನಡ (Colors Kannada) ವಾಹಿನಿಯಲ್ಲಿ ಶನಿವಾರ (ಆ.14) ‘ಬಿಗ್​ ಬಾಸ್​ ಮಿನಿ ಸೀಸನ್​’ (Bigg Boss Mini Season) ಪ್ರಸಾರ ಆರಂಭವಾಗಿದೆ. ತಮ್ಮ ರಿಯಲ್​ ವ್ಯಕ್ತಿತ್ವವನ್ನು ಜನರಿಗೆ ತೋರಿಸಲು ಜನಪ್ರಿಯ ಧಾರಾವಾಹಿ ಕಲಾವಿದರಿಗೆ ಒಂದು ವಾರ ಸಮಯಾವಕಾಶ ಸಿಕ್ಕಿದೆ. ಮೊದಲ ದಿನದ ಎಪಿಸೋಡ್​ನಲ್ಲಿಯೇ ಅನೇಕ ವಿಚಾರಗಳ ಬಗ್ಗೆ ವೀಕ್ಷಕರಿಗೆ ಗೊತ್ತಾಗಿದೆ. ಖಾಸಗಿ ಬದುಕಿನ ಒಂದೊಂದೇ ವಿವರಗಳನ್ನು ಸೆಲೆಬ್ರಿಟಿಗಳು ಹಂಚಿಕೊಳ್ಳುತ್ತಿದ್ದಾರೆ. ‘ನನ್ನರಸಿ ರಾಧೆ’ (Nannarasi Radhe) ಸೀರಿಯಲ್​ನಲ್ಲಿ ಇಂಚರಾ ಪಾತ್ರದ ಮೂಲಕ ಜನಪ್ರಿಯ ಆಗಿರುವ ನಟಿ ಕೌಸ್ತುಭ (Kaustubha) ಅವರು ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಮೊದಲ ದಿನವೇ ಅಕುಲ್​ ಬಾಲಾಜಿ ಜೊತೆ ಚಿಟಪಟನೆ ಮಾತನಾಡಿದ್ದಾರೆ.

ತಮಗೆ ಪ್ರಪೋಸ್​ ಮಾಡಲಿರುವ ಹುಡುಗನ ಬಗ್ಗೆ ಕೌಸ್ತುಭ ಅವರು ಈಗಾಗಲೇ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯೊಳಗೆ ಅದನ್ನು ಅವರು ವಿವರಿಸಿದ್ದಾರೆ. ಬಿಗ್​ ಬಾಸ್​ ಮಿನಿ ಸೀಸನ್​ ಶೋಗೆ ಮೊದಲು ಕಾಲಿಟ್ಟಿರುವುದು ಅಕುಲ್​ ಬಾಲಾಜಿ. ನಂತರ ಮನೆಯೊಳಗೆ ಕಾಲಿಟ್ಟ ಎಲ್ಲರನ್ನೂ ಅವರೇ ಸ್ವಾಗತಿಸಿದ್ದಾರೆ. ಈ ವೇಳೆ ಕೌಸ್ತುಭ ಅವರು ತಮ್ಮ ಪ್ರಪೋಸ್​ ಆಸೆಯನ್ನು ಹೇಳಿಕೊಂಡಿದ್ದಾರೆ.

‘ಈ ರೀತಿ ಪ್ರಪೋಸ್​ ಮಾಡುವುದು ಪ್ರಾಕ್ಟಿಕಲ್​ ಅಲ್ಲ ಅಂದ್ರೆ ನಂಗೆ ನಿರಾಸೆ ಆಗುತ್ತೆ. ನನಗೆ ಗೊತ್ತಿಲ್ಲದ ಹಾಗೆ ನಮ್ಮ ಅಪ್ಪ-ಅಮ್ಮನನ್ನು ಆತ ಮನವೊಲಿಸಬೇಕು. ನೀನು ರೆಡಿಯಾಗು, ನಾವೆಲ್ಲೋ ಹೊರಗೆ ಹೋಗ್ಬೇಕು ಅಂತ ಹೇಳಬೇಕು. ನಾನು ತುಂಬ ಚೆನ್ನಾಗಿ ರೆಡಿ ಆಗಬೇಕು. ಇನ್ನೇನು ನಾವು ಆಗ ಆ ಜಾಗವನ್ನು ತಲುಪುತ್ತೇನೆ ಎನ್ನುವಾಗ ನನ್ನ ಕಣ್ಣುಗಳಿಗೆ ಪಟ್ಟಿ ಕಟ್ಟಬೇಕು. ಇದೆಲ್ಲ ಸಾಯಂಕಾಲ ಅಥವಾ ರಾತ್ರಿಯ ಸಮಯದಲ್ಲಿ ನಡೆಯಬೇಕು. ನದಿಯಿರುವ ಜಾಗಕ್ಕೆ ಕರೆದುಕೊಂಡು ಹೋಗಿ, ಅದರ ಮಧ್ಯದಲ್ಲಿ ಅಲಂಕಾರಗೊಂಡಿರುವ ಜಾಗ ಇರಬೇಕು. ನನ್ನ ಕಣ್ಣುಗಳಿಗೆ ಕಟ್ಟಿದ ಪಟ್ಟಿಯನ್ನು ಆಗ ತೆಗೆಯಲು ಹೇಳಬೇಕು. ನಾನು ಕಣ್ಣು ಬಿಟ್ಟು ಎದುರಿಗೆ ನೋಡಿದರೆ ಅವನು ಕಾಣಿಸುವುದಿಲ್ಲ. ಎಲ್ಲಿದ್ದಾನೆ ಎಂದು ಹುಡುಕಿದರೆ, ನನ್ನ ಕಾಲಿನ ಬಳಿ ಮಂಡಿಯೂರಿ ಕುಳಿತುಕೊಂಡು ಹೂವು ಅಥವಾ ರಿಂಗ್​ ಹಿಡಿದುಕೊಂಡು ಪ್ರಪೋಸ್​ ಮಾಡುತ್ತಿರಬೇಕು’ ಎಂದು ಕೌಸ್ತುಭ ಹೇಳಿದ್ದಾರೆ.

ಇದನ್ನು ಕೇಳಿ ಅಕುಲ್​ ಬಾಲಾಜಿ ಅಚ್ಚರಿಪಟ್ಟಿದ್ದಾರೆ. ‘ಓಹೋ ನಿಮಗೆ ಪ್ರಪೋಸ್​ ಮಾಡುವಾಗಲೇ ರಿಂಗ್​ ಇರಬೇಕಾ? ಹಾಗಾದರೆ, ಇದು ನೇರ ಮ್ಯಾರೇಜ್​’ ಎಂದು ಅವರು ಹುಬ್ಬೇರಿಸಿದ್ದಾರೆ.

ಇದನ್ನೂ ಓದಿ:

‘ನನ್ನರಸಿ ರಾಧೆ’ ನಟಿ ಕೌಸ್ತುಭ ಅವರ ಮೈನಸ್​ ಪಾಯಿಂಟ್​ ಏನು? ಬಿಗ್​ ಬಾಸ್​ ಮನೆಯಲ್ಲಿ ಸತ್ಯ ಬಾಯ್ಟಿಟ್ಟ ಇಂಚರ

‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?