ಪೊಲೀಸರ ವಶಕ್ಕೆ ಬಿಗ್ ಬಾಸ್ ರಜತ್, ವಿನಯ್ ಗೌಡ; ಲಾಂಗ್ ಹಿಡಿದಿದ್ದಕ್ಕೆ ಸಂಕಷ್ಟ
ನಿಷೇಧಿತ ಮಾರಕಾಸ್ತ್ರವಾದ ಲಾಂಗ್ ಹಿಡಿದು ಓಡಾಡಿದ್ದಕ್ಕಾಗಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರ ಮೇಲೆ ಕೇಸ್ ದಾಖಲಾಗಿದೆ. ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಾರ್ವಜನಿಕವಾಗಿ ಭಯದ ವಾತಾವರಣ ಸೃಷ್ಟಿ ಆಗುವಂತೆ ರೀಲ್ಸ್ ಮಾಡಿದ್ದಾರೆ ಎಂಬ ಆರೋಪ ಅವರ ಮೇಲೆ ಎದುರಾಗಿದೆ. ಹಾಗಾಗಿ ವಶಕ್ಕೆ ಪಡೆಯಲಾಗಿದೆ.

‘ಬಿಗ್ ಬಾಸ್ ಕನ್ನಡ’ (Bigg Boss Kannada) ರಿಯಾಲಿಟಿ ಶೋ ಮೂಲಕ ಫೇಮಸ್ ಆದ ರಜತ್ ಕಿಶನ್ ಮತ್ತು ವಿನಯ್ ಗೌಡ (Vinay Gowda) ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಲಾಂಗ್ ಹಿಡಿದು ರೀಲ್ಸ್ ಮಾಡಿದ ಅವರ ಮೇಲೆ ಕೇಸ್ ದಾಖಲಾಗಿದೆ. ಈ ಹಿನ್ನೆಲೆಯನ್ನು ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಗೆ ಹಾಜರಾದ ವಿನಯ್ ಗೌಡ ಮತ್ತು ರಜತ್ ಕಿಶನ್ (Rajath Kishan) ಅವರನ್ನು ಬಸವೇಶ್ವರನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೀಲ್ಸ್ ಮಾಡುವಾಗ ಲಾಂಗ್ ಹಿಡಿದಿದ್ದಕ್ಕಾಗಿ ಈ ಸೆಲೆಬ್ರಿಟಿಗಳಿಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ.
ರಜತ್ ಕಿಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ರೀಲ್ಸ್ ಹಂಚಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಅವರು ಹಂಚಿಕೊಂಡ ಒಂದು ರೀಲ್ಸ್ ವಿವಾದಕ್ಕೆ ಕಾರಣ ಆಗಿದೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಬಸವೇಶ್ವರ ನಗರ ಠಾಣೆಯ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಜತ್ ಅವರು ಈ ರೀಲ್ಸ್ ಅಪ್ಲೋಡ್ ಮಾಡಿದ್ದರು. ಅದು ವೈರಲ್ ಆದ ಬಳಿಕ ಕೇಸ್ ದಾಖಲಾಗಿತ್ತು. ಈ ಸಂಬಂಧ ವಿಚಾರಣೆಗೆ ಬರುವಂತೆ ಇಬ್ಬರಿಗೂ ನೋಟಿಸ್ ನೀಡಲಾಗಿತ್ತು. ತಾವು ಕೊಪ್ಪಳದಲ್ಲಿ ಶೂಟಿಂಗ್ ಮಾಡುತ್ತಿರುವುದಾಗಿ ರಜತ್ ಹೇಳಿದ್ದರು. ಆದರೆ ಇದು ಗಂಭೀರ ಪ್ರಕರಣ ಆದ್ದರಿಂದ ಈ ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದರು. ಆದ್ದರಿಂದ ಇಬ್ಬರೂ ವಿಚಾರಣೆಗೆ ಬಂದಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ರಜತ್ ಹಂಚಿಕೊಂಡ ರೀಲ್ಸ್ಗೆ ಈ ರೀತಿ ಕ್ಯಾಪ್ಷನ್ ನೀಡಲಾಗಿದೆ. ‘ಎಚ್ಚರಿಕೆ: ಇದನ್ನು ಮನೆಯಲ್ಲಿ ಪ್ರಯತ್ನಿಸಬೇಡಿ. ಇದು ಚಿತ್ರೀಕರಣದ ಉದ್ದೇಶಕ್ಕೆ ಮಾತ್ರ. ಇದರಲ್ಲಿ ಬಳಸಿರುವುದು ಸೆಟ್ ಪ್ರಾಪರ್ಟಿ’ ಎಂದು ಬರೆಯಲಾಗಿದೆ. ಆದರೆ ಅವರು ಬಳಸಿರುವುದು ನಿಜವಾದ ಮಾರಕಾಸ್ತ್ರ ಎಂಬ ಆರೋಪ ಎದುರಾಗಿದೆ.
ಇದನ್ನೂ ಓದಿ: ರಜತ್ ಜೊತೆ ಸ್ನೇಹ ಹೊಸದು, ಅವರು ಬಿಗ್ ಬಾಸ್ ಮನೆಗೆ ಬಂದ ಬಳಿಕ ಗೆಳೆತನ ಶುರುವಾಗಿದ್ದು: ತ್ರಿವಿಕ್ರಮ್
ವಿನಯ್ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿದ್ದರು. ರಜತ್ ಕಿಶನ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿದ್ದರು. ಶೋನಲ್ಲಿ ಇರುವಾಗ ಇಬ್ಬರೂ ಕೂಡ ಅಗ್ರೆಷನ್ ಮೂಲಕ ಗುರುತಿಸಿಕೊಂಡಿದ್ದರು. ಸಾಕಷ್ಟು ವಿವಾದಗಳನ್ನು ಕೂಡ ಮಾಡಿಕೊಂಡಿದ್ದರು. ಈಗ ಅವರು ಲಾಂಗ್ ಹಿಡಿದು ಪೊಲೀಸ್ ಠಾಣೆಯ ಮೆಟ್ಟಿಲೇರುವಂತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.