AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೂರ್ತಿ ಶೋ ಬಂದರೆ ಏನಾಗಬಹುದು?‘; ಕಿರುತೆರೆ ಲೋಕಕ್ಕೆ ಎಂಟ್ರಿಕೊಡಲು ರೋಹಿತ್ ರೆಡಿ

ರೋಹಿತ್ ಶರ್ಮಾ ಮನರಂಜನಾ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸೋನಿ ಪಿಕ್ಚರ್ಸ್ ಟೀಸರ್ ಬಿಡುಗಡೆ ಮಾಡಿದ್ದು, ಅವರ ರಿಯಾಲಿಟಿ/ಟಾಕ್ ಶೋ ನಿರೀಕ್ಷೆ ಮೂಡಿಸಿದೆ. 'ಕೋಯಿ ಭಿ ಗಾರ್ಡನ್ ಮೇ ನಹೀ ಘುಮೇಗಾ' ಸಂಭಾಷಣೆಯಿಂದಲೇ ಅವರು , ಇದೀಗ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಮತ್ತು ಸೋನಿ ಲಿವ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಈ ವಿಷಯ ಕುತೂಹಲ ಮೂಡಿಸಿದೆ.

‘ಪೂರ್ತಿ ಶೋ ಬಂದರೆ ಏನಾಗಬಹುದು?‘; ಕಿರುತೆರೆ ಲೋಕಕ್ಕೆ ಎಂಟ್ರಿಕೊಡಲು ರೋಹಿತ್ ರೆಡಿ
ರೋಹಿತ್
ರಾಜೇಶ್ ದುಗ್ಗುಮನೆ
|

Updated on:May 09, 2026 | 7:43 AM

Share

ಕ್ರಿಕೆಟ್ ಲೋಕಕ್ಕೂ ಬಣ್ಣದ ಲೋಕಕ್ಕೂ ಎಲ್ಲಿಲ್ಲದ ನಂಟು. ಕ್ರಿಕೆಟ್ ಲೋಕದ ಅನೇಕರು ಸಿನಿಮಾದಲ್ಲಿ ನಟಿಸಿದ ಉದಾಹರಣೆ ಇದೆ. ಶೋನಲ್ಲಿ ಮಿಂಚಿದ್ದೂ ಇದೆ. ಈಗ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಸರದಿ. ಅವರು ಮೈದಾನದ ಹೊರಗೂ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಬಿಡುಗಡೆ ಮಾಡಿರುವ ಹೊಸ ಟೀಸರ್, ರೋಹಿತ್ ಶರ್ಮಾ ಅವರ (Rohit Sharma) ಮನರಂಜನಾ ಲೋಕದ ಪದಾರ್ಪಣೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ಸೋನಿ ಪಿಕ್ಚರ್ಸ್ ಹಂಚಿಕೊಂಡಿರುವ ಟೀಸರ್ ಗಮನ ಸೆಳೆದಿದೆ. ರೋಹಿತ್ ಅವರನ್ನು ಫ್ಯಾನ್ಸ್ ಭೇಟಿ ಮಾಡುತ್ತಾರೆ. ಅವರು ಮಾಡಿದ ಸಾಧನೆಯನ್ನು ಹೊಗಳುತ್ತಾರೆ. ಆದರೆ, ಎಲ್ಲರಿಗೂ ಇಷ್ಟ ಆಗಿದ್ದು ಅವರ ಆಟವಲ್ಲ, ಬದಲಿಗೆ ಮೈದಾನದಲ್ಲಿ ಹೇಳಿದ್ದ ‘ಕೋಯಿ ಭಿ ಗಾರ್ಡನ್ ಮೇ ನಹೀ ಘುಮೇಗಾ’ (ಯಾರೂ ಗಾರ್ಡನ್‌ನಲ್ಲಿ ಓಡಾಡಬಾರದು) ಎಂಬ ಸಾಲುಗಳು. ಇದನ್ನು ಹೇಳುವಂತೆ ಎಲ್ಲರೂ ಒತ್ತಾಯಿಸುತ್ತಾರೆ.

ಮೈದಾನದಲ್ಲಿ ರೋಹಿತ್ ಆಡಿದ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸುವ ರೋಹಿತ್, ‘ಕೇವಲ ಎರಡು ಸಾಲು ಹೇಳಿದ್ದಕ್ಕೆ ಇಷ್ಟೊಂದು ವೈರಲ್ ಆಯ್ತು, ಇನ್ನು ನನ್ನ ಪೂರ್ತಿ ಶೋ ಬಂದರೆ ಏನಾಗಬಹುದು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಹಿಟ್​ಮ್ಯಾನ್ ಆರ್ಭಟ: ರೋಹಿತ್ ಶರ್ಮಾಗೆ ಸ್ಪೆಷಲ್ ಗಿಫ್ಟ್ ನೀಡಿದ ನೀತಾ ಅಂಬಾನಿ

ರೋಹಿತ್ ಶರ್ಮಾ ಅವರು ರಿಯಾಲಿಟಿ ಶೋ ಅಥವಾ ಟಾಕ್ ಶೋ ಮೂಲಕ ಕಿರುತೆರೆಗೆ ಬರಬಹುದು ಎಂಬ ಮುನ್ಸೂಚನೆ ಸಿಕ್ಕಿದೆ. ಇದು ಯಾವ ರೀತಿಯ ಶೋ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಈ ಕಾರ್ಯಕ್ರಮವು ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಮತ್ತು ಸೋನಿ ಲಿವ್ ಒಟಿಟಿಯಲ್ಲಿ ಶೀಘ್ರದಲ್ಲೇ ಬರಲಿದೆ ಎಂಬುದಷ್ಟೇ ಖಚಿತವಾಗಿದೆ. ವಿಶ್ವಕಪ್ ವಿಜೇತ ನಾಯಕ ಈಗ ಬ್ಯಾಟ್ ಬಿಟ್ಟು ಮೈಕ್ ಹಿಡಿದು ಪ್ರೇಕ್ಷಕರನ್ನು ಹೇಗೆ ರಂಜಿಸಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:39 am, Sat, 9 May 26

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More