AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಸೀತಾ ಎದುರು ರಾಮ್ ಮಾಡಿದ ನಾಟಕ ಹೊಸ ಪ್ರೀತಿಗೆ ಮುನ್ನುಡಿಯಾಗುತ್ತಾ?

ಆಫೀಸ್​​ನಲ್ಲಿ ನಾಟಕ ಮಾಡಿ ರಾಮ್ ಬಚಾವ್ ಆಗಿದ್ದಾನೆ. ಆದರೆ ತನಗರಿವಿಲ್ಲದಂತೆ ಸೀತಾ ರಾಮನಿಗೆ ಸಹಾಯ ಮಾಡಿದ್ದಾಳೆ. ಇದೆಲ್ಲ ಅವರ ಸ್ನೇಹಕ್ಕೆ ಮುನ್ನುಡಿ ಬರೆದಂತಿದೆ.  

Seetha Raama: ಸೀತಾ ಎದುರು ರಾಮ್ ಮಾಡಿದ ನಾಟಕ ಹೊಸ ಪ್ರೀತಿಗೆ ಮುನ್ನುಡಿಯಾಗುತ್ತಾ?
ಸೀತಾ ರಾಮ ಧಾರಾವಾಹಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 02, 2023 | 8:36 AM

Share

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸೀತಾ ರಾಮ’ (Seetha Raama) ಧಾರಾವಾಹಿಯಲ್ಲಿ ಬೋನಸ್ ವಿಷಯವಾಗಿ ತಗಾದೆ ತಗೆದಿದ್ದ ರಾಮ್ ಪರವಾಗಿ ಸೀತಾ ಮಾತನಾಡಿದ್ದಾಳೆ. ಮ್ಯಾನೇಜರ್ ಚರಣ್ ಹೇಳಿದ್ದ ಮಾತನ್ನು ತಳ್ಳಿ ಹಾಕಿ ರಾಮ್ ಹೇಳಿರುವುದೇ ಸರಿ ಎಂದು ಹೇಳುವ ಮೂಲಕ ದೇಸಾಯಿ ಮನೆಯ ಹಿರಿ ತಲೆ ಸೂರ್ಯ ಪ್ರಕಾಶ್ ಅವರ ಮೆಚ್ಚುಗೆ ಪಡೆದುಕೊಂಡಿದ್ದಾಳೆ ಸೀತಾ. ಕಂಪೆನಿಯಲ್ಲಿರುವ ಎಲ್ಲರಿಗೂ ಸಮನಾಗಿ ಬೋನಸ್ ಕೊಡಿಸುವಲ್ಲಿ ಅವಳು ಯಶಸ್ವಿಯೂ ಆಗಿದ್ದಾಳೆ.

ಇನ್ನು ಆಫೀಸ್ ಅಲ್ಲಿ ಬಾಸ್ ಆಗಿರುವ ರಾಮ್ ಗೆಳೆಯ ಅಶೋಕ್ ಮತ್ತು ಸೀತಾ ಗೆಳತಿ ಪ್ರಿಯಾ ನಡುವೆ ಪ್ರೀತಿ ಮೊಳಕೆಯೊಡೆಯುತ್ತಿದೆ. ಸಿಹಿಯ ಚಪಾತಿಯಿಂದ ರಾಮ್ ಮತ್ತೆ ಸೀತಾ ನಡುವೆ ಅರಿಯದ ಬಂಧವೊಂದು ಮೂಡುತ್ತಿದೆ. ಇನ್ನು ರಾಮನಿಗೆ ಸಿಹಿ ನೀಡುತ್ತಿರುವ ಪ್ರೀತಿ ತನ್ನ ಅಮ್ಮನನ್ನು ನೆನಪಿಸಿದೆ. ‘ಯಾರೂ ಇಲ್ಲದಿರುವಾಗ ನಮಗೆ ಯಾರಾದರೂ ಇದ್ದಾರೆ ಅನ್ನೋ ಖುಷಿ ಕೊಡುತ್ತಲ್ಲ ಹಾಗೇ’ ಎಂದು ಸೀತಾ ಮನಸ್ಸಿನಲ್ಲೇ ಅಂದುಕೊಂಡಿದ್ದಾಳೆ.

ದೇಸಾಯಿ ಮನೆಯಲ್ಲಿ ವಿಶ್ವನಿಗೆ ಮರ್ಯಾದೆ ಸಿಗುತ್ತಿರುವುದು ಭಾರ್ಗವಿಯಿಂದ ಅನ್ನೋದೇ ಅವಳ ಅಹಂ. ಗಂಡ ಬೇರೆ ಹೆಂಗಸಿನ ಜೊತೆ ಹೋಗಿ ಬಂದಿದ್ದಕ್ಕೆ ಪ್ರಶ್ನೆ ಮಾಡುತ್ತಿರುವ ಭಾರ್ಗವಿಗೆ ಗಂಡನಿಂದ ತಕ್ಕ ಉತ್ತರವೂ ಸಿಕ್ಕಿದೆ.

ಇದನ್ನೂ ಓದಿ: ಹೊರಬಿತ್ತು ‘ಸೀತಾ ರಾಮ’ ಟಿಆರ್​ಪಿ; ಟಾಪ್​ 10ರಲ್ಲಿ ಈ ಧಾರಾವಾಹಿಗೆ ಎಷ್ಟನೇ ಸ್ಥಾನ?

ಆಫೀಸ್ ನಲ್ಲಿ ಲಂಚ್ ಬ್ರೇಕ್ ಮುಗಿಸಿ ತಾತನ ಬಳಿ ಬಂದಿರುವ ರಾಮ್​ಗೆ ಸೀತಾ ತನ್ನನ್ನು ನೋಡಿಬಿಟ್ಟರೆ ಅನ್ನೋದೇ ಚಿಂತೆ. ಆದರೆ ಅಶೋಕ್ ಮತ್ತು ತಾತ ಸೂರಿಗೆ ರಾಮ್ ನನ್ನ ಆಡಿಕೊಳ್ಳುವುದೇ ಕೆಲಸ. ಇದೆಲ್ಲ ಮಾತಿನ ನಡುವೆ ರಾಮ್  ತನಗರಿವಿಲ್ಲದಂತೆ ಸೀತಾಳನ್ನು ಹೊಗಳುತ್ತಿದ್ದಾನೆ. ಇನ್ನು ಬಾಸ್ ಕೋಣೆಯಿಂದ ಹೊರಬರದಿರುವ ರಾಮ್ ನನ್ನ ಹುಡುಕಿ ಹೊರಟ ಸೀತಾಳಿಗೆ ರಾಮ್ ಬಾಸ್ ಚೇರ್ ಮೇಲೆ ಕುಳಿತುಕೊಂಡಿರುವುದು ಕಾಣಿಸಿದೆ. ಅದನ್ನು ನೋಡಿದ ಸೀತಾ ಹೆದರಿ ರಾಮ್ ನನ್ನು ಗದರಲು ಬಂದಿದ್ದಾಳೆ. ಬಾಸ್ ಬಳಿ ಸಿಕ್ಕಿ ಹಾಕಿಕೊಂಡ ರಾಮ್, ಸೀತಾ ಜೊತೆಗೆ ಬೈಗುಳ ತಿಂದು ತಾತನ ಮುಂದೆ ನಾಟಕವಾಡಿ ಅವಳಿಗೆ ತಾನು ಯಾರು ಎಂದು ತಿಳಿಯದಂತೆ ನೋಡಿಕೊಂಡಿದ್ದಾನೆ. ಆದರೆ ಅವರಿಬ್ಬರ ಮಧ್ಯೆ ಅವರಿಗೆ ಗೊತ್ತಾಗದಂತೆ ಹುಟ್ಟಿಕೊಳ್ಳುತ್ತಿರುವ ಸ್ನೇಹ ಪ್ರೀತಿಗೆ ತಿರಗೋದು ಯಾವಾಗ? ಇವರಿಬ್ಬರ ಸಂಬಂಧಕ್ಕೆ ಸೀತಾ ಸೇತುವೆ ಆಗ್ತಾಳ ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್