ಬಾಂಬೆ ಮಿಠಾಯಿಯಿಂದ ಮಾಡಿದ ಡ್ರೆಸ್ ಹಾಕಿ ತಿರುಗಾಡಿದ ಉರ್ಫಿ; ಅಶ್ಲೀಲವಾಗಿ ಕಮೆಂಟ್ ಮಾಡಿದ ಫ್ಯಾನ್ಸ್
ಸಕ್ಕರೆಯಿಂದ ಮಾಡುವ ಈ ತಿನಿಸನ್ನು ಡ್ರೆಸ್ ಮಾಡಿಕೊಳ್ಳಬಹುದು ಎನ್ನುವ ಕಲ್ಪನೆಯೂ ಯಾರಿಗೂ ಬಂದಿರಲಿಕ್ಕಿಲ್ಲ. ಆದರೆ, ಹೀಗೊಂದು ಐಡಿಯಾ ಉರ್ಫಿ ತಲೆಯಲ್ಲಿ ಹೊಕ್ಕಿದೆ.

ಕಿರುತೆರೆ ನಟಿ ಉರ್ಫಿ ಜಾವೇದ್ ಅವರು (Urfi Javed) ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಹಾಕುವ ಬಟ್ಟೆಗಳು ಅವರಿಗೇ ಪ್ರೀತಿ. ಬಟ್ಟೆ ವಿಚಾರದಲ್ಲಿ ಉರ್ಫಿ ಸಾಕಷ್ಟು ಟ್ರೋಲ್ (Troll) ಆಗುತ್ತಾರೆ. ಆದರೆ, ಇದು ಅವರಿಗೆ ಮ್ಯಾಟರ್ ಆಗುತ್ತಲೇ ಇಲ್ಲ. ಡ್ರೆಸ್ ವಿಚಾರದಲ್ಲಿ ಅವರ ವೇಷಗಳು ದಿನ ಕಳೆದಂತೆ ಬದಲಾಗುತ್ತಲೇ ಇವೆ. ‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) ಸ್ಪರ್ಧಿಯಾಗಿದ್ದ ಸಂದರ್ಭದಲ್ಲಿ ಕಸದ ಚೀಲದಿಂದ ಬಟ್ಟೆ ಮಾಡಕೊಂಡಿದ್ದರು ಉರ್ಫಿ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಆ ಬಳಿಕ ಅವರು ಹೀಗೆಯೇ ಚಿತ್ರವಿಚಿತ್ರ ಉಡುಗೆ ತೊಡುತ್ತಿದ್ದಾರೆ. ಈಗ ಅವರು ಬಾಂಬೆ ಮಿಠಾಯಿಯಿಂದ ಡ್ರೆಸ್ ಮಾಡಿಕೊಂಡು ಸುತ್ತಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ.
ಬಾಂಬೆ ಮಿಠಾಯಿ ಎಂದರೆ ಬಹುತೇಕರಿಗೆ ಗೊತ್ತಿರುತ್ತದೆ. ಜಾತ್ರೆಗಳಲ್ಲಿ, ಹಬ್ಬಗಳಲ್ಲಿ ಇದನ್ನು ಮಾರಾಟ ಮಾಡಲಾಗುತ್ತದೆ. ಸಕ್ಕರೆಯಿಂದ ಮಾಡುವ ಈ ತಿನಿಸನ್ನು ಡ್ರೆಸ್ ಮಾಡಿಕೊಳ್ಳಬಹುದು ಎನ್ನುವ ಕಲ್ಪನೆಯೂ ಯಾರಿಗೂ ಬಂದಿರಲಿಕ್ಕಿಲ್ಲ. ಆದರೆ, ಹೀಗೊಂದು ಐಡಿಯಾ ಉರ್ಫಿ ತಲೆಯಲ್ಲಿ ಹೊಕ್ಕಿದೆ. ಅದನ್ನು ಅವರು ಜಾರಿಗೆ ತಂದಿದ್ದಾರೆ. ಈ ಸಿಹಿತಿನಿಸಿಂದ ಡ್ರೆಸ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅದನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ತಿಂದಿದ್ದಾರೆ.
ಉರ್ಫಿ ಪ್ರತಿ ಬಾರಿ ಚಿಕ್ಕ ಡ್ರೆಸ್ನ ಫೋಟೋ ಹಾಕಿದಾಗ ಫ್ಯಾನ್ಸ್ ಟೀಕೆ ಮಾಡುತ್ತಿದ್ದರು. ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡುತ್ತಿದ್ದರು. ಆದರೆ, ಈ ಬಾರಿ ಅವರಿಗೆ ಅಶ್ಲೀಲ ಕಮೆಂಟ್ಗಳು ಹೆಚ್ಚು ಬಂದಿವೆ. ‘ನಮಗೂ ಅದನ್ನು ತಿನ್ನೋಕೆ ಅವಕಾಶ ಕೊಡಿ. ನಾವು ಬಾಂಬೆ ಮಿಠಾಯಿಯನ್ನು ಪೂರ್ತಿಯಾಗಿ ಖಾಲಿ ಮಾಡುತ್ತೇವೆ’ ಎಂದು ಅಭಿಮಾನಿಯೋರ್ವ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾನೆ. ಇನ್ನೂ ಕೆಲವರು ಉರ್ಫಿ ಐಡಿಯಾಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ನಿಮ್ಮ ಐಡಿಯಾಗೆ ಸರಿಸಾಟಿಯಾಗಿ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.
ನಟಿಗಿಲ್ಲ ಬೇಡಿಕೆ
ಕಿರುತೆರೆಯ ಹಲವು ಶೋಗಳಲ್ಲಿ ಭಾಗವಹಿಸಿದ್ದರೂ ಕೂಡ ಟಿವಿ ಇಂಡಸ್ಟ್ರೀ ಅವರು ತಮಗೆ ಮರ್ಯಾದೆ ಕೊಡಲಿಲ್ಲ ಎಂಬುದು ಉರ್ಫಿ ಜಾವೇದ್ ತಕರಾರು. ಇಷ್ಟಬಂದ ರೀತಿಯಲ್ಲಿ ಉರ್ಫಿ ಬಟ್ಟೆ ಧರಿಸಿದ್ದಕ್ಕಾಗಿ ಕಿರಿತೆರೆಯ ಸೆಲೆಬ್ರಿಟಿಗಳೇ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಅದು ಕೂಡ ಅವರ ಬೇಸರಕ್ಕೆ ಕಾರಣ ಆಗಿತ್ತು. ‘ನನ್ನ ಫೋಟೋಗಳು ಅಪ್ಲೋಡ್ ಆದಾಗ ಅಥವಾ ವೈರಲ್ ಆದಾಗ ಬ್ಲೂ ಟಿಕ್ ಇರುವ ಕಿರುತೆರೆಯ ಸೆಲೆಬ್ರಿಟಿಗಳು ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಇವರಿಗೆಲ್ಲ ನಾನೇನು ಅನ್ಯಾಯ ಮಾಡಿದ್ದೇನೆ? ಯಾಕೆ ಈ ರೀತಿಯಾಗಿ ಕೆಟ್ಟ ಕಮೆಂಟ್ ಮಾಡ್ತಾರೆ’ ಎಂದು ಉರ್ಫಿ ಜಾವೇದ್ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: 17ನೇ ವಯಸ್ಸಿಗೆ ‘ಪೋರ್ನ್ ಸ್ಟಾರ್’ ಎಂಬ ಅಪವಾದ; ಮಾನಸಿಕ ಹಿಂಸೆ ನೀಡಿದ್ದ ತಂದೆ: ಬಿಗ್ಬಾಸ್ ಸ್ಪರ್ಧೆಯ ದಾರುಣ ಕತೆಯಿದು
ಭಗವದ್ಗೀತೆ ಹಿಡಿದು ಬಂದ ಮುಸ್ಲಿಂ ನಟಿ ಉರ್ಫಿ; ‘ನಾನು ಜಾವೇದ್ ಅಖ್ತರ್ ಮೊಮ್ಮಗಳಲ್ಲ’ ಎಂದಿದ್ದೇಕೆ?