AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛವಿ ಮಿತ್ತಲ್​ಗೆ ಸ್ತನ ಕ್ಯಾನ್ಸರ್; ಮಕ್ಕಳಿಗೆ ಹಾಲುಣಿಸಿದ್ದನ್ನು ಸ್ಮರಿಸಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಖ್ಯಾತ ನಟಿ

Chhavi Mittal | Breast Cancer: ಹಿಂದಿ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ, ಬಾಲಿವುಡ್​ನಲ್ಲೂ ಗುರುತಿಸಿಕೊಂಡಿರುವ ನಟಿ ಛವಿ ಮಿತ್ತಲ್ ಸ್ತನ ಕ್ಯಾನ್ಸರ್​ಗೆ ತುತ್ತಾಗಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ನಟಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಛವಿ ಹೇಳಿಕೊಂಡಿದ್ದಾರೆ.

ಛವಿ ಮಿತ್ತಲ್​ಗೆ ಸ್ತನ ಕ್ಯಾನ್ಸರ್; ಮಕ್ಕಳಿಗೆ ಹಾಲುಣಿಸಿದ್ದನ್ನು ಸ್ಮರಿಸಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಖ್ಯಾತ ನಟಿ
ಛವಿ ಮಿತ್ತಲ್ (Credits: Chhavi Mittal/ Instagram)
TV9 Web
| Edited By: |

Updated on: Apr 16, 2022 | 8:40 PM

Share

ಹಿಂದಿ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ, ಬಾಲಿವುಡ್​ನಲ್ಲೂ ಗುರುತಿಸಿಕೊಂಡಿರುವ ನಟಿ ಛವಿ ಮಿತ್ತಲ್ (Chhavi Mittal) ಸ್ತನ ಕ್ಯಾನ್ಸರ್​ಗೆ (Breast Cancer) ತುತ್ತಾಗಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ನಟಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಛವಿ ಹೇಳಿಕೊಂಡಿದ್ದಾರೆ. ತಮ್ಮ ಫೋಟೊ ಹಂಚಿಕೊಂಡಿರುವ ಛವಿ ಮಿತ್ತಲ್, ಅದಕ್ಕೆ ದೀರ್ಘವಾದ ಕ್ಯಾಪ್ಶನ್ ಬರೆದಿದ್ದಾರೆ. ಅದರಲ್ಲಿ ತಮ್ಮ ಮಕ್ಕಳಿಗೆ ಹಾಲುಣಿಸಿದ್ದನ್ನು ಸ್ಮರಿಸಿರುವ ನಟಿ, ‘ಇದು ಆಗಬಾರದಿತ್ತು. ಆದರೆ ಈ ಖಾಯಿಲೆ ನನ್ನ ಛಲವನ್ನು ತಗ್ಗಿಸುವುದಿಲ್ಲ. ಇದರಿಂದ ಹೊರಬರುವುದು ಸುಲಭವಲ್ಲ ಹಾಗಂತ ಕಷ್ಟವೂ ಅಲ್ಲ. ನಾನು ಮೊದಲಿನಂತೆ ಆಗುವುದಿಲ್ಲ. ಆದರೆ ನನ್ನನ್ನು ಇದು ಬದಲಾಯಿಸುವುದಿಲ್ಲ’ ಎಂದು ಹೇಳಿದ್ದಾರೆ.

ಛವಿ ಮಿತ್ತಲ್ ತಮ್ಮ ಪೋಸ್ಟ್​ ಅನ್ನು ಮಕ್ಕಳಿಗೆ ಮಮತೆಯಿಂದ ಹಾಲುಣಿಸಿದ ತಮ್ಮ ಸ್ತನಗಳಿಗೆ ಅರ್ಪಿಸಿದ್ದು, ಅದು ಕಷ್ಟಕಾಲದಲ್ಲಿದ್ದಾಗ ಅದರೊಂದಿಗೆ ನಿಲ್ಲುತ್ತೇನೆ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ. ‘‘ನನಗೆ ಮೊದಲ ಬಾರಿಗೆ ಅಪರಿಮಿತ ಖುಷಿಯನ್ನು ನೀಡಿದಾಗ ನಿನ್ನ ಮ್ಯಾಜಿಕ್​ನ ಅರಿವಾಯಿತು. ಆದರೆ ನಿನ್ನ ಮಹತ್ವ ಅರಿವಾಗಿದ್ದು ಮಕ್ಕಳಿಗೆ ಹಾಲುಣಿಸುವಾಗ. ಈಗ ನೀನು ಕ್ಯಾನ್ಸರ್​ನೊಂದಿಗೆ ಹೋರಾಡುವಾಗ ನಾನು ನಿನ್ನ ಪರವಾಗಿ ನಿಲ್ಲಬೇಕಾಗಿದೆ. ಇದು ಆಗಬೇಕಾಗಿದ್ದ ಒಳ್ಳೆಯ ಬೆಳವಣಿಗೆ ಅಲ್ಲ, ಆದರೆ ಇದರಿಂದ ನಮ್ಮ ಆತ್ಮವಿಶ್ವಾಸವೇನೂ ಕಡಿಮೆಯಾಗುವುದಿಲ್ಲ. ನಾನು ಮೊದಲಿನಂತೆ ಆಗದಿರಬಹುದು ಆದರೆ ಇದರಿಂದ ನನ್ನ ಯೋಚನೆಗಳಿಗೆ ತೊಡಕಾಗುವುದಿಲ್ಲ’’ ಎಂದಿದ್ದಾರೆ ಛವಿ ಮಿತ್ತಲ್.

ಕ್ಯಾನ್ಸರ್​ನಿಂದ ಗುಣಮುಖರಾಗಿರುವವರನ್ನು ಉದ್ದೇಶಿಸಿ, ಅವರಿಂದ ನಿತ್ಯವೂ ಪ್ರೇರಣೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ ನಟಿ. ಅಲ್ಲದೇ ಈ ಪರಿಸ್ಥಿತಿಯಲ್ಲಿ ಜತೆಯಾಗಿ ನಿಂತ ಎಲ್ಲರಿಗೂ ಛವಿ ಧನ್ಯವಾದ ಹೇಳಿದ್ದಾರೆ. ಎಲ್ಲರ ಹಾರೈಕೆ, ಪ್ರಾರ್ಥನೆ ಬದಲಾವಣೆಗೆ ನಾಂದಿಯಾಗಲಿದೆ ಎಂದು ಅವರು ಬರೆದಿದ್ದಾರೆ.

ಛವಿ ಮಿತ್ತಲ್ ಪೋಸ್ಟ್ ಇಲ್ಲಿದೆ:

ನಟಿಯ ಅಭಿಮಾನಿಗಳು, ಸಹನಟರು, ಖ್ಯಾತ ತಾರೆಯರು ಕಾಮೆಂಟ್​ಗಳ ಮೂಲಕ ನಟಿಗೆ ಧೈರ್ಯ ಹೇಳಿದ್ದು, ಈ ಹೋರಾಟದಲ್ಲಿ ಜತೆಯಿದ್ದೇವೆ ಎಂದು ಬೆಂಬಲ ಸೂಚಿಸಿದ್ದಾರೆ. ನಟ ಅರ್ಜುನ್ ಬಿಜಲಾನಿ ಪ್ರತಿಕ್ರಿಯಿಸಿ, ‘‘ದೇವರು ಇದನ್ನು ಎದುರಿಸುವ ಎಲ್ಲಾ ಶಕ್ತಿಯನ್ನು ಕುಟುಂಬಕ್ಕೆ ಹಾಗೂ ನಿಮಗೆ ಕೊಡಲಿ’’ ಎಂದು ಬರೆದಿದ್ದಾರೆ. ನಟಿ ಮೇಘನಾ ನಾಯ್ಡು ಕೂಡ ಛವಿಗೆ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: KGF 2: ‘ಕೆಜಿಎಫ್ ಚಾಪ್ಟರ್ 2’ ಒಟಿಟಿ ರಿಲೀಸ್ ಬಗ್ಗೆ ಹೆಚ್ಚಿದ ಕುತೂಹಲ; ಎಲ್ಲಿ, ಯಾವಾಗ ರಿಲೀಸ್ ಆಗಲಿದೆ ಯಶ್ ನಟನೆಯ ಚಿತ್ರ?

‘ಕೆಜಿಎಫ್ 2’ ಚಿತ್ರದ ಗೆಲುವಿನ ಖುಷಿಯಲ್ಲಿ ಪ್ರಶಾಂತ್ ನೀಲ್

Follow Us
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ