AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಮ್​ರ ಚಿತ್ರರಂಗದ ಗೆಳೆಯರು ಯಾರು? ಪಂಚ ಪಾರ್ಟಿ ಗ್ಯಾಂಗ್​ ಎಂದರೇನು?

Weekend With Ramesh: ವೀಕೆಂಡ್ ವಿತ್ ರಮೇಶ್ ಗೆ ಅತಿಥಿಯಾಗಿ ಆಗಮಿಸಿದ್ದ ನಟ ಪ್ರೇಮ್ ಚಿತ್ರರಂಗದಲ್ಲಿ ಬಹಳ ಫೇಮಸ್ ಆಗಿರುವ ಪಂಚ ಪಾರ್ಟಿ ಗ್ಯಾಂಗ್ ಮಾತನಾಡಿದರು. ಆ ಗ್ಯಾಂಗ್​ನ ಸದಸ್ಯರ ಪರಿಚಯ ಮಾಡಿಕೊಟ್ಟರು.

ಪ್ರೇಮ್​ರ ಚಿತ್ರರಂಗದ ಗೆಳೆಯರು ಯಾರು? ಪಂಚ ಪಾರ್ಟಿ ಗ್ಯಾಂಗ್​ ಎಂದರೇನು?
ಪ್ರೇಮ್
Follow us
ಮಂಜುನಾಥ ಸಿ.
|

Updated on: May 07, 2023 | 10:53 PM

ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದ ಈ ವಾರದ ಅತಿಥಿಯಾಗಿ ಆಗಮಿಸಿದ ನಟ ಪ್ರೇಮ್ (Prem), ಜೀವನದಲ್ಲಿ ತಾವು ಅನುಭವಿಸಿದ ಸಾಲು-ಸಾಲು ಕಷ್ಟಗಳು, ಆಯಾ ಸಂದರ್ಭಕ್ಕೆ ತಾವು ವರ್ತಿಸಿದ ರೀತಿ, ಗೆಳೆಯರು, ಪತ್ನಿ ಮಾಡಿದ ಸಹಾಯವನ್ನು ಭಾವುಕರಾಗಿ ಶನಿವಾರದ ಎಪಿಸೋಡ್​ನಲ್ಲಿ ವಿವರಿಸಿದರು. ಇನ್ನು ಭಾನುವಾರದ ಎಪಿಸೋಡ್​ನಲ್ಲಿ ಪ್ರೇಮ್ ಮೊದಲ ಸಿನಿಮಾದಲ್ಲಿ ನಾಯಕರಾದ ಬಳಿಕ ಏನೇನಾಯ್ತು ಎಂಬ ಬಗ್ಗೆ ಮಾತನಾಡಿದರು. ಮಾತಿನ ನಡುವೆ ಚಿತ್ರರಂಗದಲ್ಲಿರುವ ತಮ್ಮ ನಾಲ್ಕು ಮಂದಿ ಗೆಳೆಯರ ಬಗ್ಗೆ ಹೇಳಿದರು. ಆ ಗೆಳೆಯರ ಗುಂಪಿಗೆ ಪಂಚ ಪಾರ್ಟಿ ಗ್ಯಾಂಗ್ ಎಂದು ಹೆಸರಂತೆ. ಈ ಗ್ಯಾಂಗ್ ಕನ್ನಡ ಚಿತ್ರೋದ್ಯಮದಲ್ಲಿ ಬಹಳ ಫೇಮಸ್ ಸಹ!

ಈ ಪಂಚ ಪಾರ್ಟಿ ಗ್ಯಾಂಗ್​ನಲ್ಲಿರುವ ಸದಸ್ಯರು, ನಟ ಪ್ರೇಮ್, ನಿರ್ದೇಶಕ ತರುಣ್ ಸುಧೀರ್, ನಟ ಶರಣ್, ಕ್ಯಾಮೆರಾಮ್ಯಾನ್ ಸುಧಾಕರ್ ಹಾಗೂ ಉದ್ಯಮಿ ಕಿರಣ್. ಈ ಐದೂ ಜನ ಬಹಳ ವರ್ಷಗಳಿಂದಲೂ ಪರಸ್ಪರ ಆತ್ಮೀಯರು. ಪ್ರಾಣಾ ಸಿನಿಮಾದಲ್ಲಿ ನಟಿಸಿದ್ದ ಪ್ರೇಮ್, ಆ ಬಳಿಕ ಡ್ಯಾನ್ಸ್ ಕಲಿಯಲು ಇನ್​ಸ್ಟಿಟ್ಯೂಟ್ ಒಂದನ್ನು ಸೇರಿಕೊಂಡರಂತೆ ಆ ಸಂಸ್ಥೆಯಲ್ಲಿ ತರುಣ್ ನೃತ್ಯ ಕಲಿಸುತ್ತಿದ್ದರಂತೆ. ಅದೇ ಸಂಸ್ಥೆಯಲ್ಲಿ ನಟ ಗಣೇಶ್ ಸಹ ಇರುತ್ತಿದ್ದರು. ಆರಂಭದಲ್ಲಿ ತರುಣ್ ಹಾಗೂ ಪ್ರೇಮ್ ಅವರುಗಳಿಗೆ ಸರಿಬರಲಿಲ್ಲವಂತೆ. ಇಬ್ಬರಿಗೂ ಕೋಲ್ಡ್ ವಾರ್ ಶುರುವಾಗಿಬಿಟ್ಟಿತ್ತಂತೆ, ಎಷ್ಟರ ಮಟ್ಟಿಗೆ ಎಂದರೆ ಒಬ್ಬರೇ ಸಿಕ್ಕರೆ ಹೊಡೆದು ಹಾಕಿಬಿಡುವಷ್ಟು ಆದರೆ ಆ ಬಳಿಕ ಇಬ್ಬರೂ ಗೆಳೆಯರಾಗಿದ್ದಾರೆ.

ಕುಡಿತಕ್ಕೊ ಮತ್ತೊಂದಕ್ಕೊ ಈ ಐವರೂ ಒಟ್ಟಿಗೆ ಸೇರುವುದಿಲ್ಲವಂತೆ ಬದಲಿಗೆ ಒಳ್ಳೆಯ ಊಟಕ್ಕೆ ಮಾತಿಗೆ ವಿಶೇಷವಾಗಿ ಹಾಡು ಹಾಡಲು ಈ ಐವರೂ ಗೆಳೆಯರು ಒಟ್ಟಿಗೆ ಸೇರುತ್ತಾರೆ. ಶೋಗೆ ಆಗಮಿಸಿದ್ದ ಶರಣ್, ತರುಣ್ ಅವರುಗಳು ಪ್ರೇಮ್​ರ ಒಳ್ಳೆಯತನವನ್ನು ಬಹುವಾಗಿ ಹೊಗಳಿದರು. ತರುಣ್ ಅಂತೂ, ನನ್ನ ಮೊಬೈಲ್​ನಲ್ಲಿ ಸುಮಾರು 2000 ಕ್ಕೂ ಹೆಚ್ಚು ನಂಬರ್​ಗಳಿವೆ ಆದರೆ ಸ್ಪೀಡ್ ಡಯಲ್​ನಲ್ಲಿರುವ ನಂಬರ್​ಗಳಲ್ಲಿ ಮೊದಲ ಸಂಖ್ಯೆ ಪ್ರೇಮ್​ನದ್ದು, ಯಾವುದೇ ಕಷ್ಟದ ಸಂದರ್ಭ ಬರಲಿ ಪ್ರೇಮ್​ಗೆ ಕರೆ ಮಾಡಬಹುದು ಎಂದರು. ನಟ ಶರಣ್ ಸಹ ಇದೇ ರೀತಿಯ ಮಾತುಗಳನ್ನಾಡಿದರು.

ಪ್ರೇಮ್ ಬಹಳ ದೊಡ್ಡ ಸಂಖ್ಯೆಯ ಗೆಳೆಯರ ಬಳಗವನ್ನು ಹೊಂದಿರುವವರು. ಪ್ರೇಮ್ ಅವರ ಜೀವನದಲ್ಲಿ ಅವರ ಗೆಳೆಯರು ಅವರಿಗೆ ಮಾಡಿರುವ ಸಹಾಯ, ಸ್ವತಃ ಪ್ರೇಮ್ ಅವರ ಗೆಳೆಯರಿಗೆ ಮಾಡಿದ ಸಹಾಯಗಳು ಹೆಚ್ಚಿಗಿವೆ. ಮನೆಯವರ ವಿರೋಧದ ನಡುವೆ ಮದುವೆ ಆದಾಗ ಸಹಾಯ ಮಾಡಿದ್ದು ಗೆಳೆಯರು. ಉದ್ಯಮ ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದಾಗ ನಟನೆಯ ಮೊದಲ ಅವಕಾಶ ಕೊಡಸಿದ್ದು ಗೆಳೆಯರು. ಏನೂ ಇಲ್ಲದ ವ್ಯಕ್ತಿಯ ಫೋಟೊಶೂಟ್ ಮಾಡಿಸಿ ಪ್ರಾಣ ಸಿನಿಮಾಕ್ಕೆ ಆಯ್ಕೆ ಆಗಲು ಸಹಾಯ ಮಾಡಿದ್ದು ಗೆಳೆಯರು. ಹೀಗೆ ಜೀವನದ ಹಲವು ಹಂತಗಳಲ್ಲಿ ಪ್ರೇಮ್​ಗೆ ಅವರ ಗೆಳೆಯರು ಸಹಾಯ ಮಾಡಿದ್ದಾರೆ.

ಇನ್ನು ಪ್ರೇಮ್​ ಸಹ ಗೆಳೆತನಕ್ಕೆ ಅತಿಯಾಗಿ ಬೆಲೆ ಕೊಡುವ ವ್ಯಕ್ತಿಯಂತೆ. ಅವರೇ ಹೇಳಿಕೊಂಡಂತೆ, ನಾನು ಹಣ ಹೋದರೆ ಆಸ್ತಿ ಹೋದರೆ ಹೆಚ್ಚು ಯೋಚಿಸುವುದಿಲ್ಲ ಗೆಳೆಯರು ಹೋಗಿಬಿಟ್ಟರೆ ಬಹಳ ನೋವು ಅನುಭವಿಸುತ್ತೇನೆ ಎಂದರು. ಹತ್ತು ವರ್ಷಗಳ ಕಾಲ ಜೊತೆಗೆ ಇದ್ದ ಗೆಳೆಯರೊಬ್ಬರು ಇತ್ತೀಚೆಗೆ ಹೃದಯಾಘಾತದಿಂದ ತೀರಿಕೊಂಡ ವಿಷಯ ಹೇಳಿಕೊಂಡು ಕಣ್ಣೀರು ಹಾಕಿದರು ನಟ ಪ್ರೇಮ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯುದ್ಧದ ಭೀತಿ; ಎಲ್​ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?
ಯುದ್ಧದ ಭೀತಿ; ಎಲ್​ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?
ಧೋನಿ ಸೇರಿದಂತೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್
ಧೋನಿ ಸೇರಿದಂತೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ