ಮತ್ತೆ ಕಿರುತೆರೆಯಲ್ಲಿ ಒಂದಾಗುತ್ತಾ ‘ಕನ್ನಡತಿ’ ಜೋಡಿ? ‘ಕರ್ಣ’ ಧಾರಾವಾಹಿ ಬಗ್ಗೆ ಮೂಡಿದೆ ಕುತೂಹಲ
ಕನ್ನಡತಿ ಧಾರಾವಾಹಿಯ ಜನಪ್ರಿಯ ಜೋಡಿ ಕಿರಣ್ ರಾಜ್ ಮತ್ತು ರಂಜನಿ ರಾಘವನ್ ಅವರನ್ನು ಮತ್ತೆ ಒಟ್ಟಿಗೆ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ಕಿರಣ್ ರಾಜ್ ಅವರು ನಟಿಸುತ್ತಿರುವ ಹೊಸ ಧಾರಾವಾಹಿ 'ಕರ್ಣ' ದಲ್ಲಿ ರಂಜನಿ ರಾಘವನ್ ನಾಯಕಿಯಾಗುವ ಸಾಧ್ಯತೆಯಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ರಂಜನಿ ಅವರು ಸದ್ಯ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. ಅವರು ಈ ಧಾರಾವಾಹಿಯಲ್ಲಿ ನಟಿಸುವ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ.

‘ಕನ್ನಡತಿ’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡಿತ್ತು. ಈ ಧಾರಾವಾಹಿಯಲ್ಲಿ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಅವರು ಒಟ್ಟಾಗಿ ನಟಿಸಿ ಎಲ್ಲರ ಗಮನ ಸೆಳೆದರು. ಈ ಧಾರಾವಾಹಿ ಪೂರ್ಣಗೊಂಡು ಹಲವು ಸಮಯ ಕಳೆದಿದೆ. ಈ ಧಾರಾವಾಹಿ ಮುಗಿದರೂ ಈ ಜೋಡಿಯನ್ನು ವೀಕ್ಷಕರು ಮರೆತಿಲ್ಲ ಎಂದೇ ಹೇಳಬಹುದು. ಈಗ ಕಿರಣ್ ರಾಜ್ ಅವರು ‘ಕರ್ಣ’ ಧಾರಾವಾಹಿಯಲ್ಲಿ ನಟಿಸುತ್ತಾ ಇದ್ದಾರೆ. ಈ ಧಾರಾವಾಹಿಗೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅನೇಕರು ರಂಜನಿ ಅವರೇ ನಾಯಕಿ ಆಗಲಿ ಎಂದು ಕೋರಿದ್ದಾರೆ.
ಸೀರಿಯಲ್ ಹಿಟ್ ಆದರೆ ಆ ಜೋಡಿಯನ್ನು ಮತ್ತೆ ಮತ್ತೆ ನೋಡಬೇಕು ಎಂದು ಪ್ರೇಕ್ಷಕರು ಬಯಸುವುದು ಸಹಜ. ಅದೇ ರೀತಿ ‘ಕನ್ನಡತಿ’ ಧಾರಾವಾಹಿಯ ಜೋಡಿಯನ್ನು ಪ್ರೇಕ್ಷಕರು ಮತ್ತೆ ನೋಡಲು ಬಯಸುತ್ತಿದ್ದಾರೆ. ‘ಕರ್ಣ’ ಧಾರಾವಾಹಿಯಲ್ಲಿ ಕಿರಣ್ ರಾಜ್ ಜೊತೆ ರಂಜನಿ ಅವರೇ ನಟಿಸಬೇಕು ಎಂದು ಕೋರಿದ್ದಾರೆ ಫ್ಯಾನ್ಸ್.
ಸದ್ಯ ‘ಕರ್ಣ’ ಧಾರಾವಾಹಿಯ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಖ್ಯಾತ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಿಂದ ಈ ಧಾರಾವಾಹಿ ನಿರ್ಮಾಣ ಆಗುತ್ತಿದೆ. ಈಗ ಬಂದಿರೋ ಪ್ರೋಮೋದಲ್ಲಿ ಧಾರಾವಾಹಿಗೆ ನಾಯಕಿ ಯಾರು ಎಂಬುದನ್ನು ರಿವೀಲ್ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ರಿವೀಲ್ ಆಗುವ ಸಾಧ್ಯತೆ ಇದೆ. ಆದರೆ, ಅದಕ್ಕೂ ಮೊದಲೂ ರಂಜನಿ ಅವರು ಧಾರಾವಾಹಿಯಲ್ಲಿ ನಟಿಸಿದ್ದರೆ ಚೆನ್ನಾಗಿ ಇರುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ಜೀ ಕನ್ನಡಕ್ಕೆ ಬಂದ ಕಿರಣ್ ರಾಜ್; ಬರುತ್ತಿದೆ ಹೊಸ ಧಾರಾವಾಹಿ ‘ಕರ್ಣ’
ರಂಜನಿ ರಾಘವನ್ ಅವರು ಸದ್ಯ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ ಕೂಡ. ಈ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದ ಕಾರಣದಿಂದಲೇ ಅವರು ಹೊಸ ಧಾರಾವಾಹಿಯಲ್ಲಿ ನಟಿಸಲು ಒಪ್ಪುತ್ತಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ಧಾರಾವಾಹಿ ಅನ್ನೋದು ದೊಡ್ಡ ಕಮಿಟ್ಮೆಂಟ್. ಈ ಕಮಿಟ್ಮೆಂಟ್ನ ಅವರು ಒಪ್ಪಿಕೊಳ್ಳಲು ಅವರು ರೆಡಿ ಇದ್ದಾರಾ ಎಂಬುದು ಸದ್ಯ ಇರುವ ಪ್ರಶ್ನೆಯ ಆಗಿದೆ. ಸದ್ಯದಲ್ಲೇ ಈ ಎಲ್ಲಾ ಪ್ರಶ್ನೆಗೆ ಉತ್ತರ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:51 am, Wed, 12 March 25