AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆ ಸೃಷ್ಟಿಸಿದೆ ವಿಜಯ್ ಸೆಲ್ಫಿ ವಿಡಿಯೋ: ಕೊರಳಲ್ಲಿ ಕನ್ನಡ ಧ್ವಜ?

Thalapathy Vijay: ನಟ ದಳಪತಿ ವಿಜಯ್ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಮಾಡುವುದು ಸಾಮಾನ್ಯ. ಆದರೆ ಅವರ ಇನ್​ಸ್ಟಾಗ್ರಾಂ ಪೋಸ್ಟ್​ಗಳು ಸಹ ದಾಖಲೆಗಳನ್ನು ಬರೆಯುತ್ತಿವೆ. ಇತ್ತೀಚೆಗೆ ದಳಪತಿ ವಿಜಯ್ ಸೆಲ್ಫಿ ವಿಡಿಯೋ ಒಂದನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದರು. ಆ ವಿಡಿಯೋ ದಾಖಲೆ ಬರೆದಿದೆ. ಅಂದಹಾಗೆ ವಿಜಯ್, ಕನ್ನಡ ಧ್ವಜ ಧರಿಸಿದ್ದಾರೆಯೇ?

ದಾಖಲೆ ಸೃಷ್ಟಿಸಿದೆ ವಿಜಯ್ ಸೆಲ್ಫಿ ವಿಡಿಯೋ: ಕೊರಳಲ್ಲಿ ಕನ್ನಡ ಧ್ವಜ?
Thalapthy Vijay
ಮಂಜುನಾಥ ಸಿ.
|

Updated on: Aug 24, 2025 | 5:13 PM

Share

ದಳಪತಿ ವಿಜಯ್ (Thalapathy Vijay) ತಮ್ಮ ಕೊನೆಯ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸಿರುವ ದಳಪತಿ ವಿಜಯ್ ಚಿತ್ರರಂಗಕ್ಕೆ ಗುಡ್​ ಬೈ ಹೇಳುತ್ತಿದ್ದಾರೆ. ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ವಿಜಯ್ ಸಿನಿಮಾಗಳು ಗಳಿಕೆಯಲ್ಲಿ ದಾಖಲೆಗಳನ್ನು ಬರೆಯುವುದು ಸಾಮಾನ್ಯ. ಅವರ ಇನ್​ಸ್ಟಾಗ್ರಾಂ ಪೋಸ್ಟ್​ಗಳು ಸಹ ದಾಖಲೆಗಳನ್ನು ಬರೆಯುತ್ತಿವೆ.

ಈ ಹಿಂದೆ ವಿಜಯ್ ಸೆಲ್ಫಿ ಒಂದನ್ನು ತೆಗೆದು ಅದನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಸೆಲ್ಫಿ ಭಾರತದಲ್ಲಿ ಅತಿ ಹೆಚ್ಚು ಲೈಕ್ ಆದ, ಶೇರ್ ಆದ ಸೆಲ್ಫಿ ಎನಿಸಿಕೊಂಡಿತ್ತು. ಇದೀಗ ವಿಜಯ್ ಅವರ ಸೆಲ್ಫಿ ವಿಡಿಯೋ ಇದೇ ರೀತಿಯ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ.

ವಿಜಯ್ ಇತ್ತೀಚೆಗಷ್ಟೆ ಮಧುರೈನಲ್ಲಿ ತಮ್ಮ ಪಕ್ಷದ ಸಮಾವೇಶವನ್ನು ಬಲು ಅದ್ಧೂರಿಯಾಗಿ ಮಾಡಿದರು. ವಿಜಯ್ ಅವರ ಈ ರಾಜಕೀಯ ಸಮಾವೇಶಕ್ಕೆ ಲಕ್ಷಾಂತರ ಜನ ಆಗಮಿಸಿ ಭಾಗವಹಿಸಿದ್ದರು. ಜನಸಾಗರವೇ ಕಾರ್ಯಕ್ರಮದಲ್ಲಿ ನೆರೆದಿತ್ತು. ಅಂದು ವೇದಿಕೆಯಿಂದ ವಿಜಯ್ ಅವರು ಸೆಲ್ಫಿ ವಿಡಿಯೋ ಒಂದನ್ನು ಮಾಡಿದ್ದರು. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ಇದೀಗ ದಾಖಲೆಗಳನ್ನು ಬರೆದಿದೆ.

ಇದನ್ನೂ ಓದಿ:ದಳಪತಿ ವಿಜಯ್ ಸಮಾವೇಶಕ್ಕೆ ಸೇರಿದ ಜನರ ಸಂಖ್ಯೆ ನೋಡಿ; ಅಬ್ಬಬ್ಬಾ ಇಷ್ಟೊಂದಾ?

ವಿಜಯ್, ಹಂಚಿಕೊಂಡಿದ್ದ ಆ ಸೆಲ್ಫಿ ವಿಡಿಯೋ ಅನ್ನು ಕೇವಲ ಎರಡು ದಿನಗಳಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ವಿಜಯ್ ಹಂಚಿಕೊಂಡಿರುವ ಆ ವಿಡಿಯೋಕ್ಕೆ ಕಮೆಂಟ್ ಸೆಕ್ಷನ್ ಆಫ್ ಮಾಡಲಾಗಿದೆ. ಇಲ್ಲವಾದರೆ ಕಮೆಂಟ್​ ವಿಭಾಗದಲ್ಲಿಯೂ ವಿಡಿಯೋ ದಾಖಲೆ ಬರೆಯುತ್ತಿತ್ತೇನೋ.

ಆ ವಿಡಿಯೋನಲ್ಲಿ ವಿಜಯ್ ಹಣೆಗೆ ಹಾಗೂ ಕೊರಳಿಗೆ, ಕನ್ನಡ ರಕ್ಷಣಾ ಪಡೆಯವರ ರೀತಿ ಕನ್ನಡ ಧ್ವಜದ ಬಣ್ಣದ ಪಟ್ಟಿ ಮತ್ತು ಶಾಲನ್ನು ಹೊದ್ದಿಕೊಂಡಿದ್ದಾರೆ. ಇದು ವಿಡಿಯೋ ನೋಡಿದ ಕನ್ನಡಿಗರಿಗೆ ತುಸು ಆಶ್ಚರ್ಯ ತಂದಿದೆ. ವಿಜಯ್ ಏನಾದರೂ ತಮಿಳುನಾಡಿನಲ್ಲಿ ಕನ್ನಡ ರಕ್ಷಣಾ ವೇದಿಕೆ ತೆರೆದರಾ ಎಂಬ ಅನುಮಾನವೂ ಮೂಡಿರಬಹುದು. ಆದರೆ ಹಾಗೆಲ್ಲ ಏನಿಲ್ಲ. ವಿಜಯ್ ಧರಿಸಿರುವುದು ಅವರ ತಮಿಳಗ ವೆಟ್ರಿ ಕಳಗಮ್ ಪಕ್ಷದ ಬಾವುಟದ ಶಾಲು. ಕನ್ನಡ ಧ್ವಜದಲ್ಲಿ ಹಳದಿ ಮತ್ತು ಕೆಂಪು ಬಣ್ಣವಿದೆ. ವಿಜಯ್ ಅವರ ತಮಿಳಗ ವೆಟ್ರಿ ಕಳಗಮ್ ಪಕ್ಷದ ಧ್ವಜದಲ್ಲಿ ಕೆಂಪು ಹಳದಿ ಮತ್ತು ಕೆಂಪು ಬಣ್ಣವಿದೆ. ಆದರೆ ಶಾಲು, ಪಟ್ಟಿ ನೋಡಿದರೆ ಅದು ಕನ್ನಡದ ಧ್ವಜದ ರೀತಿಯೇ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us