AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೌಲರ್ ಯಾರೇ ಇರಲಿ… RCB ಪಂದ್ಯದ ಬಳಿಕ ವೈಭವ್ ಎಚ್ಚರಿಕೆ..!

Vaibhav Suryavanshi: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ವೈಭವ್ ಸೂರ್ಯವಂಶಿ, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್​ಗಳ ಬೆಂಡೆತ್ತಿದ್ದರು. ಅದು ಕೂಡ ಕೇವಲ 26 ಎಸೆತಗಳಲ್ಲಿ 8 ಫೋರ್ ಹಾಗೂ 7 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ. ಈ ಸಿಕ್ಸ್​-ಫೋರ್​ಗಳೊಂದಿಗೆ ವೈಭವ್ ಬರೋಬ್ಬರಿ 78 ರನ್ ಕಲೆಹಾಕಿದ್ದರು ಎಂಬುದು ವಿಶೇಷ.

ಬೌಲರ್ ಯಾರೇ ಇರಲಿ... RCB ಪಂದ್ಯದ ಬಳಿಕ ವೈಭವ್ ಎಚ್ಚರಿಕೆ..!
vaibhav suryavanshi
ಝಾಹಿರ್ ಯೂಸುಫ್
|

Updated on: Apr 11, 2026 | 9:24 AM

Share

IPL 2026: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಅದು ಸಹ ವೈಭವ್ ಸೂರ್ಯವಂಶಿಯ (Vaibhav Suryavanshi) ಆರ್ಭಟದಿಂದಾಗಿ. ಐಪಿಎಲ್​ನ 16ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 201 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚಿದ್ದರು. ಈ ಸ್ಫೋಟಕ ಬ್ಯಾಟಿಂಗ್​ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡವು 18 ಓವರ್​ಗಳಲ್ಲಿ 202 ರನ್​ಗಳಿಸಿ 6 ವಿಕೆಟ್​ಗಳ ಜಯ ಸಾಧಿಸಿದೆ.

ನಿರೀಕ್ಷೆಯಂತೆ ಈ ಪಂದ್ಯದಲ್ಲಿ 8 ಫೋರ್ ಹಾಗೂ 7 ಭರ್ಜರಿ ಸಿಕ್ಸರ್​ಗಳೊಂದಿಗೆ 78 ರನ್ ಬಾರಿಸಿದ ವೈಭವ್ ಸೂರ್ಯವಂಶಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿದೆ. ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವೈಭವ್ ಸೂರ್ಯವಂಶಿ, ಬೌಲರ್ ಯಾರೇ ಇರಲಿ, ನನ್ನ ಗುರಿ ಚೆಂಡಿನ ಮೇಲಷ್ಟೇ ಎಂದಿದ್ದಾರೆ. ಈ ಮೂಲಕ ತಾನು ಯಾವುದೇ ಬೌಲರ್​ನ ನೋಡಿ ಹೆದರಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ್ದರು. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಅವರ ಒಂದೇ ಓವರ್​ನಲ್ಲಿ  2 ಸಿಕ್ಸ್​ನೊಂದಿಗೆ 13 ರನ್ ಚಚ್ಚಿದ್ದರು. ಇದೀಗ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹೇಝಲ್​ವುಡ್ ಅವರ ಬೆಂಡೆತ್ತಿದ್ದಾರೆ.

ಹೀಗಾಗಿಯೇ ಬುಮ್ರಾ ಮತ್ತು ಹೇಝಲ್‌ವುಡ್ ಅವರಂತಹ ದಿಗ್ಗಜರನ್ನು ಎದುರಿಸುವಾಗ ಭಯವಿತ್ತೇ ಎಂಬ ಪ್ರಶ್ನೆಯನ್ನು ವೈಭವ್ ಮುಂದಿಡಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಯುವ ದಾಂಡಿಗ, “ಬೌಲಿಂಗ್ ಮಾಡುತ್ತಿರುವುದು ಯಾರು ಎಂಬುದು ಮನಸ್ಸಿನ ಮೂಲೆಯಲ್ಲಿ ಇದ್ದೇ ಇರುತ್ತದೆ. ಆದರೆ ನಾನು ಬೌಲರ್ ಮುಖ ನೋಡಿ ಆಡುವುದಿಲ್ಲ, ಬದಲಿಗೆ ಬರುತ್ತಿರುವ ಚೆಂಡನ್ನು ನೋಡಿ ಆಡಲು ಪ್ರಯತ್ನಿಸುತ್ತೇನೆ. ನನ್ನ ಸಹಜ ಆಟಕ್ಕೆ ನಾನು ಬೆಂಬಲ ನೀಡುತ್ತೇನೆ. ಇಲ್ಲಿ ಬೌಲರ್ ಯಾರು ಎಂಬುದು ನನಗೆ ಮುಖ್ಯವಲ್ಲ. ನನ್ನು ಗುರಿ ಚೆಂಡಿನ ಮೇಲಷ್ಟೇ ಎಂದು ವೈಭವ್ ಸೂರ್ಯವಂಶಿ ಇತರೆ ಬೌಲರ್​ಗಳಿಗೂ ಎಚ್ಚರಿಕೆ ರವಾನಿಸಿದ್ದಾರೆ.

ಪಂದ್ಯದ ಗೆಲುವಿನ ನಂತರ ಸಂಭ್ರಮಾಚರಣೆ ಅಥವಾ ಕೇಕ್ ಕತ್ತರಿಸುವ ಯೋಜನೆ ಇದೆಯೇ ಎಂದು ಕೇಳಿದಾಗ, “ಇಲ್ಲ ಸರ್, ಅಂತಹದ್ದೇನೂ ಇಲ್ಲ. ನಮಗೆ ನಾಳೆ ಬೆಳಿಗ್ಗೆ ಬೇಗ ವಿಮಾನ ಇರುವುದರಿಂದ ಇವತ್ತು ಬೇಗ ಮಲಗಬೇಕಿದೆ. ಶಿಸ್ತು ನಮಗೆ ಮುಖ್ಯ,” ಎಂದು ಹೇಳುವ ಮೂಲಕ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ.

ಇದೇ ವೇಳೆ ತಮ್ಮ ಈ ಬೆಳವಣಿಗೆಗೆ ತಂದೆ ಮತ್ತು ಕೋಚ್‌ಗಳ ಮಾರ್ಗದರ್ಶನವೇ ಕಾರಣ ಎಂದು ಅವರು ಸ್ಮರಿಸಿರುವ ವೈಭವ್. “ನನ್ನ ತಂದೆ ಮತ್ತು ಕೋಚ್‌ಗಳು, ವಿಶೇಷವಾಗಿ ಇಲ್ಲಿನ ಗಾರ್ಡಿಯನ್ ರೋಮಿ ಸರ್ ಅವರು ಯಾವಾಗಲೂ ಒಂದು ಮಾತನ್ನು ಹೇಳುತ್ತಾರೆ – ಈ ಪ್ರಯಾಣ ಬಹಳ ದೀರ್ಘವಾಗಿದೆ, ಇದು ಕೇವಲ ಆರಂಭವಷ್ಟೇ. ಹೊರಗಿನ ವಿಚಾರಗಳತ್ತ ಗಮನ ಹರಿಸದೆ ಕೇವಲ ಆಟ ಮತ್ತು ಪ್ರಕ್ರಿಯೆಯಮೇಲೆ ಮಾತ್ರ ಗಮನ ಹರಿಸು ಎಂದು”. ನಾನು ಅವರ ಮಾತನ್ನು ಪಾಲಿಸುತ್ತಿದ್ದೇನೆ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.

ಇದೇ ವೇಳೆ ಬೇಗನೆ ಔಟಾದ ಬಗ್ಗೆ ಮಾತನಾಡಿದ ವೈಭವ್, “ನಾನು ಕ್ರೀಸ್‌ನಲ್ಲಿ ಇನ್ನೂ ಸ್ವಲ್ಪ ಸಮಯ ಉಳಿದಿದ್ದರೆ ತಂಡಕ್ಕೆ ಇನ್ನೂ 10-20 ರನ್ ಬರುತ್ತಿತ್ತು. ಗುರಿ ಬೆನ್ನಟ್ಟುವಾಗ ಪಂದ್ಯವನ್ನು ಇನ್ನೂ ಎರಡು ಓವರ್ ಮೊದಲೇ ಮುಗಿಸಬಹುದಿತ್ತು. ಅನಗತ್ಯ ಹೊಡೆತಕ್ಕೆ ಕೈಹಾಕಿ ಔಟ್ ಆದಾಗ ತಂಡಕ್ಕೆ ಹಿನ್ನಡೆಯಾಗುತ್ತದೆ ಎಂಬ ಬೇಸರ ನನಗಿರುತ್ತದೆ”.  ಇದಾಗ್ಯೂ ನನ್ನ ಆದ್ಯತೆ ತಂಡದ ಗೆಲುವು. ಹೀಗಾಗಿ ಕೆಲವೊಮ್ಮೆ ತಪ್ಪುಗಳಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Rajat Patidar: ತಪ್ಪುಗಳಾಗುತ್ತೆ, ಆದರೆ ಈ ತಪ್ಪುಗಳನ್ನು…!

ಒಟ್ಟಾರೆಯಾಗಿ, ವೈಭವ್ ಸೂರ್ಯವಂಶಿ ಅವರ ಈ ಮಾತುಗಳು ಭಾರತೀಯ ಕ್ರಿಕೆಟ್‌ನ ಮುಂದಿನ ದಿನಗಳಲ್ಲಿ ಒಬ್ಬ ಶಿಸ್ತಿನ ಮತ್ತು ಮಾನಸಿಕವಾಗಿ ಸದೃಢವಾದ ಆಟಗಾರ ಸಿದ್ಧವಾಗುತ್ತಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಈ ಬಾರಿಯ ಐಪಿಎಲ್​ನಲ್ಲಿ ಇದೇ ರೀತಿ ಅಬ್ಬರಿಸಿದರೆ ಮುಂಬರುವ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ವೈಭವ್ ಸೂರ್ಯವಂಶಿ ಆಯ್ಕೆಯಾಗುವುದರಲ್ಲಿ ಡೌಟೇ ಇಲ್ಲ.

Follow Us