ವಿವಾದಕ್ಕೆ ಸಿಲುಕಿದ ತಮನ್ನಾ-ಸಿದ್ಧಾರ್ಥ್ ಸಿನಿಮಾ: ಕೇಸು ಹಾಕುವುದಾಗಿ ಬೆದರಿಕೆ

The Vvaan movie: ‘ವಿವಾನ್: ಫೋರ್ಸ್ ಆಫ್ ಫಾರೆಸ್ಟ್’ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ನಡೆಸುತ್ತಿದೆ. ಸುಮಾರು ಎರಡು ವರ್ಷಗಳ ಬಳಿಕ ತಮನ್ನಾ ನಾಯಕಿಯಾಗಿ ನಟಿಸಿರುವ ಹಿಂದಿ ಸಿನಿಮಾ ಇದಾಗಿದೆ. ಆದರೆ ಸಿನಿಮಾ ಬಿಡುಗೆಡೆಗೆ ಕೆಲವೇ ದಿನ ಇರುವಾಗ, ಚಿತ್ರತಂಡದ ವಿರುದ್ಧ ಗಾಯಕರೊಬ್ಬರು ಆರೋಪ ಮಾಡಿದ್ದು, ತಮ್ಮ ಒಪ್ಪಿಗೆ ಇಲ್ಲದೆ ತಮ್ಮ ಹಾಡನ್ನು ಸಿನಿಮಾನಲ್ಲಿ ಬಳಸಿಕೊಳ್ಳಲಾಗಿದೆ ಎಂದಿದ್ದಾರೆ.

ವಿವಾದಕ್ಕೆ ಸಿಲುಕಿದ ತಮನ್ನಾ-ಸಿದ್ಧಾರ್ಥ್ ಸಿನಿಮಾ: ಕೇಸು ಹಾಕುವುದಾಗಿ ಬೆದರಿಕೆ
Vvaan Song

Updated on: Sep 22, 2026 | 11:38 AM

ಮುಖ್ಯಾಂಶಗಳು

  • ತಮನ್ನಾ ಭಾಟಿಯಾ ಸಿನಿಮಾಕ್ಕೆ ಸಂಕಷ್ಟ
  • ಕೇಸು ಹಾಕುವುದಾಗಿ ಬೆದರಿಸಿದ ಗಾಯಕ
  • ಅನುಮತಿ ಇಲ್ಲದೆ ಹಾಡು ಬಳಕೆ ಆರೋಪ

ತಮನ್ನಾ ಭಾಟಿಯಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಒಟ್ಟಿಗೆ ನಟಿಸಿರುವ ಮಿಸ್ಟರಿ ಥ್ರಿಲ್ಲರ್ ಸಿನಿಮಾ ‘ವಿವಾನ್: ಫೋರ್ಸ್ ಆಫ್ ಫಾರೆಸ್ಟ್’ ಸೆಪ್ಟೆಂಬರ್ 25ಕ್ಕೆ ರಿಲೀಸ್ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ನಡೆಸುತ್ತಿದೆ. ಸುಮಾರು ಎರಡು ವರ್ಷಗಳ ಬಳಿಕ ತಮನ್ನಾ ನಾಯಕಿಯಾಗಿ ನಟಿಸಿರುವ ಹಿಂದಿ ಸಿನಿಮಾ ಇದಾಗಿದೆ. ಆದರೆ ಸಿನಿಮಾ ಬಿಡುಗೆಡೆಗೆ ಕೆಲವೇ ದಿನ ಇರುವಾಗ, ಚಿತ್ರತಂಡದ ವಿರುದ್ಧ ಗಾಯಕರೊಬ್ಬರು ಆರೋಪ ಮಾಡಿದ್ದು, ತಮ್ಮ ಒಪ್ಪಿಗೆ ಇಲ್ಲದೆ ತಮ್ಮ ಹಾಡನ್ನು ಸಿನಿಮಾನಲ್ಲಿ ಬಳಸಿಕೊಳ್ಳಲಾಗಿದೆ ಎಂದಿದ್ದಾರೆ.

ಗಾಯಕ ಹಾಗೂ ಸಂಯೋಜಕ ಸರ್ಗಮ್ ವೈಶ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋನಲ್ಲಿ, ಚಿತ್ರದ ತಯಾರಕರು ತಮ್ಮ ಅನುಮತಿಯಿಲ್ಲದೆ ತಮ್ಮ ‘ಐಗಿರಿ ನಂದಿನಿ’ ಹಾಡನ್ನು ಚಿತ್ರದ ಟ್ರೈಲರ್‌ನಲ್ಲಿ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ಟ್ರೈಲರ್ ಹಾಗೂ ಚಲನಚಿತ್ರದಿಂದ ಆ ಹಾಡನ್ನು ತೆಗೆದುಹಾಕುವಂತೆ ಗಾಯಕ ತಂಡವನ್ನು ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ತಮ್ಮ ಕಾನೂನು ತಂಡವು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಹಂಚಿಕೊಂಡಿರುವ ವೈಶ್, ‘ವಿವಾನ್’ ಟ್ರೈಲರ್‌ನಲ್ಲಿ ತಮ್ಮ ಹಾಡಿನ ಸುಮಾರು 25 ಸೆಕೆಂಡುಗಳಷ್ಟು ಭಾಗವನ್ನು ಬಳಸಲಾಗಿದೆ, ತಾವು ಈ ಪ್ರಾಜೆಕ್ಟ್‌ನಲ್ಲಿ ಸುಮಾರು ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿ ಹೇಳಿರುವ ಅವರು, ಟ್ರೈಲರ್‌ನಲ್ಲಿ 1:08 ರಿಂದ 1:33 ರ ನಡುವೆ ಹಾಡಿನ ಆ ಭಾಗವನ್ನು ಬಳಸಲಾಗಿದೆ ಎಂದು ಹೇಳಿದ್ದಾರೆ. ವೈಶ್ ಅವರು ಟ್ರೈಲರ್‌ನೊಂದಿಗೆ ತಮ್ಮ ಹಾಡಿನ ಆವೃತ್ತಿಯನ್ನು ಪ್ಲೇ ಮಾಡಿ, ನಿರ್ಮಾಪಕರು ತಮ್ಮ ಮಾಸ್ಟರ್ ಫೈಲ್, ಪ್ರೊಡಕ್ಷನ್ ಮತ್ತು ಧ್ವನಿಯನ್ನು ಹಾಗೆಯೇ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ನಾನು ಹಾಡಿನ ಕುರಿತು ದೊಡ್ಡ ಲೇಬಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇನೆ. ಏನಾದರೂ ತಪ್ಪಾದರೆ ನೀವೇ ಜವಾಬ್ದಾರರಾಗುತ್ತೀರಿ. ಆದ್ದರಿಂದ ದಯವಿಟ್ಟು ಆ ಹಾಡನ್ನು ನಿಮ್ಮ ಟ್ರೈಲರ್‌ನಿಂದ ಮತ್ತು ನಿಮ್ಮ ಸಿನಿಮಾದಿಂದ ತೆಗೆದುಹಾಕಿ, ಇಲ್ಲದಿದ್ದರೆ ನನ್ನ ಕಾನೂನು ತಂಡವು ಅದನ್ನು ನೋಡಿಕೊಳ್ಳುತ್ತದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ:ನಿಂತು ಹೋಯ್ತೆ ತಮನ್ನಾ ಭಾಟಿಯಾ ಸಿನಿಮಾ? ‘ವಿ ಶಾಂತಾರಾಮ್’ ಕತೆ ಏನಾಯ್ತು?

ದೀಪಕ್ ಕುಮಾರ್ ಮಿಶ್ರಾ ಮತ್ತು ಅರುಣಾಭ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ವಿವಾನ್: ಫೋರ್ಸ್ ಆಫ್ ದಿ ಫಾರೆಸ್ಟ್’ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಪ್ರಾಚೀನ ಕಾಡಿನ ಹಿನ್ನೆಲೆಯ ರೋಮಾಂಚಕ ಕಥೆಯಲ್ಲಿ ನಟಿಸಿದ್ದಾರೆ. ವನದೇವಿ ದೇವಸ್ಥಾನದ ದಂತಕಥೆಯಿಂದ ಪ್ರೇರಿತವಾದ ಸಿನಿಮಾ ಇದಾಗಿದೆ. ಸಿನಿಮಾಕ್ಕೆ ತನಿಷ್ಕ್ ಬಾಬ್ಚಿ ಮತ್ತು ಅಮಿತ್ ತ್ರಿದೇವಿ ಅವರು ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us