ನಿರ್ದೇಶಕರಾಗುವುದಕ್ಕೂ ಮೊದಲು ಪುರಿ ಜಗನ್ನಾಥ್ ಏನು ಮಾಡುತ್ತಿದ್ದರು? ಇಲ್ಲಿದೆ ಅಚ್ಚರಿಯ ವಿಚಾರ

ಪುರಿ ಜಗನ್ನಾಥ್ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು 2000ನೇ ಇಸವಿಯಲ್ಲಿ. ಪವನ್ ಕಲ್ಯಾಣ್ ನಟನೆಯ ‘ಬದ್ರಿ’ ಅವರ ನಿರ್ದೇಶನದ ಮೊದಲ ಸಿನಿಮಾ. ನಂತರ ಕೆಲವು ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದರು. ಕನ್ನಡದಲ್ಲಿ ‘ಅಪ್ಪು’ ಸಿನಿಮಾ ನಿರ್ದೇಶನ ಮಾಡಿದರು. 2002ರಲ್ಲಿ ರಿಲೀಸ್ ಆದ ಈ ಚಿತ್ರ ಸೂಪರ್ ಹಿಟ್ ಆಯಿತು.

ನಿರ್ದೇಶಕರಾಗುವುದಕ್ಕೂ ಮೊದಲು ಪುರಿ ಜಗನ್ನಾಥ್ ಏನು ಮಾಡುತ್ತಿದ್ದರು? ಇಲ್ಲಿದೆ ಅಚ್ಚರಿಯ ವಿಚಾರ
ಪುರಿ ಜಗನ್ನಾಥ್​
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Aug 24, 2023 | 7:26 PM

ನಿರ್ದೇಶಕ ಪುರಿ ಜಗನ್ನಾಥ್ (Puri Jagannath) ಅವರು ತೆಲುಗು, ಕನ್ನಡ, ಹಿಂದಿಯಲ್ಲಿ ಸಿನಿಮಾ ಮಾಡಿ ಫೇಮಸ್ ಆಗಿದ್ದಾರೆ. ಅವರು ಟಾಲಿವುಡ್​ನ (Tollywood) ಬಹುಬೇಡಿಕೆಯ ನಿರ್ದೇಶಕ. ಅವರ ಸಿನಿಮಾ ಮೇಕಿಂಗ್ ಶೈಲಿಯೇ ಭಿನ್ನ. ಇವರು ಹಲವು ಹೀರೋಗಳಿಗೆ ಸ್ಟಾರ್ ಪಟ್ಟ ಕೊಡಿಸಿದ್ದಾರೆ. ಈಗಲೂ ಪುರಿ ಜಗನ್ನಾಥ್ ಜೊತೆ ಸಿನಿಮಾ ಮಾಡಲು ಹಲವು ಹೀರೋಗಳು ಕಾಯುತ್ತಿದ್ದಾರೆ. ಪುರಿ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್‌ ಚಿತ್ರಗಳನ್ನು (Puri Jagannath Movies) ನೀಡಿದ್ದಾರೆ. ಅದೇ ರೀತಿ ಸೋಲುಗಳೂ ಇವೆ. ಪ್ರೇಕ್ಷಕರನ್ನು ಇಷ್ಟೆಲ್ಲ ರಂಜಿಸಿದ ಅವರು ಈ ಮೊದಲು ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಿರ್ದೇಶನಕ್ಕೆ ಬರುವ ಮುನ್ನ ಪುರಿ ಜಗನ್ನಾಥ್ ಅವರು ಸಿನಿಮಾಗಳಿಗೆ ಕಥೆಗಳನ್ನು ಬರೆಯುತ್ತಿದ್ದರು ಮತ್ತು ಅದನ್ನು ನಿರ್ದೇಶಕರಿಗೆ ನೀಡುತ್ತಿದ್ದರು. ಅವರು ಅನೇಕ ಹೀರೋಗಳಿಗೆ ಕಥೆ ಬರೆದಿದ್ದಾರೆ. ಇಂತಹ ಕಥೆಗಳನ್ನು ಬರೆದಿದ್ದಕ್ಕೆ ನೂರು ರೂಪಾಯಿಯಿಂದ ಸಾವಿರ ರೂಪಾಯಿಯವರೆಗೂ ಸಂಭಾವನೆ ತೆಗೆದುಕೊಂಡಿದ್ದಾರೆ. ಸಿನಿಮಾ ಕಥೆಗೆ ಬೇಕಾದ ರೀತಿಯಲ್ಲಿ ಚಿಕ್ಕ ಚಿಕ್ಕ ಅನಿಮೇಷನ್ ಚಿತ್ರಗಳನ್ನೂ ಅವರು ಬಿಡಿಸುತ್ತಿದ್ದರು. ಇದಕ್ಕಾಗಿ ವಾರಕ್ಕೆ 50 ರೂಪಾಯಿಗಳನ್ನು ಅವರು ಪಡೆಯುತ್ತಿದ್ದರು. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಪುರಿ ಈ ಎಲ್ಲ ವಿಷಯಗಳನ್ನು ಹೇಳಿಕೊಂಡಿದ್ದಾರೆ.

69th National Film Awards 2023 live: 69 ವರ್ಷಗಳ ಬಳಿಕ ಟಾಲಿವುಡ್‌ಗೆ ಒಲಿದ ಅತ್ಯುತ್ತಮ ನಟ ಪ್ರಶಸ್ತಿ

ಪುರಿ ಜಗನ್ನಾಥ್ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು 2000ನೇ ಇಸವಿಯಲ್ಲಿ. ಪವನ್ ಕಲ್ಯಾಣ್ ನಟನೆಯ ‘ಬದ್ರಿ’ ಅವರ ನಿರ್ದೇಶನದ ಮೊದಲ ಸಿನಿಮಾ. ನಂತರ ಕೆಲವು ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದರು. ಕನ್ನಡದಲ್ಲಿ ‘ಅಪ್ಪು’ ಸಿನಿಮಾ ನಿರ್ದೇಶನ ಮಾಡಿದರು. 2002ರಲ್ಲಿ ರಿಲೀಸ್ ಆದ ಈ ಚಿತ್ರ ಸೂಪರ್ ಹಿಟ್ ಆಯಿತು. ಪುನೀತ್ ಹೀರೋ ಆಗಿ ನಟಿಸಿದ ಮೊದಲ ಚಿತ್ರ ಇದಾಗಿತ್ತು. ಅವರಿಗೆ ಈ ಚಿತ್ರದಿಂದ ಭದ್ರಬುನಾದಿ ಸಿಕ್ಕಿತು. ಈ ಚಿತ್ರವನ್ನು ಪುರಿ ಜಗನ್ನಾಥ್ ತೆಲುಗಿಗೆ ‘ಈಡಿಯಟ್’ ಎಂದು ರಿಮೇಕ್ ಮಾಡಿದರು. ಈ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಅವರು ಬಡ್ತಿ ಪಡೆದರು.

ಸಂಜಯ್ ದತ್ ಈಗ ಬಿಗ್ ಬುಲ್; ‘ಡಬಲ್ ಇಸ್ಮಾರ್ಟ್’ಗೆ ಖಡಕ್ ವಿಲನ್

ಆ ಬಳಿಕ ಮಹೇಶ್ ಬಾಬು ಸೇರಿ ಅನೇಕರ ಜೊತೆ ಪುರಿ ಜಗನ್ನಾಥ್ ಕೆಲಸ ಮಾಡಿದರು. ಇತ್ತೀಚೆಗೆ ಪುರಿಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿಲ್ಲ. 2019ರಲ್ಲಿ ಅವರ ನಿರ್ದೇಶನದ ‘ಇಸ್ಮಾರ್ಟ್​ ಶಂಕರ್’ ಗೆದ್ದು ಬೀಗಿತು. ಅದಾದ ಬಳಿಕ ಮೂರು ವರ್ಷ ಅವರು ‘ಲೈಗರ್’ ಚಿತ್ರಕ್ಕಾಗಿ ಮುಡಿಪಿಟ್ಟರು. ಆದರೆ, ಸಿನಿಮಾ ಹೀನಾಯವಾಗಿ ಸೋತಿತು. ವಿಜಯ್ ದೇವರಕೊಂಡ ಈ ಚಿತ್ರದಿಂದ ದೊಡ್ಡ ಸೋಲು ಕಂಡರು. ಇವರಿಬ್ಬರೂ ಒಟ್ಟಾಗಿ ಮತ್ತೊಂದು ಸಿನಿಮಾ ಮಾಡಬೇಕಿತ್ತು. ‘ಲೈಗರ್’ ಸೋಲಿನ ಬಳಿಕ ಆ ಚಿತ್ರವನ್ನು ಕೈಬಿಡಲಾಯಿತು. ಪುರಿ ಪ್ರಸ್ತುತ ‘ಇಸ್ಮಾರ್ಟ್ ಶಂಕರ್’ ಚಿತ್ರದ ಸೀಕ್ವೆಲ್ ‘ಡಬಲ್ ಇಸ್ಮಾರ್ಟ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರಕ್ಕೆ ರಾಮ್ ಪೋತಿನೇನಿ ಹೀರೋ. ವಿಲನ್ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.