ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮೊದಲು ಹೊರ ಹೋಗೋ ಸ್ಪರ್ಧಿ ಇವರೇನಾ?

ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿದೆ.

ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮೊದಲು ಹೊರ ಹೋಗೋ ಸ್ಪರ್ಧಿ ಇವರೇನಾ?
ಬಿಗ್ ಬಾಸ್ ಕನ್ನಡ ಸೀಸನ್ 8
TV9kannada Web Team

| Edited By: Rajesh Duggumane

Jul 04, 2021 | 10:00 PM

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ನ ಮೊದಲ ಎಲಿಮಿನೇಷನ್​ ಈ ವಾರ ನಡೆಯುತ್ತಿದೆ. ಮನೆಯಲ್ಲಿ ಹಾಯಾಗಿ ದಿನ ಕಳೆದ 12 ಸ್ಪರ್ಧಿಗಳಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರ ಹೋಗೋದು ಬಹುತೇಕ ಖಚಿತವಾಗಿದೆ. ಆ ಸ್ಪರ್ಧಿ ಯಾರು ಎನ್ನುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿದೆ. ಮಂಜು ಪಾವಗಡ ಕ್ಯಾಪ್ಟನ್​ ಆಗಿದ್ದರಿಂದ ಅವರಿಗೆ ಎಲಿಮಿನೇಷನ್​ ಅನ್ವಯ ಆಗುವುದಿಲ್ಲ. ಹೀಗಾಗಿ, ಈ ವಾರ ಅವರು ಸೇಫ್​. ರಘು ಗೌಡ ಹಾಗೂ ದಿವ್ಯಾ ಸುರೇಶ್ ಅತ್ಯುತ್ತಮವಾಗಿ ಆಟವಾಡಿ ಮನೆಯವರ ಮೆಚ್ಚುಗೆ ಪಡೆದಿದ್ದಾರೆ. ಹೀಗಾಗಿ, ಅವರು ಹೊರ ಹೋಗೋದು ಬಹುತೇಕ ಅನುಮಾನ.

ಉಳಿದಂತೆ,  ಚಕ್ರವರ್ತಿ, ಪ್ರಿಯಾಂಕಾ ತಿಮ್ಮೇಶ್ಹಾಗೂ ಪ್ರಶಾಂತ್​ ಸಂಬರಗಿ ವೀಕ್ಷಕರನ್ನು ಎಂಟರ್​ಟೇನ್​ ಮಾಡುತ್ತಿದ್ದಾರೆ. ಪ್ರಶಾಂತ್​, ಕೆಲವೊಮ್ಮೆ ಕಲ್ಲು ಹೃದಯಿಯಂತೆ ವರ್ತಿಸಿದರೂ ನಂತರ ಮೃದುವಾಗಿ ಮಾತನಾಡುತ್ತಾರೆ. ಈಗ ನಿಧಿ ಮನೆಯಿಂದ ಹೊರ ಹೋಗಿದ್ದಾರೆ.

ಕಳೆದ ವಾರ ಯಾವುದೇ ಎಲಿಮಿನೇಷನ್​ ಇರಲಿಲ್ಲ. ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬಂದು ಕೆಲವೇ ದಿನ ಕಳೆದಿದ್ದವು. ಹೀಗಾಗಿ, ಯಾರು ಹೇಗೆ ಪರ್ಫಾರ್ಮೆನ್ಸ್ ಮಾಡುತ್ತಾರೆ ಅನ್ನೋದು ಇನ್ನು ಸ್ಪಷ್ಟವಾಗಿ ತಿಳಿದಿರಲಿಲ್ಲ. ಈ ಕಾರಣಕ್ಕೆ ಎಲಿಮಿನೇಷನ್ ನಡೆದಿರಲಿಲ್ಲ. ಆದರೆ, ನಾಮಿನೇಷನ್​ ಪಟ್ಟಿ ಈ ವಾರಕ್ಕೆ ಹಾಗೆಯೇ ಮುಂದುವರಿದಿತ್ತು.

ಇದನ್ನೂ ಓದಿ:

 ‘ಶುಭಾ ಲೆಕ್ಕಕ್ಕಿಲ್ಲ, ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರೆ’; ಈ ಬಿಗ್​ ಬಾಸ್​ ಸ್ಪರ್ಧಿಯ ಮಾತನ್ನು ನೀವು ಒಪ್ತೀರಾ?

Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada