AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಫ್ಟ್ ಕೊಡಲು ಬಂದ ಅಭಿಮಾನಿ ಮೇಲೆ ಕಮಲ್ ಹಾಸನ್ ಗರಂ; ತಪ್ಪು ಯಾರದ್ದು?

ತಮಿಳಿನಾಡಿನಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಕಮಲ್ ಹಾಸನ್​ ಅವರಿಗೆ ಅಭಿನಂದನೆ ಸಲ್ಲಿಸಲು ಫ್ಯಾನ್ಸ್ ಬಂದಿದ್ದರು. ಆಗ ಈ ಘಟನೆ ನಡೆದಿದೆ. ಅಭಿಮಾನಿಯೊಬ್ಬ ತಂದಿದ್ದ ಗಿಫ್ಟ್ ನೋಡಿ ಕಮಲ್ ಹಾಸನ್ ಕೋಪ ಮಾಡಿಕೊಂಡರು. ಈ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಅಲ್ಲಿ ಏನಾಯ್ತು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ..

ಗಿಫ್ಟ್ ಕೊಡಲು ಬಂದ ಅಭಿಮಾನಿ ಮೇಲೆ ಕಮಲ್ ಹಾಸನ್ ಗರಂ; ತಪ್ಪು ಯಾರದ್ದು?
Kamal Haasan
ಮದನ್​ ಕುಮಾರ್​
|

Updated on: Jun 15, 2025 | 7:16 AM

Share

ನಟ ಕಮಲ್ ಹಾಸನ್ (Kamal Haasan) ಅವರು ಒಂದೆಡೆ ಸಿನಿಮಾ, ಇನ್ನೊಂದಡೆ ರಾಜಕೀಯ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ‘ಥಗ್​ ಲೈಫ್’ (Thug Life) ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾಗೆ ಜನರು ನೆಗೆಟಿವ್ ವಿಮರ್ಶೆ ನೀಡಿದರು. ಅದರ ಪರಿಣಾಮವಾಗಿ ಕಮಲ್ ಹಾಸನ್ ಅವರಿಗೆ ಸೋಲು ಉಂಟಾಯಿತು. ಕರ್ನಾಟಕದಲ್ಲಿ ಅವರು ಕಾಂಟ್ರವರ್ಸಿ ಮಾಡಿಕೊಂಡಿದ್ದರಿಂದ ಆ ಚಿತ್ರ ಇಲ್ಲಿ ಬಿಡುಗಡೆಯೇ ಆಗಲಿಲ್ಲ. ‘ಥಗ್​ ಲೈಫ್’ ಸಿನಿಮಾ ಸೋಲುತ್ತಿದ್ದಂತೆಯೇ ಕಮಲ್ ಹಾಸನ್ ಅವರು ರಾಜಕೀಯದ ಕಡೆಗೆ ಗಮನ ಹರಿಸಿದ್ದಾರೆ. ಈಗ ಅವರು ರಾಜ್ಯಸಭೆಗೆ (Rajya Sabha) ಆಯ್ಕೆ ಆಗಿದ್ದಾರೆ. ಅವರನ್ನು ಅಭಿನಂದಿಸಲು ಬಂದ ಅಭಿಮಾನಿ ಮೇಲೆ ಗರಂ ಆಗಿದ್ದಾರೆ.

ತಮಿಳುನಾಡಿನಿಂದ ಕಮಲ್ ಹಾಸನ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಅದಕ್ಕಾಗಿ ಅವರು ಜೂನ್ 14ರಂದು ಪಾರ್ಟಿ ಮೀಟಿಂಗ್ ಆಯೋಜಿಸಿದ್ದರು. ಅಲ್ಲಿ ಅನೇಕ ಅಭಿಮಾನಿಗಳು ಮತ್ತು ಬೆಂಬಲಿಗರು ಸೇರಿದ್ದರು. ಈ ವೇಳೆ ಕಮಲ್ ಹಾಸನ್ ಅವರಿಗೆ ಅಭಿಮಾನಿಯೊಬ್ಬರು ಗಿಫ್ಟ್ ಕೊಡಲು ವೇದಿಕೆಗೆ ಬಂದರು. ಆದರೆ ಅಭಿಮಾನಿ ತಂದ ಗಿಫ್ಟ್ ಕಮಲ್ ಹಾಸನ್ ಅವರಿಗೆ ಇಷ್ಟ ಆಗಲಿಲ್ಲ. ಅದಕ್ಕೆ ಕಾರಣ ಕೂಡ ಇದೆ.

ಇದನ್ನೂ ಓದಿ
Image
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿಕೆ, ನಟ ಜಗ್ಗೇಶ್​ರಿಂದ ಪಾಠ
Image
ರಾಜ್ಯಸಭೆಗೆ ಕಮಲ್ ಹಾಸನ್; ಮೇಲ್ಮನೆ ಪ್ರವೇಶಕ್ಕೆ ನಾಮ ನಿರ್ದೇಶನ
Image
ಕಮಲ್ ಹಾಸನ್ ವಿವಾದ: ಕನ್ನಡಿಗರ ಕೆರಳಿಸಿದ ನಟನ​ ಚಿತ್ರಕ್ಕೆ ಸಂಕಷ್ಟ
Image
ಸೋನು ನಿಗಮ್ ಬೆನ್ನಲ್ಲೇ ಕಮಲ್ ಹಾಸನ್ ವಿವಾದ: ಕೆರಳಿ ಕೆಂಡವಾದ ಕನ್ನಡಿಗರು

ಕಮಲ್ ಹಾಸನ್ ಮೇಲಿನ ಪ್ರೀತಿಗಾಗಿ ಅಭಿಮಾನಿಯು ಖಡ್ಗವನ್ನು ಉಡುಗೊರೆಯಾಗಿ ತಂದಿದ್ದ. ಇದು ಮಾರಕಾಸ್ತ್ರ ಆದ್ದರಿಂದ ವಿವಾದ ಆಗುವುದು ಖಂಡಿತ ಎಂಬುದು ಕಮಲ್ ಹಾಸನ್​ಗೆ ತಿಳಿದಿತ್ತು. ಹಾಗಾಗಿ ಅವರು ಖಡ್ಗವನ್ನು ಹಿಡಿಯಲು ನಿರಾಕರಿಸಿದರು. ಅಲ್ಲದೇ, ಅದನ್ನು ಉಡುಗೊರೆಯಾಗಿ ನೀಡಲು ಬಂದಿದ್ದ ಅಭಿಮಾನಿಗೆ ಅವರು ವಾರ್ನಿಂಗ್ ನೀಡಿದರು.

ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಕಮಲ್ ಹಾಸನ್ ಅವರು ಎಚ್ಚರಿಸಿದರು ಕೂಡ ಅಭಿಮಾನಿಗಳು ಕೇಳಲಿಲ್ಲ. ಬಲವಂತವಾಗಿ ಖಡ್ಗ ನೀಡಲು ಮುಂದಾದರು. ಆಗ ಕಮಲ್ ಹಾಸನ್ ಅವರಿಗೆ ಕೋಪ ಬಂತು. ಅತಿರೇಕದ ವರ್ತನೆ ತೋರಲು ಬಂದ ಅಭಿಮಾನಿಗಳ ಮೇಲೆ ಕಮಲ್ ಹಾಸನ್ ಗರಂ ಆದರು. ಇಂಥ ಗಿಫ್ಟ್ ತಂದ ಅಭಿಮಾನಿಗಳದ್ದೇ ತಪ್ಪು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕನ್ನಡ ಸಿನಿಮಾಗೆ ‘ಕಮಲ್ ಶ್ರೀದೇವಿ’ ಟೈಟಲ್; ಇಂಥ ಶೀರ್ಷಿಕೆ ಇಟ್ಟಿದ್ದಕ್ಕೆ ಕಾರಣ ಏನು?

ಸದ್ಯಕ್ಕಂತೂ ಕರ್ನಾಟಕದಲ್ಲಿ ಕಮಲ್ ಹಾಸನ್ ಅವರು ಹೆಸರು ಕೆಡಿಸಿಕೊಂಡಿದ್ದಾರೆ. ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಹೇಳುವ ಮೂಲಕ ಅವರು ವಿವಾದ ಮಾಡಿಕೊಂಡಿದ್ದಾರೆ. ಇಂದಿಗೂ ಅವರು ಕ್ಷಮೆ ಕೇಳಿಲ್ಲ. ಕೋರ್ಟ್ ಸೂಚಿಸಿದರೂ ಕೂಡ ಅವರು ಕ್ಷಮೆ ಹೇಳಲು ಮನಸ್ಸು ಮಾಡಿಲ್ಲ. ಇದರಿಂದ ಅವರ ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ತೊಂದರೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ