AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ ಕೇಸ್​ನಲ್ಲಿ ತಲೆಮರೆಸಿಕೊಂಡ ತೆಲುಗು ನಟ; ಶೀಘ್ರವೇ ನವದೀಪ್ ಅರೆಸ್ಟ್?  

ತೆಲುಗು ಸಿನಿಮಾಗಳಲ್ಲಿ ನವದೀಪ್ ಅವರು ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ನವದೀಪ್ ಅವರು ಮಾದಾಪುರ ಡ್ರಗ್​ ಕೇಸ್​ನಲ್ಲಿ 37ನೇ ಆರೋಪಿ ಆಗಿದ್ದಾರೆ. ಅವರ ವಿಚಾರಣೆಗೆ ಪೊಲೀಸರು ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ.

ಡ್ರಗ್ ಕೇಸ್​ನಲ್ಲಿ ತಲೆಮರೆಸಿಕೊಂಡ ತೆಲುಗು ನಟ; ಶೀಘ್ರವೇ ನವದೀಪ್ ಅರೆಸ್ಟ್?  
ನವದೀಪ್
ರಾಜೇಶ್ ದುಗ್ಗುಮನೆ
|

Updated on:Sep 21, 2023 | 8:58 AM

Share

ತೆಲುಗು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ನವದೀಪ್ (Navdeep) ಅವರು ಈಗ ಡ್ರಗ್ಸ್ ಪ್ರಕರಣದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಡ್ರಗ್​ ಕೇಸ್​ನಲ್ಲಿ ಅವರ ಹೆಸರೂ ಸಿಲುಕಿದೆ. ಆದರೆ, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ತಲೆಮರೆಸಿಕೊಂಡಿದ್ದಾರೆ. ನಟನ ನಡೆಯ ಬಗ್ಗೆ ಪೊಲೀಸರು ಅಸಮಾಧಾನಗೊಂಡಿದ್ದಾರೆ. ತನಿಖೆಗೆ ಅಸಹಕಾರ ತೋರಿದ ಆರೋಪದ ಮೇಲೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ತೆಲುಗು ಸಿನಿಮಾಗಳಲ್ಲಿ ನವದೀಪ್ ಅವರು ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ನವದೀಪ್ ಅವರು ಮಾದಾಪುರ ಡ್ರಗ್​ ಕೇಸ್​ನಲ್ಲಿ 37ನೇ ಆರೋಪಿ ಆಗಿದ್ದಾರೆ. ಅವರ ವಿಚಾರಣೆಗೆ ಪೊಲೀಸರು ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಅವರ ಸುಳಿವು ಸಿಗುತ್ತಿಲ್ಲ.

‘ನವದೀಪ್ ಅವರು ತನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ, ನಾನು ಡ್ರಗ್ ಸೇವಿಸಿಲ್ಲ’ ಎಂದು ಹೇಳುತ್ತಾ ಬರುತ್ತಿದ್ದಾರೆ. ಹಾಗಿದ್ದರೂ ಅವರು ತಲೆಮರೆಸಿಕೊಂಡಿದ್ದಾರೆ. ಇದು ಸಾಕಷ್ಟು ಅನುಮಾನ ಮೂಡಿಸಿದೆ. ನವದೀಪ್ ಅವರ ಗೆಳೆಯ ರಾಮಚಂದ್ ಕೂಡ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇನ್ನು ಇತ್ತೀಚೆಗೆ ನವದೀಪ್ ಅವರು ಹೈಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಪಡೆಯಲು ಕೂಡ ಪ್ರಯತ್ನಿಸಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಈ ಪ್ರಕರಣದಲ್ಲಿ ನವದೀಪ್​ಗೆ ಸಂಕಷ್ಟ ಹೆಚ್ಚಿದೆ.

ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರು ಹೇಳುವ ಪ್ರಕಾರ ನವದೀಪ್ ಅವರು ಡ್ರಗ್ ಪೆಡ್ಲರ್​ಗಳ ಜೊತೆ ಲಿಂಕ್ ಹೊಂದಿದ್ದಾರಂತೆ. ಅವರ ಜೊತೆ ಇವರು ಮಾತುಕತೆ ಕೂಡ ನಡೆದಿದೆ. ಈ ರೀತಿಯ ದಾಖಲೆಗಳನ್ನು ಎನ್​ಸಿಬಿ ಪರ ವಕೀಲರು ಕೋರ್ಟ್​ಗೆ ನೀಡಿದ್ದು, ನವದೀಪ್​ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ.

ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ನಟನ ಮನೆ ಮೇಲೆ ಅಧಿಕಾರಿಗಳ ದಾಳಿ

ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ನವದೀಪ್ ಅವರನ್ನು ಬಂಧಿಸಬಾರದು ಎಂದು ಅವರ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಇನ್ನೂ ಕೆಲವರು ಅವರನ್ನು ಶೀಘ್ರವೇ ಬಂಧಿಸಬೇಕು ಎಂದು ಹೇಳುತ್ತಿದ್ದಾರೆ. ನವದೀಪ್ ಅವರು 2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದರು. ಧಾರಾವಾಹಿಗಳಲ್ಲೂ ಅವರು ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Thu, 21 September 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More