ಭಾರತದ ದೊಡ್ಡ ಬಜೆಟ್ ಚಿತ್ರಗಳಿವು; ಭಯ ಬೀಳದೇ 300 ಕೋಟಿಗೂ ಅಧಿಕ ಹಣದ ಸುರಿದ ನಿರ್ಮಾಪಕರಿವರು
ನಿರ್ಮಾಪಕರ ಲೆಕ್ಕಾಚಾರ ಕೆಲವೊಮ್ಮೆ ತಪ್ಪಾಗಿದ್ದಿದೆ. ಆದರೂ ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನ ನಿಂತಿಲ್ಲ. ಭಾರತದಲ್ಲಿ 300+ ಕೋಟಿ ರೂಪಾಯಿ ಬಜೆಟ್ನ ಅನೇಕ ಸಿನಿಮಾಗಳು ಸಿದ್ಧಗೊಂಡಿವೆ. ಭಾರತದಲ್ಲಿ ರಿಲೀಸ್ ಆದ ದೊಡ್ಡ ಬಜೆಟ್ನ 10 ಸಿನಿಮಾಗಳು ಇವು..
ಸ್ಟಾರ್ ಹೀರೋಗಳು ನಟಿಸುತ್ತಾರೆ ಎಂದರೆ ನಿರ್ಮಾಪಕರು (Movie Producers) ಸಿನಿಮಾ ಮೇಲೆ ಕೋಟಿ ಕೋಟಿ ರೂಪಾಯಿ ಹೂಡಿಕೆ ಮಾಡೋಕೆ ರೆಡಿ ಇರುತ್ತಾರೆ. ಅಷ್ಟೇ ಪ್ರಮಾಣದ ಹಣ ಮರಳಿ ಬರುತ್ತದೆ ಎನ್ನುವ ನಂಬಿಕೆ ನಿರ್ಮಾಪಕರದ್ದು. ಆದರೆ, ಕೆಲವೊಮ್ಮೆ ಈ ಊಹೆ ತಪ್ಪಾಗಿದ್ದಿದೆ. ಆದರೂ ಸಿನಿಮಾ ನಿರ್ಮಾಣ (Film Production) ಮಾಡುವ ಪ್ರಯತ್ನ ನಿಂತಿಲ್ಲ. ಭಾರತದಲ್ಲಿ 300+ ಕೋಟಿ ರೂಪಾಯಿ ಬಜೆಟ್ನ ಅನೇಕ ಸಿನಿಮಾಗಳು ಸಿದ್ಧಗೊಂಡಿವೆ. ಭಾರತದಲ್ಲಿ ರಿಲೀಸ್ ಆದ ದೊಡ್ಡ ಬಜೆಟ್ನ 10 ಸಿನಿಮಾಗಳ (Top 10 Movies) ಬಗ್ಗೆ ಇಲ್ಲಿದೆ ಮಾಹಿತಿ.
ಕಲ್ಕಿ 2898 ಎಡಿ
‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿ ಹಲವು ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎಂದು ವರದಿ ಆಗಿದೆ. ಈ ಚಿತ್ರದ ಕಲಾವಿದರಿಗೆ ಸಂಭಾವನೆ ಕೊಡೋಕೆ ನೂರಾರು ಕೋಟಿ ರೂಪಾಯಿ ಖರ್ಚಾಗಿದೆ. ವಿಎಫ್ಎಕ್ಸ್ ಕೆಲಸಗಳು ತುಂಬಾನೇ ಇದೆ. ಮುಂದಿನ ವರ್ಷ ದೀಪಾವಳಿಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ‘ವೈಜಯಂತಿ ಮೂವೀಸ್’ ಈ ಚಿತ್ರವನ್ನು ನಿರ್ಮಾಣ ಮಾಡಿದೆ.
‘ಆರ್ಆರ್ಆರ್’
‘ಆರ್ಆರ್ಆರ್’ ಸಿನಿಮಾ ಮಾಡಿರುವ ದಾಖಲೆಗಳು ಒಂದೆರಡಲ್ಲ. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಒಟ್ಟಾಗಿ ನಟಿಸಿದ್ದರು. ಎಸ್ಎಸ್ ರಾಜಮೌಳಿ ಈ ಸಿನಿಮಾನ ನಿರ್ದೇಶನ ಮಾಡಿದ್ದರು. ಈ ಚಿತ್ರದ ಬಜೆಟ್ 550 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ವರದಿ ಆಗಿತ್ತು. ಡಿವಿವಿ ಎಂಟರ್ಟೇನ್ಮೆಂಟ್ ಮೂಲಕ ಡಿವಿವಿ ದಾನಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ.
ಇದನ್ನೂ ಓದಿ: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಬಜೆಟ್ ಎಷ್ಟು? ಮುಚ್ಚುಮರೆ ಇಲ್ಲದೇ ಲೆಕ್ಕ ನೀಡಿದ ವಿವೇಕ್ ಅಗ್ನಿಹೋತ್ರಿ
ಆದಿಪುರುಷ್
ಪ್ರಭಾಸ್ ನಟನೆಯ ಫ್ಲಾಪ್ ಸಿನಿಮಾ ‘ಆದಿಪುರುಷ್’ ಈ ವರ್ಷ ರಿಲೀಸ್ ಆಯಿತು. ರಾಮಾಯಣ ಆಧರಿಸಿ ಸಿದ್ಧಗೊಂಡ ಈ ಚಿತ್ರಕ್ಕೆ ಟೀಕೆಗಳು ಕೇಳಿ ಬಂದವು. ರಾಮಾಯಣ ಕಥೆ ತಿರುಚಿ ಹಿಂದೂಗಳಿಗೆ ನೋಯಿಸಲಾಗಿದೆ ಎಂದು ಕೆಲವರು ಆರೋಪಿಸಿದರು. ಈ ಚಿತ್ರದಲ್ಲಿ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮೊದಲಾದವರು ನಟಿಸಿದ್ದರು. ಈ ಚಿತ್ರವನ್ನು ಟಿ-ಸೀರಿಸ್ ಮೂಲಕ ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದರು. ಈ ಚಿತ್ರದ ಬಜೆಟ್ 500 ಕೋಟಿ ರೂಪಾಯಿ.
‘ಪೊನ್ನಿಯಿನ್ ಸೆಲ್ವನ್ 1-2’
ಮಣಿರತ್ನಂ ಅವರ ಡ್ರೀಮ್ ಪ್ರಾಜೆಕ್ಟ್ ಆಗಿ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಮೂಡಿ ಬಂತು. ಎರಡು ಪಾರ್ಟ್ನಲ್ಲಿ ಈ ಚಿತ್ರ ರಿಲೀಸ್ ಆಯಿತು. ಈ ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ. ಈ ಚಿತ್ರದಲ್ಲಿ ಐಶ್ವರ್ಯಾ ರೈ, ಕಾರ್ತಿ, ತ್ರಿಷಾ ಮೊದಲಾದ ಸ್ಟಾರ್ ಕಲಾವಿದರು ನಟಿಸಿದ್ದರು.
2.0
ರಜನಿಕಾಂತ್ ನಟನೆಯ ‘2.0’ ಚಿತ್ರ 2018ರಲ್ಲಿ ರಿಲೀಸ್ ಆಗಿ ಗಮನ ಸೆಳೆದಿತ್ತು. ಈ ಚಿತ್ರ ಸಖತ್ ಡಿಫರೆಂಟ್ ಆಗಿ ಮೂಡಿ ಬಂದಿತ್ತು. ರಜನಿಕಾಂತ್ ಅವರು ರೋಬೋಟ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿತ್ತು. ಈ ಚಿತ್ರದ ಬಜೆಟ್ 400 ಕೋಟಿ ರೂಪಾಯಿ.
ಇದನ್ನೂ ಓದಿ: ಅಕ್ಷಯ್ ಕುಮಾರ್ಗಿಂತ ಪಂಕಜ್ ತ್ರಿಪಾಠಿಗೆ ಹೆಚ್ಚು ಸಂಭಾವನೆ; ‘ಒಎಂಜಿ 2’ ಚಿತ್ರದ ಒಟ್ಟು ಬಜೆಟ್ ಎಷ್ಟು?
‘ಬ್ರಹ್ಮಾಸ್ತ್ರ- ಪಾರ್ಟ್ 1’
‘ಬ್ರಹ್ಮಾಸ್ತ್ರ- ಪಾರ್ಟ್ 1’ ಸಿನಿಮಾ ಸೂಪರ್ ಹಿಟ್ ಆಯಿತು. ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಭ್ ಬಚ್ಚನ್, ಮೌನಿ ರಾಯ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಬಜೆಟ್ 375 ಕೋಟಿ ರೂಪಾಯಿ ಎನ್ನಲಾಗಿದೆ.
ಸಾಹೋ
‘ಸಾಹೋ’ ಸಿನಿಮಾ ಪ್ರಭಾಸ್ ನಟನೆಯ ದೊಡ್ಡ ಬಜೆಟ್ ಚಿತ್ರ. ಆದರೆ, ಈ ಸಿನಿಮಾ ಅಂದುಕೊಂಡ ಮಟ್ಟದಲ್ಲಿ ಕಮಾಯಿ ಮಾಡಲಿಲ್ಲ. ಯುವಿ ಕ್ರಿಯೇಷನ್ಸ್ ಹಾಗೂ ಟಿ-ಸೀರಿಸ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿತ್ತು. ಈ ಚಿತ್ರಕ್ಕೆ 350 ಕೋಟಿ ರೂಪಾಯಿ ಖರ್ಚಾಗಿದೆ.
ಇದನ್ನೂ ಓದಿ: 2ನೇ ದಿನವೂ ಸುನಾಮಿ ಎಬ್ಬಿಸಿದ ‘ಜವಾನ್’; ಭಾರತದಲ್ಲಿ 120 ಕೋಟಿ ರೂ. ದಾಟಿದ ಕಲೆಕ್ಷನ್
ಜವಾನ್
ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದ ಬಜೆಟ್ 300 ಕೋಟಿ ರೂಪಾಯಿ ಮೀರಿದೆ ಎನ್ನಲಾಗಿದೆ. ಈ ಚಿತ್ರ ಒಳ್ಳೆಯ ರೀತಿಯಲ್ಲಿ ಕಮಾಯಿ ಮಾಡುತ್ತಿದೆ. ಸಿನಿಮಾ ಎಲ್ಲಾ ದಾಖಲೆಗಳನ್ನು ಪುಡಿ ಮಾಡುವ ನಿರೀಕ್ಷೆ ಇದೆ. ಶಾರುಖ್ ಖಾನ್ ಅವರು ತಮ್ಮ ಹೋಂ ಬ್ಯಾನರ್ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಕಂಗುವಾ
ಸೂರ್ಯ ನಟನೆಯ ‘ಕಂಗುವಾ’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಟೀಸರ್ ಗಮನ ಸೆಳೆದಿದೆ. ಈ ಚಿತ್ರದ ಬಜೆಟ್ 300 ಕೋಟಿ ರೂಪಾಯಿ. ಈ ಚಿತ್ರದಲ್ಲಿ ಆರು ಪಾತ್ರಗಳಲ್ಲಿ ಸೂರ್ಯ ಕಾಣಿಸಿಕೊಳ್ಳುತ್ತಾರೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಹಿಂದಿ ಬಿಗ್ ಬಜೆಟ್ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ಯಶ್? ರಾಕಿಂಗ್ ಸ್ಟಾರ್ ನೀಡಿದ ಕಾರಣ ಏನು?
‘ಬಾಹುಬಲಿ 2’
ರಾಜಮೌಳಿ ಅವರು ನಿರ್ದೇಶನ ಮಾಡಿದ ಸೂಪರ್ ಹಿಟ್ ಚಿತ್ರಗಳಲ್ಲಿ ‘ಬಾಹುಬಲಿ 2’ ಸಿನಿಮಾ ಕೂಡ ಒಂದು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿತು. ಈ ಸಿನಿಮಾ ಮಾಡಿರುವ ದಾಖಲೆಗಳು ಹಲವು. ಹಿಂದಿ ಒಂದರಲ್ಲೇ ಚಿತ್ರ 510 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರ ಬಜೆಟ್ 250 ಕೋಟಿ ರೂಪಾಯಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.