ವೇದಿಕೆ ಮೇಲೆ ಅನುಶ್ರೀ ಕೆನ್ನೆಗೆ ಪಪ್ಪಿ ಕೊಡೋಕೆ ಹೋದ್ರಾ ರವಿಚಂದ್ರನ್? ಮುಂದೇನಾಯ್ತು?
ರವಿಚಂದ್ರನ್ ಅವರು ಕನ್ನಡದ ರೊಮ್ಯಾಂಟಿಕ್ ಹೀರೋ. ಗೆಳೆತನದ ಬಗ್ಗೆ ಹೇಳೋಕೆ ಜೀ ಕನ್ನಡದ ರಿಯಾಲಿಟಿ ಶೋನಲ್ಲಿ ವಿಶೇಷ ಎಪಿಸೋಡ್ ಮಾಡಲಾಗಿತ್ತು. ಈ ವೇಳೆ ರವಿಚಂದ್ರನ್ ಹಾಗೂ ಶಿವಣ್ಣ ಒಂದೇ ವೇದಿಕೆ ಮೇಲೆ ನಿಂತಿದ್ದಾರೆ. ಆ ಬಳಿಕ ಏನಾಯ್ತು ಎನ್ನುವ ಬಗ್ಗೆ ಇಲ್ಲಿದೆ ವಿವರ.
ನಟ ರವಿಚಂದ್ರನ್ ಅವರು ಅನೇಕ ರೊಮ್ಯಾಂಟಿಕ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರೊಮ್ಯಾನ್ಸ್ ಕಿಂಗ್ ಎಂಬ ಬಿರುದು ಇದ್ದರೆ ಅದು ರವಿಚಂದ್ರನ್ ಅವರಿಗೆ ಸಲ್ಲಿಕೆ ಆಗಬೇಕು. ಅವರು ನಿಜ ಜೀವನದಲ್ಲೂ ಸಖತ್ ರೊಮ್ಯಾಂಟಿಕ್. ಅವರಲ್ಲಿ ಹಾಸ್ಯ ಪ್ರಜ್ಞೆ ಕೂಡ ಸ್ವಲ್ಪ ಹೆಚ್ಚೇ ಇದೆ. ಈಗ ಜೀ ಕನ್ನಡ ವೇದಿಕೆ ಮೇಲೆ ಒಂದು ಫನ್ ಈವೆಂಟ್ ನಡೆದಿದೆ. ಇದರಲ್ಲಿ ರವಿಚಂದ್ರನ್ ಹಾಗೂ ಶಿವಣ್ಣ ಒಂದಾಗಿ ಗೆಳೆತನ ಸಂಭ್ರಮಿಸಿದ್ದಾರೆ.
ಗೆಳೆತನದ ಬಗ್ಗೆ ಹೇಳೋಕೆ ಜೀ ಕನ್ನಡದ ರಿಯಾಲಿಟಿ ಶೋನಲ್ಲಿ ವಿಶೇಷ ಎಪಿಸೋಡ್ ಮಾಡಲಾಗಿತ್ತು. ಈ ವೇಳೆ ರವಿಚಂದ್ರನ್ ಹಾಗೂ ಶಿವಣ್ಣ ಒಂದೇ ವೇದಿಕೆ ಮೇಲೆ ನಿಂತಿದ್ದಾರೆ. ರವಿಚಂದ್ರನ್ ಕೆನ್ನೆಗೆ ಶಿವಣ್ಣ ಪ್ರೀತಿಯಿಂದ ಮುತ್ತಿಟ್ಟಿದ್ದಾರೆ. ಆ ಬಳಿಕ ಆ್ಯಂಕರ್ ಅನುಶ್ರೀ ಅವರು ‘ರವಿ ಸರ್ ರಿಟರ್ನ್ ಗಿಫ್ಟ್ ಏನಾದ್ರೂ ಕೊಡ್ತೀರಾ’ ಎಂದರು. ಆಗ ರವಿಚಂದ್ರನ್ ಅವರು ಅನುಶ್ರೀ ಬಳಿ ಹೋದರು. ಆಗ ಅನುಶ್ರೀ, ‘ನನಗಲ್ಲ, ನನಗಲ್ಲ’ ಎಂದು ತಮ್ಮ ಬಳಿ ಬರುತ್ತಿದ್ದ ರವಿಚಂದ್ರನ್ ಅವರನ್ನು ಶಿವಣ್ಣನ ಬಳಿ ಕಳುಹಿಸಿದರು.
ರಾಜ್ಕುಮಾರ್ ಹಾಗೂ ವೀರಸ್ವಾಮಿ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಈ ಬಗ್ಗೆ ರವಿಚಂದ್ರನ್ ಅವರು ಇದೇ ವೇದಿಕೆ ಮೇಲೆ ಮಾತನಾಡಿದ್ದರು. ರಾಜ್ಕುಮಾರ್ ಹಾಗೂ ವೀರಸ್ವಾಮಿ ಅವರದ್ದು ಅದ್ಭುತ ಸ್ನೇಹ. ಒಬ್ಬರು ಸಾಹುಕಾರರೇ ಎಂದರೆ ಮತ್ತೊಬ್ಬರು ಯಜಮನಾರೇ ಎನ್ನುತ್ತಿದ್ದರು. ಆಗ ಅವರು ಗೌರವ ಕೊಡುತ್ತಿದ್ದ ರೀತಿ’ ಎಂದಿದ್ದಾರೆ ರವಿಚಂದ್ರನ್.
View this post on Instagram
ಇದನ್ನೂ ಓದಿ: ಮುಖ್ಯಮಂತ್ರಿ ಚಂದ್ರುಗೆ ಕಾರನ್ನು ಉಡುಗೊರೆ ನೀಡಿದ್ದ ರವಿಚಂದ್ರನ್ ತಂದೆ ವೀರಸ್ವಾಮಿ
ರವಿಚಂದ್ರನ್ ಅವರು ‘ಪ್ರೇಮಲೋಕ’ ಸಿನಿಮ ಮಾಡಿ ದೊಡ್ಡ ಯಶಸ್ಸು ಕಂಡಿದ್ದರು. ಅವರ ಜನ್ಮದಿನಕ್ಕೆ ‘ಪ್ರೇಮಲೋಕ 2’ ಸಿನಿಮಾ ರಿಲೀಸ್ ಅನೌನ್ಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಆ ರೀತಿಯ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ 20ಕ್ಕೂ ಅಧಿಕ ಸಾಂಗ್ ಇರಲಿದೆ ಎಂದು ಕೂಡ ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.