Bigg Boss Kannada 8: ಬಿಗ್​ ಬಾಸ್​ ಮನೆಯಿಂದ ಹೊರಬಂದ ಮೇಲೆ ಬದಲಾದ ವೈಷ್ಣವಿ ಗೌಡ; ಬೇಸರಗೊಂಡ ರಘು

ಆರಂಭದಲ್ಲಿ ಬಿಗ್​ ಬಾಸ್​ ಮನೆ ಸೇರಿದ ಸ್ಪರ್ಧಿಗಳ ಜತೆ ರಘು ಗೌಡ ಅಷ್ಟಾಗಿ ಬೆರೆಯುತ್ತಿರಲಿಲ್ಲ. ನಂತರ ಜೋಡಿ ಟಾಸ್ಕ್​ ಒಂದರಲ್ಲಿ ಅವರು ವೈಷ್ಣವಿ ಜತೆಗೆ ಸೇರಿಕೊಂಡರು. ಅಲ್ಲಿಂದ ಇಬ್ಬರ ನಡುವೆ ಒಂದು ಗೆಳೆತನ ಬೆಳೆಯಿತು.

Bigg Boss Kannada 8: ಬಿಗ್​ ಬಾಸ್​ ಮನೆಯಿಂದ ಹೊರಬಂದ ಮೇಲೆ ಬದಲಾದ ವೈಷ್ಣವಿ ಗೌಡ; ಬೇಸರಗೊಂಡ ರಘು
ರಘು ಗೌಡ-ವೈಷ್ಣವಿ ಗೌಡ
Edited By:

Updated on: May 27, 2021 | 3:37 PM

ಬಿಗ್​ ಬಾಸ್​ ಮನೆಯಲ್ಲಿ ರಘು ಗೌಡ ಹಾಗೂ ವೈಷ್ಣವಿ ತುಂಬಾನೇ ಆಪ್ತರಾಗಿದ್ದರು. ಅವರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟವಾಗಿತ್ತು. ಆದರೆ, ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರ ವೈಷ್ಣವಿ ಉಲ್ಟಾ ಹೊಡೆದಿದ್ದಾರೆ! ರಘು ಅವರನ್ನು ಯಾರೂ ಫಾಲೋ ಮಾಡಬೇಡಿ ಎಂದು ಓಪನ್​ ಆಗಿಯೇ ಹೇಳಿದ್ದಾರೆ.

ಆರಂಭದಲ್ಲಿ ಬಿಗ್​ ಬಾಸ್​ ಮನೆ ಸೇರಿದ ಸ್ಪರ್ಧಿಗಳ ಜತೆ ರಘು ಗೌಡ ಅಷ್ಟಾಗಿ ಬೆರೆಯುತ್ತಿರಲಿಲ್ಲ. ನಂತರ ಜೋಡಿ ಟಾಸ್ಕ್​ ಒಂದರಲ್ಲಿ ಅವರು ವೈಷ್ಣವಿ ಜತೆಗೆ ಸೇರಿಕೊಂಡರು. ಅಲ್ಲಿಂದ ಇಬ್ಬರ ನಡುವೆ ಒಂದು ಗೆಳೆತನ ಬೆಳೆಯಿತು. ಈ ಗೆಳೆತನ ತುಂಬಾನೇ ಗಾಢವಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಮುಂಜಾನೆ ವೈಷ್ಣವಿ ಅಡುಗೆ ಮಾಡೋಕೆ ಕಿಚನ್​ಗೆ ತೆರಳುತ್ತಿದ್ದರು. ಈ ವೇಳೆ ಅಲ್ಲಿಗೆ ಹೋಗುತ್ತಿದ್ದ ರಘು, ವೈಷ್ಣವಿ ಜತೆ ಹರಟೆ ಹೊಡೆಯುತ್ತ, ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಇನ್ನು ಇವರಿಬ್ಬರ ಫ್ರೆಂಡ್​ಶಿಪ್​ ನೋಡಿ ಮನೆಮಂದಿ ಉರಿದುಕೊಂಡಿದ್ದೂ ಇದೆ. ಇದಕ್ಕೆಲ್ಲ ವೈಷ್ಣವಿ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಸರಿಯಾಗಿ ಉತ್ತರ ನೀಡಿದ್ದಾರೆ.

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಹೀಗಾಗಿ, ಲಾಕ್​ಡೌನ್​ ಘೋಷಣೆ ಮಾಡಲಾಗಿದ್ದು, ಶೂಟಿಂಗ್​ ನಿಲ್ಲಿಸಲಾಗಿದೆ. ಹೀಗಾಗಿ, ಬಿಗ್​ ಬಾಸ್ ಅರ್ಧಕ್ಕೆ ನಿಂತಿದ್ದು,​ ಸ್ಪರ್ಧಿಗಳು ಮನೆಯಿಂದ ಹೊರ ಬಂದು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ರಘು ಗೌಡ ಹಾಗೂ ವೈಷ್ಣವಿ ಇನ್​​ಸ್ಟಾಗ್ರಾಂ ಸ್ಟೋರಿಯಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿರುವ ರಘು, ‘ಓರ್ವ ಅದ್ಭುತ ವ್ಯಕ್ತಿಯನ್ನು ಫ್ರೆಂಡ್​ ಆಗಿ ಪಡೆದಿದ್ದಕ್ಕೆ ನಿಮಗೆ ಅಭಿನಂದನೆ’ ಎಂದು ವೈಷ್ಣವಿಯನ್ನು ಟ್ಯಾಗ್​ ಮಾಡಿದ್ದಾರೆ. ಇದನ್ನು ತಮ್ಮ ಸ್ಟೋರಿಯಲ್ಲಿ ಹಾಕಿಕೊಂಡಿರುವ ವೈಷ್ಣವಿ ಉತ್ತರ ನೀಡಿದ್ದಾರೆ. ‘ಈತ ನೋಡೋಕೆ ತುಂಬಾನೇ ಫನ್ನಿಯಾಗಿ ಅನಿಸುತ್ತದೆ. ಅತಿ ಬೇಗ 3 ಲಕ್ಷ ಹಿಂಬಾಲಕರನ್ನು ಹೊಂದುವ ಸಲುವಾಗಿ ರಘು ಈ ರೀತಿ ಮಾಡುತ್ತಿದ್ದಾನೆ. ಆತನನ್ನು ಯಾರೂ ಫಾಲೋ ಮಾಡಬೇಡಿ’ ಎಂದು ನಕ್ಕಿದ್ದಾರೆ. ಇದಕ್ಕೆ ರಘು, ದುಷ್ಮನ್​ ಕಹಾ ಹೈ ಅಂದ್ರೆ ಬಗಲ್​ಮೇ ಹೈ ಅಂದಂಗಾಯ್ತು ಎಂದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ಹೊರ ಬಂದ ವೈಷ್ಣವಿಗೆ ಮ್ಯಾರೇಜ್​ ಪ್ರಪೋಸಲ್​; ನಾಚುತ್ತಲೇ ವಿಚಾರ ಬಿಚ್ಚಿಟ್ಟ ಸನ್ನಿಧಿ

Bigg Boss: ಕೊವಿಡ್ ಪೂರ್ಣಗೊಂಡ ನಂತರ ಮುಂದುವರಿಯಲಿದೆ ಬಿಗ್​ ಬಾಸ್​; ವಾಹಿನಿಯಿಂದಲೇ ಅಧಿಕೃತ ಮಾಹಿತಿ

Published On - 3:03 pm, Thu, 27 May 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us