AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಪಿರಿಟ್’ ಚಿತ್ರಕಕ್ಕೆ ವಾಸುಕಿ ಹಾಡು; ಅಪ್​ಡೇಟ್ ಕೊಟ್ಟ ಸಂದೀಪ್ ರೆಡ್ಡಿ ವಂಗ

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸಂಗೀತ ಸಂಯೋಜಿಸಿರುವ ತೆಲುಗಿನ 'ರೋಮಾಂಚಕಂ' ಸಿನಿಮಾ ಇಂದು ರಿಲೀಸ್ ಆಗಿದೆ. ಈ ವೇಳೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ವಾಸುಕಿ ಕಾರ್ಯವೈಖರಿಯನ್ನು ಬಹುವಾಗಿ ಹೊಗಳಿದ್ದು, ಪ್ರಭಾಸ್ ಅಭಿನಯದ 'ಸ್ಪಿರಿಟ್' ಚಿತ್ರಕ್ಕೂ ವಾಸುಕಿ ಟ್ರ್ಯಾಕ್ ನೀಡಿದ್ದಾರೆ ಎಂಬ ನಿಗೂಢ ವಿಷಯವನ್ನು ಬಹಿರಂಗಪಡಿಸಿದ್ದಾರೆ.

‘ಸ್ಪಿರಿಟ್’ ಚಿತ್ರಕಕ್ಕೆ ವಾಸುಕಿ ಹಾಡು; ಅಪ್​ಡೇಟ್ ಕೊಟ್ಟ ಸಂದೀಪ್ ರೆಡ್ಡಿ ವಂಗ
ವಾಸುಕಿ-ಸಂದೀಪ್ Image Credit source: Vasuki Instagram
ರಾಜೇಶ್ ದುಗ್ಗುಮನೆ
|

Updated on:Sep 03, 2026 | 8:57 AM

Share

ಮುಖ್ಯಾಂಶಗಳು

  • ಟಾಲಿವುಡ್‌ನಲ್ಲಿ ಕನ್ನಡಿಗನ ಹವಾ
  • 'ರೋಮಾಂಚಕಂ' ಮೂಲಕ ಅದ್ಧೂರಿ ಎಂಟ್ರಿ ಕೊಟ್ಟ ವಾಸುಕಿ ವೈಭವ್
  • ಸಂದೀಪ್ ರೆಡ್ಡಿ ವಂಗಾ ಪ್ರಶಂಸೆ

ಕನ್ನಡದ ಖ್ಯಾತ ಸಂಗೀತ ಸಂಯೋಜಕ ವಾಸುಕಿ ವೈಭವ್ ಅವರು ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರು ಸಂಗೀತ ಸಂಯೋಜನೆ ಮಾಡಿರುವ ‘ರೋಮಾಂಚಕಂ’ ಸಿನಿಮಾ ಇಂದು (ಸೆಪ್ಟೆಂಬರ್ 3) ರಿಲೀಸ್ ಆಗಿದೆ. ಈ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ರೊಮ್ಯಾಂಟಿಕ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದ್ದು ಹಾಡುಗಳು ಗಮನ ಸೆಳೆದಿವೆ. ಈಗ ವಾಸುಕಿ ಬಗ್ಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಮಾತನಾಡಿದ್ದಾರೆ.

ಸಂದೀಪ್ ಸಹೋದರ ಪ್ರಣಯ್ ವಂಗ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಸಂದೀಪ್ ಅವರು ಇದನ್ನು ಪ್ರೆಸೆಂಟ್ ಮಾಡಿದ್ದಾರೆ. ಇತ್ತೀಚೆಗೆ ನಡೆದ ‘ರೋಮಂಚಕಂ’ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದೀಪ್ ವಂಗಾ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಈಗಾಗಲೇ ‘ಸ್ಪಿರಿಟ್’ ಚಿತ್ರಕ್ಕಾಗಿ ಒಂದು ಟ್ರ್ಯಾಕ್ ನೀಡಿದ್ದಾರೆ ಎಂಬ ಮಾಹಿತಿ ರಿವೀಲ್ ಮಾಡಿದ್ದಾರೆ.

‘ರೋಮಂಚಕಂ’ ಸಂಗೀತ ಸಂಯೋಜನೆ ಬಗ್ಗೆ ಮಾತನಾಡಿದ ಸಂದೀಪ್, ‘ವಾಸುಕಿ ಕೂಡ ತನಗೆ ಒಂದು ಟ್ರ್ಯಾಕ್ ನೀಡಿದ್ದಾರೆ. ವಾಸುಕಿ ವೈಭವ್ ನೀಡಿದ ಹಾಡನ್ನು ಕೇಳಿದ ನಂತರ ಪ್ರೇಕ್ಷಕರು ಖಂಡಿತವಾಗಿಯೂ ಚಿತ್ರಮಂದಿರಗಳಲ್ಲಿ ಶಿಳ್ಳೆ ಹೊಡೆಯುತ್ತಾರೆ’ ಎಂದು ಪೂರ್ಣ ವಿಶ್ವಾಸದಿಂದ ಹೇಳಿದರು. ‘ರೋಮಾಂಚಕಂ’ ಚಿತ್ರದ ನಂತರ ವಾಸುಕಿ ತುಂಬಾ ಬ್ಯುಸಿಯಾಗಿರುತ್ತಾರೆ ಎಂದು ಸಂದೀಪ್ ಭವಿಷ್ಯ ನುಡಿದರು.

ನಿರ್ದೇಶಕ ವೇಣುಗೋಪಾಲ್ ರೆಡ್ಡಿ ಅವರಿಗೆ ‘ರೋಮಾಂಚಕಂ’ ಚೊಚ್ಚಲ ಸಿನಿಮಾ. ಅವರು ನಿರೂಪಿಸಿದ ಎರಡು ಗಂಟೆಗಳ ಕಥೆಯನ್ನು ಕೇಳಿದ ನಂತರ ವಂಗಾ ಸಹೋದರರು ಈ ಚಿತ್ರ ಮಾಡಲು ಒಪ್ಪಿದರು. ಸುಮಂತ್ ಪ್ರಭಾಸ್ ಮತ್ತು ಅನಂತಿಕಾ ಸುನಿಲ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ಯಶಸ್ಸು ಕಾಣುತ್ತದೆಯೇ ಎನ್ನುವ ಕುತೂಹಲ ಮೂಡಿದೆ. ಈ ಚಿತ್ರ ಗೆದ್ದರೆ ವಾಸುಕಿ ವೈಭವ್ ಅವರಿಗೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಲಿದೆ.

ಇದನ್ನೂ ಓದಿ: ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್; ದೊಡ್ಡ ಸರ್​ಪ್ರೈಸ್

ಕನ್ನಡದಲ್ಲಿ ಹಲವು ಹಾಡುಗಳನ್ನು ಕಂಪೋಸ್ ಮಾಡಿದ್ದು ಅಲ್ಲದೆ, ಹಾಡುಗಳನ್ನು ಅವರು ಹಾಡಿದ್ದಾರೆ. ಬಿಗ್ ಬಾಸ್​​ನಲ್ಲಿ ಸ್ಪರ್ಧಿಸಿ ಅವರು ಗಮನ ಸೆಳೆದರು. ಅಲ್ಲದೆ, ಕೆಲವು ಸಿನಿಮಾಗಳಲ್ಲಿ ವಾಸುಕಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:56 am, Thu, 3 September 26

Follow Us