K Viswanath Passes Away: ಖ್ಯಾತ ನಿರ್ದೇಶಕ, ನಟ ಕೆ. ವಿಶ್ವನಾಥ್ ನಿಧನ
ತೆಲುಗಿನಲ್ಲಿ ‘ಸ್ವಾತಿ ಮುತ್ಯಂ’, ‘ಶಂಕರಾಭರಣಂ, ‘ಸಾಗರ ಸಂಗಮಮ್’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ವಿಶ್ವನಾಥ್ ನೀಡಿದ್ದಾರೆ.
ಚಿತ್ರರಂಗಕ್ಕೆ ಇತ್ತೀಚೆಗೆ ಸಾಲು ಸಾಲು ಶಾಕಿಂಗ್ ಸುದ್ದಿಗಳು ಎದುರಾಗುತ್ತಿವೆ. ಹಲವು ಖ್ಯಾತ ನಾಮರನ್ನು ಚಿತ್ರರಂಗ ಕಳೆದುಕೊಳ್ಳುತ್ತಿದೆ. ಈಗ ತೆಲುಗಿನ ಖ್ಯಾತ ನಿರ್ದೇಶಕ, ನಟ ಕೆ. ವಿಶ್ವನಾಥ್ (K. Vishwanath Death) ಅವರು ಹೈದರಾಬಾದ್ನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಿಶ್ವನಾಥ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ತೆಲುಗು, ತಮಿಳು ಮಾತ್ರವಲ್ಲದೆ ವಿಶ್ವನಾಥ್ ಅವರು ಕನ್ನಡದಲ್ಲೂ ನಟಿಸಿದ್ದರು.
ತೆಲುಗಿನಲ್ಲಿ ‘ಸ್ವಾತಿ ಮುತ್ಯಂ’, ‘ಶಂಕರಾಭರಣಂ, ‘ಸಾಗರ ಸಂಗಮಮ್’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ವಿಶ್ವನಾಥ್ ನೀಡಿದ್ದಾರೆ. ‘ಸ್ವಾತಿ ಮುತ್ಯಂ’ ಸಿನಿಮಾ ಕನ್ನಡಕ್ಕೆ ‘ಸ್ವಾತಿ ಮುತ್ತು’ ಆಗಿ ರಿಮೇಕ್ ಆಗಿತ್ತು. ‘ಸ್ವಾತಿ ಮುತ್ಯಂ’ ಮಾತ್ರವಲ್ಲದೆ ಅವರ ನಿರ್ದೇಶನದ ಇನ್ನೂ ಹಲವು ಸಿನಿಮಾಗಳು ಕನ್ನಡಕ್ಕೆ ರಿಮೇಕ್ ಆಗಿವೆ.
ವಿಶ್ವನಾಥ್ ಅವರ ಸಾಧನೆ ಅಂತಿಂಥದ್ದಲ್ಲ. ಅವರ ಕೆಲಸಕ್ಕೆ ಅನೇಕ ಪ್ರಶಸ್ತಿಗಳು ಲಭಿಸಿದ್ದವು. ದಾದಾಸಾಹೇಬ್ ಫಾಲ್ಕೆ ಸೇರಿ ಐದು ರಾಷ್ಟ್ರಪ್ರಶಸ್ತಿಗಳು ಅವರಿಗೆ ಲಭಿಸಿದ್ದವು. ತೆಲುಗಿನ ಪ್ರತಿಷ್ಠಿತ ನಂದಿ ಅವಾರ್ಡ್ನ ಅವರು ಎಂಟು ಬಾರಿ ಪಡೆದುಕೊಂಡಿದ್ದರು.
K. Vishwanath Ji you taught me so much, being on set with you during Eeshwar was like being in a temple… RIP My Guru ? pic.twitter.com/vmqfhbZORx
— Anil Kapoor (@AnilKapoor) February 2, 2023
The only director in Indian cinema who have guts to write this scene in 1992 which is the most iconic performance in Chiranjeevi’s career. May your soul rest in peace KalaTapaswi Shri K Vishwanath garu ?? #Kalatapaswi #RipLegend #kvishwanath pic.twitter.com/VfAxjHEspm
— Bobby (@rushtovinay) February 2, 2023
ವಿಶ್ವನಾಥ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ನಿರ್ದೇಶಕನಾಗಿ. 1965ರಲ್ಲಿ ಅವರ ನಿರ್ದೇಶನದ ಮೊದಲ ಸಿನಿಮಾ ‘ಆತ್ಮ ಗೌರವಮ್’ ರಿಲೀಸ್ ಆಯಿತು. ಈ ಚಿತ್ರಕ್ಕೆ ನಂದಿ ಪ್ರಶಸ್ತಿ ಲಭಿಸಿತು. ನಂತರ ತೆಲುಗು ಮಾತ್ರವಲ್ಲದೆ ಹಿಂದಿಯಲ್ಲೂ ಅವರು ನಿರ್ದೇಶನ ಮಾಡಿದರು. ನಿರ್ದೇಶನಕ್ಕೆ ಕಾಲಿಟ್ಟು 30 ವರ್ಷಗಳ ಬಳಿಕ ಅಂದರೆ 1995ರಲ್ಲಿ ಮೊದಲ ಬಾರಿಗೆ ಅವರು ಬಣ್ಣ ಹಚ್ಚಿದರು. 2018ರಲ್ಲಿ ತೆರೆಗೆ ಬಂದ ಕನ್ನಡದ ‘ಪ್ರೇಮ ಬರಹ’ ಹಾಗೂ 2022ರ ‘ಒಪ್ಪಂದ’ ಸಿನಿಮಾದಲ್ಲಿ ಅವರು ನಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:54 am, Fri, 3 February 23