ಕಥೆ ಬದಲಾಯಿಸಲು ಒಪ್ಪದ ನಯನತಾರಾ ಗಂಡನಿಗೆ ಶಾಕ್ ಕೊಟ್ಟ ನಿರ್ಮಾಪಕ; ವಿಘ್ನೇಶ್ ಶಿವನ್ ಹೇಳಿದ್ದಿಷ್ಟು
ಅಜಿತ್ ಕುಮಾರ್ ಸಿನಿಮಾಗೆ ನಿರ್ದೇಶನ ಮಾಡೋ ಅವಕಾಶ ಸಿಗೋದು ಅಪರೂಪ. ಸಿಕ್ಕರೆ ಅಂಥ ಅವಕಾಶವನ್ನು ಯಾರೂ ಬಿಟ್ಟುಕೊಳ್ಳುವುದಿಲ್ಲ. ಆದರೆ, ಈ ಅವಕಾಶ ವಿಘ್ನೇಶ್ ಶಿವನ್ ಕೈ ತಪ್ಪಿದೆ.
ನಟಿ ನಯನತಾರಾ (Nayanthara) ಪತಿ ವಿಘ್ನೇಶ್ ಶಿವನ್ ಅವರ ಜೀವನದಲ್ಲಿ ಸಾಕಷ್ಟು ಒಳ್ಳೆಯ ಘಟನೆಗಳು ಸಂಭವಿಸಿದವು. ಕಳೆದ ವರ್ಷ ಅವರು ನಯನತಾರಾ ಅವರನ್ನು ಮದುವೆ ಆದರು. ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದರು. ಆದರೆ, ಇತ್ತೀಚೆಗೆ ವಿಘ್ನೇಶ್ ಶಿವನ್ (Vignesh Shivan) ಕುಟುಂಬಕ್ಕೆ ಕಹಿ ಸುದ್ದಿ ಸಿಕ್ಕಿತ್ತು. ಅಜಿತ್ ಕುಮಾರ್ ನಟನೆಯ 62ನೇ ಸಿನಿಮಾಗೆ ಅವರು ನಿರ್ದೇಶನ ಮಾಡಬೇಕಿತ್ತು. ಆದರೆ, ಏಕಾಏಕಿ ಅವರನ್ನು ಸಿನಿಮಾದಿಂದ ತೆಗೆದು ಹಾಕಲಾಯಿತು. ಈಗ ಈ ಬಗ್ಗೆ ವಿಘ್ನೇಶ್ ಶಿವನ್ ಮಾತನಾಡಿದ್ದಾರೆ. ಗಲಾಟಾ ಪ್ಲಸ್ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ.
ಅಜಿತ್ ಕುಮಾರ್ ಸಿನಿಮಾಗೆ ನಿರ್ದೇಶನ ಮಾಡೋ ಅವಕಾಶ ಸಿಗೋದು ಅಪರೂಪ. ಸಿಕ್ಕರೆ ಅಂಥ ಅವಕಾಶವನ್ನು ಯಾರೂ ಬಿಟ್ಟುಕೊಳ್ಳುವುದಿಲ್ಲ. ಆದರೆ, ಈ ಅವಕಾಶ ವಿಘ್ನೇಶ್ ಶಿವನ್ ಕೈ ತಪ್ಪಿದೆ. ಈಗ ಮಗಿಳ್ ತಿರುಮೇನಿ ಅವರ ಕೈಗೆ ಈ ಚಿತ್ರ ಸೇರಿದೆ. ಸಿನಿಮಾ ಕಥೆ ಬದಲಾಯಿಸುವಂತೆ ನಿರ್ಮಾಪಕರು ಸೂಚಿಸಿದ್ದರು. ಆದರೆ, ಇದನ್ನು ಅವರು ಒಪ್ಪಿಲ್ಲ.
‘ಒಬ್ಬನೇ ಎಲ್ಲವನ್ನೂ ನಿಭಾಯಿಸಬೇಕು. ನನಗೆ ನಿಜಕ್ಕೂ ನಿರಾಸೆಯಾಗಿದೆ. ಸ್ಕ್ರಿಪ್ಟ್ ದ್ವಿತೀಯಾರ್ಧ ನಿರ್ಮಾಪಕರಿಗೆ ಇಷ್ಟವಾಗಿಲ್ಲ. ನನ್ನ ಕಥೆ ನಾನು ಹೇಗಂದುಕೊಂಡಿದ್ದೀನೋ ಹಾಗೆಯೇ ಇದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅಜಿತ್ ಅವರಿಗೆ ಸಿನಿಮಾ ಇಷ್ಟವಾಗಿದೆ. ಆದರೆ ನಿರ್ಮಾಪಕರು ಸ್ಕ್ರಿಪ್ಟ್‌ನಲ್ಲಿ ಕೆಲವು ವಿಷಯಗಳು ಬದಲಾಯಿಸಿ ಎಂದು ಒತ್ತಾಯಿಸಿದರು. ಆದರೆ, ನಾನು ಅದನ್ನು ಮಾಡಲು ಸಾಧ್ಯವಿರಲಿಲ್ಲ’ ಎಂದಿದ್ದಾರೆ ಅವರು.
‘ಮಗಿಳ್ ತಿರುಮೇನಿ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅವರು ಒಳ್ಳೆಯ ನಿರ್ದೇಶಕರು. ಬಹುಶಃ ಈ ಸಿನಿಮಾ ನನಗೆ ಬೇಗ ಸಿಕ್ಕಿರಬಹುದು. ನಾವು ಕೆಲವೊಮ್ಮೆ ಸಾಲನ್ನು ಬಿಟ್ಟು ಜಿಗಿಯೋಕೆ ಹೋಗುತ್ತೇವೆ. ಆಗ ನಾವು ಮತ್ತೆ ಹಿಂದೆ ಬರುತ್ತೇವೆ. ಒಬ್ಬರಿಗೆ ಅವಕಾಶ ತಪ್ಪಿದರೆ ಅದು ಮತ್ತೊಬ್ಬರಿಗೆ ಸಿಗುತ್ತದೆ’ ಎಂದಿದ್ದಾರೆ ವಿಘ್ನೇಶ್ ಶಿವನ್.
ಇದನ್ನೂ ಓದಿ: Nayanthara: ‘ಮೊಬೈಲ್ ಒಡೆದು ಹಾಕ್ತೀನಿ’; ವಿಡಿಯೋ ಸೆರೆಹಿಡಿಯಲು ಮುಂದಾದ ಅಭಿಮಾನಿಗೆ ನಯನತಾರಾ ಧಮ್ಕಿ
‘ಬಹುಶಃ ಪ್ರಾಜೆಕ್ಟ್ ವಿಳಂಬವಾಗಬಹುದು. ನನ್ನ ಮೊದಲ ಚಿತ್ರ ನನ್ನ ಪ್ಲ್ಯಾನ್ನಂತೆ ಆಗಲಿಲ್ಲ. ಈಗ ನನ್ನ ಹೃದಯಕ್ಕೆ ಹತ್ತಿರವಾದ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ. ನಾನು ಖುಷಿಯಾಗಿದ್ದೇನೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ