ದಕ್ಷಿಣ ಭಾರತದ ನಟನಾಗಿ ವಿಜಯ್​ ದೇವರಕೊಂಡ ಲೈಫ್​ನಲ್ಲಿ ಹೊಸ ಮೈಲಿಗಲ್ಲು

Dabboo Ratnani's Calendar 2021: ಡಬ್ಬೂ ರತ್ನಾನಿ ಕ್ಯಾಲೆಂಡರ್​ನಲ್ಲಿ ಇಲ್ಲಿವರೆಗೆ ಕೇವಲ ಬಾಲಿವುಡ್​ ಸ್ಟಾರ್ಸ್​ಗಳಿಗೆ ಮಾತ್ರ ಮನ್ನಣೆ ಸಿಗುತ್ತಿತ್ತು. ಅಭಿಷೇಕ್​ ಬಚ್ಚನ್​, ಕತ್ರಿನಾ ಕೈಫ್​, ವಿಕ್ಕಿ ಕೌಶಲ್​, ಸನ್ನಿ ಲಿಯೋನ್​ ಸೇರಿ ಹಿಂದಿ ಚಿತ್ರರಂಗದ ಸಾಕಷ್ಟು ಕಲಾವಿದರು ಇದರ ಭಾಗವಾಗಿದ್ದಾರೆ.

ದಕ್ಷಿಣ ಭಾರತದ ನಟನಾಗಿ ವಿಜಯ್​ ದೇವರಕೊಂಡ ಲೈಫ್​ನಲ್ಲಿ ಹೊಸ ಮೈಲಿಗಲ್ಲು
ವಿಜಯ್ ದೇವರಕೊಂಡ
Rajesh Duggumane

|

Jun 14, 2021 | 8:20 PM

ದಕ್ಷಿಣ ಭಾರತ ಚಿತ್ರರಂಗ ಈಗ ಬಾಲಿವುಡ್​ಗೆ ಸರಿಸಾಟಿಯಾಗಿ ನಿಂತಿದೆ. ದೊಡ್ಡ ಬಜೆಟ್​ಗಳ ಸಿನಿಮಾಗಳ ಜತೆಗೆ ಮೇಕಿಂಗ್​ನಲ್ಲೂ ಇಡೀ ಭಾರತದ ಗಮನ ಸೆಳೆಯುವ ಪ್ರಯತ್ನವನ್ನು ಮಾಡುವಲ್ಲಿ ದಕ್ಷಿಣದ ಚಿತ್ರರಂಗ ಯಶಸ್ವಿಯಾಗಿದೆ. ‘ಬಾಹುಬಲಿ’, ‘ಕೆಜಿಎಫ್’ ಸರಣಿಯ ಚಿತ್ರಗಳು ಇದಕ್ಕೆ ಜೀವಂತ ಉದಾಹರಣೆ. ಹೀಗಾಗಿ, ದಕ್ಷಿಣ ಭಾರತದ ನಟರಿಗೆ ಹೆಚ್ಚು ಮನ್ನಣೆ ಸಿಗುತ್ತಿದೆ. ಈಗ ಇದೇ ಮೊದಲ ಬಾರಿಗೆ ಖ್ಯಾತ ಬಾಲಿವುಡ್​ ಫೋಟೋಗ್ರಾಫರ್​ ಡಬ್ಬೂ ರತ್ನಾನಿ ಕ್ಯಾಲೆಂಡರ್​ನ ಭಾಗವಾಗೋಕೆ ದಕ್ಷಿಣ ಭಾರತದ ನಟನಿಗೆ ಅವಕಾಶ ಸಿಕ್ಕಿದೆ.

ಹೌದು, ಡಬ್ಬೂ ರತ್ನಾನಿ ಕ್ಯಾಲೆಂಡರ್​ನಲ್ಲಿ ಇಲ್ಲಿವರೆಗೆ ಕೇವಲ ಬಾಲಿವುಡ್​ ಸ್ಟಾರ್ಸ್​ಗಳಿಗೆ ಮಾತ್ರ ಮನ್ನಣೆ ಸಿಗುತ್ತಿತ್ತು. ಅಭಿಷೇಕ್​ ಬಚ್ಚನ್​, ಕತ್ರಿನಾ ಕೈಫ್​, ವಿಕ್ಕಿ ಕೌಶಲ್​, ಸನ್ನಿ ಲಿಯೋನ್​ ಸೇರಿ ಹಿಂದಿ ಚಿತ್ರರಂಗದ ಸಾಕಷ್ಟು ಕಲಾವಿದರು ಇದರ ಭಾಗವಾಗಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ದಕ್ಷಿಣದ ಸ್ಟಾರ್​ಗೆ ಇದರಲ್ಲಿ ಪಾಲ್ಗೊಳ್ಳೋಕೆ ಅವಕಾಶ ಸಿಕ್ಕಿದೆ. ವಿಜಯ್​ ದೇವರಕೊಂಡ ಈಗ ‘ಡಬ್ಬೂ ರತ್ನಾನಿ 2021’ ಕ್ಯಾಲೆಂಡರ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ದುಬಾರಿ ಬೆಲೆಯ ಟ್ರಂಫ್ ಕಂಪೆನಿಯ​ ಬೈಕ್​ ಮೇಲೆ ವಿಜಯ್ ಕುಳಿತಿದ್ದಾರೆ. ಬ್ಲ್ಯಾಕ್​-ಆ್ಯಂಡ್​ ವೈಟ್​ನಲ್ಲಿ ಈ ಚಿತ್ರ ಮೂಡಿ ಬಂದಿದೆ. ಈ ಫೋಟೋದಲ್ಲಿ ಸಖತ್​ ಹಾಟ್​ ಆಗಿ ಅವರು ಕಾಣಿಸಿಕೊಂಡಿದ್ದಾರೆ. ವಿಜಯ್​ ಅವರ ಕೈನಲ್ಲಿರುವ ಮಸಲ್​ ಕೂಡ ಅದ್ಭುತವಾಗಿ ಕಾಣಿಸಿದೆ.

‘ಲೈಗರ್’​ ಚಿತ್ರದಲ್ಲಿ ವಿಜಯ್​ ನಟಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಪುರಿ ಜಗನ್ನಾಥ್​ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್​ 9ರಂದು ಸಿನಿಮಾ ತೆರೆಗೆ ಬರುತ್ತಿದೆ. ಸಿಂಹ ಹಾಗೂ ಹುಲಿಯಿಂದ ಹುಟ್ಟಿದ ತಳಿಗೆ LIGER ಎಂದು ಕರೆಯಲಾಗುತ್ತದೆ. ಲಾಕ್​ಡೌನ್​ಗೂ ಮೊದಲು ‘ಲೈಗರ್’​ ಚಿತ್ರದ ಶೂಟಿಂಗ್​ಗಾಗಿ ವಿಜಯ್​ ಸಾಕಷ್ಟು ಬಾರಿ ಮುಂಬೈಗೆ ತೆರಳಿದ್ದಾರೆ. ಈ ವೇಳೆ ಅವರು ರಶ್ಮಿಕಾ ಜತೆ ಕಾಣಿಸಿಕೊಂಡಿದ್ದ ಫೋಟೋಗಳು ವೈರಲ್​ ಆಗಿದ್ದವು. ಈಗ ಲಾಕ್​ಡೌನ್​ ಪೂರ್ಣಗೊಂಡಿದ್ದರಿಂದ ವಿಜಯ್​ ಮತ್ತೆ ಮುಂಬೈಗೆ ತೆರಳಿದ್ದಾರೆ.

ಇದನ್ನೂ ಓದಿ: Vijay Devarakonda: ಮನೆಯಲ್ಲೇ ಕುಳಿತು ಓಟಿಟಿಗಾಗಿ ಮಾಸ್ಟರ್​ ಪ್ಲ್ಯಾನ್​ ಮಾಡಿದ್ರಾ ವಿಜಯ್​ ದೇವರಕೊಂಡ?

ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್​ ಮಗು ಯಥರ್ವ್​ ಯಶ್​ ಮುದ್ದಾದ ನಗು; ಇಲ್ಲಿದೆ ವಿಡಿಯೋ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada