Beast: ‘ಬೀಸ್ಟ್’ ಸೋಲಿಗೆ ನೇರವಾಗಿ ನಿರ್ದೇಶಕರನ್ನೇ ಹೊಣೆ ಮಾಡಿದ ವಿಜಯ್ ತಂದೆ; ಪುತ್ರನ ಚಿತ್ರದ ಬಗ್ಗೆ ಹೇಳಿದ್ದೇನು?

Vijay | Nelson Dilip Kumar: ವಿಶ್ವಾದ್ಯಂತ ಅಭಿಮಾನಿ ಬಳಗ ಹೊಂದಿರುವ ವಿಜಯ್ ನಟನೆಯ ಚಿತ್ರವೊಂದು ಸೋಲಲು ಕಾರಣಗಳೇನು ಎಂಬುದರ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಚಿತ್ರತಂಡ ಈ ಬಗ್ಗೆ ಮಾತನಾಡಿಲ್ಲವಾದರೂ ಪ್ರತಿಭಾವಂತ ನಿರ್ದೇಶಕರಾದ ನೆಲ್ಸನ್ ದಿಲೀಪ್​ಕುಮಾರ್ ಎಡವಿದ್ದೆಲ್ಲಿ ಎಂದು ಹಲವರು ವಿಮರ್ಶೆ ಮಾಡುತ್ತಿದ್ದಾರೆ. ಈ ಸಾಲಿಗೆ ವಿಜಯ್ ತಂದೆ, ಖ್ಯಾತ ನಿರ್ದೇಶಕ ಎಸ್​.ಎ.ಚಂದ್ರಶೇಖರ್ ಕೂಡ ಸೇರಿದ್ದಾರೆ.

Beast: ‘ಬೀಸ್ಟ್’ ಸೋಲಿಗೆ ನೇರವಾಗಿ ನಿರ್ದೇಶಕರನ್ನೇ ಹೊಣೆ ಮಾಡಿದ ವಿಜಯ್ ತಂದೆ; ಪುತ್ರನ ಚಿತ್ರದ ಬಗ್ಗೆ ಹೇಳಿದ್ದೇನು?
‘ಬೀಸ್ಟ್’ ಪೋಸ್ಟರ್, ಎಸ್​ಎ ಚಂದ್ರಶೇಖರ್
Follow us
TV9 Web
| Updated By: shivaprasad.hs

Updated on:Apr 20, 2022 | 5:47 PM

ವಿಜಯ್ ನಟನೆಯ ‘ಬೀಸ್ಟ್’ (Beast) ಚಿತ್ರ ಬಾಕ್ಸಾಫೀಸ್​ನಲ್ಲಿ ತತ್ತರಿಸಿದೆ. ‘ಕೆಜಿಎಫ್ ಚಾಪ್ಟರ್ 2’ ನೀಡುತ್ತಿರುವ ಪೈಪೋಟಿಯನ್ನು ಚಿತ್ರವು ಮೊದಲ ದಿನದಿಂದಲೇ ಚಿತ್ರಕ್ಕೆ ಎದುರಿಸಲು ಸಾಧ್ಯವಾಗಿಲ್ಲ. ತಮಿಳುನಾಡಿನಲ್ಲೇ ಇದೀಗ ‘ಬೀಸ್ಟ್’ಗಿಂತ ಯಶ್ ನಟನೆಯ ಚಿತ್ರ ಗಳಿಕೆಯಲ್ಲಿ ಮುಂದಿದೆ. ‘ಒಂದು ವೇಳೆ ‘ಬೀಸ್ಟ್’ ಕೂಡ ಏಪ್ರಿಲ್ 14ರಂದೇ ತೆರೆಕಂಡಿದ್ದರೆ ಚಿತ್ರ ಬಾಕ್ಸಾಫೀಸ್​ನಲ್ಲಿ ಮತ್ತಷ್ಟು ಸೋಲು ಕಾಣುತ್ತಿತ್ತು. ಏಪ್ರಿಲ್ 13ರಂದು ರಿಲೀಸ್ ಮಾಡಿ ನಷ್ಟದಿಂದ ಪಾರಾದರು’ ಎನ್ನುವುದು ಬಾಕ್ಸಾಫೀಸ್ ಪಂಡಿತರ ಅಭಿಪ್ರಾಯ. ಅದೇನೇ ಇದ್ದರೂ ಈಗ ವಿಶ್ವಾದ್ಯಂತ ಅಭಿಮಾನಿ ಬಳಗ ಹೊಂದಿರುವ ವಿಜಯ್ ನಟನೆಯ ಚಿತ್ರವೊಂದು ಹೀಗೆ ಸೋಲಲು ಕಾರಣಗಳೇನು ಎಂಬುದರ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಚಿತ್ರತಂಡ ಈ ಬಗ್ಗೆ ಮಾತನಾಡಿಲ್ಲವಾದರೂ ಪ್ರತಿಭಾವಂತ ನಿರ್ದೇಶಕರಾದ ನೆಲ್ಸನ್ ದಿಲೀಪ್​ಕುಮಾರ್ ಎಡವಿದ್ದೆಲ್ಲಿ ಎಂದು ಹಲವರು ವಿಮರ್ಶೆ ಮಾಡುತ್ತಿದ್ದಾರೆ. ಈ ಸಾಲಿಗೆ ವಿಜಯ್ ತಂದೆ, ಖ್ಯಾತ ನಿರ್ದೇಶಕ ಎಸ್​.ಎ.ಚಂದ್ರಶೇಖರ್ ಕೂಡ ಸೇರಿದ್ದಾರೆ. ಅವರು ಮಾತನಾಡುತ್ತಾ, ‘ಬೀಸ್ಟ್’ ಚಿತ್ರದ ಸೋಲಿಗೆ ನೇರವಾಗಿ ನಿರ್ದೇಶಕರ ‘ಹೋಮ್​ವರ್ಕ್’ ಕಡಿಮೆಯಾಗಿದ್ದೇ ಕಾರಣ ಎಂದಿದ್ದಾರೆ.

ಇತ್ತೀಚೆಗೆ ಖಾಸಗಿ ಮಾಧ್ಯಮವೊಂದರ ಜತೆ ಚಂದ್ರಶೇಖರ್ ಮಾತನಾಡಿದ್ದನ್ನು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.ದಕ್ಷಿಣ ಭಾರತದ ಸುಮಾರು 70 ಕ್ಕೂ ಹೆಚ್ಚು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಅವರು, ಹಿಂದಿ ಚಿತ್ರರಂಗದಲ್ಲೂ ಕೆಲಸ ಮಾಡಿದವರು. ಪುತ್ರನ ಬಹುನಿರೀಕ್ಷಿತ ಚಿತ್ರದ ಸೋಲಿಗೆ ಅವರು ಕಾರಣಗಳನ್ನು ಹುಡುಕುವ ಪ್ರಯತ್ನ ನಡೆಸಿದ್ದಾರೆ.

‘ಬೀಸ್ಟ್’ ಚಿತ್ರದಲ್ಲಿ ವೀರರಾಘವನ್ ಎಂಬ ದೇಶದ ಅತ್ಯುನ್ನತ ಸ್ಪೈ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ದರು. ಮಾಲ್​ನಲ್ಲಿದ್ದ ನಾಗರಿಕರನ್ನು ಭಯೋತ್ಪಾದಕರು ಒತ್ತೆಯಾಳಾಗಿ ಇರಿಸಿಕೊಂಡಿರುವಾಗ, ಅಲ್ಲಿಯೇ ಇರುವ ನಾಯಕ ಎಲ್ಲರನ್ನೂ ಹೇಗೆ ಕಾಪಾಡುತ್ತಾನೆ ಎನ್ನುವುದು ಚಿತ್ರದ ಒನ್​ಲೈನ್. ಚಿತ್ರದ ಕತೆ ಚೆನ್ನಾಗಿದ್ದರೂ ಜನರಿಗೆ ರುಚಿಸದಿರಲು ಕಾರಣ, ನಿರ್ದೇಶಕರು ಕೇವಲ ನಾಯಕನ ಸ್ಟಾರ್​​ಗಿರಿಯ ಮೇಲೆ ಗಮನಹರಿಸಿರುವುದು ಮತ್ತು ಕತೆಗೆ ಬೇಕಾದ ರಿಸರ್ಚ್ ಮಾಡದಿರುವುದು ಎಂದಿದ್ದಾರೆ ವಿಜಯ್ ತಂದೆ.

ಚಂದ್ರಶೇಖರ್ ಮಾತನಾಡುತ್ತಾ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಹೇಗೆ ಪ್ರತಿಭಾವಂತ ನಿರ್ದೇಶಕರು ಸ್ಟಾರ್​ಗಳ ಸಿನಿಮಾ ನಿರ್ದೇಶಿಸುವ ಅವಕಾಶ ಸಿಕ್ಕಾಗ ಎಡವುತ್ತಾರೆ ಎಂಬುದರ ಬಗ್ಗೆಯೂ ಅವರು ಹೇಳಿದ್ದಾರೆ. ‘‘ಯುವ ನಿರ್ದೇಶಕರು ತಮ್ಮ ಮೊದಲ ಚಿತ್ರವನ್ನು ಅದ್ಭುತವಾಗಿ ತಯಾರಿಸುತ್ತಾರೆ. ಎರಡನೇ ಚಿತ್ರದಲ್ಲೂ ಯಶಸ್ವಿಯಾಗುತ್ತಾರೆ. ಆದರೆ ಸೂಪರ್​ಸ್ಟಾರ್​ಗಳನ್ನು ನಿರ್ದೇಶಿಸುವ ಅವಕಾಶ ಸಿಕ್ಕಾಗ ನಮಗೆ ಸ್ಟಾರ್ ನಾಯಕರ ಡೇಟ್ಸ್ ಸಿಕ್ಕಿದೆ.. ನಮಗೆ ಬೇಕಾದ ಹಾಗೆ ಚಿತ್ರ ಮಾಡಬಹುದು ಎಂದುಕೊಳ್ಳುತ್ತಾರೆ’’

‘‘ಸೂಪರ್​ಸ್ಟಾರ್​ಗಳಿಗೆ ಈಗಾಗಲೇ ದೊಡ್ಡ ಅಭಿಮಾನಿ ಬಳಗಗಳಿರುತ್ತವೆ. ಹೇಗೆ ಮಾಡಿದರೂ ಚಿತ್ರ ಓಡುತ್ತದೆ ಎಂಬ ಭಾವನೆ ಇರುತ್ತದೆ. ಹೀಗಾಗಿ ಹಾಡುಗಳು, ಫೈಟ್​ಗಳ ಮೂಲಕ ಚಿತ್ರ ತಯಾರಿಸುತ್ತಾರೆ. ಚಿತ್ರಕತೆಯ ಬಗ್ಗೆ ಗಮನ ಕೊಡುವುದಿಲ್ಲ. ಸ್ಟಾರ್ ಇರುವಾಗ ಚಿತ್ರಕತೆ ಬೇಕಿಲ್ಲ ಎಂದು ನಿರ್ದೇಶಕರು ಯೋಚಿಸಿರಬೇಕು’’ ಎಂದಿದ್ಧಾರೆ ಚಂದ್ರಶೇಖರ್.

‘ಬೀಸ್ಟ್’ ಚಿತ್ರದಲ್ಲಿ ನಿರ್ದೇಶಕರ ತಪ್ಪುಗಳನ್ನು ನೇರವಾಗಿಯೇ ಹೇಳಿರುವ ವಿಜಯ್ ತಂದೆ, ‘‘ಚಿತ್ರದಲ್ಲಿ ರಾ ಅಧಿಕಾರಿಗಳು, ಐಸಿಸ್ ಉಗ್ರರ ಬಗ್ಗೆ ಹೇಳಲಾಗಿದೆ. ಆದರೆ ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ನಿರ್ದೇಶಕರು ಬೇಕಾದ ಹೋಮ್​ವರ್ಕ್ ಹಾಗೂ ರಿಸರ್ಚ್ ಮಾಡಿಯೇ ಇಲ್ಲ. ಸ್ಟಾರ್ ಹೀರೋ ಡೇಟ್ಸ್ ಸಿಕ್ಕಿದ ತಕ್ಷಣ ಚಿತ್ರೀಕರಣಕ್ಕೆ ಮುನ್ನುಗ್ಗಬಾರದು. ಒಳ್ಳೆಯ ಚಿತ್ರಕತೆ ಮಾತ್ರ ಪ್ರೇಕ್ಷಕರನ್ನು ಹಿಡಿದಿಡಬಲ್ಲದು. ಅದು ಬೀಸ್ಟ್​​ನಲ್ಲಿಲ್ಲ’’ ಎಂದಿದ್ದಾರೆ.

ಬಾಕ್ಸಾಫೀಸ್​ನಲ್ಲಿ ಗಳಿಕೆ ಉತ್ತಮವಾಗಿರದಿದ್ದರೂ ಮೊದಲ ದಿನದ ಕಲೆಕ್ಷನ್ ಉತ್ತಮವಾಗಿದ್ದ ಕಾರಣ, ‘ಬೀಸ್ಟ್’ 200 ಕೋಟಿ ಕ್ಲಬ್ ಸೇರಿದೆ. ಈ ಸಾಧನೆ ಮಾಡಿದ ವಿಜಯ್ ನಟನೆಯ 5ನೇ ಚಿತ್ರವಿದು. ಹಿಂದಿ, ತೆಲುಗು, ಮಲಯಾಳಂಗೆ ಡಬ್ ಆಗಿ ‘ಬೀಸ್ಟ್’ ರಿಲೀಸ್ ಆಗಿತ್ತು.

ಇದನ್ನೂ ಓದಿ: ‘ಬೀಸ್ಟ್​’ ಚೆನ್ನಾಗಿಲ್ಲ ಎಂಬ ಹತಾಶೆಯಿಂದ​ ಥಿಯೇಟರ್​ ಪರದೆಗೆ ಬೆಂಕಿ ಹಚ್ಚಿದ ವಿಜಯ್​ ಫ್ಯಾನ್ಸ್​? ವಿಡಿಯೋ ವೈರಲ್​

ಯಾವ ತಾರೆಯೊಂದಿಗೆ ಬಾಲಿವುಡ್​ ಪದಾರ್ಪಣೆ ಮಾಡಲು ಇಚ್ಛಿಸುತ್ತೀರಿ ಎಂಬ ಪ್ರಶ್ನೆಗೆ ಯಶ್ ಉತ್ತರ ಏನಿತ್ತು? ಹಳೆಯ ವಿಡಿಯೋ ಮತ್ತೆ ವೈರಲ್

Published On - 5:41 pm, Wed, 20 April 22