Vir Das: ಭಾರತದ ಕುರಿತು ವಿವಾದಿತ ಹೇಳಿಕೆ ನೀಡಿದ್ದ ಕಾಮಿಡಿಯನ್ ವೀರ್ ದಾಸ್ ವಿರುದ್ಧ ದೂರು ದಾಖಲು

ಕಾಮಿಡಿಯನ್ ವೀರ್ ದಾಸ್ ವೇದಿಕೆಯಲ್ಲಿ ಹೇಳಿದ್ದ ಸ್ವಗತವೊಂದು ತೀವ್ರ ವಿವಾದ ಸೃಷ್ಟಿಸಿದೆ. ಈ ಕುರಿತಂತೆ ವೀರ್ ದಾಸ್ ಪ್ರತಿಕ್ರಿಯೆ ನೀಡಿದ್ದಾರೆ.

Vir Das: ಭಾರತದ ಕುರಿತು ವಿವಾದಿತ ಹೇಳಿಕೆ ನೀಡಿದ್ದ ಕಾಮಿಡಿಯನ್ ವೀರ್ ದಾಸ್ ವಿರುದ್ಧ ದೂರು ದಾಖಲು
ವೀರ್ ದಾಸ್
Follow us
TV9 Web
| Updated By: shivaprasad.hs

Updated on:Nov 17, 2021 | 2:37 PM

ಕಾಮಿಡಿಯನ್ ವೀರ್‌ ದಾಸ್ ಕೆನಡಿ ಸೆಂಟರ್​ನಲ್ಲಿ ನೀಡಿದ್ದ ‘ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ’ ಎಂಬ ಸ್ವಗತ ತೀವ್ರ ವಿವಾದ ಸೃಷ್ಟಿಸಿದೆ. ಆ ಸ್ವಗತದಲ್ಲಿ ವೀರ್ ದಾಸ್ ಮಾತನಾಡುತ್ತಾ, ‘‘ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ. ಭಾರತದಲ್ಲಿ ಹಗಲು ವೇಳೆ ಸ್ತ್ರೀಯರನ್ನು ಪೂಜಿಸುತ್ತೇವೆ, ರಾತ್ರಿ ವೇಳೆ ಸ್ತ್ರೀಯರನ್ನು ಗ್ಯಾಂಗ್‌ರೇಪ್ ಮಾಡುತ್ತೇವೆ. ಭಾರತದಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ 900 ಇರುತ್ತೆ, ಆದರೂ ರಾತ್ರಿ ಆಕಾಶದಲ್ಲಿ ನಕ್ಷತ್ರ ನೋಡಲು ಬಯಸುತ್ತೇವೆ. ನಾವು ಪರಸ್ಪರರನ್ನು ಆಲಂಗಿಸುತ್ತೇವೆ, ಆದರೆ ಮಾಸ್ಕ್ ಧರಿಸಲ್ಲ’’ ಎಂದು ಹೇಳಿದ್ದರು. ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ‘ಭಾರತ, ಹಿಂದುತ್ವವನ್ನು ವೀರ್ ದಾಸ್ ಅಪಮಾನ ಮಾಡಿದ್ದಾರೆ. ಆದ್ದರಿಂದ ಅವರು ಕ್ಷಮೆ ಕೇಳಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಕೇಳಿಬಂದಿದೆ. ಈ ಹೇಳಿಕೆಯ ಕುರಿತಂತೆ ವೀರ್ ದಾಸ್ ಪ್ರತಿಕ್ರಿಯಿಸಿ, ಸ್ಪಷ್ಟನೆ ನೀಡಿದ್ದಾರೆ.

ವೀರ್ ದಾಸ್ ಹೇಳಿಕೆಯ ವಿರುದ್ಧ ಮುಂಬೈನಲ್ಲಿ ನಿನ್ನೆ (ನವೆಂಬರ್ 16) ದೂರು ದಾಖಲಾಗಿದೆ. ಮಹಾರಾಷ್ಟ್ರದ ಪಾಲಘಾರ್ ಜಿಲ್ಲೆ ಬಿಜೆಪಿಯ ಕಾನೂನು ಸಲಹೆಗಾರ ಹಾಗೂ ಮುಂಬೈ ಹೈಕೋರ್ಟ್ ವಕೀಲ ಆಶುತೋಷ್ ದುಬೆ ದೂರು ನೀಡಿದ್ದಾರೆ. ವೀರ್ ಮಂಗಳವಾರ, ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದ್ದು, ತಮ್ಮ ಉದ್ದೇಶ ದೇಶವನ್ನು ಅಪಮಾನಿಸುವುದು ಆಗಿರಲಿಲ್ಲ ಎಂದಿದ್ದಾರೆ. ಸದ್ಯ ಅಮೇರಿಕಾದಲ್ಲಿರುವ ಅವರು, ವಾಷಿಂಗ್ಟನ್ ಡಿಸಿಯ ಜಾನ್ ಎಫ್​​ ಕೆನಡಿ ಸೆಂಟರ್​ನಲ್ಲಿ ಮಾತನಾಡುವಾಗ ಹೇಳಿದ ಸ್ವಗತ ವಿವಾದ ಸೃಷ್ಟಿಸಿತ್ತು.

ವೀರ್ ದಾಸ್ ತಮ್ಮ ಮಾತಿನಲ್ಲಿ ಭಾರತದಲ್ಲಿ ಸದ್ಯ ಚರ್ಚೆಯಲ್ಲಿರುವ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ಕೊವಿಡ್ 19, ರೈತರ ಪ್ರತಿಭಟನೆ, ಸಾಮೂಹಿಕ ಅತ್ಯಾಚಾರ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ವಿಡಂಬನೆಯ ರೂಪದಲ್ಲಿ ‘ಎರಡು ರೀತಿಯ ಭಾರತ’ ಎಂದು ಸ್ವಗತ ಪ್ರಸ್ತುತಪಡಿಸಿದ್ದರು. ಅದರಲ್ಲಿನ ಅವರ ಹೇಳಿಕೆಯಾದ ‘ಭಾರತದಲ್ಲಿ ಹಗಲು ವೇಳೆ ಸ್ತ್ರೀಯರನ್ನು ಪೂಜಿಸುತ್ತೇವೆ, ರಾತ್ರಿ ವೇಳೆ ಸ್ತ್ರೀಯರನ್ನು ಗ್ಯಾಂಗ್‌ರೇಪ್ ಮಾಡುತ್ತೇವೆ’ ಎಂಬುದರ ಕುರಿತಂತೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ವೀರ್ ದಾಸ್ ನೀಡಿರುವ ಸ್ಪಷ್ಟನೆ ಏನು? ತಮ್ಮ ಹೇಳಿಕೆಯ ಕುರಿತಂತೆ ನೀಡಿರುವ ಸ್ಪಷ್ಟನೆಯಲ್ಲಿ ವೀರ್ ದಾಸ್, ಪ್ರತಿ ದೇಶಕ್ಕೂ ಕತ್ತಲು ಹಾಗೂ ಬೆಳಕಿನ ಎರಡು ಆಯಾಮಗಳಿರುತ್ತವೆ. ಒಳ್ಳೆಯದು ಹಾಗೂ ಕೆಟ್ಟದ್ದು ಇರುತ್ತದೆ. ಅದೇನು ರಹಸ್ಯವಾದ ವಿಷಯವಲ್ಲ. ಆ ಹೇಳಿಕೆಯಲ್ಲಿ ನಾವು ಯಾವುದಕ್ಕೆ ಶ್ರೇಷ್ಠರು ಎಂಬುದನ್ನು ಹೇಳುತ್ತಾ, ಎಲ್ಲಿ ಸುಧಾರಣೆ ಕಾಣಬೇಕಾಗಿದೆ ಎಂಬುದನ್ನು ವಿಡಂಬನೆಯ ಮೂಲಕ ತಿಳಿಸಿದ್ದೆ. ವಿಡಿಯೋದ ಕೊನೆಯಲ್ಲಿ ಎಲ್ಲರೂ ಪ್ರೀತಿಸುವ, ಹೊಗಳುವ, ಹೆಮ್ಮೆ ಪಡುವ ದೇಶದ ಪರಿಕಲ್ಪನೆಯ ಕುರಿತು ಹೇಳಲಾಗಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ವಿಡಿಯೋದ ತುಣುಕುಗಳನ್ನು ಎಡಿಟ್ ಮಾಡಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ವೀರ್ ದಾಸ್ ಹೇಳಿದ್ದಾರೆ. ಎಡಿಟೆಡ್ ವಿಡಿಯೋ ತುಣುಕಗಳಿಂದ ಯಾರೂ ಅಪಾರ್ಥ ಕಲ್ಪಿಸಬೇಡಿ. ಭಾರತಕ್ಕೆ ಎಲ್ಲರೂ ಹೆಮ್ಮೆಯಿಂದ ಹೊಗಳುತ್ತಾರೆಯೇ ಹೊರತು ದ್ವೇಷಕ್ಕಾಗಿಯಲ್ಲ. ನಾನು ಕೂಡ ದೇಶದ ಹೆಮ್ಮೆಯನ್ನು ಪ್ರಪಂಚದ ಉದ್ದಗಲಕ್ಕೆ ಹೊತ್ತೊಯ್ಯುತ್ತೇನೆಯೇ ಹೊರತು ದ್ವೇಷವನ್ನಲ್ಲ. ನಾನು ಎಲ್ಲರಲ್ಲೂ ಕೋರುವುದು ಒಂದೇ. ಬೆಳಕಿನ ಕಡೆಗೆ ಗಮನ ಹರಿಸಿ. ನಮ್ಮ ಶ್ರೇಷ್ಠತೆಯನ್ನು ನೆನಪಿಡಿ, ಪ್ರೀತಿಯನ್ನು ಹಂಚಿ ಎಂದು ವೀರ್ ದಾಸ್ ತಮ್ಮ ಪ್ರತಿಕ್ರಿಯೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:

ವಿಶಾಲ್​​ರನ್ನು ನೋಡಿದರೆ ನನ್ನ ತಮ್ಮನನ್ನು ನೋಡಿದ ಹಾಗಾಗುತ್ತದೆ, ಅದನ್ನು ಅಪ್ಪು ಬಳಿಯೂ ಹೇಳಿದ್ದೆ: ಶಿವರಾಜ್​ ಕುಮಾರ್

ಅಪ್ಪು ಸಮಾಧಿ ಬಳಿ ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾದ ಪೋಸ್ಟರ್ ಲಾಂಚ್

Published On - 1:26 pm, Wed, 17 November 21

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು