‘ಕಲ್ಕಿ 2898 ಎಡಿ’ಯಲ್ಲಿ ಕೃಷ್ಣನ ಮುಖವನ್ನೇಕೆ ತೋರಿಸಿಲ್ಲ: ನಿರ್ದೇಶಕ ಕೊಟ್ಟರು ಕಾರಣ

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮಹಾಭಾರತದ ಅರ್ಜುನ, ಕರ್ಣ, ಅಶ್ವತ್ಥಾಮ, ಕೃಷ್ಣನ ಪಾತ್ರಗಳನ್ನು ತೋರಿಸಲಾಗಿದೆ. ಆದರೆ ಕೃಷ್ಣನ ಮುಖವನ್ನು ಮಾತ್ರ ತೋರಿಸಿಲ್ಲ. ಅದಕ್ಕೆ ಕಾರಣವೇನು? ನಿರ್ದೇಶಕ ನಾಗ್ ಅಶ್ವಿನ್ ಉತ್ತರ ನೀಡಿದ್ದಾರೆ.

‘ಕಲ್ಕಿ 2898 ಎಡಿ’ಯಲ್ಲಿ ಕೃಷ್ಣನ ಮುಖವನ್ನೇಕೆ ತೋರಿಸಿಲ್ಲ: ನಿರ್ದೇಶಕ ಕೊಟ್ಟರು ಕಾರಣ
Follow us
|

Updated on: Jul 05, 2024 | 4:19 PM

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೆಲವೇ ದಿನಗಳಲ್ಲಿ ಈ ಸಿನಿಮಾ 1000 ಕೋಟಿ ಕ್ಲಬ್ ಸಹ ಸೇರಲಿದೆ. ನಾಗ್ ಅಶ್ವಿನ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ಕುರುಕ್ಷೇತ್ರ ಯುದ್ಧದ ಅಂತ್ಯದೊಂದಿಗೆ ಆರಂಭವಾಗುವ ಈ ಸಿನಿಮಾ ಕಲಿಯುಗದ ಅಂತ್ಯದಲ್ಲಿ ಮುಗಿಯುತ್ತದೆ. ಸಿನಿಮಾನಲ್ಲಿ ಮಹಾಭಾರತದ ಕೆಲವು ಪಾತ್ರಗಳನ್ನು ಸಹ ಬಳಸಿಕೊಳ್ಳಲಾಗಿದೆ. ಅರ್ಜುನ, ಕರ್ಣ, ಅಶ್ವತ್ಥಾಮ, ಕೃಷ್ಣನ ಪಾತ್ರಗಳನ್ನು ತೋರಿಸಲಾಗಿದೆ. ಆದರೆ ಕೃಷ್ಣನ ಮುಖವನ್ನು ಮಾತ್ರ ತೋರಿಸಿಲ್ಲ. ಏಕೆ ಕೃಷ್ಣನ ಮುಖ ತೋರಿಸಿಲ್ಲ ಎಂಬುದರ ಬಗ್ಗೆ ನಾಗ್ ಅಶ್ವಿನ್ ಮಾತನಾಡಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾದ ಆರಂಭದಲ್ಲಿಯೇ ಕೃಷ್ಣನನ್ನು ತೋರಿಸಲಾಗುತ್ತದೆ. ಆದರೆ ಕೃಷ್ಣ ಮುಖ ಕಾಣುವುದಿಲ್ಲ. ಅದಾದ ಬಳಿಕ ಇನ್ನೂ ಎರಡು ದೃಶ್ಯಗಳಲ್ಲಿ ಕೃಷ್ಣನ ಪಾತ್ರ ಬರುತ್ತದೆ. ಆದರೆ ಆಗಲೂ ಸಹ ಕೃಷ್ಣನ ಮುಖವನ್ನು ತೋರಿಸುವುದಿಲ್ಲ. ಕೃಷ್ಣನ ಮುಖ ಪ್ರೇಕ್ಷಕರಿಗೆ ಎದುರಾಗಿಯೇ ಇರುತ್ತದೆಯಾದರೂ ಹಿಂದಿನಿಂದ ಬೆಳಕು ಮೂಡಿಸಿ ಮುಖ ಕಾಣದಂತೆ ಮಾಡಲಾಗಿದೆ. ಆದರೆ ಕೃಷ್ಣನ ಪಾತ್ರಧಾರಿಯ ಹಾವ-ಭಾವ, ದೇಹಚಲನೆ, ಧ್ವನಿಯಿಂದಲೇ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ.

ಕೃಷ್ಣನ ಮುಖವನ್ನು ಏಕೆ ತೋರಿಸಿಲ್ಲ ಎಂಬ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ಇತ್ತೀಚೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಕೃಷ್ಣನ ಮುಖ ತೋರಿಸದೆ ಕೇವಲ ನೆರಳಿನ ಮಾದರಿ ಅಥವಾ ಬಿಂಬದ ಮಾದರಿ ತೋರಿಸುವ ಯೋಚನೆ ಮೊದಲಿನಿಂದಲೂ ನಮಗೆ ಇತ್ತು. ಮುಖ ತೋರಿಸಿಬಿಟ್ಟಿದ್ದರೆ ಅದೊಂದು ಪಾತ್ರ ಆಗಿಬಿಡುತ್ತಿತ್ತು, ಅಥವಾ ಆ ಮುಖದ ವ್ಯಕ್ತಿ ಎಂದಾಗುತ್ತಿತ್ತು. ಆದರೆ ನಮಗೆ ಕೃಷ್ಣನನ್ನು ಒಬ್ಬ ಅಸಾಮಾನ್ಯ, ನಿಗೂಢ ವ್ಯಕ್ತಿಯಾಗಿಯೇ ಇಡಬೇಕು ಹಾಗೂ ಆತನನ್ನು ಕಪ್ಪು ವರ್ಣದವನನ್ನಾಗಿ ತೋರಿಸಬೇಕಿತ್ತು. ಹಾಗಾಗಿ ಕೃಷ್ಣನ ಮುಖವನ್ನು ತೋರಿಸಿಲ್ಲ’ ಎಂದಿದ್ದಾರೆ ನಾಗ್ ಅಶ್ವಿನ್.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಬಗ್ಗೆ ನಿರ್ದೇಶಕ ನಾಗ್ ಅಶ್ವಿನ್ ಮಾತು

‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲಿಯೂ ಸಹ ಕೃಷ್ಣನ ಪಾತ್ರ ಇರಲಿದ್ದು, ಆ ಭಾಗದಲ್ಲಿಯೂ ಸಹ ಕೃಷ್ಣನ ಮುಖವನ್ನು ತೋರಿಸುವುದಿಲ್ಲ ಎಂದಿದ್ದಾರೆ ನಾಗ್ ಅಶ್ವಿನ್. ಅಂದಹಾಗೆ ಕೃಷ್ಣನ ಪಾತ್ರದಲ್ಲಿ ಮಿಂಚಿರುವುದು ತಮಿಳು ಮೂಲದ ನಟ ಕೃಷ್ಣ ಕುಮಾರ್. ‘ಸೂರರೈ ಪೊಟ್ರು’ ಸೇರಿದಂತೆ ಇನ್ನೂ ಕೆಲವು ತಮಿಳು ಸಿನಿಮಾಗಳಲ್ಲಿ ಕೃಷ್ಣ ಕುಮಾರ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಪಾತ್ರದಲ್ಲಿ ಅವರ ಮುಖ ಕಾಣದೇ ಹೋದರೂ ಸಹ ಅವರ ದೇಹದ ಕಟ್ಟುಮಸ್ತು, ಆಂಗಿಕ ಅಭಿನಯ, ನಿಲ್ಲುವ, ನಡೆಯುವ ಭಂಗಿಗಳಿಂದ ಗಮನ ಸೆಳೆದಿದ್ದಾರೆ. ಪಾತ್ರಕ್ಕೆ ಧ್ವನಿಯನ್ನು ಜನಪ್ರಿಯ ಡಬ್ಬಿಂಗ್ ಕಲಾವಿದ ಅರ್ಜುನ್ ದಾಸ್ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮಹಾರಾಷ್ಟ್ರದಲ್ಲೂ ಭಾರೀ ಮಳೆ, ಬಂದರು ನಗರ ರತ್ನಗಿರಿ ಸಂಪೂರ್ಣವಾಗಿ ಜಲಾವೃತ
ಮಹಾರಾಷ್ಟ್ರದಲ್ಲೂ ಭಾರೀ ಮಳೆ, ಬಂದರು ನಗರ ರತ್ನಗಿರಿ ಸಂಪೂರ್ಣವಾಗಿ ಜಲಾವೃತ
ಮಾಧ್ಯಮಗಳಿಗಾಗಿ ತನಿಖೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಲಾಗಲ್ಲ: ಪರಮೇಶ್ವರ್
ಮಾಧ್ಯಮಗಳಿಗಾಗಿ ತನಿಖೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಲಾಗಲ್ಲ: ಪರಮೇಶ್ವರ್
ಬೆಳಗಾವಿ ಬಳಿ ಘಾಟ್ ರಸ್ತೆಯಲ್ಲಿ ಕುಡುಕನ ಹುಚ್ಚಾಟ, ವಾಹನ ಸವಾರಿಗೆ ಸಮಸ್ಯೆ
ಬೆಳಗಾವಿ ಬಳಿ ಘಾಟ್ ರಸ್ತೆಯಲ್ಲಿ ಕುಡುಕನ ಹುಚ್ಚಾಟ, ವಾಹನ ಸವಾರಿಗೆ ಸಮಸ್ಯೆ
ಅವೈಜ್ಞಾನಿಕ ಕಾಮಗಾರಿಯಿಂದ ಅಡಕೆ ತೋಟಗಳಿಗೆ ನೀರು ನುಗ್ಗಿ ಬೆಳೆಗಾರರಿಗೆ ನಷ್ಟ
ಅವೈಜ್ಞಾನಿಕ ಕಾಮಗಾರಿಯಿಂದ ಅಡಕೆ ತೋಟಗಳಿಗೆ ನೀರು ನುಗ್ಗಿ ಬೆಳೆಗಾರರಿಗೆ ನಷ್ಟ
ಗೋವಾದ ಪಾಲಿ ಜಲಪಾತದಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರ ರಕ್ಷಣೆ
ಗೋವಾದ ಪಾಲಿ ಜಲಪಾತದಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರ ರಕ್ಷಣೆ
ಬಿಜೆಪಿ ಕೋಮುವಾದಿ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ
ಬಿಜೆಪಿ ಕೋಮುವಾದಿ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಮರಿ ಆನೆ ತುಂಟಾಟ ನೋಡಿ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ; ಮರಿ ಆನೆ ತುಂಟಾಟ ನೋಡಿ
ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?
ಅಬ್ಬಬ್ಬಾ.. 25 ದಿನಕ್ಕೆ ದರ್ಶನ್ ಕಳೆದುಕೊಂಡ ತೂಕ ಇಷ್ಟೊಂದಾ?
ಮನೆಯಲ್ಲಿ ಹನುಮನ ಫೋಟೋ ಇರಲೇಬೇಕು ಯಾಕೆ ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ಹನುಮನ ಫೋಟೋ ಇರಲೇಬೇಕು ಯಾಕೆ ಗೊತ್ತಾ? ವಿಡಿಯೋ ನೋಡಿ
ಈ ರಾಶಿಯ ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ
ಈ ರಾಶಿಯ ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ