ವಿಶ್ವದ ದುಬಾರಿ ವೆಬ್​ ಸೀರಿಸ್​; ಇದಕ್ಕೆ ಖರ್ಚಾಗಿದ್ದು 8,300 ಕೋಟಿ ರೂಪಾಯಿ  

‘ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್’ ವೆಬ್ ಸರಣಿಯು 8300 ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ವಿಶ್ವದ ಅತ್ಯಂತ ದುಬಾರಿ ವೆಬ್ ಸರಣಿಯಾಗಿದೆ. ಪ್ರತಿಯೊಂದು ಎಪಿಸೋಡ್‌ನ ಬಜೆಟ್ ಭಾರತೀಯ ಚಿತ್ರರಂಗದ ಅನೇಕ ಚಲನಚಿತ್ರಗಳ ಬಜೆಟ್‌ಗಿಂತ ಹೆಚ್ಚಾಗಿದೆ. ಉದಾಹರಣೆಗೆ, 500 ಕೋಟಿ ರೂಪಾಯಿ ಬಜೆಟ್‌ನ ‘ಕಲ್ಕಿ 2898 ಎಡಿ’ ಚಿತ್ರವು ಇದರ ಒಂದು ಎಪಿಸೋಡ್‌ನ ಬಜೆಟ್‌ಗೆ ಸಮಾನವಾಗಿದೆ.

ವಿಶ್ವದ ದುಬಾರಿ ವೆಬ್​ ಸೀರಿಸ್​; ಇದಕ್ಕೆ ಖರ್ಚಾಗಿದ್ದು 8,300 ಕೋಟಿ ರೂಪಾಯಿ  
ಲಾರ್ಡ್ ಆಫ್ ರಿಂಗ್ಸ್
Follow us
| Updated By: ರಾಜೇಶ್ ದುಗ್ಗುಮನೆ

Updated on: Oct 26, 2024 | 6:05 PM

ಇತ್ತೀಚೆಗೆ ಸಿನಿಮಾಗಳ ಜೊತೆ ವೆಬ್ ಸೀರಿಸ್​ಗೂ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ. ಈಗಾಗಲೇ ಇಂಗ್ಲಿಷ್​​ನಲ್ಲಿ ಸಾಕಷ್ಟು ವೆಬ್​ ಸೀರಿಸ್​ಗಳು ಬಂದಿವೆ. ಭಾರತಕ್ಕಿಂತ ಮೊದಲು ಈ ಟ್ರೆಂಡ್​ನ ಆರಂಭಿಸಿದ್ದು ಅವರೇ ಎನ್ನಬಹುದು. ಈ ಸೀರಿಸ್​ಗಳನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಗುತ್ತದೆ. ಇದಕ್ಕಾಗಿ ಸಾಕಷ್ಟು ಹಣವನ್ನು ಸುರಿಯಲಾಗುತ್ತದೆ. ವಿಶ್ವದ ದುಬಾರಿ ಸೀರಿಸ್ ಯಾವುದು ಗೊತ್ತೇ? ಅದರ ಹೆಸರು ‘ದಿ ಲಾರ್ಡ್​ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್’. ಇದಕ್ಕೆ ಖರ್ಚಾಗಿದ್ದು 8,300 ಕೋಟಿ ರೂಪಾಯಿ.

‘ದಿ ಲಾರ್ಡ್​ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್’ನ ಸಿದ್ಧಪಡಿಸಲು ಬರೋಬ್ಬರಿ 3800 ಕೋಟಿ ರೂಪಾಯಿ ಖರ್ಚಾಗಿದೆ. ಕೇವಲ 8 ಎಪಿಸೋಡ್​ಗೆ ಇಷ್ಟು ಹಣ ಹೂಡಿಕೆ ಆಗಿದೆ. ಅಂದರೆ ಒಂದು ಎಪಿಸೋಡ್​ ನಿರ್ಮಾಣಕ್ಕೆ ತಗುಲಿದ್ದು 480 ಕೋಟಿ ರೂಪಾಯಿ! ‘ಸ್ಟಾರ್ ವಾರ್ಸ್​: ದಿ ಫೋರ್ಸ್​ ಅವಾಕನ್ಸ್​’ ಸೀರಿಸ್ ನಿರ್ಮಾಣಕ್ಕೆ ಸುಮಾರು 3700 ಕೋಟಿ ರೂಪಾಯಿ ಖರ್ಚಾಗಿದೆ.

‘ದಿ ಲಾರ್ಡ್​ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್’ ಇದು ‘ಲಾರ್ಡ್​  ಆಫ್ ದಿ ರಿಂಗ್ಸ್’ ಸಿನಿಮಾದ ಸ್ಪಿನ್ ಆಫ್ ರೀತಿಯಲ್ಲಿ ಮೂಡಿ ಬಂದಿದೆ. ಹೀಗಾಗಿ, ಇದಕ್ಕಾಗಿ ಹಕ್ಕು ಪಡೆಯಬೇಕಿತ್ತು. ಅದಕ್ಕೂ ಸಾಕಷ್ಟು ಹಣ ಖರ್ಚಾಗಿದೆ. ಇದರ ಪ್ರಮೋಷ್​ನಗೂ ಸಾಕಷ್ಟು ಹಣ ಸುರಿಯಲಾಗಿದೆ. ಈ ಸೀರಿಸ್​ಗೆ ಒಟ್ಟಾರೆ ಖರ್ಚಾಗಿರೋದು 8,300 ಕೋಟಿ ರೂಪಾಯಿ.

ಇದನ್ನು ಅನೇಕರು ಭಾರತದ ಸಿನಿಮಾಗಳ ಬಜೆಟ್​ಗೆ ಹೋಲಿಕೆ ಮಾಡುತ್ತಿದ್ದಾರೆ. ಪ್ರತಿ ಎಪಿಸೋಡ್​ಗೆ ಖರ್ಚು ಮಾಡಿದಷ್ಟು ಭಾರತದ ಸಿನಿಮಾಗಳಿಗೆ ಖರ್ಚು ಮಾಡಲು ಸಾಧ್ಯವಾಗಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ

ಇದನ್ನೂ ಓದಿ: ಹಿಂದಿ ಸಿನಿಮಾ ನೋಡಿ ಜನಪ್ರಿಯ ಕೋರಿಯನ್ ಸೀರಿಸ್ ಮಾಡಿದ್ರಾ? ಕೇಳಿಬಂತು ಆರೋಪ

ಇತ್ತೀಚೆಗೆ ರಿಲೀಸ್ ಆದ ‘ಕಲ್ಕಿ 2898 ಎಡಿ’ ಸಿನಿಮಾ ಈ ವರ್ಷ ರಿಲೀಸ್ ಆಯಿತು. ಈ ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ. ಅಂದರೆ, ‘ದಿ ಲಾರ್ಡ್​ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್’  ಸೀರಿಸ್​ನ ಒಂದು ಎಪಿಸೋಡ್​ಗೆ ಸಮ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್
ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸೋಮಶೇಖರ್​ರನ್ನೇ ಕೇಳಬೇಕು: ಸಚಿವ
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸೋಮಶೇಖರ್​ರನ್ನೇ ಕೇಳಬೇಕು: ಸಚಿವ
ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಖಾದ್ರಿಗೆ ಸಿಎಂ ತಾಕೀತು
ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಖಾದ್ರಿಗೆ ಸಿಎಂ ತಾಕೀತು
ಪಹಣಿಯಲ್ಲಿ ವಕ್ಫ್​​ ಹೆಸರು: ವಿಜಯಪುರ ರೈತರ ಪ್ರತಿಭಟನೆ
ಪಹಣಿಯಲ್ಲಿ ವಕ್ಫ್​​ ಹೆಸರು: ವಿಜಯಪುರ ರೈತರ ಪ್ರತಿಭಟನೆ
ಮುಚ್ಚಿದ ಹೋಟೆಲ್​​ಗೆ ರಾತ್ರಿ ನುಗ್ಗಿದ ಹೆಲ್ಮೆಟ್​ಧಾರಿ ಕಳ್ಳ ಚಿಲ್ರೆ ಕದ್ದ
ಮುಚ್ಚಿದ ಹೋಟೆಲ್​​ಗೆ ರಾತ್ರಿ ನುಗ್ಗಿದ ಹೆಲ್ಮೆಟ್​ಧಾರಿ ಕಳ್ಳ ಚಿಲ್ರೆ ಕದ್ದ
ನಸುಕಿನ ಜಾವ 4ಗಂಟೆಯಿಂದ ರಾತ್ರಿ 11 ಗಂಟೆಯರೆಗೆ ಭಕ್ತರ ದರ್ಶನಕ್ಕೆ ಅವಕಾಶ
ನಸುಕಿನ ಜಾವ 4ಗಂಟೆಯಿಂದ ರಾತ್ರಿ 11 ಗಂಟೆಯರೆಗೆ ಭಕ್ತರ ದರ್ಶನಕ್ಕೆ ಅವಕಾಶ
ಹೆಚ್​ಡಿ ದೇವೇಗೌಡ ಮನೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ
ಹೆಚ್​ಡಿ ದೇವೇಗೌಡ ಮನೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ