AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ರನ್​​​ಟೈಮ್: ಒಂದು ಕಲ್ಲಿಗೆ ‘ಎರಡು’ ಹಕ್ಕಿ ಹೊಡೆದರೇ ಯಶ್?

Toxic movie: ‘ಟಾಕ್ಸಿಕ್’ ಚಿತ್ರತಂಡ, ಸಿನಿಮಾದ ಬಗ್ಗೆ ಅಧಿಕೃತವಾಗಿ ಹೆಚ್ಚಿನ ಮಾಹಿತಿಗಳನ್ನು ಬಿಟ್ಟುಕೊಡುತ್ತಿಲ್ಲ ಇದೇ ಕಾರಣಕ್ಕೆ ಸಿನಿಮಾದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಸಿನಿಮಾದ ರನ್​​ಟೈಮ್ ಜೊತೆಗೆ ಮತ್ತೊಂದು ಸುದ್ದಿಯೂ ಸಹ ಸಖತ್ ವೈರಲ್ ಆಗುತ್ತಿದೆ.

‘ಟಾಕ್ಸಿಕ್’ ರನ್​​​ಟೈಮ್: ಒಂದು ಕಲ್ಲಿಗೆ ‘ಎರಡು’ ಹಕ್ಕಿ ಹೊಡೆದರೇ ಯಶ್?
Toxic Movie
ಮಂಜುನಾಥ ಸಿ.
|

Updated on: Feb 26, 2026 | 9:01 AM

Share

ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಮೂರು ವಾರಗಳಷ್ಟೆ ಬಾಕಿ ಇದೆ. ಸಿನಿಮಾದ ಪ್ರೀ ರಿಲೀಸ್ ಸೇಲ್ಸ್ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾದ ಪಾತ್ರಗಳ ಪೋಸ್ಟರ್, ಅದ್ಧೂರಿ ಟೀಸರ್ ಎಲ್ಲವೂ ಬಿಡುಗಡೆ ಆಗಿವೆ. ಇದೀಗ ಯಶ್ ಮತ್ತು ಇತರೆ ತಾರಾಗಣ ಪ್ರಚಾರಕ್ಕೆ ಅಖಾಡಕ್ಕೆ ಇಳಿಯಬೇಕಿದೆ. ಚಿತ್ರತಂಡ, ಸಿನಿಮಾದ ಬಗ್ಗೆ ಅಧಿಕೃತವಾಗಿ ಹೆಚ್ಚಿನ ಮಾಹಿತಿಗಳನ್ನು ಬಿಟ್ಟುಕೊಡುತ್ತಿಲ್ಲ ಇದೇ ಕಾರಣಕ್ಕೆ ಸಿನಿಮಾದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಸಿನಿಮಾದ ರನ್​​ಟೈಮ್ ಜೊತೆಗೆ ಮತ್ತೊಂದು ಸುದ್ದಿಯೂ ಸಹ ಸಖತ್ ವೈರಲ್ ಆಗುತ್ತಿದೆ.

‘ಟಾಕ್ಸಿಕ್’ ಸಿನಿಮಾ ಇನ್ನೂ ಸೆನ್ಸಾರ್ ಆಗಿಲ್ಲ. ಆದರೆ ಶೀಘ್ರವೇ ಸಿನಿಮಾ ಸೆನ್ಸಾರ್ ಆಗುವ ಸಾಧ್ಯತೆ ಇದೆ. ಏಕೆಂದರೆ ಈಗಾಗಲೇ ಸಿನಿಮಾದ ವಿರುದ್ಧ ಸೆನ್ಸಾರ್ ಮಂಡಳಿಗೆ ದೂರು ಹೋಗಿರುವುದರಿಂದ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗುವ ಸಾಧ್ಯತೆ ಇರುವ ಕಾರಣ, ಚಿತ್ರತಂಡವು ಯೋಜಿತ ಸಮಯಕ್ಕಿಂತಲೂ ಮುಂಚಿತವಾಗಿಯೇ ಸೆನ್ಸಾರ್​​ ಮಂಡಳಿಗೆ ಸಿನಿಮಾವನ್ನು ಕಳಿಸಲಿದೆ. ಬಹುಷಃ ಮುಂದಿನ ವಾರ ಸಿನಿಮಾಕ್ಕೆ ಸೆನ್ಸಾರ್ ಆಗುವ ಸಾಧ್ಯತೆ ಇದೆ.

ಆದರೆ ಆ ಒಳಗೆ ಸಿನಿಮಾದ ರನ್​​ಟೈಮ್ ಅಂದರೆ ಸಿನಿಮಾದ ಒಟ್ಟು ಅವಧಿ ಲೀಕ್ ಆಗಿದ್ದು, ‘ಟಾಕ್ಸಿಕ್’ ಸಿನಿಮಾದ ಒಟ್ಟು ರನ್​​ಟೈಮ್ ಕೇವಲ 2 ಗಂಟೆ 20 ನಿಮಿಷ ಎನ್ನಲಾಗುತ್ತಿದೆ. ಇದು ಕೆಲವು ಯಶ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರೆ ಇನ್ನು ಕೆಲವರಿಗೆ ಡಬಲ್ ಖುಷಿಯನ್ನು ಸಹ ತಂದಿದೆ. ಈಗೆಲ್ಲ ಸಿನಿಮಾಗಳು 3 ಗಂಟೆ ವರೆಗೆ ರನ್​​ಟೈಮ್ ಹೊಂದಿರುತ್ತವೆ, ಕೆಲ ಸಿನಿಮಾಗಳು ಮೂರು ಗಂಟೆಗೂ ಹೆಚ್ಚಿನ ರನ್​​ಟೈಮ್ ಅನ್ನು ಸಹ ಹೊಂದಿವೆ. ಆದರೆ ‘ಟಾಕ್ಸಿಕ್’ ಸಿನಿಮಾ ಬಹಳ ಕಡಿಮೆ ರನ್​​ಟೈಮ್ ಹೊಂದಿರುವುದು ಆಶ್ಚರ್ಯ ತಂದಿದೆ.

ಇದನ್ನೂ ಓದಿ:ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಸಿಕ್ತು ಉತ್ತರ; ಯಶ್ ಮೇಕೋವರ್ ನೋಡಿ

‘ಟಾಕ್ಸಿಕ್’ ಸಿನಿಮಾ ಸೀಕ್ವೆಲ್​​​ನಲ್ಲಿ ಬಿಡುಗಡೆ ಆಗುತ್ತಿರುವ ಕಾರಣದಿಂದಾಗಿ ಸಿನಿಮಾದ ರನ್​​ಟೈಮ್​​ ಕಡಿಮೆ ಮಾಡಲಾಗಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ‘ಟಾಕ್ಸಿಕ್’ ಸಿನಿಮಾ ಟೀಸರ್ ಸೀಕ್ವೆಲ್​​ನ ಬಗ್ಗೆ ಸಣ್ಣ ಸುಳಿವು ನೀಡಿದೆ. ‘ಟಾಕ್ಸಿಕ್’ ಸಿನಿಮಾ ಅಪ್ಪ-ಮಗನ ಕತೆ ಆಗಿರುವ ಕಾರಣ, ಮೊದಲ ಭಾಗದಲ್ಲಿ ರಾಯನ ಇತಿಹಾಸ, ಅವರ ಸಾಹಸಗಳನ್ನು ತೋರಿಸಿ, ಕ್ಲೈಮ್ಯಾಕ್ಸ್​​ನಲ್ಲಿ ಅವನ ಮಗ ಟಿಕೆಟ್​ ಪಾತ್ರವನ್ನು ಇಂಟ್ರೊಡ್ಯೂಸ್ ಮಾಡಿಸುವ ಸಾಧ್ಯತೆ ಇದ್ದು, ಈ ಇಬ್ಬರ ನಡುವಿನ ಜಿದ್ದಾಜಿದ್ದಿನ ಕತೆಯನ್ನು ಎರಡನೇ ಭಾಗದಲ್ಲಿ ತೋರಿಸುವ ಯೋಜನೆ ಇದ್ದಂತಿದೆ.

ಇದೇ ಕಾರಣಕ್ಕೆ ‘ಟಾಕ್ಸಿಕ್’ ಸಿನಿಮಾದ ರನ್​​ಟೈಮ್ ಕಡಿಮೆ ಮಾಡಿ ಎರಡೂ ಕತೆಯನ್ನು ನಿರ್ದೇಶಕರು ಎರಡು ಭಾಗಗಳಿಗೆ ವಿಸ್ತರಿಸಿದಂತಿದ್ದಾರೆ. ಅಲ್ಲದೆ, ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್​​ಗಾಗಿ ಸುಮಾರು ಮೂರು ವರ್ಷಕ್ಕೂ ಹೆಚ್ಚು ಅವಧಿಯನ್ನು ಖರ್ಚು ಮಾಡಲಾಗಿದ್ದು, ಈ ಅವಧಿಯನ್ನು ಕೇವಲ 2:20 ನಿಮಿಷದ ಸಿನಿಮಾ ಮಾತ್ರವನ್ನೇ ಚಿತ್ರೀಕರಿಸಲಾಗಿದೆ ಎಂದರೆ ನಂಬಲು ತುಸು ಕಷ್ಟವೇ. ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​​ದಾಸ್ ನಿರ್ದೇಶಿಸಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ
ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ