ಕನ್ನಡಿಗರ ಬಗ್ಗೆ ರೆಹಮಾನ್ ಹೇಳಿದ್ದೇನು? ಯಶ್ ಬಿಚ್ಚಿಟ್ಟರು ಋಣದ ಕತೆ
ಸಂಗೀತಕ್ಕೆ ಆಸ್ಕರ್ ಗೆದ್ದಿರುವ ರೆಹಮಾನ್ ದಶಕಗಳಿಂದಲೂ ಭಾರತೀಯರನ್ನು ತಮ್ಮ ಸಂಗೀತದಿಂದ ಮಂತ್ರಮುಗ್ಧಗೊಳಿಸುತ್ತಲೇ ಬಂದಿದ್ದಾರೆ. ದಶಕಗಳ ಬಳಿಕ ಈಗಲೂ ಸಹ ಮ್ಯಾಜಿಕ್ ಉಳಿಸಿಕೊಂಡಿರುವ ಅವರು, ಇದೀಗ ಯಶ್ ‘ರಾವಣ’ನ ಪಾತ್ರದಲ್ಲಿ ನಟನೆ ಮಾಡುತ್ತಿರುವ ‘ರಾಮಾಯಣ’ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ‘ರಾಮಾಯಣ’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್ ಅವರು, ಕರ್ನಾಟಕ, ಕನ್ನಡಿಗರು ಹಾಗೂ ಎಆರ್ ರೆಹಮಾನ್ ನಡುವೆ ಇರುವ ಅನುಬಂಧದ ಬಗ್ಗೆ ಮಾತನಾಡಿದರು.

ಮುಖ್ಯಾಂಶಗಳು
- ರೆಹಮಾನ್ ಬಗ್ಗೆ ನಟ ಯಶ್ ಮಾತು
- ಕನ್ನಡಿಗರ ಬಗ್ಗೆ ರೆಹಮಾನ್ ಹೇಳಿದ್ದೇನು?
- ರೆಹಮಾನ್ ಹಾಗೂ ಕನ್ನಡಿಗರ ಅನುಬಂಧ
ಎಆರ್ ರೆಹಮಾನ್, ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ಸಂಗೀತ ನಿರ್ದೇಶಕ. ಕೇವಲ ಭಾರತ ಮಾತ್ರವಲ್ಲ, ವಿಶ್ವದ ಅದ್ಭುತ ಸಂಗೀತ ನಿರ್ದೇಶಕರುಗಳಲ್ಲಿ ಎಆರ್ ರೆಹಮಾನ್ ಒಬ್ಬರು. ಎರಡು ಆಸ್ಕರ್ ಗೆದ್ದಿರುವ ರೆಹಮಾನ್ ದಶಕಗಳಿಂದಲೂ ಭಾರತೀಯರನ್ನು ತಮ್ಮ ಸಂಗೀತದಿಂದ ಮಂತ್ರಮುಗ್ಧಗೊಳಿಸುತ್ತಲೇ ಬಂದಿದ್ದಾರೆ. ದಶಕಗಳ ಬಳಿಕ ಈಗಲೂ ಸಹ ಮ್ಯಾಜಿಕ್ ಉಳಿಸಿಕೊಂಡಿರುವ ಅವರು, ಇದೀಗ ಯಶ್ ‘ರಾವಣ’ನ ಪಾತ್ರದಲ್ಲಿ ನಟನೆ ಮಾಡುತ್ತಿರುವ ‘ರಾಮಾಯಣ’ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ‘ರಾಮಾಯಣ’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್ ಅವರು, ಕರ್ನಾಟಕ, ಕನ್ನಡಿಗರು ಹಾಗೂ ಎಆರ್ ರೆಹಮಾನ್ ನಡುವೆ ಇರುವ ಅನುಬಂಧದ ಬಗ್ಗೆ ಮಾತನಾಡಿದರು.
ಎಆರ್ ರೆಹಮಾನ್, ಮೊದಲಿಗೆ ಸಂಗೀತ ನೀಡಿದ ಹಾಡು ಕನ್ನಡದ್ದು ಎಂಬುದು ಹೆಚ್ಚು ಜನರಿಗೆ ಗೊತ್ತಿಲ್ಲ. ಯಶ್ ಅವರು ನಿನ್ನೆ ಈ ವಿಷಯ ಹೇಳಿದರು. ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಸಿನಿಮಾದ ‘ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್’ ಹಾಡನ್ನು ಕಂಪೋಸ್ ಮಾಡಿದ್ದು ರೆಹಮಾನ್ ಅವರಂತೆ. ಆಗವರು ಸಂಗೀತ ನಿರ್ದೇಶಕ ವಿಜಯಾನಂದ ಅವರಿಗೆ ಬೇರೆ ಬೇರೆ ಸಂಗೀತ ಸಾಧನಗಳನ್ನು ನುಡಿಸುತ್ತಿದ್ದರಂತೆ. ದ್ವಾರಕೀಶ್ ಅವರ ಬಳಿ ಅವಕಾಶ ಕೇಳಿ ಒಂದು ಹಾಡಿಗೆ ಅವರೇ ಕಂಪೋಸ್ ಮಾಡಿದ್ದರಂತೆ.
ಯಶ್ ಅವರು ಹೇಳಿರುವಂತೆ, ರೆಹಮಾನ್ ಅವರು ಯಶ್ ಅವರ ಬಳಿ ಮಾತನಾಡುತ್ತಾ, ತಾವು ಸ್ವತಂತ್ರ್ಯ ಸಂಗೀತ ನಿರ್ದೇಶಕ ಆಗುವ ಮುಂಚೆ ಕರ್ನಾಟಕದಲ್ಲಿ ಹಲವಾರು ಹಾಡುಗಳಿಗೆ ಕೆಲಸ ಮಾಡಿದ್ದಾಗಿ ಹೇಳಿದರಂತೆ. ಕನ್ನಡಿಗರು ಕೊಟ್ಟ ಹಣದಿಂದಲೇ ತಾವು ತಮ್ಮ ಮೊದಲ ಸ್ಟುಡಿಯೋ ನಿರ್ಮಾಣ ಮಾಡಿದ್ದಾಗಿಯೂ ರೆಹಮಾನ್ ಅವರು ಯಶ್ ಅವರ ಹೇಳಿಕೊಂಡಿದ್ದಾರಂತೆ. ಅಂದಹಾಗೆ ರೆಹಮಾನ್ ಅವರು ನೇರವಾಗಿ ಕನ್ನಡದ ಯಾವ ಸಿನಿಮಾಕ್ಕೂ ಸಂಗೀತ ನೀಡಿಲ್ಲ, ಉಪೇಂದ್ರ ಅವರ ‘ಗಾಡ್ಫಾದರ್’ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ಇದೆ. ಕನ್ನಡದ ‘ಸಜನಿ’ ಸಿನಿಮಾಕ್ಕೂ ರೆಹಮಾನ್ ಸಂಗೀತ ನೀಡಿದ್ದಾರೆ ಆದರೆ ಅವರದ್ದೇ ಹಳೆ ಹಾಡುಗಳನ್ನು ಕನ್ನಡೀಕರಣ ಮಾಡಲಾಗಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಧರಿಸಿರುವ ಸುಂದರ ಐವರಿ ಸೀರೆಯ ಬೆಲೆ ಎಷ್ಟು ಲಕ್ಷ ಗೊತ್ತೆ?
ರೆಹಮಾನ್ ಅವರು ದಶಕಗಳಿಂದಲೂ ಭಾರತೀಯ ಚಿತ್ರರಂಗದ ನಂಬರ್ 1 ಸಂಗೀತ ನಿರ್ದೇಶಕ ಎನಿಸಿಕೊಂಡಿದ್ದಾರೆ. ಕೆಲವು ಹಾಲಿವುಡ್ ಸಿನಿಮಾಗಳಿಗೂ ಅವರು ಕೆಲಸ ಮಾಡಿದ್ದಾರೆ. ‘ಸ್ಲಂ ಡಾಗ್ ಮಿಲೇನಿಯರ್’ ಸಿನಿಮಾಕ್ಕೆ ಅವರು ನೀಡಿದ ಸಂಗೀತದಿಂದ ಆಸ್ಕರ್ ಸಹ ಗೆದ್ದಿದ್ದಾರೆ. ಆ ಬಳಿಕ ಇನ್ನೂ ಕೆಲವು ಇಂಗ್ಲೀಷ್ ಸಿನಿಮಾಗಳಿಗೆ ಅವರು ಸಂಗೀತ ನೀಡಿದ್ದಾರೆ. ಇದೀಗ ಅವರು ‘ರಾಮಾಯಣ’ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದು, ಅವರೊಟ್ಟಿಗೆ ಮತ್ತೊಬ್ಬ ಆಸ್ಕರ್ ವಿಜೇತ, ವಿಶ್ವದ ಟಾಪ್ ಸಂಗೀತ ನಿರ್ದೇಶಕ ಹಾನ್ಸ್ ಜೀಮರ್ ಸಹ ಇದ್ದಾರೆ. ಸಿನಿಮಾದ ಸಂಗೀತ ಈಗಾಗಲೇ ಬಹಳ ಗಮನ ಸೆಳೆಯುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




