AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡೆಯುವ ಕೆಲಸ ಮಾಡಬೇಡಿ, ಶ್ರಮವನ್ನು ಗೌರವಿಸಿ: ಯಶ್ ಮನವಿ

ಇಂದು (ಅಕ್ಟೋಬರ್ 15) ಬೆಂಗಳೂರಿನಲ್ಲಿ ನಡೆದ ‘ರಾಮಾಯಣ’ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕೆಲವೊಮ್ಮೆ ಈ ರೀತಿಯ ಪ್ರಯೋಗಗಳನ್ನು, ಹುಂಬತನಗಳನ್ನು ತೋರಿಸಬೇಕಾಗುತ್ತದೆ. ಗಡಿ ದಾಟಿ, ಸರ್ವಸ್ವವನ್ನೂ ಪಣಕ್ಕಿಟ್ಟು, ಸೋಲು-ಗೆಲುವು ಮೀರಿ ಪ್ರಯತ್ನ ಮಾಡಬೇಕಾಗುತ್ತದೆ. ಹೀಗೆ ಮಾಡಿದಾಗ ಮಾತ್ರವೇ ಮೈಲಿಗಲ್ಲಾಗುತ್ತೆ, ಮುಂದೆ ಬರುವವರಿಗೆ ಮೆಟ್ಟಿಲಾಗುತ್ತೆ, ಆ ಮೆಟ್ಟಿಲು ಕೆತ್ತುವ ಕೆಲಸ ಮಾಡಬೇಕಿದೆ, ಮಾಡಲಾಗುತ್ತಿದೆ’ ಎಂದರು ಯಶ್.

ಒಡೆಯುವ ಕೆಲಸ ಮಾಡಬೇಡಿ, ಶ್ರಮವನ್ನು ಗೌರವಿಸಿ: ಯಶ್ ಮನವಿ
Yash Ramayana
ಮಂಜುನಾಥ ಸಿ.
|

Updated on:Oct 15, 2026 | 10:00 PM

Share

ಮುಖ್ಯಾಂಶಗಳು

  • ‘ರಾಮಾಯಣ’ದ ಬಗ್ಗೆ ನಟ ಯಶ್ ಮಾತು
  • ಕನ್ನಡಿಗರಲ್ಲಿ ವಿಶೇಷ ಮನವಿ ಮಾಡಿದ ಯಶ್
  • ‘ರಾಮಾಯಣ’ ಸಿನಿಮಾ ಶೀಘ್ರ ಬಿಡುಗಡೆ

‘ರಾಮಾಯಣ’ ಸಿನಿಮಾ ಅನ್ನು ನಾವು (ಕಲಾವಿದರು, ತಂತ್ರಜ್ಞರು) ಇದೊಂದು ಸಿನಿಮಾ ಎಂದು ಅಂದುಕೊಳ್ಳಲೇ ಇಲ್ಲ. ಇದು ನಮಗೆ ಸಿಕ್ಕಿರುವ ಆಶೀರ್ವಾದವೆಂದು ಅಂದುಕೊಂಡು ಕೆಲಸ ಮಾಡಿದ್ದೇವೆ. ನಮ್ಮ ದೇಶದ ಸಂಸ್ಕೃತಿ, ಪುರಾಣವನ್ನು ವಿದೇಶಿಗರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದೇವೆ. ಇದೇ ಮೊದಲ ಬಾರಿಗೆ ಭಾರತದ ಸಿನಿಮಾ ಒಂದನ್ನು ವಿದೇಶಿ ಸಂಸ್ಥೆಯೊಂದು ಹಾಲಿವುಡ್ ಸಿನಿಮಾಗಳ ರೀತಿ ವಿತರಣೆ ಮಾಡುತ್ತಿದೆ’ ಎಂದರು ಯಶ್.

ಇಂದು (ಅಕ್ಟೋಬರ್ 15) ಬೆಂಗಳೂರಿನಲ್ಲಿ ನಡೆದ ‘ರಾಮಾಯಣ’ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕೆಲವೊಮ್ಮೆ ಈ ರೀತಿಯ ಪ್ರಯೋಗಗಳನ್ನು, ಹುಂಬತನಗಳನ್ನು ತೋರಿಸಬೇಕಾಗುತ್ತದೆ. ಗಡಿ ದಾಟಿ, ಸರ್ವಸ್ವವನ್ನೂ ಪಣಕ್ಕಿಟ್ಟು, ಸೋಲು-ಗೆಲುವು ಮೀರಿ ಪ್ರಯತ್ನ ಮಾಡಬೇಕಾಗುತ್ತದೆ. ಹೀಗೆ ಮಾಡಿದಾಗ ಮಾತ್ರವೇ ಮೈಲಿಗಲ್ಲಾಗುತ್ತೆ, ಮುಂದೆ ಬರುವವರಿಗೆ ಮೆಟ್ಟಿಲಾಗುತ್ತೆ, ಆ ಮೆಟ್ಟಿಲು ಕೆತ್ತುವ ಕೆಲಸ ಮಾಡಬೇಕಿದೆ, ಮಾಡಲಾಗುತ್ತಿದೆ’ ಎಂದರು ಯಶ್.

‘ನಾನು ಸೋಷಿಯಲ್ ಮೀಡಿಯಾಗಳಲ್ಲಿ ನೋಡಿದ್ದೇನೆ. ವಿಎಫ್​​ಎಕ್ಸ್ ಹಾಗಿರಬೇಕಿತ್ತು, ಆ ನಟ ಹೀಗಿರಬೇಕಿತ್ತು, ಆ ನಟಿ ಹೀಗಿರಬೇಕಿತ್ತು ಎಂದೆಲ್ಲ ಹೇಳುತ್ತಿರುತ್ತಾರೆ. ಅದು ಬೇಡ, ಆ ಬ್ರಿಟೀಷರು ಮಾಡಿದ್ದು ಸಹ ಇದನ್ನೇ, ಡಿವೈಡ್ ಆಂಡ್ ರೂಲ್ (ಒಡೆದು ಆಳುವ ನೀತಿ). ಉದ್ದೇಶ ಒಳ್ಳೆಯದಿದ್ದಾಗ, ಶ್ರಮದಲ್ಲಿ ನಿಜಾಯಿತಿ ಇದ್ದಾಗ ಎಲ್ಲರೂ ಒಟ್ಟಿಗೆ ನಿಂತುಕೊಳ್ಳಬೇಕು, ಎಲ್ಲರೂ ಒಟ್ಟಿಗೆ ಬೆಂಬಲ ನೀಡಬೇಕು, ಹಾಕಿರುವ ಶ್ರಮಕ್ಕೆ ಗೌರವ ಕೊಡಬೇಕು’ ಎಂದರು ಯಶ್.

ಇದನ್ನೂ ಓದಿ: ಬೆಂಗಳೂರಿನಲ್ಲಿ ‘ರಾಮಾಯಣ’ ಈವೆಂಟ್; ‘ಟಾಕ್ಸಿಕ್’ ಬಗ್ಗೆ ಮೌನ ಮುರಿಯುತ್ತಾರಾ ಯಶ್?

‘ರಾಮ ನಮ್ಮವ, ದೇಶದ ಗಲ್ಲಿ-ಗಲ್ಲಿಯಲ್ಲೂ ಶ್ರೀರಾಮನ ದೇವಾಲಯಗಳು ಇವೆ. ಎಲ್ಲರೂ ಈ ಪ್ರಯತ್ನದ ಹಿಂದೆ ನಿಲ್ಲಿ. ವಿಶೇಷವಾಗಿ ನಾನು ಕನ್ನಡಿಗರಲ್ಲಿ ಹಾಗೂ ದಕ್ಷಿಣ ಭಾರತೀಯರಲ್ಲಿ ಕೇಳಿ ಕೊಳ್ಳುತ್ತೇನೆ. ಒಂದು ಒಳ್ಳೆಯ ಪ್ರಯತ್ನದ ಬೆನ್ನಿಗೆ ನಿಲ್ಲಿ, ಶ್ರಮವನ್ನು ಗೌರವಿಸಿ, ಬೆಂಬಲ ನೀಡಿ, ಸಿನಿಮಾ ಅನ್ನು ಅಪ್ಪಿಕೊಳ್ಳಿ’ ಎಂದರು.

ಬಳಿಕ ಸಿನಿಮಾದ ಸಹ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಮಾತನಾಡಿದ ಯಶ್, ‘ರಣ್​​ಬೀರ್ ಕಪೂರ್ ಅಂಥಹಾ, ಅದ್ಭುತ ನಟನನ್ನು, ಮಾನವೀಯ ವ್ಯಕ್ತಿಯನ್ನು, ಸರಳವಾದ ಜೀವಿಯನ್ನು ನಾನು ಈ ವರೆಗೆ ನೋಡಿಲ್ಲ. ಅವರು ಪಾತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ರೀತಿ ಅತ್ಯದ್ಭುತ. ಇನ್ನು ಸಾಯಿ ಪಲ್ಲವಿ ಅವರು ಬಹಳ ಪವಿತ್ರ ವ್ಯಕ್ತಿತ್ವದವರು. ಸೀತೆಯ ಪಾತ್ರ ಮಾಡಲು ಅವಕಾಶ ಸಿಕ್ಕಿದ್ದನ್ನು ವರದಂತೆ ಭಾವಿಸುತ್ತಾರೆ. ಪ್ರತಿ ಬಾರಿ ಅವರೊಟ್ಟಿಗೆ ಮಾತನಾಡುವಾಗಲೂ ಅವರು ದೇವರ ಬಗ್ಗೆಯೇ ಮಾತನಾಡುತ್ತಿದ್ದರು. ಅವರು ಅದ್ಭುತ ನಟಿ. ಲಕ್ಷ್ಮಣನ ಪಾತ್ರ ಮಾಡಿದ ಕಲಾವಿದ ಅಂತೂ ಎಲ್ಲರಿಗೂ ಶಾಕ್ ಕೊಡಲಿದ್ದಾರೆ ಎಂದರು. ಎಆರ್ ರೆಹಮಾನ್, ನಿರ್ದೇಶಕ ನಿತೀಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರುಗಳ ಬಗ್ಗೆಯೂ ಸಹ ವಿಶೇಷ ಪ್ರೀತಿ ಮತ್ತು ಗೌರವಗಳಿಂದ ಯಶ್ ಅವರು ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:58 pm, Thu, 15 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ