ತಾರೆಯರನ್ನು ಬಹಳ ಅಭಿಮಾನದಿಂದ ನೋಡುವ ಭಾರತದಲ್ಲಿ, ಸೆಲೆಬ್ರಿಟಗಳ ಜೀವನದ ಏರುಪೇರು ಬಹುದೊಡ್ಡ ಚರ್ಚೆಗೆ ಕಾರಣವಾಗುತ್ತದೆ. 2021ರಲ್ಲಿ ಹಲವು ತಾರೆಯರು ಅಭಿಮಾನಿಗಳಿಗೆ ಖುಷಿಯ ಸುದ್ದಿಯನ್ನು ನೀಡಿದ್ದರೆ, ಮತ್ತಷ್ಟು ತಾರೆಯರು ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. ಹೌದು. ಭಾರತದಲ್ಲಿ 2021ರಲ್ಲಿ ವಿಚ್ಛೇದನದ ಸುದ್ದಿಗಳೂ ಬಹಳಷ್ಟು ಸುದ್ದಿ ಮಾಡಿವೆ. ಅವುಗಳಲ್ಲಿ ಕೆಲವಂತೂ ದೀರ್ಘ ಕಾಲ ಫ್ಯಾನ್ಸ್ಗೆ ನೋವುಂಟು ಮಾಡಿತ್ತು. ಈ ವರ್ಷ ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ ತಾರೆಯರು ಯಾರು? ಇಲ್ಲಿದೆ ಮಾಹಿತಿ.
1. ಸಮಂತಾ- ನಾಗಚೈತನ್ಯ ದೀರ್ಘ ಕಾಲ ಜತೆಯಾಗಿ ಸುತ್ತಾಡಿ ನಂತರ 2017ರಲ್ಲಿ ಸಮಂತಾ- ನಾಗ ಚೈತನ್ಯ ಜೋಡಿ ಹಸೆಮಣೆ ಏರಿತ್ತು. ಆದರೆ 2021ರಲ್ಲಿ ಪರಸ್ಪರ ಬೇರೆಯಾಗುವ ನಿರ್ಧಾರವನ್ನು ಇವರು ಘೋಷಿಸಿದರು. ಅದಕ್ಕೂ ಮುನ್ನ ಕೆಲವು ತಿಂಗಳುಗಳ ಕಾಲ ಈರ್ವರ ವಿಚ್ಛೇದನದ ಕುರಿತು ಗಾಳಿ ಸುದ್ದಿ ಹರಿದಾಡಿದ್ದವು. ಆದರೆ ಅಭಿಮಾನಿಗಳು ನೆಚ್ಚಿನ ಈ ಜೋಡಿ ಬೇರೆಯಾಗುತ್ತಾರೆ ಎಂದು ನಂಬಲು ತಯಾರಿರಲಿಲ್ಲ. ಅಲ್ಲದೇ ಆ ಸುದ್ದಿಗಳು ಸುಳ್ಳಾಗಲಿ ಎಂದು ಬಯಸಿದ್ದರು. ಆದರೆ ಸಮಂತಾ ಹಾಗೂ ನಾಗಚೈತ್ನಯ ಪರಸ್ಪರ ದೂರಾಗುತ್ತಿರುವ ಸುದ್ದಿಯನ್ನು ಘೋಷಿಸಿಯೇ ಬಿಟ್ಟರು.
2. ಆಮಿರ್ ಖಾನ್- ಕಿರಣ್ ರಾವ್: ದೇಶಾದ್ಯಂತ ಜನರನ್ನು ಶಾಕ್ಗೆ ತಳ್ಳಿದ ಬ್ರೇಕಪ್ ಎಂದರೆ ಅದು ಆಮಿರ್ ಖಾನ್ ಹಾಗೂ ಕಿರಣ್ ರಾವ್ ಅವರದ್ದು. ಯಾವುದೇ ಸುಳಿವು ನೀಡದೇ ಈ ಜೋಡಿ ಏಕಾಏಕಿ ವಿಚ್ಛೇದನದ ನಿರ್ಧಾರವನ್ನು ಈ ಜೋಡಿ ಜುಲೈನಲ್ಲಿ ಘೋಷಿಸಿದರು. ಪುತ್ರ ಆಜಾದ್ ಖಾನ್ ಪೋಷಣೆಯನ್ನು ಈರ್ವರೂ ಒಟ್ಟಾಗಿ ಮಾಡುವುದಾಗಿ ಇದೇ ಸಂದರ್ಭದಲ್ಲಿ ಈ ತಾರಾ ಜೋಡಿ ಘೋಷಿಸಿದರು. ಬಹುನಿರೀಕ್ಷಿತ ‘ಲಾಲ್ ಸಿಂಗ್ ಛಡ್ಡಾ’ ಚಿತ್ರವನ್ನೂ ಆಮಿರ್ ಹಾಗೂ ಕಿರಣ್ ಒಟ್ಟಾಗಿ ನಿರ್ಮಿಸುತ್ತಿದ್ದಾರೆ. ಅಲ್ಲದೇ ಬೇರ್ಪಟ್ಟ ನಂತರವೂ ಇಬ್ಬರು ಜತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.
3. ಯೋ ಯೋ ಹನಿಸಿಂಗ್- ಶಾಲಿನಿ ಸಿಂಗ್: 2011ರಲ್ಲಿ ವಿವಾಹವಾಗಿದ್ದ ಬಾಲಿವುಡ್ ಗಾಯಕ, ಸಂಗೀತ ನಿರ್ದೇಶಕ ಯೋ ಯೋ ಹನಿ ಸಿಂಗ್ ಹಾಗೂ ಶಾಲಿನಿ ಸಿಂಗ್ 2021ರಲ್ಲಿ ಪರಸ್ಪರ ಗಂಭೀರ ಆರೋಪ- ಪ್ರತ್ಯಾರೋಪ ಮಾಡಿಕೊಂಡು ಬೇರೆಯಾದರು. ಶಾಲಿನಿ ಸಿಂಗ್ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಸೇರಿಂದತೆ ಹಲವು ಆರೋಪ ಮಾಡಿದ್ದರು.
4. ಸುಶ್ಮಿತಾ ಸೇನ್- ರೊಹ್ಮಾನ್ ಶಾಲ್: ನಟಿ ಸುಶ್ಮಿತಾ ಸೇನ್ ಹಾಗೂ ಅವರ ಪ್ರಿಯಕರ ರೊಹ್ಮಾನ್ ಶಾಲ್ ಪರಸ್ಪರ ಬೇರೆಯಾಗುತ್ತಿದ್ದಾರೆ ಎಂದು ಕೆಲವು ಕಾಲದಿಂದ ಸುದ್ದಿಯಾಗಿತ್ತು. ಇತ್ತೀಚೆಗೆ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡು, ಅಧಿಕೃತವಾಗಿ ತಿಳಿಸಿದರು. ಸಂಬಂಧದಿಂದ ದೂರಾಗಿದ್ದೇವೆ. ಆದರೆ ಇಬ್ಬರೂ ಉತ್ತಮ ಗೆಳೆಯರು ಎಂದು ಅವರು ಸ್ಪಷ್ಟನೆ ನೀಡಿದ್ದರು.
5. ಶಿಖರ್ ಧವನ್- ಆಯೆಷಾ ಮುಖರ್ಜಿ: ಚಿತ್ರರಂಗ ಹೊರತಾದ ಮತ್ತೊಂದು ಜೋಡಿ ಈ ವರ್ಷ ಸಖತ್ ಸುದ್ದಿಯಾಗಿದ್ದೆಂದರೆ ಅದು ಶಿಖರ್ ಧವನ್ ಹಾಗೂ ಆಯೆಷಾ ಮುಖರ್ಜಿ. ಕ್ರಿಕೆಟ್ ಆಟಗಾರ ಶಿಖರ್ ಹಾಗೂ ಆಯೆಷಾ ಪ್ರೀತಿಸಿ ಮದುವೆಯಾಗಿದ್ದರು. ಈರ್ವರೂ ಸೆಪ್ಟೆಂಬರ್ನಲ್ಲಿ ಬೇರ್ಪಡುತ್ತಿರುವುದಾಗಿ ಘೋಷಿಸಿದರು.
6. ನುಸ್ರತ್ ಜಹಾನ್- ನಿಖಿಲ್ ಜೈನ್: ಬೆಂಗಾಲಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಈ ವರ್ಷ ವೈಯಕ್ತಿಕ ಕಾರಣಗಳಿಗಾಗಿ ಬಹಳಷ್ಟು ಸುದ್ದಿಯಾಗಿದ್ದರು. 2019ರಲ್ಲಿ ನಿಖಿಲ್ ಜೈನ್ರನ್ನು ನುಸ್ರತ್ ಟರ್ಕಿಯಲ್ಲಿ ವಿವಾಹವಾಗಿದ್ದರು. 2020ರ ನವೆಂಬರ್ನಿಂದ ಈರ್ವರ ಬ್ರೇಕಪ್ ಸುದ್ದಿಯಲ್ಲಿತ್ತು. 2021ರಲ್ಲಿ ನಿಖಿಲ್ ಕೋರ್ಟ್ ಮೊರೆ ಹೋದರು. ಆದರೆ ಈ ಜೋಡಿಯ ವಿವಾಹಕ್ಕೆ ಭಾರತದಲ್ಲಿ ಮಾನ್ಯತೆಯಿರಲಿಲ್ಲ. ಅಂತಿಮವಾಗಿ ಪ್ರಕರಣ ಗಟ್ಟಿಯಾಗಲಿಲ್ಲ ಮತ್ತು ಈರ್ವರೂ ದೂರಾದರು. ಸದ್ಯ ನುಸ್ರತ್ ಹಾಗೂ ಯಶ್ದಾಸ್ ಗುಪ್ತಾ ಜತೆಯಿದ್ದು, ನುಸ್ರತ್ ಇತ್ತೀಚೆಗಷ್ಟೇ ತಾಯಿಯಾಗಿದ್ದಾರೆ.
ಇದನ್ನೂ ಓದಿ:
Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು; ಈ ವರ್ಷ ಗೆದ್ದವರು ವಿರಳ, ಸೋತವರು ಬಹಳ
Year Ender 2021: ಈ ವರ್ಷ ಅತಿ ಹೆಚ್ಚು ಬಳಕೆಯಾದ ಎಮೋಜಿಗಳು ಯಾವೆಲ್ಲಾ ಗೊತ್ತಾ? ಇಲ್ಲಿದೆ ಸ್ಟೋರಿ