Deepavali 2022: ದೀಪಾವಳಿ ಹಬ್ಬದ ದಿನಾಂಕ, ಆಚರಣೆ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ದೀಪಾವಳಿಯು ಭಾರತದ ಪ್ರಸಿದ್ಧ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಎಲ್ಲೆಡೆ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿದೆ. ದೀಪಗಳ ಹಬ್ಬ ದೀಪಾವಳಿಯನ್ನು ಹೊಸ ಬಟ್ಟೆ ತೊಟ್ಟು, ದೀಪ ಬೆಳಗಿ ನಂತರ ಸಿಹಿಯನ್ನು ಸವಿಯುವುದಷ್ಟೇ ಅಲ್ಲ.

Deepavali 2022: ದೀಪಾವಳಿ ಹಬ್ಬದ ದಿನಾಂಕ, ಆಚರಣೆ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
Deepavali
Follow us
TV9 Web
| Updated By: ನಯನಾ ರಾಜೀವ್

Updated on: Oct 10, 2022 | 11:36 AM

ದೀಪಾವಳಿಯು ಭಾರತದ ಪ್ರಸಿದ್ಧ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಎಲ್ಲೆಡೆ ಹಬ್ಬದ ಸಿದ್ಧತೆಗಳು ಭರದಿಂದ ಸಾಗಿದೆ. ದೀಪಗಳ ಹಬ್ಬ ದೀಪಾವಳಿಯನ್ನು ಹೊಸ ಬಟ್ಟೆ ತೊಟ್ಟು, ದೀಪ ಬೆಳಗಿ ನಂತರ ಸಿಹಿಯನ್ನು ಸವಿಯುವುದಷ್ಟೇ ಅಲ್ಲ. ಈ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಗಳ ಬಗ್ಗೆ  ಕೂಡ ತಿಳಿಯಲೇಬೇಕು.

ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಅಂದಹಾಗೆ, ಈ ದೀಪಗಳ ಹಬ್ಬವು ಐದು ದಿನಗಳ ಕಾಲ ನಡೆಯುತ್ತದೆ. ಧನ್ತೇರಸ್ ಹಬ್ಬವನ್ನು ದೀಪಾವಳಿಯ ಎರಡು ದಿನಗಳ ಮೊದಲು ಆಚರಿಸಲಾಗುತ್ತದೆ, ನಂತರ ಸಣ್ಣ ದೀಪಾವಳಿ ಮತ್ತು ನಂತರ ಮರುದಿನ ದೊಡ್ಡ ಹಬ್ಬ ದೀಪಾವಳಿ.

ಹಬ್ಬಗಳೆಂದರೆ ಮೈ ಮನ ಸ್ವಚ್ಚಗೊಳಿಸುವುದು ಮತ್ತು ದಿನನಿತ್ಯವಲ್ಲದ ಹೊಸ ಬಗೆಯ ಆಚರಣೆ. ಈ ಹಬ್ಬಗಳೇ ಬದುಕಿಗೆ ವಿಶೇಷ ಕಾರಣ ನಮ್ಮ ದೈನಂದಿನ ಬದುಕಿಗೆ ಒಂದಷ್ಟು ವಿಶೇಷ ಆಚರಣೆಗಳ ಮೂಲಕ ಕಳೆ ತುಂಬುವುದು. ಹಾಗಾಗಿ ನಮ್ಮ ಅನೇಕ ಪ್ರಸಿದ್ಧ ಹಬ್ಬಗಳಲ್ಲಿ ದೀಪಾವಳಿಗೆ ವಿಶೇಷ ಮನ್ನಣೆಯಿದೆ.

ಯಾಕೆಂದರೆ ಈ ಬಾರಿಯ ಧನ್ ತೇರಸ್ ನ ಮಾರನೇ ದಿನ ದೊಡ್ಡ ದೀಪಾವಳಿ ಬರುತ್ತಿದೆ. ಈ ವರ್ಷ ಧನ್ತೇರಸ್ ಅಕ್ಟೋಬರ್ 23 ರಂದು. ಇದರ ನಂತರ ಅಕ್ಟೋಬರ್ 24 ರಂದು ಸಣ್ಣ ಮತ್ತು ದೊಡ್ಡ ದೀಪಾವಳಿ.

ಧನ್ತೇರಸ್ 2022 ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯು ಅಕ್ಟೋಬರ್ 22 ರಂದು ಸಂಜೆ 6.02 ರಿಂದ ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ, ಈ ದಿನಾಂಕವು ಅಕ್ಟೋಬರ್ 23 ರಂದು ಸಂಜೆ 6.03 ಕ್ಕೆ ಕೊನೆಗೊಳ್ಳುತ್ತದೆ. ಅಕ್ಟೋಬರ್ 23 ರಂದು ಉದಯ ತಿಥಿಯ ಪ್ರಕಾರ ಧನ್ತೇರಸ್ ಅನ್ನು ಆಚರಿಸಲಾಗುತ್ತದೆ.

ದೀಪಾವಳಿಯು ಬೆಳೆಗಳ ಋತುವಿನ ಕೊನೆಯಲ್ಲಿ ಪ್ರಾರಂಭವಾಗುತ್ತದೆ ಮತ್ತು ಸಮೃದ್ಧಿ ಹಾಗೂ ಸಂತೋಷವನ್ನು ಸೂಚಿಸುತ್ತದೆ. ಈ ಹಬ್ಬವು ಸಾಮಾನ್ಯವಾಗಿ ಸಂಪತ್ತು ಮತ್ತು ಸಂತೋಷಕ್ಕೆ ಸಂಬಂಧಿಸಿದೆ. ಪ್ರಾಚೀನ ಸಂಸ್ಕೃತ ಗ್ರಂಥಗಳಾದ ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ಹಬ್ಬದ ಉಲ್ಲೇಖವಿದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ದೀಪಾವಳಿಯು ಹಿಂದೂಗಳಿಗೆ ಮಾತ್ರವಲ್ಲ, ಜೈನರು, ಬೌದ್ಧರು ಮತ್ತು ಸಿಖ್ಖರಲ್ಲಿಯೂ ಸಹ ಆಚರಿಸಲಾಗುತ್ತದೆ.

ಇದರ ನಂತರ, ಚತುರ್ದಶಿ ತಿಥಿಯು ಅಕ್ಟೋಬರ್ 23 ರಂದು ಸಂಜೆ 6:04 ರಿಂದ ಪ್ರಾರಂಭವಾಗುತ್ತಿದೆ, ಅದು ಮರುದಿನ ಅಕ್ಟೋಬರ್ 24 ರಂದು ಸಂಜೆ 5:28 ಕ್ಕೆ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ದೀಪಾವಳಿ ಅಂದರೆ ನರಕ ಚತುರ್ದಶಿಯನ್ನು ಅಕ್ಟೋಬರ್ 24 ರಂದು ಉದಯ ತಿಥಿಯ ಆಧಾರದ ಮೇಲೆ ಆಚರಿಸಲಾಗುತ್ತದೆ.

ದೀಪಾವಳಿ 2022 ಮತ್ತೆ ಅಕ್ಟೋಬರ್ 24 ರಂದು ಸಂಜೆ 05.28 ರಿಂದ ಅಮವಾಸ್ಯೆಯ ತಿಥಿ ಆರಂಭವಾಗುತ್ತದೆ, ಇದು ಅಕ್ಟೋಬರ್ 25 ರಂದು ಸಂಜೆ 04.19 ರವರೆಗೆ ಇರುತ್ತದೆ. ಇನ್ನೊಂದೆಡೆ ಅಕ್ಟೋಬರ್ 25ರಂದು ಸಂಜೆ ಅಂದರೆ ಪ್ರದೋಷ ಕಾಲಕ್ಕೂ ಮುನ್ನ ಅಮಾವಾಸ್ಯೆ ಮುಗಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೀಪಾವಳಿ ಹಬ್ಬವನ್ನು ಈ ದಿನ ಆಚರಿಸದೆ ಅಕ್ಟೋಬರ್ 24 ರಂದು ಮಾತ್ರ ಆಚರಿಸಲಾಗುತ್ತದೆ.

ನರಕ ಚತುರ್ದಶಿ 2022 ಶುಭ ಮುಹೂರ್ತ ಅಭ್ಯಂಗ ಸ್ನಾನ ಮುಹೂರ್ತ – ಅಕ್ಟೋಬರ್ 24 ರಂದು ಬೆಳಿಗ್ಗೆ 05:08 ರಿಂದ 06.31 ರವರೆಗೆ ಅವಧಿ – 01 ಗಂಟೆ 23 ನಿಮಿಷಗಳು, ದೀಪಾವಳಿಯಂದು ಲಕ್ಷ್ಮೀ ಪೂಜೆಯ ಶುಭ ಮುಹೂರ್ತವು ಅಕ್ಟೋಬರ್ 24 ರಂದು ಸಂಜೆ 06:53 ರಿಂದ 08:16 ರವರೆಗೆ ಲಕ್ಷ್ಮಿ ಪೂಜೆಯ ಶುಭ ಮುಹೂರ್ತವಾಗಿದೆ.