AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಲ್ಯಾಕ್ ಕಾಫಿಗೆ ನಿಂಬೆ ರಸ ಸೇರಿಸಿ ಕುಡಿಯುವ ಅಭ್ಯಾಸ ನಿಮಗಿದೆಯೇ? ಈ ವಿಚಾರ ತಿಳಿಯುವುದು ಬಹಳ ಉತ್ತಮ

ಚಹಾ ಮತ್ತು ಕಾಫಿ ಭಾರತೀಯರ ನೆಚ್ಚಿನ ಪಾನೀಯಗಳು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಬ್ಲ್ಯಾಕ್ ಕಾಫಿಯ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಅದರಲ್ಲಿಯೂ ಬ್ಲ್ಯಾಕ್ ಕಾಫಿಗೆ ನಿಂಬೆ ರಸ ಸೇರಿಸಿ ಕುಡಿಯಲು ಹಲವರು ಇಷ್ಟಪಡುತ್ತಾರೆ. ಇದರಿಂದ ಬೇಗ ತೂಕ ಕಡಿಮೆಯಾಗುತ್ತದೆ, ದೇಹದ ಕೊಬ್ಬು ಕರಗುತ್ತದೆ, ಬಾಡಿ ಡಿಟಾಕ್ಸ್ ಆಗುತ್ತದೆ ಎಂಬ ಹಲವು ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಪಾನೀಯ ನಿಜಕ್ಕೂ ತೂಕ ಇಳಿಸಲು ಮ್ಯಾಜಿಕ್ ಡ್ರಿಂಕ್ ಆಗಿದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬ್ಲ್ಯಾಕ್ ಕಾಫಿಗೆ ನಿಂಬೆ ರಸ ಸೇರಿಸಿ ಕುಡಿಯುವ ಅಭ್ಯಾಸ ನಿಮಗಿದೆಯೇ? ಈ ವಿಚಾರ ತಿಳಿಯುವುದು ಬಹಳ ಉತ್ತಮ
Black Coffee With LemonImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 19, 2026 | 9:12 PM

Share

ಮುಖ್ಯಾಂಶಗಳು

  • ಲಿಂಬೆ ಬ್ಲ್ಯಾಕ್ ಕಾಫಿ ಕುಡಿದರೆ ಡಿಟಾಕ್ಸ್ ಆಗುತ್ತಾ? ಇಲ್ಲಿದೆ ತಜ್ಞರ ಸ್ಪಷ್ಟನೆ
  • ಬ್ಲ್ಯಾಕ್ ಕಾಫಿಗೆ ನಿಂಬೆ ರಸ ಸೇರಿಸಿ ಕುಡಿಯುವವರು ತಿಳಿದುಕೊಳ್ಳಬೇಕಾದ ಮಾಹಿತಿ
  • ತೂಕ ಇಳಿಸಲು ನಿಂಬೆ ಕಾಫಿ ಬೆಸ್ಟ್‌? ಇಲ್ಲಿದೆ ತಜ್ಞರ ಸಲಹೆ?

ಬೆಳಗ್ಗೆ ಎದ್ದ ತಕ್ಷಣ ಬ್ಲ್ಯಾಕ್ ಕಾಫಿ ಕುಡಿಯುವ ಅಭ್ಯಾಸ ಹಲವರಿಗಿದೆ. ಇತ್ತೀಚೆಗೆ ಬ್ಲ್ಯಾಕ್ ಕಾಫಿಗೆ ನಿಂಬೆ ರಸ ಸೇರಿಸಿ ಕುಡಿಯುವುದು ಕೂಡ ಟ್ರೆಂಡ್ ಆಗಿದೆ. ಇದರಿಂದ ಬೇಗ ತೂಕ ಕಡಿಮೆಯಾಗುತ್ತದೆ, ದೇಹದ ಕೊಬ್ಬು ಕರಗುತ್ತದೆ, ಬಾಡಿ ಡಿಟಾಕ್ಸ್ ಆಗುತ್ತದೆ ಎಂಬ ಹಲವು ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಪಾನೀಯ ನಿಜಕ್ಕೂ ತೂಕ ಇಳಿಸಲು ಮ್ಯಾಜಿಕ್ ಡ್ರಿಂಕ್ ಆಗಿದೆಯೇ, ಇದನ್ನು ಪ್ರತಿದಿನ ಕುಡಿಯುವುದು ಎಲ್ಲರಿಗೂ ಸುರಕ್ಷಿತವೇ, ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಈ ಬಗ್ಗೆ ಯಥಾರ್ಥ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಯಟೆಟಿಕ್ಸ್ ವಿಭಾಗದ ಮುಖ್ಯಸ್ಥೆ ಸುಹಾನಿ ಸೇಠ್ ಅಗರ್ವಾಲ್ ಅವರು ಬ್ಲ್ಯಾಕ್ ಕಾಫಿಯಲ್ಲಿರುವ ಕೆಫೀನ್ ಕೆಲಕಾಲ ಎನರ್ಜಿ ಹೆಚ್ಚಿಸಬಹುದು. ಕೆಲವರಲ್ಲಿ ಹಸಿವನ್ನು ಸ್ವಲ್ಪ ಕಡಿಮೆ ಮಾಡಬಹುದು.

ಬ್ಲ್ಯಾಕ್ ಕಾಫಿಗೆ ನಿಂಬೆ ಸೇರಿಸಿದರೆ ತೂಕ ಇಳಿಯುತ್ತದೆಯೇ?

ಕಾಫಿಗೆ ನಿಂಬೆ ಸೇರಿಸಿದ ಮಾತ್ರಕ್ಕೆ ಹೆಚ್ಚುವರಿ ಕೊಬ್ಬು ಕರಗುತ್ತದೆ ಅಥವಾ ತೂಕ ವೇಗವಾಗಿ ಇಳಿಯುತ್ತದೆ ಎಂಬುದಕ್ಕೆ ಬಲವಾದ ವೈಜ್ಞಾನಿಕ ಸಾಕ್ಷ್ಯವಿಲ್ಲ. ಬ್ಲ್ಯಾಕ್ ಕಾಫಿಯಲ್ಲಿರುವ ಕೆಫೀನ್ ದೇಹದ ಮೆಟಾಬಾಲಿಕ್ ರೇಟ್ ಮತ್ತು ಎನರ್ಜಿಯನ್ನು ಅಲ್ಪಾವಧಿಗೆ ಹೆಚ್ಚಿಸಬಹುದು. ಆದರೆ ಇದರ ಪರಿಣಾಮ ಸೀಮಿತವಾಗಿರುತ್ತದೆ. ಕೇವಲ ಬ್ಲ್ಯಾಕ್ ಕಾಫಿ ಅಥವಾ ನಿಂಬೆ ಕಾಫಿ ಕುಡಿಯುವುದರಿಂದ ತೂಕ ಕಡಿಮೆಯಾಗುವುದಕ್ಕೆ ಸಾಧ್ಯವಿಲ್ಲ. ತೂಕ ನಿಯಂತ್ರಣಕ್ಕೆ ಕ್ಯಾಲೊರಿ ಸೇವನೆ, ಪ್ರೋಟೀನ್, ಫೈಬರ್, ದೈಹಿಕ ಚಟುವಟಿಕೆ ಮತ್ತು ಉತ್ತಮ ನಿದ್ರೆ ಹೆಚ್ಚು ಮುಖ್ಯ.

ನಿಂಬೆ ಸೇರಿಸುವುದರಿಂದ ಹೆಚ್ಚುವರಿ ಫ್ಯಾಟ್ ಬರ್ನ್ ಆಗುತ್ತಾ?

ನಿಂಬೆ ವಿಟಮಿನ್ ಸಿ ಯ ಉತ್ತಮ ಮೂಲ. ಬ್ಲ್ಯಾಕ್ ಕಾಫಿ ಕೆಫೀನ್ ಒದಗಿಸುತ್ತದೆ. ಆದರೆ ಈ ಎರಡನ್ನು ಒಟ್ಟಿಗೆ ಕುಡಿದರೆ ವಿಟಮಿನ್ ಸಿ ಅಥವಾ ಕೆಫೀನ್ ಕಾರಣದಿಂದ ವಿಶೇಷವಾದ ಫ್ಯಾಟ್ ಬರ್ನಿಂಗ್ ಪರಿಣಾಮ ಉಂಟಾಗುತ್ತದೆ ಎಂಬುದಕ್ಕೆ ಸದ್ಯಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ. ಹೀಗಾಗಿ ಇದನ್ನು ತೂಕ ಇಳಿಸುವ ವಿಶೇಷ ಪಾನೀಯ ಎಂದು ಪರಿಗಣಿಸುವುದು ಸರಿಯಲ್ಲ.

‘ಡಿಟಾಕ್ಸ್ ಡ್ರಿಂಕ್’ ಎಂದು ಕುಡಿಯಬಹುದೇ?

ಬ್ಲ್ಯಾಕ್ ಕಾಫಿ-ನಿಂಬೆ ಮಿಶ್ರಣವನ್ನು ದೇಹದ ಟಾಕ್ಸಿನ್‌ಗಳನ್ನು ಹೊರಹಾಕುವ ವಿಶೇಷ ಡಿಟಾಕ್ಸ್ ಡ್ರಿಂಕ್ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ದೇಹದಲ್ಲಿರುವ ಲಿವರ್ ಮತ್ತು ಕಿಡ್ನಿಗಳು ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಿ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಪ್ರತಿದಿನ ನಿಂಬೆ ಕಾಫಿ ಕುಡಿಯಲೇಬೇಕು ಎಂಬ ಅಗತ್ಯವಿಲ್ಲ.

ಯಾರಿಗೆ ನಿಂಬೆ ಕಾಫಿ ಸಮಸ್ಯೆ ಉಂಟುಮಾಡಬಹುದು?

  • ಆಸಿಡಿಟಿ
  • ಗ್ಯಾಸ್
  • ಹೊಟ್ಟೆಯಲ್ಲಿ ಉರಿ
  • ಆಸಿಡ್ ರಿಫ್ಲಕ್ಸ್
  • ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ
  • ಕಾಫಿ ಮತ್ತು ನಿಂಬೆಯ ಆಮ್ಲೀಯತೆ ಕೆಲವರಲ್ಲಿ ಹೊಟ್ಟೆಯ ಅಸ್ವಸ್ಥತೆಯನ್ನು ಹೆಚ್ಚಿಸಬಹುದು.

ತೂಕ ಇಳಿಸಲು ಯಾವುದೇ ಒಂದು ಡ್ರಿಂಕ್ ಅಥವಾ ಆಹಾರದ ಮೇಲೆ ಅವಲಂಬಿತರಾಗುವುದಕ್ಕಿಂತ ಸಮತೋಲಿತ ಜೀವನಶೈಲಿ ಮುಖ್ಯ. ಪ್ರೋಟೀನ್ ಮತ್ತು ಫೈಬರ್‌ಯುಕ್ತ ಆಹಾರ, ಸೂಕ್ತ ಕ್ಯಾಲೊರಿ ಸೇವನೆ, ನಿಯಮಿತ ವ್ಯಾಯಾಮ, ಸಾಕಷ್ಟು ನೀರು ಮತ್ತು ಚೆನ್ನಾಗಿ ನಿದ್ರೆ ಮಾಡುವುದರಿಂದ ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸೂಚನೆ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ಆಸಿಡಿಟಿ, ಹೃದಯ ಸಂಬಂಧಿತ ಸಮಸ್ಯೆಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರು ಅಥವಾ ಅರ್ಹ ಡಯಟಿಷಿಯನ್‌ರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?