AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid Nasal Spray: ಈಗಿರುವ ಕೊರೊನಾ ಲಸಿಕೆಗಳಿಗಿಂತ ಮೂಗಿನ ಮೂಲಕ ಹಾಕುವ ಲಸಿಕೆ ಉತ್ತಮವೇ?

ಕಳೆದ 3 ವರ್ಷಗಳ ಹಿಂದೆ ಕೋವಿಡ್ 19 ಎನ್ನುವ ಸಾಂಕ್ರಾಮಿಕ ರೋಗವು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಜನರು ತಮ್ಮವರ ಮುಖವನ್ನೇ ನೋಡದೆ ವರ್ಷಗಟ್ಟಲೆ ಕಾಲವನ್ನು ದೂಡುವಂತೆ ಮಾಡಿತ್ತು.

Covid Nasal Spray: ಈಗಿರುವ ಕೊರೊನಾ ಲಸಿಕೆಗಳಿಗಿಂತ ಮೂಗಿನ ಮೂಲಕ ಹಾಕುವ ಲಸಿಕೆ ಉತ್ತಮವೇ?
Corona Nasal Spray
TV9 Web
| Edited By: |

Updated on: Dec 02, 2022 | 2:00 PM

Share

ಕಳೆದ 3 ವರ್ಷಗಳ ಹಿಂದೆ ಕೋವಿಡ್ 19 ಎನ್ನುವ ಸಾಂಕ್ರಾಮಿಕ ರೋಗವು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಜನರು ತಮ್ಮವರ ಮುಖವನ್ನೇ ನೋಡದೆ ವರ್ಷಗಟ್ಟಲೆ ಕಾಲವನ್ನು ದೂಡುವಂತೆ ಮಾಡಿತ್ತು. ಎಷ್ಟೋ ಮಂದಿ ತಮ್ಮ ಕುಟುಂಬಸ್ಥರು ಸಂಬಂಧಿಕರನ್ನು ಕಳೆದುಕೊಂಡಿದ್ದರು. ಕೊರೊನಾ ಲಸಿಕೆಯ ಸಂಶೋಧನೆ ಬಳಿಕ ಸ್ವಲ್ಪ ಸ್ವಲ್ಪವೇ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಓಮಿಕ್ರಾನ್ ನಿರ್ದಿಷ್ಟ ಲಸಿಕೆಗಳು, ಸಾರ್ವತ್ರಿಕ ಲಸಿಕೆಗಳು, ಮೂಗಿನ ಮೂಲಕ ಹಾಕುವ ಲಸಿಕೆಗಳು ಲಭ್ಯವಿದೆ.

ಇವು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಈ ಲಸಿಕೆಗಳನ್ನು ಪಡೆದರೆ ಮಾಸ್ಕ್ ಧರಿಸುವ ಅಗತ್ಯವಿಲ್ಲವೇ ಎಂಬುವ ಪ್ರಶ್ನೆ ಎದ್ದಿದೆ ಮೂಗಿನ ಮೂಲಕ ಹಾಕುವ ಲಸಿಕೆಯು ಕೋವಿಡ್ ವಿರುದ್ಧ ಹೇಗೆ ಕಾರ್ಯ ನಿರ್ವಹಿಸುತ್ತದೆ. ಒಂದು ವರ್ಷದಿಂದೀಚೆಗೆ ನ್ಯೂಯಾರ್ಕ್​ನ ಕೊಲಂಬಿಯಾ ವಿಶ್ವವಿದ್ಯಾಲಯವು ವೈರಸ್​ನ್ನು ಸಂಪೂರ್ಣ ನಿರ್ಣಾಮ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ, ಇದಕ್ಕೆ ಕೋವಿಡ್ ಉತ್ತಮ ಅವಕಾಶವನ್ನು ಒದಗಿಸಿದೆ.

ಮತ್ತಷ್ಟು ಓದಿ: ಕೋವಿಡ್ 19 ವಿರುದ್ಧ ನಸಲ್ ಸ್ಪ್ರೇ ತಂದ ಕಂಪೆನಿಯಿಂದ ಭಾರತದ ಯೋಜನೆ ಬಗ್ಗೆ ಮಾಹಿತಿ

ಮಾಸ್ಕೋನಾ ತಂಡವು, ಸ್ಪ್ರಿಡ್ಜ್​ ನಾಸಲ್ ಸ್ಪ್ರೇ ಕಂಡುಹಿಡಿದಿದ್ದು, ಅದನ್ನು ಒಂದು ಅಥವಾ ಎರಡು ದಿನಕ್ಕೊಮ್ಮೆ ಬಳಕೆ ಮಾಡಬೇಕು.

ಮೂಗಿನ ಮೂಲಕ ಹಾಕುವ ಲಸಿಕೆ ಈಗಿರುವ ಕೊರೊನಾ ಲಸಿಕೆಗಳಿಗಿಂತ ಭಿನ್ನ ಹೇಗೆ? ಪ್ರಸ್ತುತ ಬಳಕೆಯಲ್ಲಿರುವ COVID-19 ಲಸಿಕೆಗಳು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತವೆಯಾದರೂ, ಅವು ಸೌಮ್ಯವಾದ ಅನಾರೋಗ್ಯ ಅಥವಾ ಪ್ರಸರಣವನ್ನು ತಡೆಯುವುದಿಲ್ಲ.

ಆದರೆ ಮೂಗಿನ ಮೂಲಕ ಹಾಕುವ ಲಸಿಕೆ ಮೂಗಿನಲ್ಲೇ ಉಳಿದುಕೊಳ್ಳುವುದರಿಂದ ಹೆಚ್ಚು ಪರಿಣಾಮಕಾರಿ, ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಈ ಲಸಿಕೆಗಳನ್ನು ಸ್ನಾಯುಗೆ ಕೊಡುವುದರಿಂದ ಮೂಗಿನ ಮೂಲಕ ಹೋಗುವ ಸೋಂಕನ್ನು ತಡೆಯುವಲ್ಲಿ ಬಹುಬೇಗ ಸಹಾಯ ಮಾಡುವುದಿಲ್ಲ. COVID ನಾಸಲ್ ಸ್ಪ್ರೇಗಳ ಪರಿಕಲ್ಪನೆಯು ಭರವಸೆಯೆನಿಸಿದರೂ, ಸಂಯುಕ್ತವು ಮೂಗಿನ ಒಳಪದರದಲ್ಲಿ ಸಾಕಷ್ಟು ಕಾಲ ಉಳಿಯುತ್ತದೆ ಎಂದು ಖಚಿತಪಡಿಸಿಕೊಳ್ಳುವ ಸವಾಲನ್ನು ಅವರು ಇನ್ನೂ ಎದುರಿಸುತ್ತಾರೆ.

ಇಂಟ್ರಾನಾಸಲ್ ಕೋವಿಡ್ ಲಸಿಕೆಯನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಯೋಗಗಳಲ್ಲೂ ಅತ್ಯತ್ತಮ ಫಲಿತಾಂಶವನ್ನು ನೀಡಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ತುರ್ತು ಸಮಯದಲ್ಲಿ ಯಾವ ರೀತಿಯ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡು ಪ್ರಾಣಾಪಾಯದಿಂದ ದೂರ ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಇಂದು ನಮ್ಮಲ್ಲಿ ಎಲ್ಲರಿಗೂ ಕೋವಿಡ್‌ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ತಿಳಿದಿರುವುದರಿಂದ, ಕೋವಿಡ್‌ನ ಆರಂಭಿಕ ಲಕ್ಷಣಗಳು ಕಾಣಿಸಿದ ಕೂಡಲೇ ವೈದ್ಯರ ಸಲಹೆ ಮೇರೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಸಲಹೆ ನೀಡಿದ್ದಾರೆ.

ಈ ಲಸಿಕೆಯು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸ್ಥಿರವಾಗಿರುತ್ತದೆ. ಅಲ್ಲದೇ ಈ ಲಸಿಕೆಯನ್ನು ಸುಲಭವಾಗಿ ಸಂಗ್ರಹಿಸಬಹುದು ಮತ್ತು ವಿತರಣೆಯನ್ನು ಮಾಡಬಹುದಾಗಿದೆ. ಭಾರತ್ ಬಯೋಟೆಕ್ ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ಸೇರಿದಂತೆ ಭಾರತದಾದ್ಯಂತ ಅನೇಕ ಕಡೆ ದೊಡ್ಡ ಉತ್ಪಾದನಾ ಸಾಮರ್ಥ್ಯಗಳನ್ನು ಸ್ಥಾಪಿಸಿದೆ ಎಂದು ತಿಳಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ