Heart Disease: ಸಕ್ಕರೆ ಹಾಕಿದ ಪಾನೀಯ ಸೇವನೆಯಿಂದ ಹೃದಯಕ್ಕೆ ಅಪಾಯ!

ಹೃದಯವೆಂಬುದು ನಮ್ಮ ದೇಹದ ಪ್ರಮುಖವಾದ ಇಂಜಿನ್. ಇದು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅಥವಾ ಇದಕ್ಕೆ ತೊಂದರೆ ಉಂಟಾದರೆ ಬೇರೆ ಅಂಗಗಳ ಮೇಲೂ ಪರಿಣಾಮ ಉಂಟಾಗುತ್ತದೆ. ಕೆಲವರಿಗೆ ಸಕ್ಕರೆ ಹಾಕಿದ ಜ್ಯೂಸ್, ಪಾನೀಯ​ಗಳನ್ನು ಅತಿಯಾಗಿ ಕುಡಿಯುವ ಅಭ್ಯಾಸ ಇರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತದೆ ಎಂಬ ವಿಷಯ ನಿಮಗೆ ಗೊತ್ತಾ? ಇನ್ನುಮುಂದೆ ಸಕ್ಕರೆ ಹಾಕಿದ ಡ್ರಿಂಕ್​ಗಳನ್ನು ಕುಡಿಯುವ ಅಭ್ಯಾಸವನ್ನು ಆದಷ್ಟೂ ಕಡಿಮೆ ಮಾಡಲು ಪ್ರಯತ್ನಿಸಿ.

Heart Disease: ಸಕ್ಕರೆ ಹಾಕಿದ ಪಾನೀಯ ಸೇವನೆಯಿಂದ ಹೃದಯಕ್ಕೆ ಅಪಾಯ!
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 08, 2024 | 11:26 AM

ಪ್ರತಿದಿನ ನಮ್ಮ ದೇಹಕ್ಕೆ ಎಷ್ಟು ಸಕ್ಕರೆ ಹೋಗುತ್ತದೆ ಎಂಬುದರ ಬಗ್ಗೆ ಎಚ್ಚರ ವಹಿಸುವುದು ಬಹಳ ಉತ್ತಮ. ರೋಗಗಳನ್ನು ಹೆಚ್ಚಿಸುವ ಅಪಾಯವನ್ನು ಉಂಟುಮಾಡುವ ಪದಾರ್ಥಗಳಲ್ಲಿ ಸಿಹಿಯಾದ ಪಾನೀಯಗಳು ಕೂಡ ಸೇರಿವೆ. ಅವು ರುಚಿಕರವಾಗಿರಬಹುದು, ಆದರೆ ಅವು ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 2 ಲೀಟರ್ ಅಥವಾ ಅದಕ್ಕಿಂತ ಹೆಚ್ಚು ಸಿಹಿಯಾದ ಪಾನೀಯಗಳನ್ನು ಕುಡಿಯುವುದರಿಂದ ಹೃತ್ಕರ್ಣದ ಕಂಪನ ಎಂಬ ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗಬಹುದು ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ.

ಹೃದಯದ ಅಪಧಮನಿಗಳಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ಪದಾರ್ಥಗಳ ಶೇಖರಣೆಯಿಂದಾಗಿ ರಕ್ತದ ಹರಿವಿಗೆ ತೊಂದರೆ ಉಂಟಾಗುತ್ತದೆ. ಕೊಲೆಸ್ಟ್ರಾಲ್ ಅಂಶಗಳನ್ನು ಒಳಗೊಂಡಿರುವ ನಿಕ್ಷೇಪಗಳನ್ನು ಪ್ಲೇಕ್ ಎಂದು ಕರೆಯಲಾಗುತ್ತದೆ. ಪ್ಲೇಕ್ ರಚನೆಯ ಪ್ರಕ್ರಿಯೆಯನ್ನು ಅಪಧಮನಿಕಾಠಿಣ್ಯ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಈ ಪ್ಲೇಕ್ ಛಿದ್ರವಾಗಬಹುದು ಮತ್ತು ರಕ್ತದ ಹರಿವನ್ನು ನಿರ್ಬಂಧಿಸುವ ಹೆಪ್ಪುಗಟ್ಟುವಿಕೆಯನ್ನು ರೂಪಿಸಬಹುದು. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: Ice Water: ಐಸ್ ನೀರು ಕುಡಿಯುವುದರಿಂದ ಹೃದಯಕ್ಕೆ ಅಪಾಯವಾದೀತು!

ಸಿಹಿಯಾದ ಪಾನೀಯಗಳು ಯಾವುವು?:

ಸಿಹಿಯಾದ ಪಾನೀಯಗಳು ಎಂದರೆ ಸಕ್ಕರೆ ಅಥವಾ ಸಿಹಿಕಾರಕವನ್ನು ಹಾಕಲಾಗಿರುವ ಪಾನೀಯಗಳಾಗಿವೆ. ಈ ಪಾನೀಯಗಳಲ್ಲಿ ಕೆಲವು ಸೋಡಾಗಳು, ಹಣ್ಣಿನ ಜ್ಯೂಸ್ ಮತ್ತು ಸಕ್ಕರೆ ಹಾಕಿದ ಚಹಾಗಳು ಸೇರಿವೆ. ಅವುಗಳ ಸಿಹಿ ರುಚಿಯಿಂದಾಗಿ ನೀವು ಇಷ್ಟಪಟ್ಟು ಕುಡಿಯಬಹುದು, ಆದರೆ ಅವುಗಳು ಹೆಚ್ಚಿನ ಕ್ಯಾಲೊರಿಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿರುವ ಅತಿಯಾದ ಸಕ್ಕರೆ ಅಂಶದಿಂದಾಗಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಹೃತ್ಕರ್ಣದ ಕಂಪನವು ಸಿಹಿಯಾದ ಪಾನೀಯಗಳನ್ನು ಕುಡಿಯುವುದರಿಂದ ಉಂಟಾಗುವ ದೊಡ್ಡ ಅಡ್ಡ ಪರಿಣಾಮವಾಗಿದೆ. ಇವುಗಳನ್ನು ಅತಿಯಾಗಿ ಸೇವಿಸಿದಾಗ ಸಕ್ಕರೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನ ಅಧ್ಯಯನವು ವಾರಕ್ಕೆ 2 ಲೀಟರ್ ಅಥವಾ ಅದಕ್ಕಿಂತ ಹೆಚ್ಚು ಕೃತಕವಾಗಿ ಸಿಹಿಯಾದ ಪಾನೀಯಗಳನ್ನು ಕುಡಿಯುವವರಲ್ಲಿ ಸಕ್ಕರೆ ಹಾಕಿದ ಪಾನೀಯ ಕುಡಿಯದ ಜನರಿಗಿಂತಲೂ ಹೃತ್ಕರ್ಣದ ಕಂಪನದ ಅಪಾಯ ಶೇ. 20ರಷ್ಟು ಹೆಚ್ಚಾಗಿರುತ್ತದೆ ಎಂದು ಕಂಡುಹಿಡಿದಿದೆ.

ಸಿಹಿಯಾದ ಪಾನೀಯಗಳನ್ನು ಕುಡಿಯುವುದರಿಂದ ನಿಮ್ಮ ಹೃತ್ಕರ್ಣದ ಕಂಪನದ ಅಪಾಯವನ್ನು ಹೆಚ್ಚಿಸಬಹುದು. ಯುವಕ-ಯುವತಿಯರು ಹೆಚ್ಚು ಕೃತಕವಾಗಿ ಸಿಹಿಯಾದ ಪಾನೀಯಗಳನ್ನು ಸೇವಿಸುತ್ತಾರೆ. ಇದು ಅವರ ಆರೋಗ್ಯದ ಮೇಲೆ ದೀರ್ಘಾವಧಿಯಲ್ಲಿ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Heart Health: ಹೃದಯದ ರಕ್ತ ಸಂಚಲನ ಸುಧಾರಿಸಲು ಈ ಆಯುರ್ವೇದ ಪಾನೀಯ ಸೇವಿಸಿ

ಹೆಚ್ಚು ಕೃತಕವಾಗಿ ಸಿಹಿಯಾದ ಪಾನೀಯಗಳನ್ನು ಸೇವಿಸುವ ಜನರು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೊಂದಿರುತ್ತಾರೆ. ವಾರಕ್ಕೆ 2 ಲೀಟರ್‌ಗಿಂತಲೂ ಹೆಚ್ಚು ಸಕ್ಕರೆ ಹಾಕಿದ ಸಿಹಿ ಪಾನೀಯಗಳನ್ನು ಸೇವಿಸುವ ಧೂಮಪಾನಿಗಳು ಹೃತ್ಕರ್ಣದ ಕಂಪನದ ಅಪಾಯವನ್ನು ಶೇ. 31ರಷ್ಟು ಹೆಚ್ಚು ಹೊಂದಿರುತ್ತಾರೆ.

ಹೃತ್ಕರ್ಣದ ಕಂಪನ ಎಂದರೇನು?:

ಹೃತ್ಕರ್ಣದ ಕಂಪನ ಒಂದು ರೀತಿಯ ಹೃದಯದ ಆರ್ಹೆತ್ಮಿಯಾ. ಇದು ನಿಮ್ಮ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿಮ್ಮ ಹೃದಯವು ತುಂಬಾ ನಿಧಾನವಾಗಿ ಅಥವಾ ತುಂಬಾ ವೇಗವಾಗಿ ಬಡಿದುಕೊಳ್ಳುತ್ತದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಮಾಹಿತಿಯ ಪ್ರಕಾರ ಇದು ನಿಮ್ಮ ಪಾರ್ಶ್ವವಾಯು ರೋಗದ ಅಪಾಯವನ್ನು ಹೆಚ್ಚಿಸಬಹುದು.

ಹೃತ್ಕರ್ಣದ ಕಂಪನದ ಲಕ್ಷಣಗಳು:

ಅನಿಯಮಿತ ಹೃದಯ ಬಡಿತ

ತಲೆ ಸುತ್ತುವಿಕೆ

ವಿಪರೀತ ಆಯಾಸ

ಉಸಿರಾಟದ ತೊಂದರೆ

ಎದೆ ನೋವು

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ