AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಿರಿ! ಆರೋಗ್ಯದಲ್ಲಾಗುವ ಬದಲಾವಣೆ ನೋಡಿ

ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ದೇಹ ಬೆವರುವ ಸಾಧ್ಯತೆ ಹೆಚ್ಚಿರುತ್ತದೆ. ಇದು ದೇಹದಲ್ಲಿ ನೀರಿನ ಕೊರತೆ ಮತ್ತು ಎಲೆಕ್ಟ್ರೋಲೈಟ್ ಗಳ ಇಳಿಕೆಗೆ ಕಾರಣವಾಗುತ್ತದೆ. ಅಂತಹ ಸಮಯದಲ್ಲಿ, ಒಂದು ಲೋಟ ನೀರಿಗೆ ಒಂದು ಚಿಟಿಕೆ ಉಪ್ಪು ಸೇರಿಸಿ ಕುಡಿಯುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಈ ರೀತಿ ಮಾಡುವುದರಿಂದ ಯಾವ ರೀತಿ ಲಾಭಗಳಾಗುತ್ತದೆ? ಬೇಸಿಗೆಯಲ್ಲಿಯೇ ಏಕೆ ಒಳ್ಳೆಯದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಿರಿ! ಆರೋಗ್ಯದಲ್ಲಾಗುವ ಬದಲಾವಣೆ ನೋಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 17, 2025 | 12:25 PM

ಬೇಸಿಗೆಯಲ್ಲಿ ಶಾಖ (Summer heat) ಹೆಚ್ಚಾಗಿರುವುದರಿಂದ ಅದನ್ನು ತಡೆಯಲು ದೇಹವನ್ನು ತಂಪಾಗಿಡುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ಬಿಸಿಲಿನಿಂದಾಗಿ ಅತಿಯಾದ ಬೆವರುವಿಕೆ (Sweating), ನೀರಿನ ಕೊರತೆ ಮತ್ತು ಎಲೆಕ್ಟ್ರೋಲೈಟ್ ಗಳ ಇಳಿಕೆಯಂತಹ ಸಮಸ್ಯೆಗಳು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇಂತಹ ಸಂದರ್ಭಗಳಲ್ಲಿ ನೀವು ಒಂದು ಲೋಟ ನೀರಿಗೆ ಕೇವಲ ಒಂದು ಚಿಟಿಕೆಯಷ್ಟು ಉಪ್ಪು (Salt) ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ. ಈ ವಿಷಯ ನಿಮಗೆ ಆಶ್ಚರ್ಯ ಹುಟ್ಟಿಸಬಹುದು. ಆದರೆ ಇದು ಸತ್ಯ. ಒಂದು ಚಿಟಿಕೆ ಉಪ್ಪಿಗೆ ಅಂತಹ ಶಕ್ತಿ ಇದೆ ಎಂದರೆ ನೀವು ನಂಬಲೇ ಬೇಕು. ಹಾಗಾದರೆ ಈ ರೀತಿ ಮಾಡುವುದರಿಂದ ಯಾವ ರೀತಿ ಲಾಭಗಳಾಗುತ್ತದೆ? ಬೇಸಿಗೆಯಲ್ಲಿಯೇ ಏಕೆ ಒಳ್ಳೆಯದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದು ಲೋಟ ನೀರಿಗೆ ಕೇವಲ ಒಂದು ಚಿಟಿಕೆಯಷ್ಟು ಉಪ್ಪು ಬೆರೆಸಿ ಕುಡಿಯುವ ಅಭ್ಯಾಸ ಬಹಳ ಒಳ್ಳೆಯದು. ಇದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸ್ನಾಯು ನೋವುಗಳನ್ನು ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ. ಸಾಮಾನ್ಯವಾಗಿ ದೇಹ ಬೆವರಿದಾಗ ಪ್ರಮುಖ ಖನಿಜಾಂಶಗಳು ದೇಹದಿಂದ ಹೊರಗೆ ಹೋಗುತ್ತದೆ. ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ದೇಹದಲ್ಲಿನ ಎಲೆಕ್ಟ್ರೋಲೈಟ್ಗಳು ಕಡಿಮೆಯಾದರೆ, ನಿರ್ಜಲೀಕರಣ, ಬಾಯಾರಿಕೆ, ಮಲಬದ್ಧತೆ, ತಲೆನೋವು ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ. ಈ ಕೊರತೆಯನ್ನು ನೀಗಿಸಲು, ಕುಡಿಯುವ ನೀರಿಗೆ ಸ್ವಲ್ಪ ಉಪ್ಪು ಹಾಕುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಜೊತೆಗೆ ಇದು ಸೋಡಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅವಲಕ್ಕಿಯಲ್ಲಿರುವ ಈ ಆರೋಗ್ಯ ರಹಸ್ಯ ತಿಳಿದರೆ ಪ್ರತಿದಿನ ಇದನ್ನೇ ತಿನ್ನುತ್ತೀರಿ

ಇದನ್ನೂ ಓದಿ
Image
ಬೇಸಿಗೆಯಲ್ಲೂ ಬೆಳ್ಳುಳ್ಳಿ ತಿಂತೀರಾ ಜೋಕೆ! ಕಾರಣ ತಿಳಿದರೆ ಬೆಚ್ಚಿ ಬೀಳ್ತಿರಾ
Image
ರೋಗ ನಿರೋಧಕ ಶಕ್ತಿ ಕಡಿಮೆ ಆಗಿರುವುದು ಹೇಗೆ ತಿಳಿಯುತ್ತದೆ?
Image
ಕೀಲು ನೋವಿದ್ದರೆ ಈ ರೀತಿಯ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ
Image
ಮಗುವನ್ನು ಬಟ್ಟೆಯಲ್ಲಿ ಸುತ್ತಿ ಮಲಗಿಸಿದರೆ ಈ ಸಮಸ್ಯೆ ಬರುವುದಿಲ್ಲ

ಉಪ್ಪು ನೀರು ಯಾರಿಗೆ ಒಳ್ಳೆಯದು?

ಬಿಸಿಲಿನಲ್ಲಿ ದೀರ್ಘಕಾಲ ಕೆಲಸ ಮಾಡುವವರು, ಅದರಲ್ಲಿಯೂ ಅತಿಯಾಗಿ ಬೆವರು ಬರುವವರು ಮತ್ತು ವ್ಯಾಯಾಮ ಮಾಡುವವರು ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸಬಹುದು. ಅಂತವರು ಈ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಉಪ್ಪಿನಲ್ಲಿರುವ ಸೋಡಿಯಂ ಅಂಶ ದೇಹದಲ್ಲಿ ನೀರನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಇದು ನಿರ್ಜಲೀಕರಣ ಮತ್ತು ಆಯಾಸದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸ್ನಾಯುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ ಸ್ನಾಯು ಸೆಳೆತ ಮತ್ತು ನರ ಬಿಗಿತ ಸಮಸ್ಯೆಗಳು ಕಂಡು ಬಂದರೆ ಉಪ್ಪು ನೀರು ಕುಡಿಯುವುದು ತುಂಬಾ ಒಳ್ಳೆಯದು. ಅದಲ್ಲದೆ ಆಹಾರ ಬೇಗನೆ ಜೀರ್ಣವಾಗದಿದ್ದಾಗ ಇದು ಗ್ಯಾಸ್ ಮತ್ತು ಉಬ್ಬರದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತವರಿಗೂ ಲವಣಯುಕ್ತ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿನ ಆಮ್ಲದ ಮಟ್ಟವನ್ನು ಸರಿಯಾಗಿಡಬಹುದು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಿಕೊಳ್ಳಬಹುದು.

ಯಾರು ಸೇವನೆ ಮಾಡಬಾರದು?

ಕುಡಿಯುವ ನೀರಿಗೆ ಒಂದು ಚಿಟಿಕೆ ಉಪ್ಪು ಬೆರೆಸಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದು ಎಲ್ಲರಿಗೂ ಒಳ್ಳೆಯದಲ್ಲ. ಅದರಲ್ಲಿಯೂ ಮೂತ್ರಪಿಂಡದ ಸಮಸ್ಯೆ ಇರುವವರು ಉಪ್ಪುನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ಉಪ್ಪಿನ ಸೇವನೆ ಹೆಚ್ಚಾದರೆ ಮೂತ್ರಪಿಂಡಗಳ ಮೇಲೆ ಒತ್ತಡ ಬೀಳುತ್ತದೆ. ಅದಲ್ಲದೆ ಅಧಿಕ ರಕ್ತದೊತ್ತಡ ಇರುವವರು ಕೂಡ ವೈದ್ಯರ ಸಲಹೆ ಪಡೆದ ನಂತರವೇ ಲವಣಯುಕ್ತ ನೀರನ್ನು ಕುಡಿಯಬೇಕು. ಚಿಟಿಕೆ ಉಪ್ಪಿನೊಂದಿಗೆ ನೀರು ಕುಡಿಯುವುದು ಸಾಮಾನ್ಯ ವಿಷಯ ಎನಿಸಿದರೂ ಕೂಡ ಇದು ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳಿಗೆ ಕಾರಣವಾಗಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ