ಪ್ಯಾರಸಿಟಮಾಲ್ನ ಅಡ್ಡಪರಿಣಾಮಗಳನ್ನು ಪ್ರತಿಯೊಬ್ಬ ಡೆಂಗ್ಯೂ ರೋಗಿಯು ತಿಳಿದುಕೊಳ್ಳಲೇಬೇಕು, ಏನದು? ಇಲ್ಲಿದೆ ಮಾಹಿತಿ
ಪ್ರಕರಣಗಳ ಹೆಚ್ಚಳದ ಮಧ್ಯೆ ವೈದ್ಯರು ಡೆಂಗ್ಯೂ ರೋಗಿಗಳಿಗೆ ಪ್ಯಾರಸಿಟಮಾಲ್ ಅನ್ನು ಸೂಚಿಸುತ್ತಿದ್ದಾರೆ. ಈ ಪ್ಯಾರಸಿಟಮಾಲ್ನ್ನು ಹೆಚ್ಚು ಹೆಚ್ಚು ಸೇವಿಸಿದಾಗ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆಯೂ ತಿಳಿದಿರಬೇಕಾಗುತ್ತದೆ. ಈ ಮಾತ್ರೆ, ನೋವನ್ನು ಗುಣಪಡಿಸುವುದಿಲ್ಲ ಆದರೆ ನೋವನ್ನು ಕಡಿಮೆ ಮಾಡುತ್ತದೆ ಎಂದು ನಿಮಗೆ ತಿಳಿದಿರಬೇಕಾಗುತ್ತದೆ. ಹಾಗಾದರೆ ಯಾವ ರೀತಿಯ ಅಡ್ಡಪರಿಣಾಮಗಳಿವೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಆರೋಗ್ಯ ಅಧಿಕಾರಿಗಳು ರೋಗಿಗಳಿಗೆ ನೋವು ನಿವಾರಕಗಳ ಬದಲು ಪ್ಯಾರಸಿಟಮಾಲ್ ಬಳಸುವಂತೆ ಸಲಹೆ ನೀಡಿದ್ದಾರೆ. ರೋಗಿಗೆ ಹೆಚ್ಚು ಜ್ವರ, ದೇಹದಲ್ಲಿ ನೋವು ಅಥವಾ ವಾಂತಿಯಂತಹ ರೋಗಲಕ್ಷಣಗಳು ಕಂಡು ಬಂದಾಗ ಪ್ಯಾರಸಿಟಮಾಲ್ ತೆಗೆದುಕೊಳ್ಳಬಹುದು. ವಾಸ್ತವದಲ್ಲಿ, ಗಾಜಿಯಾಬಾದ್ ಮತ್ತು ನೋಯ್ಡಾದಲ್ಲಿ, ಡೆಂಗ್ಯೂ ಪ್ರಕರಣಗಳನ್ನು ತಡೆಯಲು ವೈದ್ಯರು ಪ್ಯಾರಸಿಟಮಾಲ್ ನೀಡಲು ಪ್ರಾರಂಭಿಸಿದ್ದಾರೆ. ಏಕೆಂದರೆ ಇದು ಡೆಂಗ್ಯೂ ರೋಗಿಗಳಿಗೆ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಅಲ್ಲದೆ ಇದು ಜ್ವರ ಮತ್ತು ಇತರ ಸಂಬಂಧಿತ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ಯಾರಸಿಟಮಾಲ್ ಡೆಂಗ್ಯೂ ರೋಗಿಗಳ ಪ್ಲೇಟ್ಲೆಟ್ ಎಣಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿಯಾಗಿದೆ.
ಆದರೆ ಪ್ಯಾರಸಿಟಮಾಲ್ ಅನ್ನು ದೀರ್ಘಕಾಲದವರೆಗೆ ತೆಗೆದುಕೊಳ್ಳುವುದರಿಂದ, ಈ ಔಷಧಿ ನಿಮ್ಮ ದೇಹಕ್ಕೆ ಅನೇಕ ರೀತಿಯಲ್ಲಿ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು. ಇತರ ಔಷಧಿಗಳಂತೆ, ಪ್ಯಾರಸಿಟಮಾಲ್ ತಿನ್ನುವುದರಿಂದ ಅನೇಕ ತೊಂದರೆಗಳಿವೆ. ಈ ಮಾತ್ರೆ, ನೋವನ್ನು ಗುಣಪಡಿಸುವುದಿಲ್ಲ ಆದರೆ ನೋವನ್ನು ಕಡಿಮೆ ಮಾಡುತ್ತದೆ ಎಂದು ನಿಮಗೆ ತಿಳಿದಿರಬೇಕು. ತಲೆನೋವು, ಮೈಗ್ರೇನ್ ಮತ್ತು ಮುಟ್ಟಿನ ನೋವಿಗೆ ನಾವು ಇದನ್ನು ಬಳಸುತ್ತೇವೆ ಮತ್ತು 5- 6 ಗಂಟೆಗಳ ನಂತರ ನೋವು ಮರಕಳಿಸಿದ ಬಳಿಕ, ಮತ್ತೆ ಈ ಮಾತ್ರೆಯನ್ನು ತಿನ್ನುತ್ತೇವೆ.
ಪ್ಯಾರಸಿಟಮಾಲ್ ನಿಂದ ಉಂಟಾಗುವ ಅಡ್ಡಪರಿಣಾಗಮಗಳು ಯಾವುವು?
ಹೆಚ್ಚು ಪ್ಯಾರಸಿಟಮಾಲ್ ತಿನ್ನುವುದರಿಂದ ಉಂಟಾಗುವ ಸಾಮಾನ್ಯ ಅಡ್ಡಪರಿಣಾಮಗಳೆಂದರೆ ಮಂಪರು, ದಣಿವು, ಮೈ ಮೇಲೆ ದದ್ದುಗಳು ಮತ್ತು ತುರಿಕೆ. ಪ್ಯಾರಸಿಟಮಾಲ್ ಅನ್ನು ದೀರ್ಘಕಾಲದವರೆಗೆ ಸೇವಿಸುತ್ತಿದ್ದರೆ ರೋಗಿಯು, ಈ ಕೆಳಗಿನ ಪರಿಣಾಮಗಳನ್ನು ಸಹ ಎದುರಿಸಬೇಕಾಗಬಹುದು.
– ದಣಿವು
– ಉಸಿರಾಟದ ತೊಂದರೆ
– ನಿಮ್ಮ ಬೆರಳು ಮತ್ತು ತುಟಿಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ
– ರಕ್ತಹೀನತೆ (ಕಡಿಮೆ ಕೆಂಪು ರಕ್ತ ಕಣಗಳ ಸಂಖ್ಯೆ)
– ಯಕೃತ್ತು ಮತ್ತು ಮೂತ್ರಪಿಂಡದ ಹಾನಿ
– ನೀವು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಗುರಿಯಾಗಬಹುದು
– ಪ್ಯಾರಸಿಟಮಾಲ್ ನ ಅತಿಯಾದ ಸೇವನೆಯು ಹೊಟ್ಟೆ ನೋವು, ವಾಕರಿಕೆ, ವಾಂತಿ ಮತ್ತು ಕೋಮಾಗೆ ಕಾರಣವಾಗಬಹುದು.
ಆದ್ದರಿಂದ, ಔಷಧಿಗಳನ್ನು ಬಳಸುವ ಮೊದಲು ಕೆಲವು ನಿರ್ದೇಶನಗಳನ್ನು ಎಚ್ಚರಿಕೆಯಿಂದ ಓದಲು ವೈದ್ಯರು ಸ್ಪಷ್ಟವಾಗಿ ಸಲಹೆ ನೀಡುತ್ತಾರೆ. ನೀವು ತಿನ್ನುವ ಪ್ರತಿಯೊಂದು ಔಷಧಿಗೂ ಈ ಅಭ್ಯಾಸವನ್ನು ಅನುಸರಿಸುವುದು ಬಹಳ ಉತ್ತಮ.
ಇದನ್ನೂ ಓದಿ: ಡೆಂಗ್ಯೂ ಜ್ವರದಿಂದ ವೇಗವಾಗಿ ಚೇತರಿಸಿಕೊಳ್ಳಲು ಸಹಾಯಕ ಈ ಆಹಾರಗಳು
ಡೆಂಗ್ಯೂಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?
– ನೀವು ಪೂರ್ಣ ತೋಳಿನ ಬಟ್ಟೆಗಳು ಮತ್ತು ಮೈ ಮುಚ್ಚುವ ಪ್ಯಾಂಟ್ ಧರಿಸಿಸುವುದು ಒಳ್ಳೆಯದು.
– ಹೊರಾಂಗಣದಲ್ಲಿದ್ದಾಗ ಸೊಳ್ಳೆ ನಿವಾರಕವನ್ನು ಬಳಸಿ.
– ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ ಮತ್ತು ನಿಂತ ನೀರಿನಿಂದ ಮುಕ್ತವಾಗಿಡುವುದು ಸಹ ಮುಖ್ಯವಾಗಿದೆ.
– ನಿಯಮಿತ ಹೊಗೆಯು ಸೊಳ್ಳೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.
– ವೈದ್ಯರ ಬಳಿ, ಉತ್ತಮ ತಿಳುವಳಿಕೆಗಾಗಿ ಔಷಧಿಯ ಡೋಸೇಜ್ ಅನ್ನು ಸ್ಪಷ್ಟವಾಗಿ ಉಲ್ಲೇಖಿಸಲು ತಿಳಿಸಿ.