AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ನಿದ್ರೆ ಪಡೆಯಲು ದಿನಚರಿಯಲ್ಲಿ ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಿ

ನಿದ್ರಾಹೀನತೆಯಿಂದ ನಮಗೆ ಕಿರಿಕಿರಿ, ನಿರಾಸೆ ಮತ್ತು ಅನಾರೋಗ್ಯಕರ ಭಾವನೆ ಉಂಟಾಗಬಹುದು. ಸಾಮಾನ್ಯವಾಗಿ ಬಹಳಷ್ಟು ಕಾರಣಗಳಿಂದಾಗಿ ರಾತ್ರಿಯಲ್ಲಿ ಸಂಪೂರ್ಣ ಮತ್ತು ಆರೋಗ್ಯಕರ ನಿದ್ರೆ ಬರುವುದಿಲ್ಲ. ಅಂತಹ ಸಮಯದಲ್ಲಿ ದಿನಚರಿಯಲ್ಲಿ ಮತ್ತು ಜೀವನಶೈಲಿಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಉತ್ತಮ ನಿದ್ರೆ ಪಡೆಯಲು ದಿನಚರಿಯಲ್ಲಿ ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಿ
ನಿದ್ರೆImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 23, 2023 | 5:16 PM

ನಿದ್ರೆಯು ನಮ್ಮ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಉತ್ತಮ ನಿದ್ರೆಯು ದೇಹವನ್ನು ರೀಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಮಾರನೇ ದಿನ ನಾವು ಆ್ಯಕ್ಟಿವ್ ಆಗಿರಲು ನಿದ್ರೆ ಅತ್ಯವಶ್ಯ. ನಿದ್ರಾಹೀನತೆಯಿಂದ ನಮಗೆ ಕಿರಿಕಿರಿ, ನಿರಾಸೆ ಮತ್ತು ಅನಾರೋಗ್ಯಕರ ಭಾವನೆ ಉಂಟಾಗಬಹುದು. ಸಾಮಾನ್ಯವಾಗಿ ಬಹಳಷ್ಟು ಕಾರಣಗಳಿಂದಾಗಿ ರಾತ್ರಿಯಲ್ಲಿ ಸಂಪೂರ್ಣ ಮತ್ತು ಆರೋಗ್ಯಕರ ನಿದ್ರೆ ಬರುವುದಿಲ್ಲ. ಅಂತಹ ಸಮಯದಲ್ಲಿ ದಿನಚರಿಯಲ್ಲಿ ಮತ್ತು ಜೀವನಶೈಲಿಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಬೆಳಗಿನ ಸೂರ್ಯನ ಬೆಳಕನ್ನು ಪಡೆಯಿರಿ:

ದೇಹವನ್ನು ಬೆಳಗಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಮಗೆ ಪುನರ್ಯೌವನವನ್ನು ಅನುಭವಿಸಲು ಸಹಾಯ ಮಾಡುತ್ತದೆ. ಇದು ನಮ್ಮ ನಿದ್ರೆ ಮತ್ತು ಎಚ್ಚರಗೊಳ್ಳುವ ಚಕ್ರವನ್ನು ನೈಸರ್ಗಿಕ ದಿನ ಮತ್ತು ರಾತ್ರಿ ಚಕ್ರದೊಂದಿಗೆ ಸಿಂಕ್ರೊನೈಸ್ ಮಾಡಬಹುದು. ಇದು ರಾತ್ರಿಯಲ್ಲಿ ವೇಗವಾಗಿ ನಿದ್ರಿಸಲು ನಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Health Tips: ಆರೋಗ್ಯ ತಜ್ಞರ ಪ್ರಕಾರ ಟೀ, ಕಾಫಿ ಕುಡಿಯುವ ಎಷ್ಟು ಗಂಟೆಯ ಮೊದಲು ನೀರು ಕುಡಿಯಬೇಕು?

ನಿಮ್ಮ ವ್ಯಾಯಾಮದ ದಿನಚರಿಯನ್ನು ಹೊಂದಿಸಿ:

ನಾವು ಮಲಗುವ ಸಮಯಕ್ಕೂ ಮೊದಲು ವ್ಯಾಯಾಮವನ್ನು ಮಾಡುವುದನ್ನು ಒಳ್ಳೆಯದಲ್ಲ. ಏಕೆಂದರೆ ಅದು ನಮ್ಮ ವಿಶ್ರಾಂತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ನಾವು ಹಗಲಿನ ಸಮಯದಲ್ಲಿ ದೈಹಿಕ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡಬೇಕು. ರಾತ್ರಿ ಹೆಚ್ಚು ವಿಶ್ರಾಂತಿ ಪಡೆಯಬೇಕು.

ಪ್ರತಿದಿನ ಒಂದೇ ಸಮಯಕ್ಕೆ ಎದ್ದೇಳಿ:

ನಾವು ದಿನನಿತ್ಯವೂ ಒಂದೇ ಸಮಯಕ್ಕೆ ನಿರಂತರವಾಗಿ ಏಳಲು ಪ್ರಾರಂಭಿಸಿದಾಗ, ನಮ್ಮ ದೇಹವು ಆ ದಿನಚರಿಗೆ ಹೊಂದಿಕೊಳ್ಳಲು ಮತ್ತು ಅದನ್ನು ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಈ ಸಮಸ್ಯೆಯಿಂದ ಬಳಲುತ್ತಿರುವವರು ಅಪ್ಪಿತಪ್ಪಿಯೂ ಕಾಫಿ ಕುಡಿಯಬೇಡಿ

ರಾತ್ರಿ ಕೆಫೇನ್ ಸೇವಿಸಬೇಡಿ:

ದಿನದ ಕೊನೆಯ ಕಪ್ ಕಾಫಿ ಮತ್ತು ನಮ್ಮ ಮಲಗುವ ಸಮಯದ ನಡುವೆ ನಾವು 8-10 ಗಂಟೆಗಳ ಅಂತರವನ್ನು ಕಾಪಾಡಿಕೊಳ್ಳಬೇಕು. ಕೆಫೀನ್ ನಿದ್ರೆಯನ್ನು ಅಡ್ಡಿಪಡಿಸುತ್ತದೆ. ಹೀಗಾಗಿ, ರಾತ್ರಿ ಕಾಫಿ, ಟೀ ಸೇವಿಸಬಾರದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ